ಬ್ರೇಕಿಂಗ್ ನ್ಯೂಸ್
25-05-24 06:38 pm Mangalore Correspondent ಕರಾವಳಿ
ಮಂಗಳೂರು, ಮೇ 25: ಕೊಟ್ಟಾರದಲ್ಲಿ ಮಳೆನೀರು ಹರಿಯುವ ಕಾಲುವೆಗೆ ಆಟೋ ರಿಕ್ಷಾ ಬಿದ್ದು ಚಾಲಕ ಸಾವನ್ನಪ್ಪಿದ ಪ್ರಕರಣ ಸಂಬಂಧಿಸಿ ಪೊಲೀಸರು ಮಹಾನಗರ ಪಾಲಿಕೆಯ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಸಾವನ್ನಪ್ಪಿದ ಆಟೋ ಚಾಲಕ ದೀಪಕ್ ಆಚಾರ್ಯ (44) ಅವರ ಅಕ್ಕ ಹೇಮಲತಾ ಅವರು ನೀಡಿದ ದೂರಿನ ಮೇರೆಗೆ ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಾನಗರ ಪಾಲಿಕೆಯವರು ಕಾಲುವೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಮತ್ತು ನೀರು ಮೇಲೆ ಬರುತ್ತಿದ್ದರೂ ರಸ್ತೆಗೆ ತಡೆಗೋಡೆ ಇರಿಸದೆ ನಿರ್ಲಕ್ಷ್ಯ ತೋರಿದ್ದರಿಂದ ಘಟನೆ ಸಂಭವಿಸಿದೆ. ಇದಕ್ಕೆ ಮಹಾನಗರ ಪಾಲಿಕೆಯವರೇ ಕಾರಣ ಎಂದು ದೂರು ನೀಡಿದ್ದರು. ಪೊಲೀಸರು ಪಾಲಿಕೆಯ ಅಧಿಕಾರಿಗಳು ಎಂದಷ್ಟೇ ಉಲ್ಲೇಖಿಸಿ ಪ್ರಕರಣ ದಾಖಲು ಮಾಡಿದ್ದಾರೆ.



ಇದೇ ವೇಳೆ, ಎನ್ಎಸ್ ಯುಐ ಮಂಗಳೂರು ನಗರ ದಕ್ಷಿಣ ಘಟಕದ ಅಧ್ಯಕ್ಷ ಕ್ರಿಸ್ಟನ್ ಮಿನೇಜಸ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಘಟನೆಗೆ ಸಂಬಂಧಿಸಿ ಪತ್ರ ಬರೆದಿದ್ದು, ಈ ಘಟನೆಗೆ ಹೊಣೆಗಾರರಾಗಿರುವ ಮಂಗಳೂರು ಮಹಾನಗರ ಪಾಲಿಕೆ ಮೇಯರ್, ಕಾರ್ಪೊರೇಟರ್ ಹಾಗೂ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಕಾರ್ಪೊರೇಟರ್ ಮನೋಜ್ ಕುಮಾರ್ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಅಮೂವ್ಯ ಜೀವ ಹೋಗುವಂತಾಗಿದೆ. ಜನರು ಕಟ್ಟಿದ ತೆರಿಗೆ ಹಣದಿಂದ ಅಭಿವೃದ್ಧಿ ಕೆಲಸವನ್ನು ಮಾಡಬೇಕು. ಇಲ್ಲಿ ನಿರ್ಲಕ್ಷ್ಯ ವಹಿಸಿದ್ದರಿಂದ ಘಟನೆಗೆ ಕಾರಣವಾಗಿದೆ. ಇವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ಅಲ್ಲದೆ, ಬಲಿಯಾದ ದೀಪಕ್ ಕುಟುಂಬದ ಒಬ್ಬರು ಸದಸ್ಯರಿಗೆ ಸರಕಾರಿ ಕೆಲಸ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೊಟ್ಟಾರದಲ್ಲಿ ಪ್ರತಿವರ್ಷ ಜೋರು ಮಳೆಯಾದರೆ ಕಾಲುವೆ ನೀರು ತುಂಬುವುದರಿಂದ ಆಸುಪಾಸಿನಲ್ಲಿರುವ ತಗ್ಗಿನ ಮನೆಗಳಿಗೆ ನುಗ್ಗುತ್ತದೆ. ಈ ರೀತಿಯ ಸ್ಥಿತಿ ಈ ಬಾರಿ ಮೊದಲ ಮಳೆಗೇ ಸಂಭವಿಸಿದ್ದು, ಪಾಲಿಕೆಯ ಅಧಿಕಾರಸ್ಥರು ನಿರ್ಲಕ್ಷ್ಯ ವಹಿಸಿದ್ದರಿಂದಲೇ ಸಮಸ್ಯೆ ಉಂಟಾಗುತ್ತಿದೆ. ಕಾಲುವೆ ಹೂಳೆತ್ತದಿರುವುದು, ಕಾಲುವೆಯನ್ನು ಒತ್ತುವರಿ ಮಾಡಿರುವುದನ್ನು ತೆರವು ಮಾಡದೇ ಇರುವುದು ಸಮಸ್ಯೆಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
Mangalore Kottara auto driver death, FIR filed on Mangalore City corporation over negligence, NSUI has written letter to CM demanding strict against mayor and corporator responsible.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 07:30 pm
HK News Staffer
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
CM Dk Shivakumar, Mangalore: ಕದ್ರಿ ದೇವಸ್ಥಾನದಲ...
18-09-26 03:39 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am