ಬ್ರೇಕಿಂಗ್ ನ್ಯೂಸ್
27-05-24 09:54 pm Mangalore Correspondent ಕರಾವಳಿ
ಬೆಳ್ತಂಗಡಿ, ಮೇ.27: ಶಾಸಕ ಹರೀಶ್ ಪೂಂಜಾ ವಿರುದ್ಧ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿದ್ದು, ಒಂದರಲ್ಲಿ ಸ್ಟೇಶನ್ ಜಾಮೀನು ನೀಡಲಾಗಿದೆ. ಇನ್ನೊಂದರಲ್ಲಿ ಸೆಕ್ಷನ್ 353 ಪ್ರಕಾರ, ಕೇಸು ದಾಖಲಾಗಿರುವುದರಿಂದ ಅದನ್ನು ವಿಚಾರಣೆ ಮಾಡಬೇಕಿದೆ. ಅದರಲ್ಲಿ ಏಳು ವರ್ಷ ಶಿಕ್ಷೆಯಾಗಬಲ್ಲ ಕೇಸು ಆಗಿರುವುದರಿಂದ ಠಾಣೆಯಲ್ಲಿ ಜಾಮೀನು ನೀಡುವಂತಿಲ್ಲ. ಅವರು ಕಾನೂನು ಪ್ರಕಾರ ನಡೆದುಕೊಳ್ಳದೇ ಇದ್ದರೆ ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿಂಗ್ ಹೇಳಿದ್ದಾರೆ.
ಧರ್ಮಸ್ಥಳ ಠಾಣೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಹರೀಶ್ ಪೂಂಜ ಮೇಲಿನ ಕೇಸು, ಅದಕ್ಕೆ ಸಂಬಂಧಿಸಿ ನಡೆದಿರುವ ಗಲಾಟೆ ಬಗ್ಗೆ ಸ್ಪಷ್ಟನೆ ನೀಡಿದರು. ಕಾನೂನು ಪ್ರಕಾರ ನಾವು ನಡೆದುಕೊಳ್ಳಬೇಕಾಗುತ್ತದೆ. ಅಷ್ಟು ಪೊಲೀಸರನ್ನು ನಿಯೋಜನೆ ಮಾಡಬೇಕಿತ್ತಾ ಎಂಬ ಪ್ರಶ್ನೆಗೆ ಹಾಗೆ ಉತ್ತರ ನೀಡೋಕೆ ಆಗಲ್ಲ. ಅಲ್ಲಿ ಅಷ್ಟೊಂದು ಜನರನ್ನು ಸೇರಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿದ್ದರಿಂದ ಪೊಲೀಸರನ್ನು ನಿಯೋಜನೆ ಮಾಡಬೇಕಾಗಿ ಬಂದಿತ್ತು. ಮೊದಲು ಮೂರು ಜನ ಪೊಲೀಸರು ಹೋಗಿದ್ದಾಗ ಜನ ಸೇರಿಸಿ ಸಮಸ್ಯೆ ತಂದೊಡ್ಡಿದ್ದರು. ಆಗ ಸಹಜವಾಗಿಯೇ ಹೆಚ್ಚುವರಿ ಪೊಲೀಸರನ್ನು ಕರೆಸಬೇಕಾಗಿ ಬಂತು. ಕಾನೂನಿಗೆ ವಿರುದ್ಧವಾಗಿ ಒಂದು ಸಾವಿರ ಜನರನ್ನು ಸೇರಿಸುತ್ತೇವೆ ಎಂದರೆ, ಅದಕ್ಕೆ ತಕ್ಕಂತೆ ನಾವು ನಡೆದುಕೊಳ್ಳಬೇಕಲ್ವಾ.. ಎಂದರು.
ಬಂಧನ ಮಾಡಬೇಕಾಗುತ್ತಾ ಎಂಬ ಪ್ರಶ್ನೆಗೆ, ಅದು ತನಿಖಾಧಿಕಾರಿಗೆ ಬಿಟ್ಟದ್ದು, ಯಾವಾಗ ಬೇಕಾದರೂ ಕರೆಸಿಕೊಳ್ಳುವ ಸ್ವಾತಂತ್ರ್ಯ ಅವರಿಗಿದೆ. ಅಗತ್ಯ ಬಿದ್ದರೆ ನ್ಯಾಯಾಧೀಶರ ಮುಂದೆ ಹಾಜರುಪಡಿಸುತ್ತಾರೆ. ಕಾನೂನು ಪ್ರಕಾರವೇ ನಡೆದುಕೊಳ್ಳಬೇಕಾಗುತ್ತದೆ. ತಾನು ನಿರಪರಾಧಿ ಎನ್ನುವುದನ್ನು ಅವರು ಕೋರ್ಟಿಗೇ ಹೇಳಲಿ. ನಾವು ಅಗತ್ಯ ಇರುವ ಸಾಕ್ಷಿಯನ್ನು ಕೋರ್ಟಿಗೆ ಹಾಜರುಪಡಿಸಬೇಕಾಗುತ್ತದೆ ಎಂದು ಯಾರದ್ದೇ ಹೆಸರೆತ್ತದೆ ಎಸ್ಪಿ ಉಲ್ಲೇಖಿಸಿದರು. ಮೊನ್ನೆ ಜನ ಸೇರಿಸಿ ಗೊಂದಲ ಎಬ್ಬಿಸಿದಾಗ, ಜನಪ್ರತಿನಿಧಿಯೊಬ್ಬರು ನಾವೇ ಅವರನ್ನು ಕರ್ಕೊಂಡು ಬರುತ್ತೇವೆ ಎಂದು ಹೇಳಿದ್ದಲ್ಲದೆ, ಪೊಲೀಸರನ್ನು ಹಿಂಪಡೆದು ಗೊಂದಲ ನಿವಾರಣೆ ಮಾಡುವಂತೆ ಕೇಳಿಕೊಂಡರು. ಅದರಂತೆ, ನಾವು ಮಾಡಿದ್ದೇವೆ. ನಮಗೇನೂ ಅಲ್ಲಿ ಗೊಂದಲ ಎಬ್ಬಿಸುವುದು ಉದ್ದೇಶ ಇರಲಿಲ್ಲ. ವಿಚಾರಣೆಗೆ ಕರೆಸುವುದು ಅಷ್ಟೇ ಉದ್ದೇಶ ಇತ್ತು. ಎರಡು ಪ್ರಕರಣಕ್ಕೂ ನೋಟೀಸ್ ಕೊಟ್ಟಿದ್ದು, ಅವರಿಂದ ಸಹಿಯನ್ನೂ ಪಡೆದಿದ್ದೇವೆ ಎಂದರು.
ಕಲ್ಲು ಕೋರೆಯ ಜಾಗದ ಮಾಲೀಕತ್ವದ ಬಗ್ಗೆ ಕೇಳಿದ ಪ್ರಶ್ನೆಗೆ, ಅದನ್ನು ತನಿಖೆಯಲ್ಲಿ ನೋಡಬೇಕಾಗುತ್ತದೆ. ಕೆಲವು ಮಾಹಿತಿ ಅದು ಸರಕಾರಿ ಜಾಗ ಅಂತ ಇದೆ. ಕೆಲವರು ಖಾಸಗಿ ಅಂತ ಹೇಳಿದ್ದಾರೆ. ನಾವು ವೆರಿಫೈ ಮಾಡುತ್ತೇವೆ. ಕಂದಾಯ ಇಲಾಖೆ ಮಾಹಿತಿ ಪಡೆಯುತ್ತೇವೆ ಎಂದರು. ಪೊಲೀಸರು ದಾಳಿ ನಡೆಸಿದಾಗ, ಇಂಥವರದ್ದು ಅಂತ ಹೇಳಿದ್ದಾರೆ, ಅದರ ಬೇಸಿಸ್ ಮೇಲೆ ಕೇಸು ದಾಖಲು ಮಾಡಿದ್ದೇವೆ. ಒಬ್ಬರನ್ನು ಅರೆಸ್ಟೂ ಮಾಡಿದ್ದೇವೆ. ತಹಸೀಲ್ದಾರ್ ಅವರೇ ದೂರು ಕೊಟ್ಟಿದ್ದಾರೆ. ಮಾಹಿತಿ ಇಲ್ಲದೆ ದೂರು ಕೊಡುತ್ತಾರೆಯೇ ಎಂದು ಹೇಳಿದರು.
We might arrest MLA Harish Poonja is other case says sp over threatening of police inspector in Belthangady. All are equal before the law and the rule is same for everyone he added.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
10-11-25 11:07 pm
HK News Desk
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತ...
10-11-25 08:23 pm
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ; ಮೂವರು ಶ...
09-11-25 07:49 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm