ಬ್ರೇಕಿಂಗ್ ನ್ಯೂಸ್
28-03-24 05:20 pm Mangalore Correspondent ಕರಾವಳಿ
ಮಂಗಳೂರು, ಮಾ.28: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜಾತಿ ಸಮೀಕರಣಕ್ಕೆ ಮುಂದಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬಂಟ- ಬಿಲ್ಲವ ಸಮುದಾಯದ್ದೇ ಪ್ರಾಬಲ್ಯ ಇರುವುದರಿಂದ ದಕ್ಷಿಣ ಕನ್ನಡದಲ್ಲಿ ಬಿಲ್ಲವ, ಉಡುಪಿ- ಚಿಕ್ಕಮಗಳೂರು ಜಿಲ್ಲೆಗೆ ಬಂಟ ಸಮುದಾಯದ ಅಭ್ಯರ್ಥಿಯನ್ನು ಘೋಷಿಸಿದೆ. ಇದರ ಬೆನ್ನಲ್ಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ಮಂಜುನಾಥ ಭಂಡಾರಿ ಅವರನ್ನು ನೇಮಕ ಮಾಡಿದೆ.
ಮಂಗಳೂರು ಮತ್ತು ಶಿವಮೊಗ್ಗದಲ್ಲಿ ಸಹ್ಯಾದಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಮಂಜುನಾಥ ಭಂಡಾರಿ ಕರಾವಳಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ನಾಯಕ. ಹಿಂದಿನಿಂದಲೂ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ನಿಕಟ ಸಂಪರ್ಕ ಹೊಂದಿದ್ದವರು. ಇದೀಗ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದರಿಂದ ತನ್ನ ನೆಚ್ಚಿನ ಶಿಷ್ಯನಂತಿರುವ ಮಂಜುನಾಥ ಭಂಡಾರಿ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ತಂದಿದ್ದಾರೆ. ಆಮೂಲಕ ಕರಾವಳಿಯ ಜಾತಿ ಸಮೀಕರಣಕ್ಕೂ ಮಣೆ ಹಾಕಿದ್ದಾರೆ.
ಈ ಹಿಂದೆ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಮತ್ತು ರಮಾನಾಥ ರೈ ಹೆಸರು ಕಾರ್ಯಾಧ್ಯಕ್ಷ ಸ್ಥಾನಕ್ಕೆ ಖಚಿತ ಎನ್ನಲಾಗಿತ್ತು. ಸೊರಕೆ ದಕ್ಷಿಣ ಕನ್ನಡದಲ್ಲಿ ಲೋಕಸಭೆ ಅಭ್ಯರ್ಥಿಯಾದರೆ, ರಮಾನಾಥ ರೈ ಕಾರ್ಯಾಧ್ಯಕ್ಷ ಎನ್ನುವ ಒಳ ಒಪ್ಪಂದವೂ ಆಗಿತ್ತು. ಆದರೆ, ಸೊರಕೆ ಬದಲು ಯುವ ಮುಖಂಡ ಪದ್ಮರಾಜ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿತ್ತು. ಟಿಕೆಟ್ ಘೋಷಣೆಯಾದ ಎರಡು ದಿನದಲ್ಲೇ ಮಂಜುನಾಥ ಭಂಡಾರಿ ಅವರನ್ನು ಕರಾವಳಿ ಭಾಗದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿದೆ. ಆಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯಿಂದ ಬಂಟ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಕ್ಕೆ ಠಕ್ಕರ್ ಕೊಡಲು ಕೈ ಪಾಳಯ ಮುಂದಾಗಿದೆ.
ಇದಲ್ಲದೆ, ಕರಾವಳಿ ಮತ್ತು ಮಲೆನಾಡಿನ ಆರು ಜಿಲ್ಲೆಗಳ ಉಸ್ತುವಾರಿಯನ್ನೂ ಮಂಜುನಾಥ ಭಂಡಾರಿಗೆ ಕೊಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು ಜಿಲ್ಲೆಗಳ ಪಕ್ಷದ ಹೊಣೆಗಾರಿಕೆ ಭಂಡಾರಿ ಹೆಗಲೇರಿದೆ. ಲೋಕಸಭೆ ಚುನಾವಣೆಯಲ್ಲದೆ, ಮುಂದಿನ ಜಿಪಂ, ಗ್ರಾಮ ಪಂಚಾಯತ್ ಇನ್ನಿತರ ಸ್ಥಳೀಯಾಡಳಿತ ಚುನಾವಣೆಗೂ ಈ ಉಸ್ತುವಾರಿ ಇರಲಿದ್ದು, ಭಂಡಾರಿ ಪಾಲಿಗೆ ಮಹತ್ವದ ಹೊಣೆಯಾಗಿರುತ್ತದೆ. ಅಂದಹಾಗೆ, ಕರಾವಳಿಯ ಎರಡೂ ಜಿಲ್ಲೆಗಳಲ್ಲಿ ಹಿಂದು ಮತಗಳಲ್ಲಿ ಬಿಲ್ಲವ ಮತ್ತು ಬಂಟರೇ ಹೆಚ್ಚಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವರಲ್ಲಿ 3.5 ಲಕ್ಷ ಬಿಲ್ಲವರಿದ್ದರೆ, ಬಂಟರು 2.80 ಲಕ್ಷದಷ್ಟು ಇದ್ದಾರೆ. ಮುಸ್ಲಿಂ ಕೋಟಾದಲ್ಲಿ 3.5 ಲಕ್ಷ ಮತದಾರರಿದ್ದಾರೆ. ಹೀಗಾಗಿ ಈ ಮೂರನ್ನೂ ಓಲೈಸುವ ದೃಷ್ಟಿಯಿಂದ ಮೈಸೂರು ಭಾಗದ ಮುಸ್ಲಿಂ ಮುಖಂಡ ತನ್ವೀರ್ ಸೇಠ್, ಕರಾವಳಿಯಿಂದ ಮಂಜುನಾಥ ಭಂಡಾರಿ ಅವರನ್ನು ಕಾರ್ಯಾಧ್ಯಕ್ಷ ಸ್ಥಾನಕ್ಕೇರಿಸಲಾಗಿದೆ.
ದಕ್ಷಿಣ ಕನ್ನಡದಲ್ಲಿ ಜಾತಿ ಮೇಲೆ ವರ್ಕೌಟ್
ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 18 ಲಕ್ಷ ಮತದಾರರಿದ್ದು, ಈ ಪೈಕಿ 5 ಲಕ್ಷದಷ್ಟಿರುವ ಅಲ್ಪಸಂಖ್ಯಾತ ಮತಗಳೇ ಕಾಂಗ್ರೆಸ್ ಪಾಲಿಗೆ ದೊಡ್ಡ ಮತಬ್ಯಾಂಕ್. ಆದರೆ, ಹಿಂದುತ್ವ, ಮೋದಿ ಮೇಲಿನ ಅಭಿಮಾನ ಹೆಚ್ಚಿರುವ ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಭದ್ರಕೋಟೆ ಎಂದೇ ಬಿಂಬಿತವಾಗಿದೆ. ಬಿಲ್ಲವ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹಿಂದುತ್ವ ಸಂಘಟನೆಯಲ್ಲಿರುವುದು ಬಿಜೆಪಿ ಪಾಲಿನ ಪ್ಲಸ್. ಹೀಗಾಗಿ ಜಾತಿ ಸಮೀಕರಣದಲ್ಲಿ ವರ್ಕೌಟ್ ಮಾಡಿದರೆ, ಮೂರು ದಶಕದ ಬಳಿಕ ಲೋಕಸಭೆ ಗೆಲುವಿನ ಖಾತೆ ತೆರೆಯಬಹುದು ಎನ್ನುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ. ಹೀಗಾಗಿ ಹಳೆ ಹುಲಿ ಬಂಟ ಸಮುದಾಯದ ರಮಾನಾಥ ರೈಗೆ ಚುನಾವಣಾ ಉಸ್ತುವಾರಿ ನೀಡಿದ್ದರೆ, ಬಿಲ್ಲವರೇ ಆದ ಹರೀಶ್ ಕುಮಾರ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಉಳಿಸಿಕೊಳ್ಳಲಾಗಿದೆ. ಇದಲ್ಲದೆ, ಬಿಲ್ಲವ ಸಂಘಟನೆ ಮೂಲಕ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿಸುವ ಯತ್ನವೂ ಜಿಲ್ಲೆಯಾದ್ಯಂತ ನಡೆದಿದೆ.
Mangalore manjunath bhandary to be KPCC working president, in charge of six districts. In the run-up to the Lok Sabha elections, the Congress is pushing for caste equations. Since Dakshina Kannada and Udupi districts are dominated by the Banta-Billava community, the party has announced candidates for the Billava community in Dakshina Kannada and Udupi-Chikkamagaluru districts. Following this, the KPCC appointed MLC and senior Congress leader manjunath bhandary as the working president.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am