ಬ್ರೇಕಿಂಗ್ ನ್ಯೂಸ್
11-06-24 09:00 pm Mangalore Correspondent ಕರಾವಳಿ
ಮಂಗಳೂರು, ಜೂನ್ 11: ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಮಂಗಳೂರು ವಿವಿಯ ಆರ್ಥಿಕ ಸಮಸ್ಯೆ ಸರಿದೂಗಿಸುವ ನಿಟ್ಟಿನಲ್ಲಿ ಘಟಕ ಕಾಲೇಜುಗಳ ನಿರ್ವಹಣೆಯನ್ನು ರಾಜ್ಯ ಸರಕಾರದ ಕಾಲೇಜು ಶಿಕ್ಷಣ ಇಲಾಖೆಗೆ ಹಸ್ತಾಂತರ ಮಾಡಬೇಕು ಅಥವಾ ಈ ವಿಭಾಗವನ್ನು ಮುನ್ನಡೆಸಲು ರಾಜ್ಯ ಸರಕಾರದಿಂದ ಫಂಡ್ ಒದಗಿಸಬೇಕು ಎಂದು ಜೂನ್ 6ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ.
ಕೋಣಾಜೆ ವಿವಿ ಕ್ಯಾಂಪಸ್ ನಲ್ಲಿರುವ ಡಿಗ್ರಿ ಕಾಲೇಜನ್ನು ಮುಚ್ಚಲು ಇತ್ತೀಚೆಗೆ ನಿರ್ಣಯಿಸಲಾಗಿತ್ತು ಎನ್ನುವ ವಿಚಾರ ತೀವ್ರ ಆಕ್ಷೇಪಕ್ಕೆ ಕಾರಣವಾಗಿತ್ತು. ಅಲ್ಲಿ ಸೇರಿದಂತೆ ಮಂಗಳೂರಿನ ಯುನಿವರ್ಸಿಟಿ ಸಂಧ್ಯಾ ಕಾಲೇಜಿನಲ್ಲೂ ಪದವಿ ತರಗತಿಗಳಿಗೆ ಹೊಸ ಅಡ್ಮಿಶನ್ ಆಗುತ್ತಿಲ್ಲ. ವಿವಿಯ ಆಡಳಿತ ಮಂಡಳಿ ಏನೋ ಎಡವಟ್ಟು ನಿರ್ಧಾರ ಮಾಡಿದ್ದಾರೆ ಎಂದು ಕಾಲೇಜಿನ ಅತಿಥಿ ಉಪನ್ಯಾಸಕರು ಗೊಂದಲಕ್ಕೀಡಾಗಿದ್ದರು. ಆದರೆ, ಈ ಬಗ್ಗೆ ಸಿಂಡಿಕೇಟ್ ಸದಸ್ಯರಲ್ಲಿ ಪ್ರಶ್ನೆ ಮಾಡಿದಾಗ, ಅಂತಹ ಯಾವುದೇ ಪ್ರಸ್ತಾಪ ಇಲ್ಲವೆಂದು ಹೇಳಿದ್ದಾರೆ.
3-4 ತಿಂಗಳ ಸಂಬಳ ಬಾಕಿಯಿದ್ದ ಬಗ್ಗೆ ಚರ್ಚೆ ನಡೆಸಲಾಗಿದೆ. ಎರಡು ತಿಂಗಳ ಸಂಬಳವನ್ನು ಕೂಡಲೇ ಹಾಕಬೇಕೆಂದು ನಿರ್ಣಯ ಮಾಡಲಾಗಿದೆ. ಉಳಿದುದನ್ನು ಆದಷ್ಟು ಬೇಗ ಪಾವತಿಸುವಂತೆ ತಿಳಿಸಿದ್ದೇವೆ. ಅಲ್ಲದೆ, ವಿವಿ ಕ್ಯಾಂಪಸಿನ ಡಿಗ್ರಿ ಕಾಲೇಜು ಸೇರಿದಂತೆ ಯಾವುದೇ ಘಟಕ ಕಾಲೇಜುಗಳನ್ನು ಮುಚ್ಚಬಾರದು. ಅವುಗಳ ನಿರ್ವಹಣೆಗೆ ಹೆಚ್ಚುವರಿ ಫಂಡ್ ತರಿಸಲು ರಾಜ್ಯ ಸರಕಾರಕ್ಕೆ ಬರೆಯಲಾಗಿದೆ. ಆನ್ಲೈನ್ ಅಡ್ಮಿಶನ್ ಮಾಡುವುದಕ್ಕೆ ತೊಂದರೆ ಆಗಿತ್ತು. ಎಲ್ಲ ಕಡೆಯೂ ಆಫ್ ಲೈನಲ್ಲಿ ಅಡ್ಮಿಶನ್ ಆಗುತ್ತಿದೆ. ಯಾವುದೇ ಗೊಂದಲ ಪಡುವ ಅಗತ್ಯ ಇಲ್ಲವೆಂದು ಸಿಂಡಿಕೇಟ್ ಸದಸ್ಯ ಸವಾದ್ ಸುಳ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಇದಲ್ಲದೆ, ಮಂಗಳೂರು ವಿವಿಯಲ್ಲಿ ಹಣಕಾಸು ತೊಂದರೆ ನೀಗಿಸುವ ನಿಟ್ಟಿನಲ್ಲಿ ಅತಿಥಿ ಉಪನ್ಯಾಸಕರ ವೇತನಕ್ಕೆ ಕತ್ತರಿ ಹಾಕಲಿದ್ದಾರೆ ಎನ್ನುವ ಸುದ್ದಿಯೂ ಹರಡಿತ್ತು. ಆದರೆ, ಇಂತಹ ಯಾವುದೇ ಪ್ರಸ್ತಾಪ ಇಲ್ಲ. ಈಗಾಗಲೇ ಅತಿಥಿ ಉಪನ್ಯಾಸಕರಿಗೆ 18-20 ಸಾವಿರ ಸಂಬಳ ಇರೋದು. ಅದನ್ನು ಕಡಿತ ಮಾಡಿದರೆ ಹೇಗೆ.. ಅದೆಲ್ಲ ಸುಮ್ಮನೆ ಹಬ್ಬಿಸುತ್ತಿರುವ ವದಂತಿ ಎಂದು ಮತ್ತೊಬ್ಬ ಸಿಂಡಿಕೇಟ್ ಸದಸ್ಯ ರಘುರಾಜ್ ಕದ್ರಿ ಹೇಳಿದ್ದಾರೆ. ಮೊನ್ನೆಯ ಸಿಂಡಿಕೇಟ್ ಸಭೆಯಲ್ಲಿ ಅಂತಹ ಯಾವುದೇ ಚರ್ಚೆಯೂ ಆಗಿಲ್ಲ ಎಂದವರು ತಿಳಿಸಿದ್ದಾರೆ.
