ಬ್ರೇಕಿಂಗ್ ನ್ಯೂಸ್
03-04-24 09:03 pm Mangalore Correspondent ಕರಾವಳಿ
ಮಂಗಳೂರು, ಎ.3: ಧರ್ಮಸ್ಥಳದ ಸೌಜನ್ಯಾಗೆ ನ್ಯಾಯ ಸಿಗಬೇಕೆಂದು ನಡೆದುಬಂದ ಹೋರಾಟಕ್ಕೆ ಆಡಳಿತ ವ್ಯವಸ್ಥೆಯಿಂದ ನಿರ್ಲಕ್ಷ್ಯದ ಉತ್ತರ ಸಿಕ್ಕಿರುವುದರಿಂದ ಹೋರಾಟಗಾರರು ಈ ಸಲದ ಚುನಾವಣೆಯಲ್ಲಿ ನೋಟಾ ಅಭಿಯಾನದ ಅಸ್ತ್ರವನ್ನು ಕೈಗೆತ್ತಿಕೊಂಡಿದ್ದಾರೆ. ರಾಜ್ಯಾದ್ಯಂತ ಲೋಕಸಭೆ ಚುನಾವಣೆಯಲ್ಲಿ ನೋಟಾ ಅಸ್ತ್ರ ಚಲಾಯಿಸಲು ಹೋರಾಟಗಾರರು ಕರೆ ನೀಡಿದ್ದಾರೆ.
ಚಳವಳಿಯ ಮುಂಚೂಣಿ ನೇತಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟೆಣ್ಣನವರ್, ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಈ ಬಗ್ಗೆ ಖಾಸಗಿ ವಾಹಿನಿಗಳಿಗೆ ಹೇಳಿಕೆ ನೀಡಿದ್ದು, ಆಡಳಿತ ವ್ಯವಸ್ಥೆಯಲ್ಲಿದ್ದವರು ನಮ್ಮ ಹೋರಾಟಕ್ಕೆ ಕಿವಿಕೊಡುತ್ತಿಲ್ಲ. ರಾಜಕೀಯ ಪಕ್ಷಗಳ ಯಾರೇ ಅಧಿಕಾರಕ್ಕೆ ಬಂದರೂ ನಮಗೆ ನ್ಯಾಯ ಕೊಡಿಸುವ ನಿರೀಕ್ಷೆಯಿಲ್ಲ. ಹಾಗಾಗಿ ನಾವು ಈ ಬಾರಿ ರಾಜ್ಯಾದ್ಯಂತ ನೋಟಾ ಅಭಿಯಾನಕ್ಕೆ ಕರೆ ಕೊಡುತ್ತಿದ್ದೇವೆ.
ಇಡೀ ರಾಜ್ಯದಲ್ಲಿ ಸೌಜನ್ಯಾಗೆ ನ್ಯಾಯ ಸಿಗಬೇಕೆಂದು ಜನರು ಧ್ವನಿ ಎತ್ತಿದ್ದಾರೆ. ಅವರೆಲ್ಲ ಈ ಬಾರಿ ತಮ್ಮ ಆಯ್ಕೆ ಸೌಜನ್ಯಾ ಅಂದರೆ ನೋಟಾ ಎಂದು ಒತ್ತಬೇಕೆಂದು ಹೇಳುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ನೋಟಾ ಚಳವಳಿಯ ಅಭಿಯಾನ ನಡೆಸುತ್ತಿದ್ದಾರೆ. ಬೆಳ್ತಂಗಡಿ, ಸುಳ್ಯದಲ್ಲಿ ಸೌಜನ್ಯ ಹೋರಾಟದ ಕಾವು ಹೆಚ್ಚಿರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಇದರ ಎಫೆಕ್ಟ್ ಆಗುತ್ತಾ ಅನ್ನುವ ಕುತೂಹಲ ಇದೆ.
ಹೋರಾಟಗಾರರು ಮಾತ್ರ, ಒಂದ್ವೇಳೆ ನೋಟಾ ಅಭಿಯಾನಕ್ಕೆ ಓಗೊಟ್ಟು ಪ್ರತಿ ಕ್ಷೇತ್ರದಲ್ಲಿ ಒಂದಷ್ಟು ಪರ್ಸೆಂಟ್ ಓಟು ನೋಟಾಗೆ ಬಿದ್ದರೆ ನ್ಯಾಯಾಂಗವೇ ಈ ಪ್ರಕರಣವನ್ನು ಮರು ತನಿಖೆಗೆ ಒಪ್ಪಿಸುವ ಸಾಧ್ಯತೆಯಿದೆ ಎಂದು ಹೇಳುತ್ತಿದ್ದಾರೆ. ಆದರೆ, ನೋಟಾ ಓಟಿನ ಕಾರಣಕ್ಕೆ ಯಾವುದೇ ಕೋರ್ಟ್ ಸೌಜನ್ಯಾ ಪ್ರಕರಣವನ್ನು ಮರು ತನಿಖೆಗೆ ಒಪ್ಪಿಸುವ ಸಾಧ್ಯತೆ ಕಡಿಮೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ನೋಟಾ ಓಟು ಬೇರೆ ಬೇರೆ ಕಾರಣಕ್ಕೆ ದಾಖಲಾಗುತ್ತದೆ. ಅಭ್ಯರ್ಥಿ, ಆಡಳಿತ ವ್ಯವಸ್ಥೆ ಬಗ್ಗೆ ಅಸಮಾಧಾನದಿಂದ ನೋಟಾ ಹಾಕುವುದು ದೇಶಾದ್ಯಂತ ಚಾಲ್ತಿಗೆ ಬಂದಿದೆ.
ನೋಟಾ ಮತಕ್ಕೆ ಮೌಲ್ಯ ಇಲ್ಲ, ಲಾಭವೂ ಇಲ್ಲ!
2013ರಲ್ಲಿ ಭಾರತದಲ್ಲಿ ನೋಟಾ ಮತವನ್ನು ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ಆನಂತರದ ಅಸೆಂಬ್ಲಿ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಇವಿಎಂ ಮೆಷಿನ್ ಗಳಲ್ಲಿಯೇ ನೋಟಾ ಬಟನ್ ಕಡ್ಡಾಯ ಮಾಡಲಾಗಿದೆ. ಪಿಯುಸಿಎಲ್ ದಾಖಲಿಸಿದ ಅರ್ಜಿಯೊಂದರ ಮೇಲೆ ಸುಪ್ರೀಂ ಕೋರ್ಟ್, ಇವಿಎಂ ಮೆಷಿನ್ನಲ್ಲಿ ನೋಟಾ ಮತಕ್ಕೆ ಅವಕಾಶ ನೀಡುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತ್ತು. ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಮತ್ತು ರಾಜಕೀಯ ಪಕ್ಷಗಳು ಉತ್ತಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವಂತೆ ಪ್ರೇರಣೆ ನೀಡಲು ನೋಟಾ ಮತ ಚಲಾವಣೆಗೆ ತರಲಾಗಿತ್ತು. ಆದರೆ ನೋಟಾ ಮತಗಳಿಗೆ ಮೌಲ್ಯ ಇರುವುದಿಲ್ಲ. ನೋಟಾ ಪರವಾಗಿ ಎಷ್ಟು ಮತ ಬಿದ್ದರೂ ಅವನ್ನು ಅಸಿಂಧು ಎಂದೇ ಪರಿಗಣಿಸಲಾಗುತ್ತದೆ.
ಮಾಜಿ ಮುಖ್ಯ ಚುನಾವಣಾಧಿಕಾರಿ ಆಗಿದ್ದ ಎಸ್.ವೈ.ಖುರೇಷಿ ಪ್ರಕಾರ, 100 ಮತಗಳು ಇರುವಲ್ಲಿ ನೋಟಾಗೆ 99 ಮತಗಳು ಬಿದ್ದರೂ ಅವೆಲ್ಲ ಅಸಿಂಧು ಅಷ್ಟೇ. ಅಭ್ಯರ್ಥಿಗೆ ಒಂದು ಮತ ಬಿದ್ದರೂ ಆತನೇ ಆಯ್ಕೆಯಾಗುತ್ತಾನೆ. ಸ್ಪರ್ಧೆಯಲ್ಲಿದ್ದ ಅಭ್ಯರ್ಥಿಗಳ ಬಗ್ಗೆ ನೆಗೆಟಿವ್ ಇಮೇಜ್ ಮೂಡಿಸಲು ಮಾತ್ರ ಇದು ಕಾರಣವಾಗುತ್ತದೆ. ಇದರಿಂದ ಚುನಾವಣೆ ರದ್ದುಪಡಿಸುವುದಾಗಲೀ, ಆಯ್ಕೆ ರದ್ದುಪಡಿಸುವುದಾಗಲೀ ಸಾಧ್ಯವಿಲ್ಲ ಎಂದಿದ್ದಾರೆ. ಆದರೆ ನೋಟಾಗೆ ಅತಿ ಹೆಚ್ಚು ಮತಗಳು ಬಿದ್ದರೆ ಅಥವಾ ಒಂದು ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಹತ್ತು ಶೇಕಡಾಕ್ಕಿಂತ ಹೆಚ್ಚು ಮತಗಳು ಬಿದ್ದಲ್ಲಿ ಆಯ್ಕೆ ರದ್ದುಗೊಳಿಸಬೇಕು, ಮರ ಚುನಾವಣೆ ನಡೆಸಬೇಕೆಂಬ ಒತ್ತಾಯ ಇದೆ ಅಷ್ಟೇ. ಅದನ್ನು ಚುನಾವಣಾ ಆಯೋಗ ಇನ್ನೂ ಮಾನ್ಯ ಮಾಡಿಲ್ಲ.
Mangalore Sowjanya case, protesters prasanna ravi and Mahesh Shetty Thimarodi team to vote for NOTA as they have got any justice from BJP or Congress.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am