ತಣ್ಣೀರುಪಂತ : ಪಿಕಪ್ ಚಾಲಕನ ಧಾವಂತಕ್ಕೆ ಬೈಕ್ ಸವಾರರಿಬ್ಬರು ಬಲಿ !

30-11-20 11:27 am       Mangalore Correspondent   ಕರಾವಳಿ

ಪಿಕಪ್ ಟೆಂಪೋ ವಾಹನದ ಧಾವಂತಕ್ಕೆ ಬೈಕ್ ಸವಾರರಿಬ್ಬರು ಬಲಿಯಾದ ಘಟನೆ ತಣ್ಣೀರುಪಂತದಲ್ಲಿ ನಡೆದಿದೆ.

ಬೆಳ್ತಂಗಡಿ, ನ.30 : ಪಿಕಪ್ ಟೆಂಪೋ ವಾಹನದ ಧಾವಂತಕ್ಕೆ ಬೈಕ್ ಸವಾರರಿಬ್ಬರು ಬಲಿಯಾದ ಘಟನೆ ಇಲ್ಲಿನ ತಣ್ಣೀರುಪಂತ ಗ್ರಾಮದ ಕಲ್ಲೇರಿ ಸಮೀಪ ನಡೆದಿದೆ.

ಉಪ್ಪಿನಂಗಡಿಯಿಂದ ಕಲ್ಲೇರಿಗೆ ಬೈಕಲ್ಲಿ ಹೋಗುತ್ತಿದ್ದಾಗ ಅತೀ ವೇಗದಿಂದ ಬಂದ ಪಿಕಪ್ ವಾಹನ ಬೈಕ್ ಗೆ ಡಿಕ್ಕಿಯಾಗಿದೆ. ಈ ರಭಸಕ್ಕೆ ಬೈಕ್ ಸವಾರರು ರಸ್ತೆಗೆಸೆಯಲ್ಪಟ್ಟಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಉರುವಾಲು ಗ್ರಾಮದ ಕೃಷ್ಣಪ್ರಸಾದ್ ಶೆಟ್ಟಿ ಹಾಗು ಜಯಾನಂದ ಗೌಡ ಎಂದು ಗುರುತಿಸಲಾಗಿದೆ. 

ಅಪಘಾತವೆಸಗಿದ ಪಿಕಪ್ ಪರಾರಿಯಾಗಿದ್ದು, ಪೊಲೀಸರು ಬಳಿಕ ಅದರ ಚಾಲಕ ಹರೀಶ್ ನನ್ನು ಬಂಧಿಸಿದ್ದಾರೆ.

In an accident which happened at Hunasekatte on Kallery-Kuppetty Road, Belthanady two persons riding a two-wheeler were killed. The accident happened at around 9 pm on Sunday, November 29.