ಈ ಬಗ್ಗೆ ಮಂಗಳೂರು ಯುನಿವರ್ಸಿಟಿ ಕಾಲೇಜಿನ ಅತಿಥಿ ಉಪನ್ಯಾಸಕರೊಬ್ಬರಲ್ಲಿ ಕೇಳಿದಾಗ, ಹಣಕಾಸು ತೊಂದರೆಯ ಕಾರಣಕ್ಕೆ ನಮ್ಮ ವೇತನ ಕಡಿತ ಮಾಡುತ್ತಾರೆ ಎಂದು ಸುದ್ದಿಯಾಗುತ್ತಿದೆ. ಅಧಿಕೃತವಾಗಿ ಯಾರೂ ಹೇಳಿಲ್ಲ. ರಾಜ್ಯ ಸರಕಾರದ ಕಾಲೇಜು ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉತ್ತಮ ವೇತನವಿದ್ದು, ನೇರವಾಗಿ ಸರಕಾರದಿಂದಲೇ ಪಾವತಿಯಾಗುತ್ತದೆ. ಪ್ರತಿ ತಿಂಗಳು ಸರಿಯಾಗಿ ವೇತನವೂ ಬರುತ್ತದೆ. ಆದರೆ ನಮ್ಮ ವಿವಿಯಲ್ಲಿ ಯಾವತ್ತೂ ತೊಂದರೆ. ಸಿಗುವ ಸಂಬಳವೇ ಕಡಿಮೆ. ಅದರ ಮೇಲೆ ಕಡಿತ ಮಾಡಿದರೆ ನಾವು ಬದುಕುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಸಂಬಳ ಬಿಟ್ಟರೆ ಬೇರೆ ಯಾವುದೇ ಸವಲತ್ತು ಇಲ್ಲ. ಪರ್ಮನೆಂಟ್ ಸಿಬಂದಿಗೆ ಮಾತ್ರ ಲಕ್ಷಕ್ಕೂ ಹೆಚ್ಚು ಸಂಬಳ ಕೊಡುತ್ತಾರೆ. ಕರೆಕ್ಟಾಗಿ ಪಾವತಿಯೂ ಆಗುತ್ತದೆ. ಇಡೀ ಕಾಲೇಜು ನಡೆಯುವುದೇ ಅತಿಥಿ ಉಪನ್ಯಾಸಕರಿಂದ ಆಗಿದ್ದರೂ, ನಮ್ಮ ಬಗ್ಗೆ ವಿವಿ ಆಡಳಿತಕ್ಕಾಗಲೀ, ಸರಕಾರಕ್ಕಾಗಲೀ ಕಾಳಜಿ ಇಲ್ಲ ಎಂದು ಖೇದ ವ್ಯಕ್ತಪಡಿಸಿದ್ದಾರೆ.
ಮಂಗಳೂರು ವಿವಿಗೆ ಎ ಗ್ರೇಡ್ ಮಾನ್ಯತೆ ಹೋಗಿ ಬಿ ಗ್ರೇಡ್ ಆಗಿರುವುದರಿಂದ ಯುಜಿಸಿ ಅನುದಾನದಲ್ಲಿ ಕಡಿತ ಆಗಿದೆ. ಅಲ್ಲದೆ, ಕಳೆದ ಕುಲಪತಿ ಆಡಳಿತದಲ್ಲಿ ಅಗತ್ಯಕ್ಕಿಂತ ಹೆಚ್ಚು ಶಿಕ್ಷಕೇತರ ಸಿಬಂದಿಯನ್ನು ನೇಮಕ ಮಾಡಿರುವುದು ಆರ್ಥಿಕ ಸಮಸ್ಯೆಗೆ ಕಾರಣವಾಗಿತ್ತು. ಇತ್ತೀಚೆಗೆ 120ರಷ್ಟು ಹೆಚ್ಚುವರಿ ಸಿಬಂದಿಯನ್ನು ತೆಗೆದು ಹಾಕುವ ಕೆಲಸ ಆಗಿದೆ. ಆಮೂಲಕ ಒಂದಷ್ಟು ಹಣಕಾಸು ತೊಂದರೆಯನ್ನು ಸರಿದೂಗಿಸಲು ಪ್ರಯತ್ನ ಆಗಿದೆ. ಮತ್ತೆ ಎ ಗ್ರೇಡ್ ತರುವ ಪ್ರಯತ್ನ ನಡೆದಿದ್ದು ಆರು ತಿಂಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ಸವಾದ್ ಸುಳ್ಯ ತಿಳಿಸಿದ್ದಾರೆ.
Financial crisis in Mangalore University, Syndicate meeting decides to hand over college to state government.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm