ಬ್ರೇಕಿಂಗ್ ನ್ಯೂಸ್
23-05-24 06:48 pm Mangaluru Correspondent ಕರಾವಳಿ
ಮಂಗಳೂರು, ಮೇ 23: 9ನೇ ತರಗತಿಯಲ್ಲೇ ಶಾಲೆ ಬಿಟ್ಟಿದ್ದೆ. ತಂದೆಯ ಜೊತೆಗೆ ಕೃಷಿ ಕೆಲಸದಲ್ಲಿ ತೊಡಗಿಸಿದ್ದೆ. ಎರಡು ವರ್ಷ ಗದ್ದೆಯಲ್ಲಿ ನೇಗಿಲು ಹಿಡಿದು ಉಳುವುದನ್ನು ಮಾಡಿದ್ದೆ. ಆನಂತರ, ಬೇರೆ ಕೆಲಸ ಮಾಡಬೇಕೆಂದು ಎಲ್ಲ ಕಡೆ ಅಲೆದಾಡಿದ್ದೇನೆ. ಕ್ಯಾಂಟೀನ್ ಕೆಲಸದಿಂದ ಹಿಡಿದು ಇಲೆಕ್ಟ್ರೀಶಿಯನ್, ಎಸಿ ಮೆಕ್ಯಾನಿಕ್ ಅಂಗಡಿ, ಬೇಕರಿ ಸಾಮಾಗ್ರಿ ಸೇಲ್ಸ್, ಮನಿ ಎಕ್ಸ್ ಚೇಂಜ್ ನಲ್ಲಿ ಎಕ್ಸಿಕ್ಯುಟಿವ್, ಕ್ಯಾಟರಿಂಗ್, ಹೀಗೆ ಎಲ್ಲ ರೀತಿಯ ಕೆಲಸವನ್ನೂ ಮಾಡಿದ್ದೇನೆ.. ಈ ಮಾತುಗಳನ್ನು ಹೇಳುತ್ತಿರೋದು, ಬೇರಾರೂ ಅಲ್ಲ. ಮಂಗಳೂರಿನ ಹೆಸರಾಂತ ಬಿಲ್ಡರ್, ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪನಿ ಮಾಲೀಕ ರೋಹಣ್ ಮೊಂತೇರೊ.
1400ಕ್ಕೂ ಹೆಚ್ಚು ಜನರಿಗೆ ಕೆಲಸ, ನೂರಾರು ಇಂಜಿನಿಯರ್ಸ್, ಸಿಎಗಳು, ಅಕೌಂಟೆಂಟ್ಸ್ ಗಳಿಗೆ ಕೆಲಸ ಕೊಟ್ಟಿರುವ ರೋಹಣ್ ಬಿಲ್ಡರ್ಸ್, 30ಕ್ಕೂ ಹೆಚ್ಚು ಪ್ರಾಜೆಕ್ಟ್ ಗಳನ್ನು ಮಾಡಿರುವ, ಮಂಗಳೂರಿನ ರೋಹಣ್ ಸಿಟಿ ಸಂಸ್ಥೆಯ ಮಾಲೀಕ ರೋಹಣ್ ಮೊಂತೇರೊ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ತನ್ನ ಮನದಾಳ ತೆರೆದಿಟ್ಟಿದ್ದಾರೆ. ಇಂದು ಜಗತ್ತಿನ ಮುಂಚೂಣಿ ಐಷಾರಾಮಿ ಕಾರಿನಲ್ಲಿ ತಿರುಗಾಡುವ ರೋಹಣ್ ಮೊಂತೇರೊ ಒಮ್ಮಿಂದೊಮ್ಮೆಲೇ ಇಷ್ಟು ಎತ್ತರಕ್ಕೆ ಬೆಳೆದಿಲ್ಲ ಅನ್ನುವುದು ಅವರ ಮಾತು ಕೇಳಿದರೆ ತಿಳಿಯುತ್ತದೆ.
ಕೋಣಕ್ಕೆ ನೇಗಿಲು ಕಟ್ಟಿ ಉಳುಮೆ ಮಾಡಿದ್ದೇನೆ..
ಹುಟ್ಟಿದ್ದು ಮಂಗಳೂರು ಹೊರವಲಯದ ವಾಮಂಜೂರು ಬಳಿಯ ಉಳಾಯಿಬೆಟ್ಟಿನಲ್ಲಿ. ಅಲ್ಲಿನ ಜೋಕಿಂ ಜೋಸೆಫರ ಶಾಲೆಯಲ್ಲಿ 9ನೇ ಕ್ಲಾಸಲ್ಲಿ ಓದುತ್ತಿರುವಾಗಲೇ ಶಾಲೆ ಬಿಟ್ಟಿದ್ದೆ. ನಮಗೆ ಹತ್ತು ಎಕರೆ ಕೃಷಿ ಜಮೀನಿದೆ. ತಂದೆಯ ಜೊತೆಗೆ ಎರಡು ವರ್ಷ ಕೃಷಿ ಕೆಲಸದಲ್ಲಿ ತೊಡಗಿದ್ದೆ. ಬೆಳಗ್ಗಿನಿಂದ ಮಧ್ಯಾಹ್ನ ವರೆಗೂ ಕೋಣಗಳನ್ನು ಕಟ್ಟಿ ಉಳುಮೆ ಮಾಡಿದ್ದೇನೆ. ಆನಂತರ, ಅಲೋಶಿಯಸ್ ಶಾಲೆಗೆ ಬಂದು ಹತ್ತನೇ ಕ್ಲಾಸ್ ಮಾಡಬೇಕೆಂದು ಕೇಳಿದ್ದೆ. ಪ್ರಾಯ 18 ಆಗಬೇಕೆಂದು ಹೇಳಿ ಹಿಂದೆ ಕಳಿಸಿದ್ದರು. ಆನಂತರ, ನನಗೆ ಓದಬೇಕೆಂದು ಅನಿಸಿಲ್ಲ. ಮನೆಯಲ್ಲಿ ಕೃಷಿ ಮಾಡುತ್ತಿದ್ದಾಗ, ಇದರಿಂದ ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವಿಲ್ಲ, ಬೇರೇನಾದರೂ ಮಾಡಬೇಕೆಂದು ಹೊರಗೆ ಬಂದಿದ್ದೆ.
ಕ್ಯಾಂಟೀನಲ್ಲಿದ್ದಾಗ ಹಾಲು ಕರಟಿ ಹೋಗಿತ್ತು
ಮೊದಲಿಗೆ ಉಡುಪಿಯಲ್ಲಿ ಕ್ಯಾಂಟೀನ್ ಒಂದರಲ್ಲಿ ಕೆಲಸ ಮಾಡಿದ್ದೆ. ಚಹಾ ಮಾಡಲು ಹಾಲು ಇಟ್ಟು ಅದನ್ನು ಕಾಯಿಸಿ, ಹಾಳಾಗಿದ್ದು ನೆನಪಿದೆ. ಸ್ವಲ್ಪ ದಿನದಲ್ಲೇ ಅಲ್ಲಿ ಬಿಟ್ಟು ಬಂದಿದ್ದೆ. ಆಗ ಹಗಲು ಕೆಲಸ ಮಾಡಿ, ರಾತ್ರಿ ಕಲಿಯಬೇಕೆಂಬ ಆಸೆ ಇತ್ತು. ಅದು ಬಿಟ್ಟು ಇಲೆಕ್ಟ್ರೀಶಿಯನ್ ಕೆಲಸ ಮಾಡಿದ್ದೆ. ಕೆಲವು ತಿಂಗಳಲ್ಲೇ ಅಲ್ಲಿ ಬಿಟ್ಟು ಏರ್ ಕಂಡೀಶನ್ ರಿಪೇರಿ ಅಂಗಡಿಗೆ ಸೇರಿದ್ದೆ. ಒಮ್ಮೆ ಮನಿ ಎಕ್ಸ್ ಚೇಂಜ್ ಸೆಂಟರಿನಲ್ಲಿ ಎಕ್ಸಿಕ್ಯೂಟಿವ್ ಆಗಿದ್ದೆ. ಉಡುಪಿಯಲ್ಲಿ ಕ್ಯಾಟರಿಂಗ್ ಸೇರಿದ್ದಾಗ, ನೂರು ರೂ. ಕೂಲಿ ಕೊಡುತ್ತಿದ್ದರು. ಮಂಗಳೂರಿನ ಬಂದರಿನಲ್ಲಿ ಗಾರೆ ಕೆಲಸವನ್ನೂ ಮಾಡಿದ್ದೇನೆ. ಮೇಸ್ತ್ರಿ ಜೊತೆಗೆ ಹೆಲ್ಪರ್ ಆಗಿ ದುಡಿದಿದ್ದೇನೆ.
