ಬ್ರೇಕಿಂಗ್ ನ್ಯೂಸ್
29-04-24 10:04 pm Mangalore Correspondent ಕರಾವಳಿ
ಮಂಗಳೂರು, ಎ.29: ರಾಜ್ಯದ ಕಾಂಗ್ರೆಸ್ ಸರಕಾರವು ಹಿಂದು ಸಂಘಟನೆಗಳನ್ನು ಗುರಿಯಾಗಿಸಿ, ಕಾರ್ಯಕರ್ತರ ಮಾನಸಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದೆ. ವಿನಾಕಾರಣ ಕೇಸು ದಾಖಲಿಸುವುದು, ಗಡೀಪಾರು ಮಾಡುವಂತಹ ಕೃತ್ಯದಲ್ಲಿ ತೊಡಗಿದೆ. ಹಿಂದು ಸಂಘಟನೆ ಕಾರ್ಯಕರ್ತರು ದೇಶಭಕ್ತರಾಗಿದ್ದು, ದೇಶಕ್ಕಾಗಿ ಪ್ರಾಣ ಕೊಡುವವರು. ಗೋಹತ್ಯೆ, ಗೋಕಳ್ಳತನ ತಡೆದಿದ್ದಕ್ಕೆ ಕೇಸು ಬಿದ್ದಿರುವುದನ್ನು ನೆಪವಾಗಿಸಿ ಗಡೀಪಾರು ಮಾಡುವುದನ್ನು ಸಹಿಸುವುದಿಲ್ಲ ಎಂದು ಹಿಂದು ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಸಹ ಸಂಯೋಜಕ ಮಹೇಶ್ ಕಡಗದಾರು ಹೇಳಿದ್ದಾರೆ.
ಕದ್ರಿಯ ವಿಶ್ವ ಹಿಂದು ಪರಿಷತ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ರಾಜ್ಯದಲ್ಲಿರುವುದು ಹಿಂದು ವಿರೋಧಿ ಕಾಂಗ್ರೆಸ್ ಸರ್ಕಾರ. ಮುಖ್ಯಮಂತ್ರಿ ಸಿದ್ದರಾಮಯ್ಯ ಓಟ್ ಬ್ಯಾಂಕಿಗಾಗಿ ತುಷ್ಟೀಕರಣದ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಹಿಂದು ಸಂಘಟನೆಗಳನ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದು ಇದನ್ನು ಸಮರ್ಥಿಸುವದಕ್ಕಾಗಿ ಕಾಂಗ್ರೆಸ್ ಸರಕಾರ ಸಂಘಟನೆಗಳ ಕಾರ್ಯಕರ್ತರನ್ನು ದಮನಿಸುವ ಕೃತ್ಯದಲ್ಲಿ ತೊಡಗಿದೆ. ಕಾರ್ಯಕರ್ತರ ಮನೆಗೆ ನುಗ್ಗಿ ಪೊಲೀಸರು ನೋಟೀಸ್ ಕೊಡುವುದು, ಐಪಿಸಿ ಸೆಕ್ಷನ್ 107, 110 ಅಡಿ ಕೇಸು ದಾಖಲಿಸಿ ಹಿಂಸೆ ನೀಡುವುದರಲ್ಲಿ ತೊಡಗಿದೆ.
ದಕ್ಷಿಣ ಕನ್ನಡ ಜಿಲ್ಲಾಡಳಿತವು ಹಿಂದು ಜಾಗರಣ ವೇದಿಕೆಯ ಮುಖಂಡರಾದ ಪುತ್ತೂರಿನ ದಿನೇಶ್ ಪಂಜಿಗ, ಯಶೋಧರ ಬೆಳಾಲು, ಅವಿನಾಶ್ ಪುರುಷರಕಟ್ಟೆ, ಪ್ರವೇಶ ಹಾಗೂ ವಿಟ್ಲದ ಅಕ್ಷಯ್ ರಜಪೂತ್ ಅವರನ್ನು ಜಿಲ್ಲೆಯಿಂದ ಬೇರೆಡೆಗೆ ಗಡೀಪಾರು ಮಾಡಿದೆ. ಇವರು ಯಾರು ಕೂಡ ರೌಡಿ ಶೀಟರ್ ಗಳಲ್ಲ. ಸಣ್ಣ ಪುಟ್ಟ ಕೇಸುಗಳಿದ್ದ ಮಾತ್ರಕ್ಕೆ ಇವರನ್ನು ಗಡೀಪಾರು ಮಾಡಿದ್ದನ್ನು ನಾವು ಖಂಡಿಸುತ್ತೇವೆ. ಗೋಹತ್ಯೆ, ಗೋವುಗಳನ್ನು ಹಟ್ಟಿಯಿಂದಲೇ ಕದ್ದೊಯ್ದವರು ಎಷ್ಟು ಮಂದಿಯಿಲ್ಲ. ಮಾನವ ಕಳ್ಳಸಾಗಾಣಿಕೆ, ದರೋಡೆ, ಡಕಾಯಿತಿ ಕೃತ್ಯದಲ್ಲಿ ತೊಡಗಿದವರು ಇಲ್ಲವೇ.. ಅಪರಾಧ ಹಿನ್ನೆಲೆ ಹೊಂದಿರುವ ಎಲ್ಲರನ್ನೂ ಇವರು ಗಡೀಪಾರು ಮಾಡುತ್ತಾರೆಯೇ.. ನಾವು ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡುತ್ತೇವೆ.
40 ವರ್ಷಗಳ ಹೋರಾಟದಲ್ಲಿ ಹಿಂದು ಜಾಗರಣ ವೇದಿಕೆ ಇಂತಹ ಹಲವು ಕೇಸು, ಮಾನಸಿಕ ಹಿಂಸೆಗಳನ್ನು ಮೆಟ್ಟಿ ನಿಂತಿದ್ದು ಗೊಡ್ಡು ಬೆದರಿಕೆಗಳಿಗೆ ಜಗ್ಗುವುದಿಲ್ಲ. ಗಡೀಪಾರು ಮಾಡಿದರೂ ಇವರ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬರದಂತೆ ವ್ಯವಸ್ಥೆ ಮಾಡಬೇಕೆಂದಿದೆ. ಆದರೆ ಪೊಲೀಸ್ ಇಲಾಖೆ ಅದನ್ನು ಮಾಡುತ್ತಿಲ್ಲ. ನಾವು ಇದಕ್ಕಾಗಿ ಕಾನೂನು ಹೋರಾಟ ಕೈಗೆತ್ತಿಕೊಳ್ಳುತ್ತೇವೆ. ಸಾರ್ವಜನಿಕರ ಮುಂದಿಟ್ಟು ಆಂದೋಲನ ನಡೆಸಲಿದೆ. ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕಾಂಗ್ರೆಸ್ ಸರಕಾರದ ಕುಟಿಲ ನೀತಿಯನ್ನು ವಿರೋಧಿಸುತ್ತದೆ ಎಂದವರು ಹೇಳಿದರು. ಸುದ್ದಿಗೋಷ್ಟಿಯಲ್ಲಿ ರವಿರಾಜ ಶೆಟ್ಟಿ ಕಡಬ, ಹರೀಶ್ ಶಕ್ತಿನಗರ, ಹರ್ಷಿತ್, ನರಸಿಂಹ ಮಾಣಿ ಇದ್ದರು.
Congress is trying to break mental peace of Hindu karyakarthas slams Hindu Jagrana vedike in Mangalore
10-07-25 09:53 pm
Bangalore Correspondent
ED Raid Congress MLA Subba Reddy: ಮಲೇಶ್ಯಾ, ಬ್...
10-07-25 12:45 pm
ಹರಿಪ್ರಸಾದ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ ; ಅರ್ಧ ನ...
09-07-25 10:45 pm
Chamarajanagar Heart Attack, Student; 'ಹೃದಯ"ಕ...
09-07-25 04:12 pm
ಬೆಂಗಳೂರಿನಲ್ಲಿ ಐದು ಕಡೆ ಎನ್ಐಎ ದಾಳಿ ; ಭಯೋತ್ಪಾದಕ...
09-07-25 01:53 pm
10-07-25 11:07 pm
HK News Desk
Bangle Seller, Changur Baba Arrest, Uttar Pra...
10-07-25 03:24 pm
Amit Shah; ರಾಜಕೀಯ ನಿವೃತ್ತಿ ಬಳಿಕ ವೇದ, ಉಪನಿಷತ್...
10-07-25 01:00 pm
ಗೋಮಾಂಸ ತಿನ್ನಿಸಿ ಮತಾಂತರಕ್ಕೆ ಯತ್ನ ; ಫೇಸ್ಬುಕ್ಕಲ್...
07-07-25 08:45 pm
ಅಮೆರಿಕದ ಟೆಕ್ಸಾಸ್ನಲ್ಲಿ ಭೀಕರ ಪ್ರವಾಹ ; 28 ಮಕ್ಕಳ...
07-07-25 04:11 pm
10-07-25 07:23 pm
Mangalore Correspondent
Mangalore, Traffic Constable, Lokayukta, Tasl...
10-07-25 04:01 pm
ಮಂಗಳೂರಿನ ಟೈಲರಿಂಗ್ ಶಾಪಲ್ಲೇ ಕುಸಿದು ಬಿದ್ದಿದ್ದ ನವ...
09-07-25 10:25 pm
Mangalore Home Minister Parameshwara, Peace M...
09-07-25 10:17 pm
Peace Meeting, Mangalore, Brijesh Chowta, Ash...
09-07-25 09:01 pm
10-07-25 08:09 pm
HK News Desk
Kerala Couple, Chit Fund Scam; ಚಿಟ್ ಫಂಡ್ ಹೆಸರ...
10-07-25 01:05 pm
Double Murder Hassan, crime: ಆಸ್ತಿ ವಿಚಾರಕ್ಕೆ...
10-07-25 12:04 pm
Drugs News, Mangalore: ಮಂಗಳೂರಿಗೆ ಡ್ರಗ್ಸ್ ಪೂರೈ...
09-07-25 10:56 pm
Kerala Chit Fund, Fraud, Mangalore: 20 ವರ್ಷಗಳ...
08-07-25 10:01 pm