ಬ್ರೇಕಿಂಗ್ ನ್ಯೂಸ್
17-06-24 08:54 pm Mangalore Correspondent ಕರಾವಳಿ
ಉಳ್ಳಾಲ, ಜೂ.17: ನಮ್ಮ ದೇಶದಲ್ಲಿ ಎಲ್ಲಾ ಧರ್ಮೀಯರ ಹಬ್ಬಗಳಲ್ಲೂ ಎಲ್ಲರೂ ಬೆರೆತು ಸಂಭ್ರಮಿಸುವ ಸಂಸ್ಕೃತಿಗೆ ಶತ, ಶತಮಾನದ ಇತಿಹಾಸ ಇದೆ. ಇಂದು ಆ ಸಂಸ್ಕೃತಿಯು ಹದಗೆಟ್ಟಿದ್ದು, ಸಮಾಜವನ್ನ ಜೋಡಿಸುವ ಕೆಲಸ ನಮ್ಮಿಂದಲೇ ನಡೆಯಬೇಕಿದೆ ಎಂದು ಮಂಗಳೂರು ಶಾಂತಿ ಪ್ರಕಾಶನದ ಅಧ್ಯಕ್ಷರಾದ ಜನಾಬ್ ಮಹಮ್ಮದ್ ಕುಂಞ ಇಂಗಿತ ವ್ಯಕ್ತಪಡಿಸಿದರು.
ಸೋಮೇಶ್ವರದ ಪಶ್ಚಿಮ್ ರಿಹ್ಯಾಬಿಲಿಟೇಷನ್ ಆಶ್ರಮದಲ್ಲಿ ಉಳ್ಳಾಲದ ಹೆಲ್ಪ್ ಇಂಡಿಯಾ ಫೌಂಡೇಷನ್ ವತಿಯಿಂದ ನಡೆದ ಬಕ್ರೀದ್ ಹಬ್ಬ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು. ನಾವಿಂದು ಸಂಬಂಧಗಳನ್ನೇ ನಂಬದ ಸ್ಥಿತಿಯ ಕಾಲಘಟ್ಟದಲ್ಲಿದ್ದೇವೆ. ನಮ್ಮ ದೇಶದಲ್ಲಿ ಎಲ್ಲಾ ಧರ್ಮೀಯರ ಹಬ್ಬದಲ್ಲೂ ಪರಸ್ಪರ ಬೆರೆತು ಸಂಭ್ರಮಿಸುವ ಪದ್ಧತಿ ಶತ ಶತಮಾನದಿಂದ ಪಾಲಿಸಿ ಬಂದ ಸಂಸ್ಕಾರವಾಗಿದ್ದು ಈಗ ಆ ಸಂಭ್ರಮವು ದುರ್ಬಲಗೊಂಡಿದೆ. ಎಲ್ಲಾ ಧರ್ಮೀಯರು ಇಂದು ಹಬ್ಬಗಳನ್ನ ಆಚರಿಸಲೂ ಪೊಲೀಸರ ಅನುಮತಿ ಕೇಳುವ ಅನಿವಾರ್ಯತೆ ಎದುರಾಗಿದೆ.


ಹದಗೆಟ್ಟಿರುವ ಸಾಮರಸ್ಯವನ್ನು ನಾವೇ ಸರಿಪಡಿಸಿ ಸಮಾಜಗಳನ್ನು ಜೋಡಿಸಿ, ಹಿಂದಿನ ಸಂಸ್ಕಾರವನ್ನ ಮತ್ತೆ ಬೆಳೆಸಬೇಕಿದೆ. ಧರ್ಮ, ಹಬ್ಬಗಳು ಮನುಷ್ಯರ ಒಳಿತು, ಸಂಬಂಧಗಳನ್ನ ಗಟ್ಟಿಗೊಳಿಸುವುದಕ್ಕಿರುವುದೇ ಹೊರತು ದೇವರನ್ನ ಉದ್ಧಾರ ಪಡಿಸಲು ಅಲ್ಲ. ಧಾರ್ಮಿಕ ಮುಖಂಡರು, ಸಾಧು, ಸಂತರು ದೇವರುಗಳನ್ನ ಹೇಗೆ ಕಾಪಾಡಬೇಕೆಂದು ನಮಗೆ ಕಲಿಸಿಲ್ಲ. ಮನುಷ್ಯ ಹೇಗೆ ಬದುಕಬೇಕೆಂದು ಅವರು ಕಲಿಸಿದ್ದಾರೆ. ನಾವು ದೇವರಿಗೆ ನಿಕಟರಾಗಬೇಕಾದರೆ ಮನುಷ್ಯರನ್ನು ಪ್ರೀತಿ ಮಾಡುವ ಮೂಲಕವೇ ಸಾಧ್ಯ ಎಂದು ಪ್ರವಾದಿಯವರು ಸಂದೇಶ ನೀಡಿದ್ದರಲ್ಲದೆ, ಜಗತ್ತಿನ ಎಲ್ಲಾ ಧರ್ಮಗಳೂ ಅದೇ ಸಂದೇಶವನ್ನ ಸಾರಿವೆ. ಮನುಷ್ಯರು ಪರಸ್ಪರ ಪ್ರೀತಿಸಿ, ಬೆರೆತು ಬಾಳಲು ಹಬ್ಬಗಳು ಸೇತುವಾಗಿದೆ ಎಂದರು.
ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ರಾಜೇಶ್ ಮಾತನಾಡಿ ಜಗತ್ತಲ್ಲಿ ಎಲ್ಲರೂ ಅನಾಥರೇ, ಕೆಲವೊಂದು ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರಿಗೂ ತಾನು ಅನಾಥನೆಂಬ ಕೊರಗು ಕಾಡುತ್ತಿರುತ್ತದೆ. ಹಣ, ಶ್ರೀಮಂತಿಕೆಯು ಮನುಷ್ಯನಿಗೆ ಸುಖ ನಿದ್ದೆ, ನೆಮ್ಮದಿ ಕೊಡದು. ಮಲಗಿದಾಕ್ಷಣ ಸುಖ ನಿದ್ದೆಗೆ ಜಾರುವವರೇ ಜಗತ್ತಿನ ಪರಮ ಸುಖಿ ಜೀವಿಗಳಾಗಿದ್ದಾರೆ. ಆ ನಿಟ್ಟಿನಲ್ಲಿ ಹೆಲ್ಪ್ ಇಂಡಿಯಾದವರು ಅನಾಥಾಶ್ರಮ ವಾಸಿಗಳೊಂದಿಗೆ ಬಕ್ರೀದ್ ಹಬ್ಬವನ್ನ ಆಚರಿಸಿದ್ದು ನಿಜಕ್ಕೂ ಅರ್ಥಪೂರ್ಣ ಎಂದರು.
ಉಳ್ಳಾಲ ಪೊಲೀಸ್ ಠಾಣೆ ನಿರೀಕ್ಷಕರಾದ ಹೆಚ್.ಎನ್. ಬಾಲಕೃಷ್ಣ, ಪಶ್ಚಿಮ್ ರಿಹ್ಯಾಬಿಲಿಟೇಷನ್ ಸೆಂಟರ್ ಸ್ಥಾಪಕರಾದ ರೋಹಿತ್ ಸಾಂಕ್ಟಸ್, ಹೆಲ್ಪ್ ಇಂಡಿಯಾ ಫೌಂಡೇಷನ್ ಸ್ಥಾಪಕರಾದ ರಾಝಿಕ್ ಉಳ್ಳಾಲ್, ಪ್ರಮುಖರಾದ ಝಾಕಿರ್ ಇಕ್ಲಾಸ್, ಕೆಪಿಸಿಸಿ ಕಾರ್ಯದರ್ಶಿ ನಝೀರ್ ಬಾರ್ಲೆ, ಸಾಮಾಜಿಕ ಕಾರ್ಯಕರ್ತ ಸಿದ್ಧಿಕ್ ಮೊದಲಾದವರು ಉಪಸ್ಥಿತರಿದ್ದರು.
Mangalore Police permission for celebration of festivals, need to work on social integration says Muhammad Kunni in Bakrid festival.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 07:30 pm
HK News Staffer
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
CM Dk Shivakumar, Mangalore: ಕದ್ರಿ ದೇವಸ್ಥಾನದಲ...
18-09-26 03:39 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am