ಉರ್ವಾದಲ್ಲಿ ಲಾಂಡ್ರಿ ಶಾಪ್ ಮಾಡಿದ್ದೆ
ಉರ್ವಾದಲ್ಲಿ ಲಾಂಡ್ರಿ ಅಂಗಡಿ ತೆರೆದು ಆರು ತಿಂಗಳಲ್ಲಿ ಮಾರಾಟ ಮಾಡಿದ್ದೆ. ಅಲ್ಲಿಂದ ವಾಸ್ ಬೇಕರಿ ಸೇರಿ ಮಂಗಳೂರು, ಮೂಡುಬಿದ್ರೆ, ಉಡುಪಿಯಲ್ಲಿ ಅಂಗಡಿ ಅಂಗಡಿಗೆ ಬೇಕರಿ ತಿಂಡಿಗಳನ್ನು ಟೆಂಪೋದಲ್ಲಿ ಸಪ್ಲೈ ಮಾಡುತ್ತಿದ್ದೆ. ಅಲ್ಲಿರುವಾಗಲೇ ಒಬ್ಬ ಫ್ರೆಂಡ್ ಬಂದು ನಾವು ರಿಯಲ್ ಎಸ್ಟೇಟ್ ಮಾಡೋಣ ಎಂದು ಐಡಿಯಾ ಕೊಟ್ಟ. ಹೇಗೆ ಮಾಡೋಣ ಅಂತ ಯೋಚಿಸಿದಾಗ, ಸಂಜೆ ಹೊತ್ತಲ್ಲಿ ಕೆಲವು ಕಡೆ ಹೋಗಿ ಎಲ್ಲಿ ಲೈಟ್ ಉರಿಯೋದಿಲ್ಲ ಎಂದು ನೋಡ್ತಿದ್ದೆವು. ಲೈಟ್ ಉರಿಯಲ್ಲ ಎಂದ್ರೆ ಅದನ್ನು ಬಾಡಿಗೆ ಇಟ್ಟಿದ್ದಾರೆಂದು ತಿಳಿದು ಮುಂದುವರಿಯುತ್ತಿದ್ದೆವು.
ಮಂಗಳೂರು ನನ್ನ ಪಾಲಿಗೆ ಸ್ವರ್ಗ ಇದ್ದಂತೆ
ಹೀಗೆ ಬಾಡಿಗೆ ಮನೆಗಳನ್ನು ಹುಡುಕುತ್ತ ಆರಂಭಗೊಂಡ ರಿಯಲ್ ಎಸ್ಟೇಟ್ ಪಯಣದಲ್ಲಿ 30 ವರ್ಷ ಪೂರೈಸಿದ್ದೇನೆ. ಹಲವಾರು ಪ್ರಾಜೆಕ್ಟ್ ಮಾಡಿದ್ದೇನೆ. ನೂರಾರು ದೇಶಗಳನ್ನು ಸುತ್ತಿದ್ದೇನೆ, ಮಂಗಳೂರೇ ನನ್ನ ಪಾಲಿಗೆ ಸ್ವರ್ಗ. ಒಂದು ಮನೆಯಲ್ಲಿ ರೋಗ ಬಿದ್ದು ಮಲಗಿದರೆ ಹತ್ತಿರದವರಾದ್ರೂ ಹೇಗಿದ್ದೀರಿ ಅಂತ ಕೇಳುತ್ತಾರೆ, ಇಲ್ಲಿ ಒಳ್ಳೆಯ ನೀರಿದೆ, ಒಳ್ಳೆ ಗಾಳಿಯಿದೆ, ಒಳ್ಳೆಯ ಮಳೆ ಬರುತ್ತೆ. ಮೋಸ ಇಲ್ಲದೆ ಒಳ್ಳೆಯ ಮನೆಗಳು ಸಿಗುತ್ತವೆ. ಇನ್ನೇನು ಬೇಕು ನಮಗೆ. ಜನರಿಗೆ ಕೈಗೆಟಕುವ ದರದಲ್ಲಿ ಮನೆಗಳನ್ನು ಕೊಡಬೇಕು ಎನ್ನುವ ಕನಸು ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು ರೋಹಣ್ ಮೊಂತೇರೊ.
ನಮ್ಮ ನಗರವೂ ದುಬೈ ತರ ಬೆಳೆಯಬೇಕು ಅನ್ನುವ ಹಂಬಲ ಇದೆ. ನಾವೆಲ್ಲ ಸೇರಿ ಕೆಲಸ ಮಾಡಿದರೆ ದುಬೈ ಕಟ್ಟಬಹುದು. ಈಗ ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಮಾಡಿದ್ದೇನೆ. ಹೆಚ್ಚು ದುಡಿದರೆ, ಹೆಚ್ಚು ಹಣ ಆಗುತ್ತದೆ. ಸಾಧ್ಯವಾದರೆ, ಜನರಿಗೆ ಹೆಲ್ಪ್ ಮಾಡಬೇಕು. ಮೋಸ ಮಾಡೋದಲ್ಲ. ನಾವೆಂದೂ ಗ್ರಾಹಕರಿಗೆ ಮೋಸ ಮಾಡಿಲ್ಲ. ಹಾಗಾಗಿ, ನಮ್ಮಲ್ಲಿ ನಂಬಿಕೆ ಇಟ್ಟು ಗ್ರಾಹಕರು ಬರುತ್ತಾರೆ ಎಂದರು.
ರಿಯಲ್ ಎಸ್ಟೇಟ್ ಕುಸಿದಿಲ್ಲ
ಹತ್ತು ವರ್ಷ ಕೆಳಗೆ ರೋಹಣ್ ಇನ್ನು ಮೇಲೆ ಬರಲ್ಲ, ಪಾಪರ್ ಆಗಿದ್ದಾರೆ ಅಂತ ಹೇಳುತ್ತಿದ್ದರು, ನೀವು ಮೇಲೆ ಬಂದಿದ್ದು ಹೇಗೆ ಎಂದು ಕೇಳಿದ ಪ್ರಶ್ನೆಗೆ, ನಾನೆಂದೂ ಪಾಪರ್ ಆಗಿಲ್ಲ. ತೊಂದರೆ ಆದಾಗ ಹಲವಾರು ಮಂದಿ ಸಹಾಯ ಮಾಡಿದ್ದಾರೆ. ಅವರಿವರು ಅಂತ ಹೇಳೋದಿಲ್ಲ, ಡಿಸಿಸಿ ಬ್ಯಾಂಕಿನ ರಾಜೇಂದ್ರ ಕುಮಾರ್ ಬ್ಯಾಂಕಿಂಗ್ ನಲ್ಲಿ ಸಹಾಯ ಮಾಡಿದ್ದಾರೆ. ಹತ್ತು ವರ್ಷ ಹಿಂದೆ ರಿಯಲ್ ಎಸ್ಟೇಟ್ ಸ್ವಲ್ಪ ಕುಸಿದಿದ್ದು ಹೌದು. ಹಾಗೆಂದು, ಬಿದ್ದು ಹೋಗಿಲ್ಲ. ಯಾರು ಕೂಡ ಎಕ್ಕುಟ್ಟಿ ಹೋಗಿಲ್ಲ. ಬಿಸಿನೆಸ್ ಆಗ್ತಾನೇ ಇದೆ, ರಿಯಲ್ ಎಸ್ಟೇಟಲ್ಲಿ ಹೂಡಿಕೆ ಮಾಡಿದರೆ ಯಾವುದೇ ಲಾಸ್ ಇಲ್ಲ. ಆದರೆ ಯಾವುದು ಬೆಟರ್ ಅಂತ ನೋಡ್ಕೊಂಡು ಹೂಡಿಕೆ ಮಾಡಬೇಕಾಗತ್ತೆ ಎಂದರು.
ಪೆಟ್ಟು ಬಿತ್ತು ಅಂತ ಓಡಿ ಹೋಗಬಾರದು
ಫೈಲ್ಯೂರ್ ಆಗೋದಂದ್ರೆ ನಮಗೆ ಕಲಿಯಲು ಸಿಗುವ ಅವಕಾಶ. ಒಮ್ಮೆ ಪೆಟ್ಟು ಬಿದ್ದರೆ ನಾವು ಇನ್ನೊಂದು ಲೆವೆಲ್ ಹೋಗಲು ಸಾಧ್ಯವಾಗುತ್ತದೆ. ಪೆಟ್ಟು ಬಿತ್ತು ಅಂತ ಯಾವತ್ತೂ ಓಡಿ ಹೋಗಬಾರದು. ನಾವು ಫೈಟ್ ಮಾಡಬೇಕು. ಯಶಸ್ಸು ತನ್ನಿಂದ ತಾನೇ ಹಿಂದೆ ಬರುತ್ತದೆ. ಕೊರೊನಾ ಸಮಯದಲ್ಲಿ ಬೆನ್ನು ನೋವು ಕಾಡಿತ್ತು. ಅದು ಬಿಟ್ಟರೆ, ಉದ್ಯಮದಲ್ಲಿ ದೊಡ್ಡ ಲಾಸ್ ಆಗಿಲ್ಲ. ಕೆಲವು ಪ್ರಾಜೆಕ್ಟ್ ಗಳನ್ನು ಅದೇ ಸಮಯದಲ್ಲಿ ಲಾಂಚ್ ಮಾಡಿದ್ದೆ.
ರೋಹಣ್ ಸಿಟಿ ಬಗ್ಗೆ ಕೇಳಿದಾಗ, ಕಾರ್ಕಳ, ಬೆಳ್ತಂಗಡಿ ಅಂತ ತುಂಬ ಜನರು ಮಂಗಳೂರಿನಲ್ಲಿ ಇದ್ದಾರೆ. ಮಂಗಳೂರಿನಲ್ಲಿ ಮನೆ ಇರಬೇಕು, ಉದ್ಯೋಗಕ್ಕೆ ಹತ್ತಿರವಾಗಬೇಕೆಂಬ ಕನಸು ಇರುತ್ತದೆ. ಹೊಟೇಲಿನಲ್ಲಿ ಕೆಲಸ ಮಾಡೋರಿಗೂ ಒಳ್ಳೆ ಅಪಾರ್ಟ್ಮೆಂಟ್ ಕೊಳ್ಳಬೇಕು ಅನ್ನುವ ಕನಸು ಇರುತ್ತದೆ. ಅವರಿಗೆ ಎಲ್ಲವೂ ಒಂದೇ ಕಡೆ ಇರುವಂತೆ ರೋಹಣ್ ಸಿಟಿ ಮಾಡಿದ್ದೇನೆ, ಚರ್ಚ್, ಮಸೀದಿ, ದೇವಸ್ಥಾನ, ಸ್ವಿಮ್ಮಿಂಗ್ ಪೂಲ್, ಕ್ಲಬ್ ಹೌಸ್ ಎಲ್ಲ ಒಂದೇ ಕಡೆ ಇರತ್ತೆ. ಜನರಿಗೆ ಬೇರೇನು ಬೇಕು, ಇಷ್ಟೇ ಅಲ್ವಾ ಎಂದರು.
ನೀವು ಇಷ್ಟೆಲ್ಲವನ್ನೂ ಒಬ್ಬರೇ ಹೇಗೆ ನಿಭಾಯಿಸುತ್ತೀರಿ, ಮೆಂಟಲ್ ಸ್ಟ್ರೆಸ್ ಆಗಲ್ವಾ ಎಂದು ಕೇಳಿದ ಪ್ರಶ್ನೆಗೆ, ದೇವರಿದ್ದಾನೆ ಅಂತ ನಕ್ಕರು. ನಾನು ಪ್ರತಿದಿನ ಬೆಳಗ್ಗೆದ್ದು ಚರ್ಚ್ ಹೋಗುತ್ತೇನೆ. 31 ವರ್ಷಗಳಿಂದ ಮಾಡುತ್ತಿದ್ದೇನೆ. ನನಗೀಗ 52 ವರ್ಷ. ಶುಗರ್ ಬಿಪಿ ಇಲ್ಲ, ಯಾವುದೇ ರೋಗ, ತೊಂದ್ರೆ ಇಲ್ಲ. ಅನಾರೋಗ್ಯ ಕಾಡಿಲ್ಲ. ಎಲ್ಲದಕ್ಕೂ ಟೈಮ್ ಫಿಕ್ಸ್ ಮಾಡ್ಕೊಂಡು ಕೆಲಸ ಮಾಡುತ್ತೇನೆ. ಏನೂ ಆಗಿಲ್ಲ ಎಂದರು.
9 ಲಕ್ಷದ ಫ್ಲಾಟಿಗೆ ಈಗ 40 ಲಕ್ಷ ಬೆಲೆ
ಅಪಾರ್ಟ್ಮೆಂಟ್ ವ್ಯಾಲ್ಯೂ ಹೇಗೆ, 30-40 ವರ್ಷ ಆದಬಳಿಕ ಅದಕ್ಕೆ ಬೆಲೆ ಇರುತ್ತಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೋಹಣ್ ಮೊಂತೇರೊ, 1994ರಲ್ಲಿ ಕಂಕನಾಡಿಯಲ್ಲಿ 9 ಲಕ್ಷಕ್ಕೆ ಫ್ಲಾಟ್ ಕೊಟ್ಟಿದ್ದೇನೆ. ಅದಕ್ಕೀಗ 40 ಲಕ್ಷ ಬೆಲೆ ಇದೆ. ಆಗ ಚದರ ಮೀಟರಿಗೆ 400 ರೂ. ಅಷ್ಟೇ ಇತ್ತು. ಅಪಾರ್ಟ್ಮೆಂಟ್ 40-50 ವರ್ಷ ವ್ಯಾಲ್ಯೂ ಇರತ್ತೆ. ಆನಂತರ, ಅಪಾರ್ಟ್ಮೆಂಟ್ ಇರುವ ಒಟ್ಟು ಜಾಗದಲ್ಲಿ ಎಲ್ಲ ಫ್ಲಾಟ್ ಮಾಲೀಕರಿಗೂ ಸಮಾನ ಹೊಣೆ ಬರುತ್ತದೆ. ಆದರೆ, ಲೀಗಲೀ ಆಗಿ ನಾವು ಪರ್ಫೆಕ್ಟ್ ಇರುವಂತೆ ನೋಡಿಕೊಳ್ಳಬೇಕು ಎಂದರು. ನೀವು ಬೇರೆ ಯಾವ ನಗರದಲ್ಲಿ ಹೂಡಿಕೆ ಮಾಡಿದ್ದೀರಿ ಎಂದು ಕೇಳಿದ್ದಕ್ಕೆ, ಮೈಸೂರಲ್ಲಿ ಒಂದು ಪ್ರಾಜೆಕ್ಟ್ ಆಗ್ತಾ ಇದೆ. ಮುಂದೆ ಬೆಂಗಳೂರು, ಗೋವಾದಲ್ಲಿ ಉದ್ಯಮ ಬೆಳೆಸಬೇಕು ಎನ್ನುವ ಗುರಿಯಿದೆ ಎಂದರು.
Rohan Monteiro Wikipedia, The Mangaluru Press Club bestowed the Guest of Honour Award upon Rohan Monteiro, Managing Director of Rohan Corporation, at the press club on Thursday, May 23. Reflecting on his arduous path to success, Monteiro shared, "I have faced numerous challenges, working various odd jobs such as in canteens, as an auto electrician, in air conditioning and exchange businesses, catering, lorry loading, masonry, laundry services, and bakery operations. Eight years in sales at Vas Bakery further contributed to my journey. These struggles have shaped me into a self-made individual, instilling in me confidence and resilience."
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am