ಬ್ರೇಕಿಂಗ್ ನ್ಯೂಸ್
04-04-24 07:14 pm Mangalore Correspondent ಕರಾವಳಿ
ಮಂಗಳೂರು, ಎ.4: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹಿಂದಿನಿಂದಲೂ ಕಾಂಗ್ರೆಸ್ – ಬಿಜೆಪಿ ಮಧ್ಯೆ ನೇರ ಹಣಾಹಣಿ. ಇಲ್ಲಿ ಮೂರನೇ ಪಕ್ಷದ ಅಡೆ ತಡೆ ಇಲ್ಲ. ಆದರೆ, ಕಳೆದ ಎರಡು ಚುನಾವಣೆಯಲ್ಲಿ ಮುಸ್ಲಿಂ ಪರವಾಗಿ ಧ್ವನಿ ಎತ್ತಿದ್ದ ಎಸ್ಡಿಪಿಐ ತನ್ನ ಅಭ್ಯರ್ಥಿ ನಿಲ್ಲಿಸಿತ್ತು. ಈ ಬಾರಿ ಎಸ್ಡಿಪಿಐ ಕೇರಳದಲ್ಲಿ ಕಾಂಗ್ರೆಸನ್ನು ಬೆಂಬಲಿಸಿದ್ದು, ದೇಶದ 18 ಕಡೆಗಳಲ್ಲಿ ಮಾತ್ರ ಸ್ಪರ್ಧಿಸುವುದಾಗಿ ಹೇಳಿಕೊಂಡಿದೆ. ಅದರಂತೆ, ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಎಸ್ಡಿಪಿಐ ಪಕ್ಷದ ಅಭ್ಯರ್ಥಿ ಹಾಕಿಲ್ಲ.
ಈ ಬಾರಿ ಮಹಮ್ಮದ್ ಇಲ್ಯಾಸ್ ತುಂಬೆ ಲೋಕಸಭೆ ಕಣಕ್ಕೆ ಇಳಿಯಲಿದ್ದಾರೆಂದು ಹೇಳಲಾಗಿತ್ತು. ಆದರೆ, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಎ.4ರ ಗಡುವು ಮುಗಿದಿದ್ದು, ಎಸ್ಡಿಪಿಐ ಅಭ್ಯರ್ಥಿ ಇಳಿಸದೆ ದೂರ ನಿಂತಿದೆ. ಕಳೆದ 2019ರ ಚುನಾವಣೆಯಲ್ಲಿ ಎಸ್ಡಿಪಿಐ ಅಭ್ಯರ್ಥಿಯಾಗಿ ಮಹಮ್ಮದ್ ಇಲ್ಯಾಸ್ ತುಂಬೆ ಕಣಕ್ಕಿಳಿದು 46,839 ಮತಗಳನ್ನು ಪಡೆದಿದ್ದರು. ಇದರಿಂದ ಮುಸ್ಲಿಂ ಮತ ಒಂದಷ್ಟು ವಿಭಜನೆಯಾಗಿತ್ತು. ಈ ಬಾರಿ ಚುನಾವಣೆ ಸ್ಪರ್ಧೆ ಮಾಡದೇ ಇರುವುದರಿಂದ ಮುಸ್ಲಿಂ ಮತಗಳು ಕಾಂಗ್ರೆಸ್ ಪಾಲಾಗುವ ಸಾಧ್ಯತೆಯಿದೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ರಂಜಿನಿ ಎಂ., ಜನತಾದಳ (ಯು) ಪಕ್ಷದಿಂದ ಸುಪ್ರೀತ್ ಕುಮಾರ್ ಪೂಜಾರಿ, ಕರುನಾಡು ಸೇವಕರ ಪಕ್ಷದಿಂದ ದುರ್ಗಾಪ್ರಸಾದ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಪದ್ಮರಾಜ್ ರಾಮಯ್ಯ, ಭಾರತೀಯ ಜನತಾ ಪಾರ್ಟಿಯಿಂದ ಬೃಜೇಶ್ ಚೌಟ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಕೆ.ಇ.ಮನೋಹರ, ಜನಹಿತ ಪಾರ್ಟಿಯಿಂದ ಸುಪ್ರೀತ್ ಕುಮಾರ್ ಪೂಜಾರಿ, ಬಹುಜನ ಸಮಾಜವಾದಿ (ಬಿಎಸ್ಪಿ) ಪಕ್ಷದಿಂದ ಕಾಂತಪ್ಪ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳಾಗಿ ದೀಪಕ್ ರಾಜೇಶ್ ಕುವೆಲ್ಲೋ, ಮ್ಯಾಕ್ಸಿಂ ಪಿಂಟೋ, ಫ್ರಾನ್ಸಿಸ್ ಲ್ಯಾನ್ಸಿ ಮಾಡ್ತ, ಸತೀಶ್ ಬಿ. ನಾಮಪತ್ರ ಸಲ್ಲಿಸಿದ್ದಾರೆ. ಈ ಪೈಕಿ ನಾಮಪತ್ರ ಹಿಂತೆಗೆತದ ಬಳಿಕ ಎಷ್ಟು ಮಂದಿ ಕಣದಲ್ಲಿ ಉಳಿಯುತ್ತಾರೆ ಎಂಬುದು ತಿಳಿಯಲಿದೆ.
2019ರಲ್ಲಿ ಅಭ್ಯರ್ಥಿಗಳು ಪಡೆದ ಮತ
2019ರ ಚುನಾವಣೆಯಲ್ಲಿ ಬಿಜೆಪಿಯ ನಳಿನ್ ಕುಮಾರ್(7,74,285), ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ(4,99,664), ಎಸ್ಡಿಪಿಐನ ಮಹಮ್ಮದ್ ಇಲ್ಯಾಸ್ ತುಂಬೆ (46839), ನೋಟಾ (7380), ಬಿಎಸ್ಪಿಯ ಸತೀಶ್ ಸಾಲ್ಯಾನ್ (4713), ಸ್ವತಂತ್ರ ಸ್ಪರ್ಧಿಸಿದ್ದ ಅಲೆಕ್ಸಾಂಡರ್ (2752), ಸುರೇಶ್ ಪೂಜಾರಿ(2315), ವೆಂಕಟೇಶ್ ಭೇಂಡೆ(1702), ಉತ್ತಮ ಪ್ರಜಾಕೀಯ ಪಾರ್ಟಿಯಿಂದ ವಿಜಯ್ ಶ್ರೀನಿವಾಸ್ ಸಿ.(1629), ಜನಹಿತ ಪಾರ್ಟಿಯ ಸುಪ್ರೀತ್ ಕುಮಾರ್ ಪೂಜಾರಿ(948), ಸ್ವತಂತ್ರ ಸ್ಪರ್ಧಿಸಿದ್ದ ಮ್ಯಾಕ್ಸಿಂ ಪಿಂಟೋ(908), ದೀಪಕ್ ರಾಜೇಶ್ ಕುವೆಲ್ಲೋ (748), ಮೊಹಮ್ಮದ್ ಖಾಲಿದ್ (602), ಅಬ್ದುಲ್ ಹಮೀದ್ (554) ಕಣದಲ್ಲಿದ್ದರು.
ನಮ್ಮ ಬೆಂಬಲದ ಬಗ್ಗೆ ನಿರ್ಧರಿಸಿಲ್ಲ – ಎಸ್ಡಿಪಿಐ
2014ರ ಲೋಕಸಭೆ ಚುನಾವಣೆಯಲ್ಲಿ ಎಸ್ ಡಿಪಿಐ ಅಭ್ಯರ್ಥಿ ಹನೀಫ್ ಖಾನ್ ಕೋಡಾಜೆ ಸ್ಪರ್ಧಿಸಿ 27254 ಮತಗಳನ್ನು ಪಡೆದಿದ್ದರು. ಈ ಬಗ್ಗೆ ಎಸ್ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಅವರಲ್ಲಿ ಪ್ರತಿಕ್ರಿಯೆ ಕೇಳಿದಾಗ, ನಾವು ಈ ಬಾರಿ ಚುನಾವಣೆ ಸ್ಪರ್ಧೆ ಮಾಡುವುದಿಲ್ಲ. ಕರ್ನಾಟಕದ ಯಾವುದೇ ಕ್ಷೇತ್ರದಲ್ಲಿಯೂ ಸ್ಪರ್ಧೆ ಇಲ್ಲ. ನಾವು ಈಗ ಯಾವ ಪಕ್ಷದವರಿಗೂ ಬೆಂಬಲ ಘೋಷಿಸಿಲ್ಲ. ಚುನಾವಣೆ ಹತ್ತಿರ ಬರುವಾಗ ನಮ್ಮ ನಿರ್ಧಾರ ಹೇಳುತ್ತೇವೆ. ಕಾಂಗ್ರೆಸ್, ಬಿಎಸ್ಪಿ ಸೇರಿ ಕೆಲವು ಪಕ್ಷದವರು ತಮಗೆ ಬೆಂಬಲ ನೀಡುವಂತೆ ಕೇಳಿಕೊಂಡಿದ್ದಾರೆ. ನಾವಿನ್ನೂ ತೀರ್ಮಾನ ಮಾಡಿಲ್ಲ ಎಂದಿದ್ದಾರೆ.
Sdpi candidates from Mangalore not to contest this lok sabha elections 2024. SDPI president speaking to Headline Karnataka stated that non of their candidates will contest for the upcoming elections but will support congress.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am