ಬ್ರೇಕಿಂಗ್ ನ್ಯೂಸ್
06-05-24 04:54 pm Giridhar Shetty, Mangaluru Correspondent ಕರಾವಳಿ
ಮಂಗಳೂರು, ಮೇ.6: ರಾಜ್ಯದಲ್ಲಿ ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ಜೂನ್ 3ರಂದು ಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆಯ ಜ್ವರ ಆರುವ ಮುನ್ನವೇ ರಾಜಕೀಯ ಪಕ್ಷಗಳ ಜಟಾಪಟಿಗೆ ಮತ್ತೊಂದು ವೇದಿಕೆ ಸಜ್ಜಾಗಿದೆ. ಆದರೆ, ಪ್ರಜ್ವಲ್ ರೇವಣ್ಣ ಪ್ರಕರಣದಿಂದಾಗಿ ಲೋಕಸಭೆ ಮೈತ್ರಿಯ ಬಗ್ಗೆಯೇ ತೀವ್ರ ಅಪಸ್ವರ ಎದ್ದಿರುವಾಗ ಪರಿಷತ್ ಚುನಾವಣೆಯಲ್ಲೂ ಬಿಜೆಪಿ- ಜೆಡಿಎಸ್ ಮೈತ್ರಿ ಉಳಿಸಿಕೊಳ್ಳುತ್ತಾರೆಯೇ ಎನ್ನುವ ಪ್ರಶ್ನೆ ಎದ್ದಿದೆ.
ಈಗಾಗಲೇ ಪ್ರಜ್ವಲ್ ಪ್ರಕರಣದಿಂದಾಗಿ ಬಿಜೆಪಿ ನಾಯಕರು ತೀವ್ರ ಮುಜುಗರ ಅನುಭವಿಸಿದ್ದಾರೆ. ಚುನಾವಣೆ ಮೊದಲೇ ಪ್ರಜ್ವಲ್ ವಿಡಿಯೋ ಬಗ್ಗೆ ಮಾಹಿತಿ ಇದ್ದರೂ, ಹಾಸನ ಸಂಸತ್ ಟಿಕೆಟನ್ನು ಮೈತ್ರಿ ಅಭ್ಯರ್ಥಿಯಾಗಿ ಅವರಿಗೆ ಕೊಟ್ಟಿರುವುದು ಯಾಕೆ ಎನ್ನುವ ಪ್ರಶ್ನೆಯನ್ನ ಕಾಂಗ್ರೆಸ್ ಮುಂದಿಟ್ಟಿದೆ. ಈ ಬಗ್ಗೆ ಕಾಂಗ್ರೆಸ್ ಜೊತೆಗೆ ಬಿಜೆಪಿ ಒಳಗಿನ ನಾಯಕರೂ ಪ್ರಶ್ನೆ ಮಾಡುತ್ತಿದ್ದಾರೆ. ಮೈತ್ರಿ ಟಿಕೆಟ್ ಕೊಟ್ಟಿದ್ದೇ ಮುಳುವಾಯ್ತು ಅನ್ನುವುದು ಬಿಜೆಪಿ ಒಳಗೆ ತೀವ್ರ ಚರ್ಚೆಗೆ ಒಳಗಾಗಿದೆ. ವಿಡಿಯೋ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವುದರಿಂದ ಬಿಜೆಪಿ ರಾಷ್ಟ್ರೀಯ ನಾಯಕರಿಗೂ ಇರಿಸುಮುರಿಸು ಆಗುವಂತಾಗಿದೆ. ರಾಜ್ಯದಲ್ಲಂತೂ ಎರಡನೇ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿಗೆ ಪ್ರಜ್ವಲ್ ಪ್ರಕರಣವೇ ಅಸ್ತ್ರವಾಗಿದೆ. ಹೀಗಾಗಿ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಕಡಿದುಕೊಳ್ಳಬೇಕು ಎನ್ನುವ ಒತ್ತಾಯವನ್ನು ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರು ಮುಂದಿಟ್ಟಿದ್ದಾರೆ.
ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಜೆಡಿಎಸ್ ಜೊತೆಗಿನ ಮೈತ್ರಿಯನ್ನು ರಾಷ್ಟ್ರೀಯ ನಾಯಕರು ಮಾಡಿರುವುದು. ಮೈತ್ರಿ ಉಳಿಸಿಕೊಳ್ಳುವುದು, ಬಿಡುವುದು ಅವರಿಗೇ ಬಿಟ್ಟದ್ದು ಎಂದಿದ್ದಾರೆ. ಆದರೆ, ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿದ್ದ ಮಾಜಿ ಸಿಎಂ ಯಡಿಯೂರಪ್ಪ, ಜೆಡಿಎಸ್- ಬಿಜೆಪಿ ಮೈತ್ರಿ ಮುಂದುವರಿಯುತ್ತೆ, ಪ್ರಜ್ವಲ್ ಪ್ರಕರಣದಿಂದ ಮೈತ್ರಿಗೆ ಸಮಸ್ಯೆ ಆಗಲ್ಲ ಎಂದಿದ್ದು ಜಿಜ್ಞಾಸೆಗೆ ಕಾರಣವಾಗಿದೆ. ಪರಿಷತ್ ಚುನಾವಣೆ ಎದುರಿಸುವ ಹಿಂದುತ್ವ ಮತ್ತು ಬಿಜೆಪಿಯ ನೆಲೆ ಪ್ರಬಲವಾಗಿರುವ ಕರಾವಳಿ ಮತ್ತು ಮಲೆನಾಡಿನಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಮುಂದುವರಿಕೆಗೆ ತೀವ್ರ ಅಪಸ್ವರ ಎದ್ದಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಉಳಿಸಿಕೊಳ್ಳುವುದು ಬೇಡ, ಅದರಿಂದ ಬಿಜೆಪಿಗೆ ಮೈನಸ್ ಆಗಲಿದೆ ಎನ್ನುವ ಸಂದೇಶವನ್ನು ರಾಷ್ಟ್ರೀಯ ನಾಯಕರಿಗೆ ತಲುಪಿಸಿದ್ದಾರೆ.
ಹೀಗಾಗಿ ಬಿಜೆಪಿ ಹೈಕಮಾಂಡ್ ಕೂಡ ಪರಿಷತ್ ಚುನಾವಣೆಯಲ್ಲಿ ಪ್ರತ್ಯೇಕ ಸ್ಪರ್ಧೆಗೆ ಒಲವು ಹೊಂದಿದೆ ಎಂಬ ಮಾಹಿತಿ ಲಭಿಸಿದೆ. ಆದರೆ ರಾಜ್ಯದಲ್ಲಿ ಬಿಜೆಪಿ ಪಾಳಯ ವಿಜಯೇಂದ್ರ ಮತ್ತು ಯಡಿಯೂರಪ್ಪ ಹಿಡಿತದಲ್ಲಿರುವುದರಿಂದ ತಂದೆ- ಮಗನ ಅಭಿಪ್ರಾಯವೂ ಮನ್ನಣೆ ಪಡೆಯುತ್ತದೆ. ಸದ್ಯಕ್ಕೆ ಜೆಡಿಎಸ್ ಜೊತೆಗಿನ ಮೈತ್ರಿಯನ್ನು ರಾಷ್ಟ್ರೀಯ ಮಟ್ಟದಲ್ಲೇ ಮಾಡಿರುವುದರಿಂದ ಅದನ್ನು ಮುರಿಯುವುದು ಅಥವಾ ಮುಂದುವರಿಸುವುದೂ ರಾಷ್ಟ್ರೀಯ ನಾಯಕರ ಕೈಯಲ್ಲೇ ಇರುತ್ತದೆ. ಇದರ ನಡುವೆ, ಪ್ರಜ್ವಲ್ ಪ್ರಕರಣವನ್ನು ಕಾಂಗ್ರೆಸ್ ನಾಯಕರು ರಾಷ್ಟ್ರ ಮಟ್ಟದಲ್ಲಿ ಚರ್ಚೆಯ ವಸ್ತುವಾಗಿಸಿದ್ದಾರೆ. ರಾಹುಲ್ ಮತ್ತು ಪ್ರಿಯಾಂಕ ಗಾಂಧಿ, ನೇರವಾಗಿ ಪ್ರಧಾನಿ ಮೋದಿಯವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಇದರಿಂದಾಗಿ ಹೈಕಮಾಂಡ್ ನಾಯಕರಿಗೂ ಜೆಡಿಎಸ್ ಮೈತ್ರಿ ಇರಿಸು ಮುರಿಸು ತಂದಿಟ್ಟಿದೆ. ಪ್ರಜ್ವಲ್ ಬಂಧನ ಆಗದ ಹೊರತು ಈ ಪ್ರಕರಣ ರಾಜಕೀಯ ಚರ್ಚೆಯ ವಸ್ತುವಾಗಲಿದೆ.
ಬಹುಮತಕ್ಕೆ ಕಾಂಗ್ರೆಸಿಗೆ 4 ಸ್ಥಾನ ಬೇಕು
ಸದ್ಯಕ್ಕೆ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಹೊಂದಿದ್ದರೂ, ಪರಿಷತ್ತಿನಲ್ಲಿ ಬಹುಮತ ಇಲ್ಲ. ಕಾಂಗ್ರೆಸ್ 29, ಬಿಜೆಪಿ 32, ಜೆಡಿಎಸ್ ಏಳು ಸ್ಥಾನ ಹೊಂದಿದೆ. ಚುನಾವಣೆ ನಡೆಯುವ ಆರು ಸ್ಥಾನಗಳ ಪೈಕಿ ಬಿಜೆಪಿ ಮೂರು, ಜೆಡಿಎಸ್ 2, ಕಾಂಗ್ರೆಸ್ ಒಂದು ಸ್ಥಾನ ಹೊಂದಿದೆ. ಈ ಪೈಕಿ ಪರಿಷತ್ತಿನಲ್ಲಿದ್ದ ಬಿಜೆಪಿಯ ಆಯನೂರು ಮಂಜುನಾಥ್ ಮತ್ತು ಜೆಡಿಎಸ್ಸಿನ ಮರಿತಿಬ್ಬೇ ಗೌಡ ತಮ್ಮ ಪರಿಷತ್ ಸ್ಥಾನ ತ್ಯಜಿಸಿ ಕಾಂಗ್ರೆಸ್ ಸೇರಿದ್ದಾರೆ. ಮತ್ತೆ ಆ ಸ್ಥಾನಗಳಿಂದ ಅವರೇ ಸ್ಪರ್ಧೆಗಿಳಿಯುವ ಸಾಧ್ಯತೆಯಿದೆ. ಕಾಂಗ್ರೆಸ್ ಈ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದರೆ ಪರಿಷತ್ತಿನಲ್ಲಿ ಬಹುಮತ ಸಾಧಿಸುತ್ತದೆ. ಹೀಗಾಗಿ ಬಿಜೆಪಿಗೂ ಇಲ್ಲಿ ಅಳೆದು ತೂಗಿ ಹೆಜ್ಜೆ ಇಡಬೇಕಾದ ಸ್ಥಿತಿಯಿದೆ.
ಬಿಜೆಪಿ ಹಿಡಿತದ ಕ್ಷೇತ್ರದಲ್ಲಿ ಜೆಡಿಎಸ್ ಸದಸ್ಯ
ಕರಾವಳಿ ಮತ್ತು ಮಲೆನಾಡನ್ನು ಪ್ರತಿನಿಧಿಸುವ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಹಾಲಿ ಜೆಡಿಎಸ್ ಸದಸ್ಯ ಭೋಜೇಗೌಡ ಇದ್ದಾರೆ. ಪದವೀಧರ ಕ್ಷೇತ್ರದಲ್ಲಿದ್ದ ಆಯನೂರು ಮಂಜುನಾಥ್ ಸ್ಥಾನ ತ್ಯಜಿಸಿದ್ದಾರೆ. ಇವರೆಡು ಕ್ಷೇತ್ರಗಳು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯನ್ನು ಹೊಂದಿದ್ದು ಬಿಜೆಪಿ ಗಟ್ಟಿ ಹಿಡಿತವನ್ನು ಹೊಂದಿದೆ. ಕಳೆದ ಬಾರಿ ಬಿಜೆಪಿಯ ಕ್ಯಾ.ಗಣೇಶ್ ಕಾರ್ಣಿಕ್ ಅವರ ಕೈಯಲ್ಲಿದ್ದ ಸ್ಥಾನ ಕುಮಾರಸ್ವಾಮಿ ಸರಕಾರ ಇದ್ದಾಗ ಜೆಡಿಎಸ್ಸಿನ ಭೋಜೇಗೌಡರ ಪಾಲಾಗಿತ್ತು. ಈಗ ಮತ್ತೆ ಆ ಸ್ಥಾನದ ಮೇಲೆ ಗಣೇಶ್ ಕಾರ್ಣಿಕ್ ಕಣ್ಣಿಟ್ಟಿದ್ದಾರೆ. ಜೊತೆಗೆ, ಮಂಗಳೂರಿನ ಸಹಕಾರ ಭಾರತಿ ಹಿನ್ನೆಲೆಯ ಹರೀಶ್ ಆಚಾರ್ಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಪರಿಷತ್ತಿನಲ್ಲಿ ಮೈತ್ರಿ ಮುಂದುವರಿದರೆ, ಬಿಜೆಪಿ ಹಿಡಿತದ ಕ್ಷೇತ್ರದಲ್ಲಿ ಜೆಡಿಎಸ್ ಸದಸ್ಯ ಭೋಜೇಗೌಡರಿಗೆ ಲಾಭವಾಗುತ್ತದೆ. ಆದರೆ ಪ್ರಜ್ವಲ್ ಪ್ರಕರಣದಿಂದಾಗಿ ಮಲೆನಾಡು ಮತ್ತು ಕರಾವಳಿಯಲ್ಲಿ ಜೆಡಿಎಸ್ ಪರ ಮತ ಕೇಳುವುದು ಕಷ್ಟ ಎನ್ನುವ ಮಾತು ಕೇಳಿಬಂದಿದೆ.
ಇದೇ ವೇಳೆ, ಪದವೀಧರ ಕ್ಷೇತ್ರದಲ್ಲಿ ಆಯನೂರು ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿಯೆಂದು ಈಗಾಗಲೇ ಘೋಷಣೆಯಾಗಿದ್ದು, ಬಿಜೆಪಿ ಅಭ್ಯರ್ಥಿ ಯಾರೆನ್ನುವುದು ಖಚಿತವಾಗಿಲ್ಲ. ಉಡುಪಿ ಮಾಜಿ ಶಾಸಕ ರಘುಪತಿ ಭಟ್, ಸಿಟಿ ರವಿ ಸೇರಿದಂತೆ ಹಲವರು ಕಣ್ಣಿಟ್ಟಿದ್ದಾರೆ. ಇವರೆಡು ಸ್ಥಾನಗಳೂ ಬಿಜೆಪಿ ಸುಲಭದಲ್ಲಿ ಗೆಲ್ಲುವ ಕ್ಷೇತ್ರಗಳಾಗಿದ್ದು, ರಾಜ್ಯದ ಕೇಸರಿ ನಾಯಕರು ಜೆಡಿಎಸ್ಸಿಗೆ ಬಿಟ್ಟು ಕೊಡುವ ಇರಾದೆ ಹೊಂದಿಲ್ಲ. ಬಿಜೆಪಿ ಪಾಲಿನ ಹಿಂದುತ್ವದ ಫೈರ್ ಬ್ರಾಂಡ್ ನಾಯಕ ಸಿಟಿ ರವಿಯಂತೂ ಪರಿಷತ್ ಚುನಾವಣೆಗೆ ಮೈತ್ರಿ ಮುಂದುವರಿಸುವುದಕ್ಕೆ ತೀವ್ರ ವಿರೋಧ ಇದ್ದಾರೆ. ಮೇ 16ರ ಒಳಗೆ ನಾಮಪತ್ರ ಸಲ್ಲಿಕೆ ಆಗಬೇಕಿರುವುದರಿಂದ ಮೈತ್ರಿಯೋ, ಏಕಾಂಗಿ ಸ್ಪರ್ಧೆಯೋ ಅನ್ನುವ ಬಗ್ಗೆ ಬಿಜೆಪಿ ಹೈಕಮಾಂಡ್ ಇನ್ನೆರಡು ದಿನದಲ್ಲಿ ನಿರ್ಧಾರ ಮಾಡಬೇಕಿದೆ.
Elections to six seats of the Legislative Council in the state will be held on June 3. Even before the fever of the Lok Sabha elections subsides, another stage is set for the political parties' tussle. However, the question arises whether the BJP-JD(S) alliance will be retained in the council elections as well, as the Prajwal Revanna case has created a lot of resentment over the lok sabha alliance.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 12:51 pm
Mangalore Correspondent
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm