ಬ್ರೇಕಿಂಗ್ ನ್ಯೂಸ್
01-06-24 05:51 pm Mangalore Correspondent ಕರಾವಳಿ
ಮಂಗಳೂರು, ಜೂನ್ 1: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿಷಯದಲ್ಲಿ ಪೊಲೀಸರು ಸ್ವಲ್ಪ ಮೃದು ಧೋರಣೆ ತೋರಿದ್ರು ಅನಿಸತ್ತೆ. ರಾಜಕಾರಣದಲ್ಲಿದ್ದವರು ಕಾನೂನಿಗೆ ಗೌರವ ಕೊಡಬೇಕು, ನಾವೇ ಗೌರವ ಕೊಡೋದಿಲ್ಲ ಅಂದ್ರೆ ಜನಸಾಮಾನ್ಯರು ಏನಂತಾರೆ ಅನ್ನುವ ಪ್ರಶ್ನೆ ಬರುತ್ತದೆ. ಮೊನ್ನೆಯ ಪ್ರಕರಣದಲ್ಲಿ ಪೊಲೀಸರು ಹರೀಶ್ ಪೂಂಜನನ್ನು ಬಂಧನ ಮಾಡಲೇಬೇಕಿತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದ್ದಾರೆ.
ಸುದ್ದಿಗೋಷ್ಟಿ ಸಂದರ್ಭದಲ್ಲಿ ಹರೀಶ್ ಪೂಂಜ ಪ್ರಕರಣದ ಬಗ್ಗೆ ಕೇಳಿದಾಗ, ನಿನ್ನೆ ಹೈಕೋರ್ಟ್ ನ್ಯಾಯಾಧೀಶರು ಏನು ಹೇಳಿದ್ದಾರೆ ಅಂತ ನಾವೆಲ್ಲ ನೋಡಿದ್ದೇವೆ. ಶಾಸಕಾಂಗದಲ್ಲಿದ್ದವರು ಅವರ ಕೆಲಸ ಏನು, ಅದನ್ನು ಮಾಡಬೇಕು ವಿನಾ ಕಾರ್ಯಾಂಗದ ಕೆಲಸಕ್ಕೆ ಕೈಹಾಕಬಾರದು ಅಂತ ತರಾಟೆಗೆತ್ತಿಕೊಂಡಿದ್ದಾರೆ. ಆ ಪ್ರಕರಣದ ಗಂಭೀರತೆಯನ್ನು ನಾವು ನೋಡಬೇಕಾಗುತ್ತದೆ. ಅವರು ಒಬ್ಬ ಪೊಲೀಸ್ ಅಧಿಕಾರಿ ಬಗ್ಗೆ ಹೇಳಿದ್ದು, ಯಾರೋ ಜನಸಾಮಾನ್ಯನ ಬಗ್ಗೆ ಅಲ್ಲ. ಪೊಲೀಸರ ಕಾಲರ್ ಹಿಡೀತೇವೇ ಎಂದಿದ್ದರು. ಇವರು ಕಾಲರ್ ಹಿಡಿಯಬೇಕಿದ್ದರೆ, ಪೊಲೀಸರು ಕೋಳ ಹಿಡಿದುಕೊಂಡಿರ್ತಾರೆ ಅನ್ನುವ ಸಾಮಾನ್ಯ ಜ್ಞಾನ ಬೇಕಲ್ವಾ.. ಪೊಲೀಸ್ ವರಿಷ್ಠಾಧಿಕಾರಿಗೆ ಬುದ್ಧಿ ಇಲ್ಲ ಎಂಬ ರೀತಿ ಮಾತಾಡಿದ್ದರು.
ನಾವೆಲ್ಲ ಪಕ್ಷದ ಆಶ್ರಯದಲ್ಲಿ ಶಾಸಕರಾಗಿ ಬಂದವರು, ವೈಯಕ್ತಿಕ ನೆಲೆಯಲ್ಲಿ ಗೆದ್ದು ಬರುವ ಶಕ್ತಿ ಇರಲ್ಲ. ಇಡೀ ದೇಶದಲ್ಲಿ ಒಂದಿಬ್ಬರಿಗೆ ಮಾತ್ರ ಅಂತಹ ಶಕ್ತಿ ಇದೆ. ವೈಯಕ್ತಿಕವಾಗಿ ಮಾತನಾಡುವಾಗ ನೋಡಿಕೊಂಡು ಮಾತನಾಡಬೇಕು. ಎಸ್ಪಿ, ಡೀಸಿ ಆಗೋರು ಐಎಎಸ್, ಐಪಿಎಸ್ ಪರೀಕ್ಷೆ ಪಾಸ್ ಮಾಡಿ ಬಂದಿರುತ್ತಾರೆ, ಅವರೇನೂ ಯಾರದ್ದೇ ಆಶ್ರಯದಲ್ಲಿ ಆ ಹುದ್ದೆಗೆ ಬಂದಿಲ್ಲ. ಅವರಿಗೆ ಯಾರದ್ದೇ ಆಶೀರ್ವಾದವೂ ಬೇಕಿಲ್ಲ. ಮೊನ್ನೆ 46 ಲಕ್ಷ ಜನ ಪರೀಕ್ಷೆ ಬರೆದವರಲ್ಲಿ 46 ಸಾವಿರ ಮಂದಿಯನ್ನು ಆಯ್ಕೆ ಮಾಡಿ, ಕೊನೆಗೆ ಅದರಲ್ಲಿ ಬೇರೆ ಬೇರೆ ಹಂತಗಳನ್ನು ದಾಟಿ ಕೊನೆಗೆ ಆಯ್ಕೆಯಾಗಿದ್ದು ಕೇವಲ 400 ಮಂದಿ. ಸ್ವಯಂ ಪ್ರತಿಭೆಯಿಂದಷ್ಟೇ ಅಧಿಕಾರಿ ಹುದ್ದೆಗೆ ಬಂದಿರುತ್ತಾರೆ. ಅಂಥವರಿಗೆ ಬುದ್ಧಿ ಇಲ್ಲ ಅಂದ್ರೆ, ಇವರು ಎಲ್ಲೆ ಮೀರಿದ್ದಾರೆ ಅಂತ ಆಗಲೇ ನಮಗೆ ಅನಿಸಬೇಕಿತ್ತು ಎಂದರು.
ನಮಾಜ್ ಪ್ರಕರಣದಲ್ಲಿ ಸುಮೋಟೊ ಕೇಸು ಹಾಕಿ ಹಿಂಪಡೆದಿದ್ದನ್ನು ಪ್ರಶ್ನೆ ಮಾಡಿದಾಗ, ಪೊಲೀಸರು ಈ ಪ್ರಕರಣದಲ್ಲಿ ತರಾತುರಿ ಮಾಡಿದ್ರು ಅಂತನಿಸ್ತದೆ. ಸುಮೋಟೊ ಕೇಸು ಹಾಕುವ ಅಗತ್ಯ ಇರಲಿಲ್ಲ. ಮಸೀದಿ ಕಡೆಯವರನ್ನು ಕರೆದು ಮಾತನಾಡಿದ್ದರು. ಹಾಗಿದ್ದ ಮೇಲೆ ಯಾಕೆ ಕೇಸ್ ಮಾಡಬೇಕಿತ್ತು. ಮಸೀದಿ ಫುಲ್ ಆದಾಗ, ಹೊರಗಡೆ ಬಂದು ನಮಾಜ್ ಮಾಡಿದ್ದಾರೆ. ಅದರಲ್ಲಿ ದೊಡ್ಡದು ಮಾಡುವ ಪ್ರಮೇಯ ಏನಿತ್ತು ಎಂದು ಕೇಳಿದರು.
ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎರಡೂ ಕಡೆ ಕಾಂಗ್ರೆಸ್ ಗೆಲ್ಲುತ್ತದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಈವರೆಗೆ ಗೆದ್ದಿಲ್ಲ. ಆದರೆ ನಾವೆಲ್ಲ ಒಟ್ಟಾಗಿ ಕೆಲಸ ಮಾಡಿದ್ದೇವೆ, ಮೇಲ್ಮನೆಯಲ್ಲಿ ಬಹುಮತ ಪಡೆಯಲು ಇಲ್ಲಿನ ಗೆಲುವು ಮುಖ್ಯವಾಗಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಮಮತಾ ಗಟ್ಟಿ, ಎಂ.ಎಸ್. ಮಹಮ್ಮದ್, ಎಂ.ಎ.ಗಫೂರ್ ಮತ್ತಿತರರಿದ್ದರು.
Congress Manjunath Bhandary says Belthangady MLA Harish Poonja shoul have been arrested. I have read about what the high court has questioned him in terms of his duty he added.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm