ಬ್ರೇಕಿಂಗ್ ನ್ಯೂಸ್
18-06-24 10:01 pm Mangalore Correspondent ಕರಾವಳಿ
ಮಂಗಳೂರು, ಜೂನ್.18: ಕುದ್ರೋಳಿ ಬಳಿಯ ಅಳಕೆ ಮಾರುಕಟ್ಟೆ ಎದುರಿನಲ್ಲಿ ರಾಜಕಾಲುವೆಗೆ ಕಟ್ಟಿದ್ದ ಕಾಂಕ್ರೀಟ್ ತಡೆಗೋಡೆ ಜೂನ್ 10ರಂದು ಮೊದಲ ಮಳೆಗೆ ಕುಸಿದು ಬಿದ್ದಿದ್ದು, ಸಾರ್ವಜನಿಕ ವಲಯದಲ್ಲಿ ಕಳಪೆ ಕಾಮಗಾರಿ ಅನ್ನುವ ಆರೋಪ ಕೇಳಿಬಂದಿತ್ತು. ಇದೀಗ ಕಾಲುವೆಗೆ ಅಡ್ಡಲಾಗಿ ಬಿದ್ದಿರುವ ಕಾಂಕ್ರೀಟ್ ತಡೆಗೋಡೆಯನ್ನು ತೆರವು ಮಾಡುತ್ತಿದ್ದಾರೆ. ಹಿಟಾಚಿ ಬಳಸಿ ಕಾಂಕ್ರೀಟ್ ಒಡೆಯುತ್ತಿದ್ದು, ಈ ಸಂದರ್ಭದಲ್ಲಿ ತಡೆಗೋಡೆಗೆ ಸಾಕಷ್ಟು ಕಬ್ಬಿಣದ ರಾಡ್ ಗಳನ್ನು ಬಳಸದೇ ಇರುವಂತೆ ಕಂಡುಬಂದಿದೆ.
ಅಳಕೆ ಮಾರುಕಟ್ಟೆ ಎದುರಲ್ಲೇ 40 ಮೀಟರ್ ಉದ್ದಕ್ಕೆ ಕಾಂಕ್ರೀಟ್ ತಡೆಗೋಡೆ ಬೋರಲಾಗಿ ಬಿದ್ದುಕೊಂಡಿದೆ. ಅರ್ಧ ನೀರಿನಲ್ಲಿ ಮುಳುಗಿದ್ದು, ಜೋರು ಮಳೆ ಬಂದರೆ ಕಾಲುವೆಯಲ್ಲಿ ನೀರು ತುಂಬಬಹುದು ಎನ್ನುವ ದೃಷ್ಟಿಯಿಂದ ಅದನ್ನು ತುರ್ತಾಗಿ ತೆರವು ಮಾಡುತ್ತಿದ್ದಾರೆ. ಸಣ್ಣ ನೀರಾವರಿ ಇಲಾಖೆಯಿಂದ ತಡೆಗೋಡೆ ಕಟ್ಟಲಾಗುತ್ತಿದ್ದು, ಇದರ ಇಂಜಿನಿಯರ್ ರಾಕೇಶ್ ಬಂಗೇರ ಅವರಲ್ಲಿ ಮಾಹಿತಿ ಕೇಳಿದಾಗ, ಕಾಂಕ್ರೀಟ್ ತಡೆಗೋಡೆ ಕುಸಿದು ಬಿದ್ದಿರುವುದಕ್ಕೆ ತರಾತುರಿಯಲ್ಲಿ ಮಣ್ಣು ತುಂಬಿದ್ದೇ ಕಾರಣ ಎಂದಿದ್ದಾರೆ.
ಜೂನ್ ಆರಂಭದಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಾಣದ ಕೆಲಸ ಮಾಡಲಾಗಿತ್ತು. ಮೊದಲ ಮಳೆ ಬೀಳುತ್ತಿದ್ದಾಗಲೇ ಕೆಲಸ ಮುಗಿಸಲಾಗಿತ್ತು. ಅದು ಗಟ್ಟಿಯಾಗಲು ಕನಿಷ್ಠ 10ರಿಂದ 15 ದಿನ ಬೇಕಾಗುತ್ತದೆ. ಆದರೆ ತಡೆಗೋಡೆ ಕಟ್ಟಿದ ಮೂರೇ ದಿನದಲ್ಲಿ ರಸ್ತೆ ಬದಿಯಲ್ಲಿ ಸಮತಟ್ಟಾಗಿ ಮಣ್ಣನ್ನು ತುಂಬಿಸಿದ್ದರು. ಒದ್ದೆ ಮಣ್ಣನ್ನು ಮಳೆ ಬರುತ್ತಿರುವಾಗಲೇ ತುಂಬಿಸಿದ್ದರಿಂದ ಅದರ ಭಾರ ತಡೆಯಲಾಗದೆ ಕಾಂಕ್ರೀಟ್ ಗೋಡೆ ಕುಸಿದು ಬಿದ್ದಿದೆ. ಇದಕ್ಕೆ ಕಾಮಗಾರಿಯಲ್ಲಿ ಕಳಪೆಯಾಗಿದ್ದು ಕಾರಣ ಅಲ್ಲ. ಅಲ್ಲದೆ, ತಡೆಗೋಡೆಗೆ ಎಷ್ಟು ಕಬ್ಬಿಣದ ರಾಡ್ ಬಳಸಬೇಕೆಂಬ ನಿಯಮ ಇದೆಯೋ ಅಷ್ಟನ್ನು ಬಳಸಿದ್ದೇವೆ. ಎಲ್ಲ ಕಡೆಯೂ ಅಷ್ಟೇ ಕಬ್ಬಿಣ ಬಳಸಿರೋದು. ಬೇರೆ ಯಾವುದೇ ಕಡೆ ಕುಸಿತ ಆಗಿಲ್ಲ ಎಂದಿದ್ದಾರೆ.
ಈಗ ತಡೆಗೋಡೆ ಕುಸಿದಿರುವುದನ್ನು ಮತ್ತೆ ಕಟ್ಟಿ ಕೊಡುವುದಾಗಿ ಗುತ್ತಿಗೆದಾರರು ಹೇಳಿದ್ದಾರೆ. ಅದಕ್ಕೆ ಬಿಲ್ ಕೂಡ ಆಗಿರಲಿಲ್ಲ. 12-15 ಲಕ್ಷದಷ್ಟು ಮೌಲ್ಯದ ಕಾಂಕ್ರೀಟ್ ತಡೆಗೋಡೆ ನಷ್ಟವಾಗಿದೆ. ಅದನ್ನು ಗುತ್ತಿಗೆದಾರರೇ ಭರಿಸಬೇಕು. ಮತ್ತೆ ಕಟ್ಟಿಕೊಡುವುದಕ್ಕೆ ಒಪ್ಪಿದ್ದಾರೆ ಎಂದು ಇಂಜಿನಿಯರ್ ರಾಕೇಶ್ ಬಂಗೇರ ಪ್ರತಿಕ್ರಿಯಿಸಿದ್ದಾರೆ. ತಡೆಗೋಡೆ ಕಟ್ಟುವಾಗಲೇ ಮಣ್ಣು ಫಿಲ್ ಮಾಡದಂತೆ ಸೂಚನೆ ನೀಡಿದ್ದರೂ, ಸ್ಥಳೀಯರ ಒತ್ತಾಯದಂತೆ ಮಣ್ಣು ತುಂಬಿಸಿದ್ದರಿಂದ ಕಾಂಕ್ರೀಟ್ ಗೋಡೆ ಕುಸಿದು ಬಿದ್ದಿದೆ ಎನ್ನುವ ಮಾತನ್ನು ಇಂಜಿನಿಯರ್ ಹೇಳುತ್ತಾರೆ. 40 ಮೀಟರ್ ಉದ್ದಕ್ಕೆ ಕಾಂಕ್ರೀಟ್ ಗೋಡೆ ಬಿದ್ದಿದೆ. ಅದೇ ಪಾರ್ಶ್ವದಲ್ಲಿ 12 ಮೀಟರ್ ಉದ್ದಕ್ಕೆ ಅದೇ ಸಂದರ್ಭದಲ್ಲಿ ನಿರ್ಮಾಣಗೊಂಡ ತಡೆಗೋಡೆ ಹಾಗೆಯೇ ಇದೆ. ಅದರ ಬದಿಗೆ ಮಣ್ಣು ತುಂಬಿಸದೇ
ಇರುವುದರಿಂದ ಉಳಿದುಕೊಂಡಿದೆ.
ನೀರಾವರಿ ಇಲಾಖೆಯಿಂದ ಮೇ ತಿಂಗಳಲ್ಲಿ 2.80 ಕೋಟಿ ವೆಚ್ಚದಲ್ಲಿ ಅಳಪೆ, ಪಡೀಲ್, ಚಿಲಿಂಬಿ ಸೇರಿದಂತೆ ವಿವಿಧ ಕಡೆ ಕಾಂಕ್ರೀಟ್ ತಡೆಗೋಡೆ ನಿರ್ಮಾಣದ ಕಾಮಗಾರಿ ನಡೆಸಲಾಗಿತ್ತು. ಬೇರೆ ಬೇರೆ ಗುತ್ತಿಗೆದಾರರು ಕಾಮಗಾರಿಯನ್ನು ನಿರ್ವಹಿಸಿದ್ದರು. ಕಳೆದ ವರ್ಷ ಬಳ್ಳಾಲ್ ಬಾಗ್ ನಿಂದ ಅಳಪೆ ವರೆಗೂ ಕಾಲುವೆ ಬದಿಗೆ ತಡೆಗೋಡೆ ಕಟ್ಟುವ ಕೆಲಸ ಮಾಡಲಾಗಿತ್ತು. ಎಲ್ಲಿಯೂ ಕುಸಿತ ಆಗಿಲ್ಲ ಎನ್ನುವ ಮಾತನ್ನು ಇಂಜಿನಿಯರ್ ಹೇಳಿದ್ದಾರೆ. ಆದರೆ, ಕುಸಿದಿರುವ ಕಾಂಕ್ರೀಟ್ ತಡೆಗೋಡೆಯನ್ನು ಒಡೆಯುವಾಗ ಕಬ್ಬಿಣದ ರಾಡ್ ಕಮ್ಮಿಯಿರುವುದನ್ನು ನೋಡಿ ಸಾರ್ವಜನಿಕರು, ಕಬ್ಬಿಣದ ಸರಳುಗಳನ್ನು ಸರಿಯಾಗಿ ಬಳಸದೇ ಇದ್ದರಿಂದಲೇ ನಿರ್ಮಾಣಗೊಂಡ ಮೂರೇ ದಿನದಲ್ಲಿ ಸ್ಲಾಬ್ ಕುಸಿದಿದೆ ಎಂದು ಆರೋಪಿಸಿದ್ದಾರೆ.
On June 10, the concrete barrier built for the Raja Canal in front of Alake Market near Kudroli has collapsed due to the first rains, allegations of poor work by the public has been reported.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm