ಬ್ರೇಕಿಂಗ್ ನ್ಯೂಸ್
19-04-24 05:18 pm Mangalore Correspondent ಕರಾವಳಿ
ಮಂಗಳೂರು, ಎ.19: ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರೊಡನೆ ಒಡಂಬಡಿಕೆ ಮಾಡಿಕೊಂಡ ಮಂಗಳೂರಿನ ಕೊಂಕಣಿ ನಾಟಕ ರೆಪರ್ಟರಿ ಕಲಾಕುಲ್ ಇಲ್ಲಿ ಒಂದು ವರ್ಷದ ರಂಗ ತರಬೇತಿ ಡಿಪ್ಲೋಮಾ ಕೋರ್ಸ್ ಆರಂಭಿಸಲಾಗುವುದು ಎಂದು ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ತಿಳಿಸಿದ್ದಾರೆ.
ಕೊಂಕಣಿ ಸಾಂಸ್ಕೃತಿಕ ಕ್ಷೇತ್ರದ ದಿಗ್ಗಜ ಮಾಂಡ್ ಸೊಭಾಣ್ ಕೊಂಕಣಿ ರಂಗಭೂಮಿಗೆ ಮಹತ್ತರ ಕೊಡುಗೆ ನೀಡಿದೆ. `ಕಲಾಕುಲ್’ ಕೊಂಕಣಿಯ ಏಕಮಾತ್ರ ನಾಟಕ ರೆಪರ್ಟರಿಯನ್ನು ಆರಂಭಿಸಿ, ಆಧುನಿಕ ನಾಟಕಗಳನ್ನು ರಚಿಸಿ ಪ್ರದರ್ಶಿಸಿದ ಕೀರ್ತಿ ಇದಕ್ಕೆ ಸಲ್ಲುತ್ತದೆ. ಕಳೆದ 13 ವರ್ಷಗಳಿಂದ ಖಾಸಗಿಯಾಗಿ ಕೊಂಕಣಿ ರಂಗಭೂಮಿ ಡಿಪ್ಲೋಮಾ ನಡೆಸುತ್ತಿದ್ದು, ಇದುವರೆಗೆ ನೂರಾರು ವಿದ್ಯಾರ್ಥಿಗಳು ಈ ಡಿಪ್ಲೋಮಾ ಪಡೆದಿದ್ದಾರೆ. ಸುಮಾರು 50 ನಾಟಕ, ಕಿರುನಾಟಕಗಳ 250 ಕ್ಕೂ ಮಿಕ್ಕಿ ಪ್ರದರ್ಶನಗಳು ದೇಶ ವಿದೇಶಗಳಲ್ಲಿ ನಡೆದಿವೆ.
ಮಾಂಡ್ ಸೊಭಾಣ್ ಸಂಸ್ಥೆಯು `ಕಲಾಂಗಣ’ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಿದ್ದು ಇಲ್ಲಿ ಅನನ್ಯ ಬಯಲು ರಂಗ ಮಂದಿರದೊಡನೆ, ರಂಗ ತರಬೇತಿ ಮತ್ತು ಸಂಶೋಧನೆಗೆ ಅಗತ್ಯವಿರುವ ಎಲ್ಲಾ ಸವಲತ್ತುಗಳನ್ನು ಕಲ್ಪಿಸಲಾಗಿದೆ. ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ನೇತೃತ್ವದ ತಂಡ ಆಗಮಿಸಿ, ಪರಿಶೀಲಿಸಿದ ಬಳಿಕ ಕಲಾಕುಲ್ ವತಿಯಿಂದ ಒಂದು ವರ್ಷದ ರಂಗ ತರಬೇತಿ ಡಿಪ್ಲೋಮಾ ನಡೆಸಲು ಅನುಮೋದನೆ ನೀಡಿದೆ. ವಿಶ್ವವಿದ್ಯಾಲಯದ ನಿರ್ದೇಶನದ ಮೇರೆಗೆ ಆಡಳಿತ ಸಮಿತಿ ರಚಿಸಲಾಗಿದ್ದು, ಅದು ಸಭೆ ಸೇರಿ ಶೈಕ್ಷಣಿಕ ಮಾರ್ಗದರ್ಶಿ ಸೂತ್ರಗಳನ್ನು ರಚಿಸಿದೆ. ಅದರಂತೆ ಸೂಕ್ತ ತಯಾರಿ ನಡೆಸಿದ್ದು, ಎನ್ಎಸ್ ಡಿ ಮತ್ತು ರಂಗಾಯಣದಿಂದ ಪದವಿ ಪಡೆದ ಉಪನ್ಯಾಸಕರನ್ನು ನೇಮಿಸಲಾಗುವುದು.
ಜುಲೈ 01 ರಿಂದ ಆರಂಭವಾಗುವ 2024-25 ನೇ ಶೈಕ್ಷಣಿಕ ವರ್ಷದಿಂದ ಈ ರಂಗ ತರಬೇತಿ ಡಿಪ್ಲೋಮಾ ಕೋರ್ಸ್ ಆರಂಭಿಸಲಾಗುವುದು. ಕನಿಷ್ಠ ಪಿಯುಸಿ ವಿದ್ಯಾರ್ಹತೆ ಹೊಂದಿದ ಯಾವುದೇ ಮಾತೃಭಾಷೆಯ ವಿದ್ಯಾರ್ಥಿಗಳು ಈ ಡಿಪ್ಲೋಮಾ ಪಡೆಯಲು ಅರ್ಹರಾಗಿದ್ದು, ಒಂದು ವರ್ಷದ ಎರಡು ಸೆಮಿಸ್ಟರಿನ ಈ ಕೋರ್ಸ್ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ನಡೆಯಲಿದೆ. ಅಂತಿಮ ಪರೀಕ್ಷೆಯನ್ನು ವಿಶ್ವವಿದ್ಯಾಲಯವೇ ನಡೆಸುತ್ತದೆ. ಇದು ಪೂರ್ಣಕಾಲೀಕ ಕೋರ್ಸ್ ಆಗಿದ್ದು, ಈ ಕೋರ್ಸ್ ಪಡೆದವರಿಗೆ ಶಾಲೆ ಕಾಲೇಜುಗಳಲ್ಲಿ ರಂಗ ತರಬೇತಿ ಶಿಕ್ಷಕರಾಗಿ ದುಡಿಯಲು ಅವಕಾಶ ಲಭಿಸಲಿದೆ. ಅಗತ್ಯವುಳ್ಳವರಿಗೆ ಹಾಸ್ಟೆಲ್ ಸೌಲಭ್ಯವಿದೆ.
ಈ ಕೋರ್ಸ್ಗೆ ಸೇರಲಿಚ್ಛಿಸುವ ವಿದ್ಯಾರ್ಥಿಗಳು ಅರ್ಜಿಗಳನ್ನು www.manddsobhann.org ಡೌನ್ಲೋಡ್ ಮಾಡಿ, ಸರಿಯಾಗಿ ಭರ್ತಿ ಮಾಡಿ, ಸೂಕ್ತ ದಾಖಲೆಗಳೊಂದಿಗೆ, ಜೂನ್ 15ರೊಳಗೆ ಕಲಾಂಗಣ, ಮಕಾಳೆ, ಶಕ್ತಿನಗರ, ಮಂಗಳೂರು 575016 ಇಲ್ಲಿಗೆ ಅಂಚೆ ಮೂಲಕ ಅಥವಾ ಕೈಯಾರೆ ತಲುಪಿಸಬೇಕು. ಹೆಚ್ಚಿನ ಮಾಹಿತಿಗಾಗಿ (63640 22333-ಆಡಳಿತಾಧಿಕಾರಿ ಅಥವಾ 81052 26626-ಕಛೇರಿ) ಇಲ್ಲಿ ಸಂಪರ್ಕಿಸಬಹುದು. ಪತ್ರಿಕಾ ಗೋಷ್ಠಿಯಲ್ಲಿ ಲುವಿ ಜೆ. ಪಿಂಟೊ, ವಿದುಷಿ ರಾಜಶ್ರೀ ಎಸ್ ಶೆಣೈ, ಡಾ. ಎಸ್ಬಿಎಮ್ ಪ್ರಸನ್ನ, ಅರುಣ್ ರಾಜ್ ರೊಡ್ರಿಗಸ್ ಉಪಸ್ಥಿತರಿದ್ದರು.
Kalakul launches year-long diploma course in theatre training in Mangalore which has entered into an MoU with Dr Gangubai Hangal Music and Performing Arts University, Mysuru
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 08:31 pm
Mangalore Correspondent
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
SIT, Sujata Bhat, Dharmasthala Case: ಕೇಸ್ ಹಿಂ...
28-08-25 11:27 am
Pastor John Shamine, Madan Bugadi, IHRACSJC:...
27-08-25 11:02 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm