ಬ್ರೇಕಿಂಗ್ ನ್ಯೂಸ್
01-04-24 03:21 pm Mangalore Correspondent ಕರಾವಳಿ
ಮಂಗಳೂರು, ಎ.1: ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಹಿಂದು ಸಂಘಟನೆ ಮುಖಂಡ ಸತ್ಯಜಿತ್ ಸುರತ್ಕಲ್ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ತಮ್ಮ ನಾರಾಯಣ ಗುರು ವಿಚಾರ ವೇದಿಕೆಯಿಂದ ಸುದ್ದಿಗೋಷ್ಟಿ ಕರೆದು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ ಬಿಲ್ಲವ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸಿದ್ದಾರೆ.
ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಿನಿಂದ ಬಿಜೆಪಿ ಟಿಕೆಟ್ ಗಾಗಿ ಸಾಕಷ್ಟು ಪ್ರಯತ್ನ ಪಟ್ಟಿದ್ದೆ. ಆದ್ರೆ ಅಭ್ಯರ್ಥಿಯಾಗಿ ಬಿಜೆಪಿಯಿಂದ ಬ್ರಿಜೇಶ್ ಚೌಟಗೆ ಟಿಕೆಟ್ ನೀಡಿದರು. ಆನಂತರ ಸೂಕ್ತ ಸ್ಥಾನಮಾನಕ್ಕಾಗಿ ನನ್ನ ಬೆಂಬಲಿಗರು ಬೇಡಿಕೆ ಇಟ್ಟಿದ್ದರು. ಘೋಷಣೆಯಾಗಿ ಎರಡು ಮೂರು ವಾರ ಕಳೆದಿದೆ. ಬಿಜೆಪಿ ವರಿಷ್ಠರು ಹಲವು ಬಾರಿ ಸಮಯವಕಾಶ ಕೇಳಿದರು. ಆದರೆ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಟೀಂ ಸತ್ಯಜಿತ್ ಸುರತ್ಕಲ್ ಹಾಗೆಯೇ ಮುಂದುವರೆಯಲಿದೆ. ಅದರ ನಡುವೆ ನಮ್ಮ ವಿಚಾರ ವೇದಿಕೆಯ ಬೆಂಬಲ ಬಿಲ್ಲವ ಅಭ್ಯರ್ಥಿಗಳಿಗೆ ಇರಲಿದೆ ಎಂದು ಸ್ಪಷ್ಟಪಡಿಸಿದರು.
ನಾನು ಒಂದು ವೇಳೆ, ಬ್ರಾಹ್ಮಣ, ಒಕ್ಕಲಿಗ ಆಗಿದ್ದಿದ್ರೆ ನಿಸ್ಸಂದೇಹವಾಗಿ ಅವಕಾಶ ಸಿಕ್ತಿತ್ತು. ನಿಯತ್ತಿನ ರಾಜಕೀಯಕ್ಕೆ ಈಗಿನ ಕಾಲದಲ್ಲಿ ಬೆಲೆ ಇಲ್ಲ. ನಾಯಕರು ಹೇಳಿದ ಹಾಗೆ ಬಕೆಟ್ ಹಿಡಿದವರಿಗೆ ಮಾತ್ರ ಬೆಲೆಯಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಾನು ಹುಟ್ಟಿದ್ದು, ಬಿಲ್ಲವ ಸಮಾಜದಲ್ಲಿ. ಕೋಟಿ -ಚೆನ್ನಯ್ಯರ ಸ್ವಾಭಿಮಾನ ನನ್ನಲ್ಲಿಯೂ ಬೆಳೆದು ಬಂದಿದೆ. ನಮ್ಮ ಸಮುದಾಯದ ಏಳ್ಗೆಗಾಗಿ ಧ್ವನಿ ಎತ್ತಿದ್ದೇನೆ. ಇದರಿಂದಾಗಿ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಕ್ಷೇತ್ರದಲ್ಲಿ ಮೂರು ಬಿಲ್ಲವರಿಗೆ ಅವಕಾಶ ಸಿಕ್ಕಿದೆ. ಕಾಂಗ್ರೆಸಿನಲ್ಲಿ ಎರಡು, ಬಿಜೆಪಿಯಲ್ಲಿ ಒಂದು ಸೀಟು ಸಿಕ್ಕಿದೆ. ಮೂರು ಜಿಲ್ಲೆಗಳಲ್ಲಿ 12 ಲಕ್ಷದಷ್ಟು ನಮ್ಮ ಸಮುದಾಯದ ಮತದಾರರಿದ್ದಾರೆ. ಅದಕ್ಕಾಗಿ ಸಮುದಾಯಕ್ಕೆ ಅವಕಾಶ ಕೇಳಿದ್ದೆವು. ಪಕ್ಷ ರಾಜಕೀಯ ಬದಿಗಿಟ್ಟು ಸಮುದಾಯದ ಜನರು ಈ ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಸಮುದಾಯಕ್ಕೆ ಶಕ್ತಿ ಬರಲಿದೆ ಎಂದರು.
ಉಡುಪಿ ಬಿಜೆಪಿ ಟಿಕೆಟ್ ಹಂಚಿಕೆಯಿಂದ ಬಿಲ್ಲವ ಸಮಾಜಕ್ಕೆ ಅನ್ಯಾಯವಾಗಿದೆ. ಕೋಟ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್ತಿನ ವಿಪಕ್ಷ ಸ್ಥಾನದ ಹುದ್ದೆಯಲ್ಲಿದ್ದರು. ಇನ್ನು ಈ ಸಮಾಜಕ್ಕೆ ಮತ್ತೆ ಆ ಸ್ಥಾನ ಸಿಗಲು ಸಾಧ್ಯ ಇದೆಯಾ. ಒಂದು ಎಂಪಿ ಸೀಟ್ ಗಾಗಿ ಕೋಟ ಎರಡು ಹುದ್ದೆ ಕಳೆದುಕೊಂಡರು ಎಂದ ಅವರು, ಕರ್ನಾಟಕ ರಾಜ್ಯದಲ್ಲಿ ಈಗ ಬಿಜೆಪಿ ಇಲ್ಲ, ಬಿಎಸ್ಪಿ ಇದೆ. ವಿಧಾನಸಭೆ ಚುನಾವಣೆ ತನಕ ಬಿ ಎಲ್ ಪಿ ಇತ್ತು, ಅಂದ್ರೆ ಬಿ ಎಲ್ ಸಂತೋಷ್ ಬಣ ಇತ್ತು. ಈಗ ಬಿಎಸ್ ಯಡಿಯೂರಪ್ಪ ಬಣದ ಬಿಎಸ್ ಪಿ ಇದೆ ಎಂದರು.
ಅವತ್ತು ಜನಾರ್ದನ್ ಪೂಜಾರಿ ಸೋಲಲು ನಾವೇ ಕಾರಣರಾಗಿದ್ದೆವು. ಆವಾಗ ನಮಗೆ ಗೊತ್ತಿರಲಿಲ್ಲ. ನಮ್ಮ ದುರ್ದೈವ, ನಮ್ಮನ್ನು ಬಳಸಿ ಜನಾರ್ಧನ ಪೂಜಾರಿಯ ಅವಸಾನ ಮಾಡಿದ್ದರು. ಬ್ರಹ್ಮಕಲಶದಲ್ಲಿ ನಾಲ್ಕು ರೀತಿ ಅಡುಗೆ, ನಾಲ್ಕು ರೀತಿ ಊಟದ ವ್ಯವಸ್ಥೆ ಇದೆ. ಹಿಂದುತ್ವದ ಶಾಸಕರ ಅಧ್ಯಕ್ಷತೆಯ ದೇವಸ್ಥಾನದಲ್ಲೂ ಅದೇ ರೀತಿ ನಡೆಯುತ್ತಿದೆ. ಹಿಂದೂ ಸಮಾಜಕ್ಕೆ ತೊಂದರೆ ಇಲ್ಲ ಅಂತ ಹೇಳೋದಿಲ್ಲ ಬಾಹ್ಯ ಶಕ್ತಿಗಳಿಂದ ಹಿಂದೂ ಸಮಾಜಕ್ಕೆ ಖಂಡಿತ ತೊಂದರೆಯಿದೆ. ಕೇರಳ, ಮಲ್ಲಪ್ಪುರಂನಲ್ಲಿ ಮತಾಂತರ, ಭಯೋತ್ಪಾದನೆ ಯಾಕೆ ಆಯ್ತು ಅಂತ ಕೇಳಿದ್ರೆ ಜಾತಿ, ಸ್ಪೃಶ್ಯ, ಅಸ್ಪೃಶ್ಯ, ಅನ್ಯಾಯ ಅನಾಚಾರವನ್ನ ಹಿಂದುಳಿದ ವರ್ಗ ಅನುಭವಿಸಿದ ಕಾರಣದಿಂದ ಈಗಲೂ ಮತಾಂತರಗಳು ನಡೆಯುತ್ತಿದೆ ಎಂದರು.
Hindu activist and Sri Narayana Guru Vichara Vedike (SNGV) state president Sathyajith Surathkal said that the SNGV will support Billava candidates in the Lok Sabha election without looking at the party affiliation. Accordingly, the forum will support the candidature of Padmaraj R (Congress) from Dakshina Kannada, Kota Srinivas Poojary (BJP) from Udupi-Chikmagalur and Geetha Shivaraj Kumar (Congress) from Shimoga.
03-05-25 09:38 pm
HK News Desk
Shivanand Patil, U T Khader: ಯತ್ನಾಳ್ ಸವಾಲು ಸ್...
02-05-25 10:00 pm
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 10:57 pm
Mangalore Correspondent
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
U T Khader, Satish Kumapla, Mangalore, Suhas,...
03-05-25 10:13 pm
Mangalore, Stabbing, Suhas Shetty Murder, Arr...
03-05-25 08:39 pm
Mangalore, Animal Welfare: ಪ್ರಾಣಿ ಸಂರಕ್ಷಣೆ ಜಾ...
03-05-25 06:57 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm