ಬ್ರೇಕಿಂಗ್ ನ್ಯೂಸ್
25-05-24 01:06 pm Mangalore Correspondent ಕರಾವಳಿ
ಉಳ್ಳಾಲ, ಮೇ 25: ಕಳೆದೆರಡು ವರ್ಷಗಳಲ್ಲಿ ರಾಜ್ಯದ ಇಬ್ಬರು ಮುಖ್ಯಮಂತ್ರಿಗಳು ಸತತ ಭೇಟಿ ನೀಡಿ ಅವಲೋಕನ ನಡೆಸಿದರೂ ಸೋಮೇಶ್ವರ, ಉಚ್ಚಿಲ ಬಟ್ಟಪ್ಪಾಡಿಯ ಕಡಲ್ಕೊರೆತಕ್ಕೆ ಇನ್ನೂ ಶಾಶ್ವತ ಪರಿಹಾರದ ಸಿಗದೆ ಸ್ಥಳೀಯರು ಮತ್ತು ಸಾಂಪ್ರದಾಯಿಕ ಮೀನುಗಾರರು ಈ ಬಾರಿಯೂ ತಮ್ಮ ನಿವೇಶನಗಳನ್ನ ಕಳಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ಸೋಮೇಶ್ವರ, ಉಚ್ಚಿಲ, ಬಟ್ಟಪ್ಪಾಡಿಯ ಸಮುದ್ರ ತೀರದಲ್ಲಿ ಕಳೆದ ಹತ್ತು ವರುಷಗಳಿಂದ ಕಡಲ್ಕೊರೆತ ತೀವ್ರಗೊಂಡಿದ್ದು ಇದಕ್ಕಿನ್ನೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಕಳೆದ ಮೂರು ವರ್ಷಗಳ ಹಿಂದೆಯೇ ಉಚ್ಚಿಲ ಕಡಲ ತೀರದ ಬಟ್ಟಪ್ಪಾಡಿ ಎಂಡ್ ಪಾಯಿಂಟ್ ರಸ್ತೆಯನ್ನೇ ಕಡಲು ನುಂಗಿದ್ದು ಇಲ್ಲಿನ ತೀರವಾಸಿಗಳು ರಸ್ತೆ ಸಂಪರ್ಕವಿಲ್ಲದೆ ದಿನ ಕಳೆಯುತ್ತಿದ್ದಾರೆ. ಪ್ರತೀ ವರುಷದಂತೆ ಕಳೆದ ವರುಷವೂ ಸ್ಥಳೀಯರ ಮನೆ, ತೆಂಗಿನ ಮರಗಳು ಕಡಲಿಗೆ ಆಹುತಿಯಾಗಿವೆ.
ಎರಡು ಮುಖ್ಯಮಂತ್ರಿಗಳ ಭೇಟಿ,ಪರಿಹಾರ ಮರೀಚಿಕೆ
2022 ರ ಮಳೆಗಾಲದಲ್ಲಿ ಅಂದಿನ ಬಿಜೆಪಿ ನೇತೃತ್ವದ ಸರಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಪ್ರದೇಶಕ್ಕೆ ರಾತ್ರಿ ವೇಳೆ ಭೇಟಿ ನೀಡಿ ವೀಕ್ಷಣೆ ನಡೆಸಿದ್ದರು. ಕಡಲ್ಕೊರೆತ ತಡೆಗೆ ಹೊಸ ತಂತ್ರಜ್ಞಾನದ ಶಾಶ್ವತ ಕಾಮಗಾರಿಯನ್ನ ಶೀಘ್ರವೇ ಆರಂಭಿಸುವ ಭರವಸೆ ನೀಡಿ ವಾಪಾಸಾಗಿದ್ದರು. 2023 ರಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೇರಿದ್ದು ನೂತನ ಮುಖ್ಯಮಂತ್ರಿ ಸಿದ್ಧರಾಮಯ್ಯರೂ ಉಚ್ಚಿಲ, ಬಟ್ಟಪ್ಪಾಡಿ ಪ್ರದೇಶಕ್ಕೆ ಕಾಟಾಚಾರಕ್ಕೆಂಬಂತೆ ಭೇಟಿ ನೀಡಿದ್ದು ಸ್ಥಳೀಯರ ಸಮಸ್ಯೆಯನ್ನೂ ಆಲಿಸದೆ ತುರ್ತಾಗಿ ನಿರ್ಗಮಿಸಿದ್ದರು. ಇದರಿಂದ ಅಸಮಾಧಾನಗೊಂಡ ಸ್ಥಳೀಯರು ಸ್ಪೀಕರ್ ಯು.ಟಿ.ಖಾದರ್ ಅವರಲ್ಲಿ ನಮ್ಮ ಸಮಸ್ಯೆಗೆ ನೀವೇ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಅಲವತ್ತು ತೋಡಿಕೊಂಡಿದ್ದರು. ರಾಜ್ಯದ ಎರಡು ಮುಖ್ಯಮಂತ್ರಿಗಳೇ ಭೇಟಿ ನೀಡಿದರೂ ಉಚ್ಚಿಲ ಬಟ್ಟಪ್ಪಾಡಿ ಪ್ರದೇಶದ ಕಡಲ್ಕೊರೆತ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ.
ಅಸಮರ್ಪಕ ಎಡಿಬಿ ಬ್ರೇಕ್ ವಾಟರ್ ಕಾಮಗಾರಿ
ಈ ಬಾರಿಯ ಮುಂಗಾರು ಆರಂಭದಲ್ಲೇ ಕಡಲು ಮತ್ತೆ ಪ್ರಕ್ಷುಬ್ಧಗೊಂಡಿದ್ದು ತೀರ ಪ್ರದೇಶದ ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ. ಬಟ್ಟಪ್ಪಾಡಿ ಪ್ರದೇಶದಲ್ಲಿ ಎಡಿಬಿ ಯೋಜನೆಯ ಬ್ರೇಕ್ ವಾಟರ್ ಕಾಮಗಾರಿ ನಡೆದಿದ್ದು ಸೀಮಿತ ಪ್ರದೇಶಗಳಲ್ಲಿ ಮಾತ್ರ ಬರ್ಮ್ಸ್ ಗಳನ್ನ ಅಳವಡಿಸಲಾಗಿದೆ. ಸಮುದ್ರ ಮಧ್ಯೆ ಹಾಕಲಾದ ರೀಫ್ ಗಳ ಕೆಲ ಭಾಗದ ಪ್ರದೇಶಗಳಲ್ಲಿ ಬರ್ಮ್ಸ್ ಗಳನ್ನ ಅಳವಡಿಸದಿರುವುದರಿಂದ ಕಡಲು ಮತ್ತೆ ಪ್ರಕ್ಷುಬ್ದಗೊಂಡು ದೈತ್ಯ ಗಾತ್ರದ ಅಲೆಗಳು ತೀರ ಪ್ರದೇಶಕ್ಕೆ ಅಪ್ಪಳಿಸುತ್ತಿವೆ. ರೀಫ್ ನ ಕೆಳಭಾಗದ ಪ್ರದೇಶದಲ್ಲಿರುವ ಸಾಂಪ್ರದಾಯಿಕ ಮೀನುಗಾರರ ನಿವಾಸಗಳು ಈ ಬಾರಿ ಕೊಚ್ಚಿ ಹೋಗುವ ಭೀತಿಯಲ್ಲಿದೆ. ತಕ್ಷಣಕ್ಕೆ ತಾತ್ಕಾಲಿಕ ರಕ್ಷಣಾ ಕಾಮಗಾರಿ ನಡೆಸಿಯಾದರೂ ನಮ್ಮ ಮನೆಗಳನ್ನ ರಕ್ಷಿಸಬೇಕೆಂದು ಸಾಂಪ್ರದಾಯಿಕ ಮೀನುಗಾರರು ಸರಕಾರ, ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಸಿಎಂಗಳು ಬಟ್ಟಪ್ಪಾಡಿಗೆ ಬಂದು ಸುದ್ದಿಗೋಷ್ಟಿ ನಡೆಸಿದ್ದ ಪ್ರದೇಶಗಳೇ ಕಡಲು ಪಾಲಾದರೂ ಈ ವರೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಎಡಿಬಿ ಕಾಮಗಾರಿಯಲ್ಲಿ ಸಮುದ್ರ ಮಧ್ಯೆ ಅಳವಡಿಸಲಾಗಿದ್ದ ರೀಫ್ ಕೆಳಗಡೆಯ ಪ್ರದೇಶಗಳಿಗೂ ಬರ್ಮ್ಸ್ ಅಳವಡಿಕೆ ಕಾಮಗಾರಿ ಮುಂದುವರಿಸಿದರೆ ಕಡಲಿನ ಅಲೆಗಳ ಸೆಳೆತ ಕಡಿಮೆಯಾಗುತ್ತದೆ. ಇಲ್ಲಿಗೆ ಭೇಟಿ ನೀಡುವ ಅಧಿಕಾರಿಗಳಲ್ಲೂ ನಾವು ಇದನ್ನೇ ಹೇಳುತ್ತಾ ಬಂದಿದ್ದರೂ ಸ್ಥಳೀಯರ ಸಲಹೆಗೆ ಯಾವುದೇ ಪ್ರಾಶಸ್ತ್ಯ ಲಭಿಸಿಲ್ಲ. ಮತ್ತೆ ಕಡಲ್ಕೊರೆತ ಆರಂಭಗೊಂಡಿದ್ದು ಆದಷ್ಟು ಶೀಘ್ರವಾಗಿ ಸ್ಥಳೀಯ ಸಾಂಪ್ರದಾಯಿಕ ಮೀನುಗಾರರಿಗೆ ಸರಕಾರ ರಕ್ಷಣೆ ಒದಗಿಸಬೇಕೆಂದು ಸ್ಥಳೀಯ ಸಾಂಪ್ರದಾಯಿಕ ಮೀನುಗಾರ ರೂಪೇಶ್ ಉಚ್ಚಿಲ್ ಆಗ್ರಹಿಸಿದ್ದಾರೆ.
Mangalore Sea Erosion An Unending Woe In Ullal even after two cms of Karnataka visit spot. Sea erosion in Ullal, especially at Battampady, Someshwara, and other areas, continues to be an unending woe for fishermen and others living on the coast. With the region receiving rain continuously, massive waves have been hitting the shore, causing panic among residents at Someshwara, Battampady, and nearby areas.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
17-05-25 10:51 pm
HK News Desk
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
17-05-25 10:09 pm
Mangalore Correspondent
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
Siddaramaiah, Cm Mangalore, BJP black flag: ಸ...
16-05-25 06:05 pm
17-05-25 05:00 pm
Bangalore Correspondent
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm