ಬ್ರೇಕಿಂಗ್ ನ್ಯೂಸ್
22-03-24 09:44 pm Udupi Correspondent ಕರಾವಳಿ
ಉಡುಪಿ, ಮಾ.22: ಎಂಪಿಯಾಗಿ ದೆಹಲಿಗೆ ಹೋಗೋರಿಗೆ ಹಿಂದಿ, ಇಂಗ್ಲಿಷ್ ಭಾಷೆ ತಿಳಿದಿರಬೇಕು. ನಮ್ಮ ಎದುರಾಳಿಗೆ ಭಾಷೆ ಗೊತ್ತಿಲ್ಲ ಎಂದು ಟಾಂಗ್ ಇಟ್ಟ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರಿಗೆ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.
ಜಯಪ್ರಕಾಶ್ ಹೆಗ್ಡೆ ಆಡಿದ್ದ ಮಾತು ಭಾರೀ ವೈರಲ್ ಆಗಿತ್ತು. ಇದಕ್ಕೆ ಉತ್ತರಿಸಿದ ಪೂಜಾರಿ, ಭಾಷೆ ನಮ್ಮ ಬದುಕಿನ ಭಾಗ ಅಷ್ಟೇ. ನನ್ನ ಮಾತೃಭಾಷೆ ಕನ್ನಡ ನನಗೆ ಚೆನ್ನಾಗಿ ಬರುತ್ತದೆ. ಜಯಪ್ರಕಾಶ್ ಹೆಗ್ಡೆ ನಾನು ಸಂಸದನಾದರೆ ಭಾಷೆ ಸಮಸ್ಯೆಯಾಗುತ್ತದೆ ಎಂದಿದ್ದಾರೆ. ಸಂಸದನಾಗಿ ಆರು ತಿಂಗಳಲ್ಲಿ ಹಿಂದಿ ಕಲಿಯುತ್ತೇನೆ. ಈ ಬಗ್ಗೆ ಉಡುಪಿ -ಚಿಕ್ಕಮಗಳೂರಿನ ಮತದಾರಿಗೆ ನಾನು ಭರವಸೆ ಕೊಡುತ್ತೇನೆ. ನನಗೆ ಭಾಷೆ ತೊಡಕಾಗುತ್ತದೆ ಎಂಬ ಆತಂಕ ನಿಮಗೆ ಬೇಡ. ಸಂಸದನಾಗಿ ಅರೇ ತಿಂಗಳಲ್ಲಿ ಹಿಂದಿಯಲ್ಲಿ ಭಾಷಣ ಮಾಡುತ್ತೇನೆ. ನನ್ನ ಬಗ್ಗೆ ಆತಂಕ ಇರುವ ಜಯಪ್ರಕಾಶ್ ಹೆಗ್ಡೆ ಅವರನ್ನೂ ಖುಷಿ ಪಡಿಸುತ್ತೇನೆ ಎಂದು ವ್ಯಂಗ್ಯವಾಗಿ ಸವಾಲು ಹಾಕಿದ್ದಾರೆ.
ಕನ್ನಡ ಮಾತ್ರ ತಿಳಿದಿರುವ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅಣಕಿಸಿ ಜಯಪ್ರಕಾಶ್ ಹೆಗ್ಡೆ ಮಾತನಾಡಿದ್ದರು. ಹಿಂದಿ, ಇಂಗ್ಲಿಷ್ ಬರದೇ ದೆಹಲಿಯಲ್ಲಿ ವ್ಯವಹಾರ ಕಷ್ಟ ಸಾಧ್ಯ? ಭಾಷೆ ಬರದಿದ್ದರೆ ಕಚೇರಿಗಳಲ್ಲಿ ಬಹಳ ಸಮಸ್ಯೆಯಾಗುತ್ತದೆ. ಅಧಿಕಾರಿಗಳ ಬಳಿ ಹೋಗಿ ವೈಯಕ್ತಿಕವಾಗಿ ಮಾತನಾಡುವಾಗ ತೊಂದರೆ ಆಗುತ್ತದೆ. ಭಾಷೆ ಬರುವ ಬೇರೆಯವರನ್ನು ತನ್ನ ಬದಲಿಗೆ ಕಳಿಸಿ ವ್ಯವಹಾರ ಮಾಡಲು ಸಾಧ್ಯವಿಲ್ಲ. ಪಾಸ್ ಇಲ್ಲದ ವ್ಯಕ್ತಿ ಸಂಸತ್ ಒಳಗೆ ವ್ಯವಹರಿಸಲೂ ಸಾಧ್ಯವಿಲ್ಲ.
ಸ್ವತಃ ಎಂಪಿ ಮಾತ್ರ ಅಧಿಕಾರಿಗಳ ಬಳಿ ಹೋಗಿ ವ್ಯವಹರಿಸಬಹುದು. ಭಾಷೆ ಬರದಿದ್ದರೆ ಸಂಸದನಾಗಿ ಕೆಲಸ ನಿಭಾಯಿಸುವುದು ಕಷ್ಟ. ಕೆಲಸಕ್ಕೆ ಅಡ್ಡಿಯಾಗುತ್ತದೆ. ಅನುವಾದಕ ಒಬ್ಬರು ಇರುತ್ತಾರೆ.. ಕನ್ನಡದಲ್ಲಿ ಮಾತನಾಡುವ ಅವಕಾಶ ಇದೆ. ನಾನು ಸಂಸದನಾಗಿದ್ದಾಗ ಕನ್ನಡದಲ್ಲೇ ಪ್ರತಿಜ್ಞೆ ಸ್ವೀಕರಿಸಿದ್ದೆ. ಕನ್ನಡದಲ್ಲಿಯೇ ಭಾಷಣ ಮಾಡುತ್ತೇನೆ ಎಂದು ಪಾರ್ಲಿಮೆಂಟ್ ನಲ್ಲಿ ಅಧಿಕಾರಿಗಳಿಗೆ ತಿಳಿಸಿದ್ದೆ. ಅನುವಾದ ಮಾಡಿದರೆ ಯಾರು ನಿಮ್ಮ ಕನ್ನಡ ಭಾಷಣವನ್ನು ಕೇಳುವುದಿಲ್ಲ ಎಂದವರು ಹೇಳಿದ್ದರು. ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಮಾತನಾಡಿದರೆ ಸಂಸದರು ಕೇಳುತ್ತಾರೆ ಎಂದು ಹೇಳಿದ್ದರು. ಕನ್ನಡದಲ್ಲಿ ಮಾತನಾಡಬಾರದು ಎಂದು ಏನೂ ಇಲ್ಲ. ಆದರೆ ಸಂಸದರಾಗಿ ನಮಗೆ ರಾಷ್ಟ್ರೀಯ ಭಾಷೆಗಳ ಹಿಡಿತ ಇರಬೇಕು ಎಂದು ಉಡುಪಿಯ ಬ್ರಹ್ಮಾವರದಲ್ಲಿ ಜಯಪ್ರಕಾಶ್ ಹೆಗ್ಡೆ ಭಾಷಣ ಮಾಡಿದ್ದರು.
Udupi Kota Shrinivas Poojari slams Congress Jayaprakash Hegde. I can learn Hindi well not a big issue to learn.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm