ಬ್ರೇಕಿಂಗ್ ನ್ಯೂಸ್
24-05-24 11:05 pm Giridhar Shetty, Mangaluru Correspondent ಕರಾವಳಿ
ಮಂಗಳೂರು, ಮೇ 24: ಕಳೆದೊಂದು ವಾರದಲ್ಲಿ ಬೆಳ್ತಂಗಡಿ ಬೇಡದ ಕಾರಣಕ್ಕೆ ಸುದ್ದಿಯಾಗಿತ್ತು. ಒಬ್ಬರು ರಾಜ್ಯಸಭೆ ಸದಸ್ಯ, ಇಬ್ಬರು ಎಂಎಲ್ಸಿ, ಒಬ್ಬ ಶಾಸಕ ಇರುವಂತಹ ಇಡೀ ರಾಜ್ಯದಲ್ಲೇ ಅತ್ಯಂತ ಪ್ರತಿಷ್ಠಿತ ಎನ್ನಬಹುದಾದ ಬೆಳ್ತಂಗಡಿ ಕ್ಷೇತ್ರ ಒಳ್ಳೆಯ ಕಾರಣಕ್ಕಂತೂ ಸುದ್ದಿಯಾಗಿಲ್ಲ. ಆದರೆ, ಈಗ ರಾಜ್ಯದ ದೊರೆ ಬೆಳ್ತಂಗಡಿಯ ರಾಜಮಾರ್ಗದಲ್ಲೇ ಪ್ರಯಾಣಿಸುತ್ತಿದ್ದಾರೆ. ಮಂಜುನಾಥನ ಬಳಿಗೆ ಆಕಾಶದಲ್ಲಿ ಬರಲು ಮಳೆ ಅಡ್ಡಿಯಿದೆ. ರಾಜಮಾರ್ಗ ಹೇಗಿದೆ ಎಂದು ತಿಳಿಯಲು ಸ್ವತಃ ಮುಖ್ಯಮಂತ್ರಿಯೇ ಅಲ್ಲಿ ಪ್ರಯಾಣಿಸಲೇಬೇಕು, ಮಹಾಜನರೇ ಒಂದು ದಿನಕ್ಕೆ ದಾರಿಬಿಡಿ ಪ್ಲೀಸ್..
ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗೆ 35 ಕಿಮೀ ಉದ್ದಕ್ಕೆ ಕಳೆದೊಂದು ವರ್ಷದಿಂದ ಹೆದ್ದಾರಿ ಕಾಮಗಾರಿ ಆಗ್ತಾ ಇದೆ. ಒಂದೇ ವರ್ಷದಲ್ಲಿ ಕೆಲಸ ಪೂರ್ತಿಯಾಗುತ್ತಾ ಅನ್ನುವಷ್ಟು ಬಿರುಸಿನಲ್ಲಿ ರಸ್ತೆಯನ್ನು ಕಳೆದ ಐದಾರು ತಿಂಗಳಲ್ಲಿ ಉದ್ದಕ್ಕೂ ಅಗೆದು ಹಾಕಲಾಗಿತ್ತು. ಮಡಂತ್ಯಾರಿನಿಂದ ಹಿಡಿದು ಗುರುವಾಯನಕೆರೆ, ಉಜಿರೆ, ಸೋಮಂತಡ್ಕ, ಕಕ್ಕಿಂಜೆ ವರೆಗೂ ಹೆದ್ದಾರಿಯನ್ನು ಅಗೆದು ಹಾಕಿದ್ದರು. ಬೇಸಗೆಯಲ್ಲಿ ಧೂಳಿನಿಂದ ಕೆಂಪು ಕೆಂಪಾಗಿದ್ದ ಜನರು ಈಗ ಮಳೆಯಾಗುತ್ತಿದ್ದಂತೆ ಕೆಸರಿನಲ್ಲಿ ಹೊರಳುತ್ತಿದ್ದಾರೆ.
ಪುಣ್ಯಕ್ಷೇತ್ರ ಧರ್ಮಸ್ಥಳ ಇರುವ ಕಾರಣಕ್ಕೆ ಬೆಳ್ತಂಗಡಿಗೆ ಅತಿ ಹೆಚ್ಚು ಪ್ರವಾಸಿಗರು, ಭಕ್ತರು ಆಗಮಿಸುತ್ತಾರೆ. ಅವರಿಗೆಲ್ಲ ಇಲ್ಲಿನ ಜನಪ್ರತಿನಿಧಿಗಳ ಸಾಧನೆಯ ಉಚಿತ ದರ್ಶನ. ಅದೇ ಧರ್ಮಸ್ಥಳದ ಧರ್ಮಾಧಿಕಾರಿ ಕೇಂದ್ರ ಸರಕಾರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪಕ್ಷದಿಂದ ರಾಜ್ಯಸಭೆ ಸದಸ್ಯರು. ಮೇಲಾಗಿ ಬಿಜೆಪಿಯದ್ದೇ ಶಾಸಕ ಹರೀಶ್ ಪೂಂಜ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಮತ್ತೊಬ್ಬ ಬಿಜೆಪಿಯದ್ದೇ ಎಂಎಲ್ಸಿ ಪ್ರತಾಪಸಿಂಹ ನಾಯಕ್ ಕೂಡ ಇದೇ ಕ್ಷೇತ್ರದವರು. ವಿಶೇಷ ಅಂದ್ರೆ, ಸದ್ಯ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಮತ್ತು ಎಂಎಲ್ಸಿ ಆಗಿರುವ ಹರೀಶ್ ಕುಮಾರ್ ಕೂಡ ಇದೇ ಬೆಳ್ತಂಗಡಿ ಕ್ಷೇತ್ರವರು. ಜಿಲ್ಲೆಯ ಸಂಸದರು ಹೇಗೂ ಒತ್ತಟ್ಟಿಗೆ ಇದ್ದಾರೆ ಬಿಡಿ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮೇ 25ರ ಮಧ್ಯಾಹ್ನ 12 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ರಸ್ತೆ ಮಾರ್ಗವಾಗಿ ಧರ್ಮಸ್ಥಳ ತೆರಳಲಿದ್ದಾರೆ. ಅಂದ್ರೆ, ಬೆಳ್ತಂಗಡಿಯ ಹೆದ್ದಾರಿ ದರ್ಶನ ಮಾಡುವುದಕ್ಕೆ ಇದೊಂದು ಸುಸಂದರ್ಭ ಎನ್ನಲೇಬೇಕು. ಈ ವರದಿ ನೋಡಿಯಂತೂ ಇವರು ತಮ್ಮ ಪ್ರವಾಸ ಕಡಿತ ಮಾಡಲೇಬಾರದು. ಪ್ರಯಾಣ ಸುಸ್ತಾದರೂ ಉಜಿರೆಯಿಂದ ಸೋಮಂತಡ್ಕ, ಮುಂಡಾಜೆ, ಕಕ್ಕಿಂಜೆಯ ವರೆಗೂ ಇವರು ಹೋಗಿ ಬಂದರೆ, ಅಲ್ಲಿನ ಜನರಿಗೆ ಒಂದಷ್ಟು ಸಂತೃಪ್ತಿ ದೊರಕೀತು. ನಮ್ಮನ್ನಾಳುವ ಮಂದಿಯೂ ಇದೇ ರಸ್ತೆಯಲ್ಲಿ ಬಂದು ಹೊರಳಾಡಿ ಹೋದರಲ್ಲಾ ಎನ್ನುವ ತೃಪ್ತ ಭಾವನೆ ಬಂದೀತು.
ಸೋಮಂತಡ್ಕ, ಮುಂಡಾಜೆಯಲ್ಲಿ ಬರೀ ಕೆಸರು ಮಾತ್ರ ಹೆದ್ದಾರಿಯಲ್ಲಿದೆ. ಅಲ್ಲಿನ ಜನರು ಮೂರು ತಿಂಗಳಿನಿಂದ ಧೂಳಿನೊಂದಿಗೆ ಕೆಂಪು ಮಣ್ಣನ್ನೇ ತಿಂದಿದ್ದಾರೆ. ಈಗ ಮಳೆ ನೀರು ಹರಿಯಲು ಜಾಗ ಇಲ್ಲದೆ ರಸ್ತೆಯಲ್ಲಿ ಹರಿಯುತಿದ್ದು, ದ್ವಿಚಕ್ರ ವಾಹನ ಸವಾರರು, ಆಟೋದವರು ಸರ್ಕಸ್ ಮಾಡುತ್ತಿದ್ದಾರೆ. ಆ ಜಾಗಕ್ಕೂ ನಾಡಿನ ದೊರೆ ಒಮ್ಮೆ ಹೋಗಿ ಬಂದರೆ, ಮಂಜುನಾಥನದ ದರ್ಶನದಷ್ಟೇ ಪುಣ್ಯ ಸಿಕ್ಕೀತು ಎನ್ನುವ ಮಾತು ಜನರಿಂದಲೇ ಕೇಳಿಬರುತ್ತಿದೆ.
ಯಾರೋ ರೌಡಿಯ ಪರ, ಅಕ್ರಮ ಕಲ್ಲು ಕೋರೆಯ ಪರ ಈ ಕ್ಷೇತ್ರದ ಶಾಸಕ ಹರೀಶ್ ಪೂಂಜ ಪೊಲೀಸರ ವಿರುದ್ಧ ಏರಿ ಹೋಗಿ ರಂಪ ಮಾಡುತ್ತಾರೆ. ಕಳೆದ ಬಾರಿ ಎದುರಾಳಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ, ಇದೇ ನೆಪ ಎಂದರಿತು ಸದ್ದಿಲ್ಲದೇ ರಾಜಕೀಯದ ಗಾಳಿ ಬೀಸುತ್ತಿದ್ದಾರೆ. ಇವರೆಲ್ಲ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದರೂ, ಒಂದು ದಿನವೂ ಅಲ್ಲಿದ್ದ ಇಂಜಿನಿಯರನ್ನು ಕರೆದು ಯಾಕಪ್ಪಾ ರಸ್ತೆಯನ್ನು ಹೀಗೆ ಮಾಡಿದ್ದೀಯಾ ಅಂತ ಕೇಳಿದ್ದಿಲ್ಲ. ಕೇಳುತ್ತಿದ್ದರೆ, ಈ ಪರಿ ರಾಡಿ ಆಗುತ್ತಿರಲಿಲ್ಲ. ಶಿರಾಡಿ, ಚಾರ್ಮಾಡಿ ಹೆದ್ದಾರಿಯಲ್ಲೂ ಮಳೆಗಾಲದಲ್ಲಿ ಇದೇ ರೀತಿ ರಾಡಿ ಎದ್ದರೂ ಮುಖ್ಯಮಂತ್ರಿ ಸೇರಿ ದೊಡ್ಡ ರಾಜಕಾರಣಿಗಳು ಆಕಾಶದಲ್ಲಿ ಹಾರಾಡುತ್ತಲೇ ಇದ್ದರು. ಈ ಬಾರಿ ಲೋಕಸಭೆ ಚುನಾವಣೆ ಫಲಿತಾಂಶ ಬರೋ ಹೊತ್ತಿಗೆ, ಮಂಜುನಾಥನ ದರ್ಶನಕ್ಕೆ ಬರುತ್ತಿರುವ ಕಾರಣಕ್ಕಾದರೂ ಇಲ್ಲಿನ ಹೆದ್ದಾರಿಯನ್ನು ನೋಡಿ ಪುಣ್ಯ ಕಟ್ಟಿಕೊಳ್ಳಲಿ. ಇಬ್ಬರು ಎಂಪಿಗಳು, ಮೂವರು ಶಾಸಕರ ಸಾಧನೆಯನ್ನು ಕಣ್ತುಂಬಿಕೊಳ್ಳಲಿ.
CM Siddaramaiah to visit Dharmasthala temple on May 25th, pathetic roads from Bantwal to Belthangady to shock CM. Public are facing huge difficulties travelling on Dirty roads due to widening of road. Two Mps and three MLAS have no concern about the safely of the people.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
17-05-25 10:51 pm
HK News Desk
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
17-05-25 10:09 pm
Mangalore Correspondent
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
Siddaramaiah, Cm Mangalore, BJP black flag: ಸ...
16-05-25 06:05 pm
17-05-25 05:00 pm
Bangalore Correspondent
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm