ಬ್ರೇಕಿಂಗ್ ನ್ಯೂಸ್
20-03-24 11:09 am Mangalore Correspondent ಕರಾವಳಿ
ಮಂಗಳೂರು, ಮಾ.20: ಮಂಗಳೂರಿನಿಂದ ಸರಕು ಹೇರಿಕೊಂಡು ಲಕ್ಷದ್ವೀಪಕ್ಕೆ ಹೊರಟಿದ್ದ ಸರಕು ಹಡಗು ಸಮುದ್ರ ಮಧ್ಯೆ ತಾಂತ್ರಿಕ ತೊಂದರೆಯಿಂದ ಮುಳುಗಡೆಯಾಗಿದ್ದು, ಅದರಲ್ಲಿದ್ದ ಎಂಟು ಮಂದಿ ಸಿಬಂದಿ ಸಮುದ್ರದಲ್ಲಿ ಮೂರು ದಿನಗಳ ಕಾಲ ಅನ್ನ, ನೀರಿಲ್ಲದೆ ಕಳೆದು ಪವಾಡ ಸದೃಶ ಪಾರಾಗಿದ್ದಾರೆ.
ಮಾ.12ರಂದು ತಮಿಳುನಾಡು ಮೂಲದ ಎಂಎಸ್ ವಿ ವರದರಾಜ ಹೆಸರಿನ ಹಡಗು ಮಂಗಳೂರಿನ ಹಳೆ ಬಂದರಿನಿಂದ ಜಲ್ಲಿ ಕಲ್ಲು, ಸಿಮೆಂಟ್, ಮರಳು, ಕಬ್ಬಿಣ ಮತ್ತಿತರ ಮನೆ ನಿರ್ಮಾಣದ ಸಾಮಗ್ರಿಗಳನ್ನು ಹೊತ್ತುಕೊಂಡು ಹೊರಟಿತ್ತು. ಮಾ.13ರಂದು ಹಡಗು ಲಕ್ಷದ್ವೀಪ ತಲುಪಿದ್ದು, ಅಲ್ಲಿನ ಆಂದ್ರೋತ್ ದ್ವೀಪದಲ್ಲಿ ಅರ್ಧದಷ್ಟು ಸಾಮಗ್ರಿ ಖಾಲಿ ಮಾಡಿ ಬಳಿಕ ಅಗತಿ ದ್ವೀಪತ್ತ ಹೊರಟಿತ್ತು. ರಾತ್ರಿ ವೇಳೆ ಸಂಚಾರದ ಬಳಿಕ ಮರುದಿನ ಬೆಳಗ್ಗಿನ ಹೊತ್ತಿಗೆ ಹಡಗಿನ ಎಂಜಿನ್ನಲ್ಲಿ ತಾಂತ್ರಿಕ ತೊಂದರೆ ಎದುರಾಗಿತ್ತು. ಕ್ಯಾಪ್ಟನ್ ಹಾಗೂ ಸಿಬಂದಿ ದುರಸ್ತಿಗೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಈ ಮಧ್ಯೆ ಜೋರಾದ ಗಾಳಿಗೆ ಸಿಲುಕಿ ಹಡಗು ನಿಯಂತ್ರಣ ಕಳಕೊಂಡು ನೀರು ಒಳನುಗ್ಗಲು ಆರಂಭಿಸಿತ್ತು.
ಹಡಗು ಅಪಾಯಕ್ಕೀಡಾಗಿ ಮುಳುಗಲು ಆರಂಭಿಸಿದಾಗ, ಅದರಲ್ಲಿ ಸಣ್ಣ ಬೋಟು ಪಾತಿಯನ್ನು ಬಳಸಿಕೊಂಡು ಹಡಗಿನಲ್ಲಿದ್ದ ಎಂಟು ಮಂದಿ ಸಿಬಂದಿ ಪ್ರಾಣ ರಕ್ಷಣೆಗಾಗಿ ಸಮುದ್ರಕ್ಕೆ ಹಾರಿದ್ದರು. ಇದೇ ವೇಳೆ, ಮಂಗಳೂರು ಕೋಸ್ಟ್ ಗಾರ್ಡ್ ಗೆ ಮಾಹಿತಿ ನೀಡಲಾಗಿತ್ತು. ಕೋಸ್ಟ್ ಗಾರ್ಡ್ ಕಡೆಯಿಂದ ಲಕ್ಷದ್ವೀಪಕ್ಕೆ ಮಾಹಿತಿ ನೀಡಿ, ಮಾರ್ಚ್ 15ರಿಂದ ಎರಡು ದಿನಗಳ ಕಾಲ ಹುಡುಕಾಟ ನಡೆಸಿದರೂ ಹಡಗು ಸಿಬಂದಿಯ ಮಾಹಿತಿ ಸಿಕ್ಕಿರಲಿಲ್ಲ. ಹಡಗಿನಲ್ಲಿ ಕ್ಯಾಪ್ಟನ್ ಭಾಸ್ಕರನ್, ಸಿಬಂದಿ ನಾಗಲಿಂಗಂ, ನಲ್ಲಮುತ್ತು ಗೋಪಾಲ್, ಮಣಿದೇವನ್ ವೇಲು, ವಿಘ್ನೇಶ್, ಅಜಿತ್ ಕುಮಾರ್, ಕುಪ್ಪುರಾಮನ್ ಮತ್ತು ಮುರುಗನ್ ಸೇರಿದಂತೆ ಎಂಟು ಮಂದಿ ಇದ್ದರು.
ಮಾರ್ಚ್ 18ರಂದು ಲಕ್ಷದ್ವೀಪದ ಕಲ್ಪೇನಿ ದ್ವೀಪದ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದಾಗ ಸಮುದ್ರ ಮಧ್ಯೆ ಎಂಟು ಮಂದಿ ಮೀನುಗಾರರು ತೇಲುತ್ತಿದ್ದು ರಕ್ಷಣೆಗಾಗಿ ಕೈಬೀಸುತ್ತಿರುವುದು ಕಂಡುಬಂದಿತ್ತು. ಮೀನುಗಾರರು ಬಳಿಕ ಅವರನ್ನು ರಕ್ಷಿಸಿ ಕಲ್ಪೇನಿ ದ್ವೀಪಕ್ಕೆ ಕರೆದೊಯ್ದು ಉಪಚರಿಸಿದ್ದರು. ಮಂಗಳೂರು ಕೋಸ್ಟ್ ಗಾರ್ಡ್ ಮಾಹಿತಿ ಪಡೆದು ಸ್ಪೀಡ್ ಬೋಟ್ ಮೂಲಕ ಎಂಟು ಮಂದಿ ಹಡಗು ಸಿಬಂದಿಯನ್ನು ಕೊಚ್ಚಿ ದ್ವೀಪಕ್ಕೆ ಕರೆದೊಯ್ದಿದ್ದಾರೆ. ಹಡಗಿನ ಮಾಲೀಕರು ಕೊಚ್ಚಿನ್ ತೆರಳಿದ್ದು, ಸಿಬಂದಿಯನ್ನು ಕರೆತರಲಿದ್ದಾರೆ ಎಂದು ಮಂಗಳೂರು ಹಳೆಬಂದರು ಸಂಘದ ಕಾರ್ಯದರ್ಶಿ ಅಬ್ದುಲ್ ಲತೀಫ್ ತಿಳಿಸಿದ್ದಾರೆ.
Boat carrying items to lakshadweep from Mangalore capsized. Three days 8 fishermen were without food and water. Finally cost gaurd have arrived for their help and rescued them.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm