ಬ್ರೇಕಿಂಗ್ ನ್ಯೂಸ್
28-05-24 09:48 pm Mangalore Correspondent ಕರಾವಳಿ
ಮಂಗಳೂರು, ಮೇ 28: ನಡುರಸ್ತೆಯಲ್ಲಿ ನಮಾಜ್ ಮಾಡಿರುವ ವಿಚಾರದಲ್ಲಿ ಘಟನೆ ಮರುಕಳಿಸಿದರೆ ನಾವು ದಾಳಿ ಮಾಡುತ್ತೇವೆ ಎಂಬ ಬಜರಂಗದಳ ಎಚ್ಚರಿಕೆಗೆ ಎಸ್ಡಿಪಿಐ ನಾಯಕರು ತಿರುಗೇಟು ನೀಡಿದ್ದಾರೆ. ಹಿಂದುಗಳ ಗಣೇಶೋತ್ಸವ ಇನ್ನಿತರ ಸಂದರ್ಭಗಳಲ್ಲಿ ಇಡೀ ರಸ್ತೆಯನ್ನು ಬಂದ್ ಮಾಡೋದಿಲ್ವಾ.. ಅದು ಆಯಾ ಧರ್ಮಗಳ ಹಬ್ಬ. ಹಾಗೆಂದು ಅದನ್ನು ಮುಂದಿಟ್ಟು ಕೋಮು ದ್ವೇಷ ಹಬ್ಬಿಸುವುದು ಸರಿಯಲ್ಲ. ಈಗ ಬಜರಂಗದಳ ನಾಯಕರು ದಾಳಿ ಮಾಡುತ್ತೇವೆ ಎನ್ನುತ್ತಾರೆ. ತಾಕತ್ತಿದ್ದರೆ, ಅದನ್ನು ಮಾಡಿ ತೋರಿಸಲಿ ಎಂದು ಎಸ್ಪಿಡಿಐ ನಾಯಕ ರಿಯಾಜ್ ಕಡಂಬು ಸವಾಲು ಹಾಕಿದ್ದಾರೆ.
ಘಟನೆ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ರಿಯಾಜ್ ಕಡಂಬು, ನಾವು ಶಾಂತ ಸಮಾಜದಲ್ಲಿ ಕೋಮು ದ್ವೇಷ ಹಬ್ಬಿಸಲು ಅಥವಾ ಗಲಭೆ ಎಬ್ಬಿಸಲು ಬಯಸುವುದಿಲ್ಲ. ಹಾಗೆಂದು ಪಂಪ್ವೆಲ್ ನಂತಹ ನಾಯಕರು ಪ್ರಚೋದನೆ ಮಾಡಿದರೆ ಕೈಕಟ್ಟಿ ಕೂರುವುದೂ ಇಲ್ಲ. ಅಲ್ಲಿ ಎರಡು ನಿಮಿಷ ನಮಾಜ್ ಮಾಡಿದವರು ಎದ್ದು ಹೋಗಿದ್ದಾರೆ. ಇವರು ಮಾತ್ರ ಅದನ್ನು ದೊಡ್ಡ ರಾದ್ಧಾಂತ ಮಾಡುತ್ತಿದ್ದಾರೆ. ಇಲ್ಲಿ ಸಮಾಜವನ್ನು ರಕ್ಷಣೆ ಮಾಡುವುದಕ್ಕೆ, ಕಾನೂನಿಗೆ ವಿರುದ್ಧ ನಡೆದರೆ ಪೊಲೀಸರು ಇದ್ದಾರೆ. ಜನರು ಪ್ರಜ್ಞಾವಂತರಿದ್ದಾರೆ, ಎಲ್ಲ ಸಂದರ್ಭಗಳಲ್ಲಿ ಕೈಕಟ್ಟಿ ಕೂರುತ್ತಾರೆಂದು ಭಾವಿಸುವುದು ಬೇಡ.
ಪಂಪ್ವೆಲ್ ನಂತಹ ಸೇತುವೆಯ ಅಡಿಭಾಗದಲ್ಲಿ ಬಹಳಷ್ಟು ಮಂದಿ ಕುಟುಂಬಗಳು ರಾತ್ರಿ ಮಲಗುತ್ತಾರೆ. ಅದರಲ್ಲಿ ಎಲ್ಲ ಧರ್ಮದವರೂ ಇದ್ದಾರೆ. ಅವರಿಗೆ ಸಹಾಯ ಮಾಡುವುದು, ಆಶ್ರಯ ಕಲ್ಪಿಸುವ ಕೆಲಸ ಮಾಡಿದರೆ ಜನರು ಮೆಚ್ಚುತ್ತಾರೆ. ಅದು ಬಿಟ್ಟು ಪ್ರತಿ ಬಾರಿ ಜಿಲ್ಲೆಗೆ ಬೆಂಕಿ ಹಚ್ಚುವ ರೀತಿ ಹೇಳಿಕೆ ನೀಡುವುದು, ಪ್ರಚೋದನೆ ನೀಡುವುದನ್ನು ನಾವು ಸಹಿಸಲ್ಲ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ್ ಕಡಂಬು ಹೇಳಿದ್ದಾರೆ.
ಬಜರಂಗದಳ ನೇರ ಕಾರ್ಯಾಚರಣೆ ಮಾಡುತ್ತೇವೆ ಎಂದು ಹೇಳಿದ ಬೆನ್ನಲ್ಲೇ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ನಾವೇನೂ ಕೈಕಟ್ಟಿ ಕೂತಿಲ್ಲ ಎನ್ನುವ ಮೂಲಕ ಮುಸ್ಲಿಂ ನಾಯಕರು ತೊಡೆ ತಟ್ಟಿದ್ದಾರೆ. ಆಮೂಲಕ ಶಾಂತ ಸಮಾಜದಲ್ಲಿ ಸದ್ದಿಲ್ಲದೆ, ಮತ್ತೊಮ್ಮೆ ದ್ವೇಷದ ವಾತಾವರಣ ಮೂಡಿಸುವ ಯತ್ನ ನಡೆದಿರುವಂತೆ ಕಂಡುಬರುತ್ತಿದೆ.
Mangalore Namaz in the middle of the raod, SDPI warns Bajrang dal. Bajrang dal had warned of taking action if they find doing nama again. Sdpi leader Riaz also questioned about Ganeshotsava celebrations in raods.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm