ಬ್ರೇಕಿಂಗ್ ನ್ಯೂಸ್
27-11-20 04:09 pm Mangalore Correspondent ಕರಾವಳಿ
ಮಂಗಳೂರು, ನವೆಂಬರ್ 27: ಸುರತ್ಕಲ್ ಬಳಿಯ ಗುಡ್ಡೆಕೊಪ್ಲ ಬೀಚ್ ನಲ್ಲಿ ನಿಂತಿರುವ ಮುಂಬೈ ಮೂಲದ ಡ್ರೆಜ್ಜರ್ ಹಡಗನ್ನು ಕೂಡಲೇ ತೆರವುಗೊಳಿಸದಿದ್ದರೆ ಪರಿಸರ ಮತ್ತು ಪ್ರಾದೇಶಿಕವಾಗಿ ಹಾನಿಯಾಗುವ ಸಾಧ್ಯತೆ ಇದೆಯೆಂದು ತಜ್ಞರು ಸರಕಾರಕ್ಕೆ ವರದಿ ನೀಡಿದ್ದಾರೆ.
ಕಳೆದ ವರ್ಷ ಮಳೆಗಾಲದ ಸಂದರ್ಭದಲ್ಲಿ ಭಾರೀ ಮಳೆ, ಗಾಳಿಗೆ ಸಿಲುಕಿ ಸ ಮುದ್ರ ಮಧ್ಯೆ ಲಂಗರು ಹಾಕಿದ್ದ ಡ್ರಜ್ಜರ್ ಹಡಗು ಸುರತ್ಕಲ್ ಬಳಿಯ ದಡಕ್ಕೆ ಬಂದಿತ್ತು. ಈಗ ದಡದಿಂದ 60 ಮೀಟರ್ ದೂರದಲ್ಲಿ ನೆಲಕ್ಕೆ ತಾಗಿ ನಿಂತಿದ್ದು, ನಿಧಾನವಾಗಿ ನೆಲಕ್ಕೆ ಕುಸಿಯುತ್ತಿರುವುದನ್ನು ತಜ್ಞರು ಪತ್ತೆ ಮಾಡಿದ್ದಾರೆ. ಮಂಗಳೂರಿನ ಫಿಶರೀಸ್ ಕಾಲೇಜಿನ ಡೀನ್ ಡಾ.ಎ.ಸೆಂಥಿಲ್ ಮತ್ತು ಐದು ಮಂದಿಯ ತಂಡ ಹಡಗು ಇರುವ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಕೂಡಲೇ ತೆರವು ಮಾಡದಿದ್ದರೆ ಅಪಾಯ ಇರುವುದಾಗಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ.
ಕೇಂದ್ರ ಸರಕಾರದ ಪರಿಸರ, ಅರಣ್ಯ ಮತ್ತು ಮಾಲಿನ್ಯ ನಿಯಂತ್ರಣ ಸಚಿವಾಲಯಕ್ಕೆ ತಜ್ಞರು ಪತ್ರ ಬರೆದಿದ್ದು, ಕೂಡಲೇ ಹಡಗನ್ನು ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ. ಈ ಹಿಂದೆ ಗೋವಾದ ಕಾಂಡೋಲಿನ್ ಬೀಚ್ ನಲ್ಲಿ ಡ್ರೆಜ್ಜರ್ ಹಡಗೊಂದು ಕಾನೂನು ಹೋರಾಟದಿಂದಾಗಿ ಹತ್ತು ವರ್ಷಗಳ ಕಾಲ ಬಾಕಿಯುಳಿದು ಪರಿಸರ ಮಾಲಿನ್ಯ ಆಗಿತ್ತು. ಅಲ್ಲದೆ, ಆಸುಪಾಸಿನಲ್ಲಿ ತೀವ್ರ ಕಡಲ್ಕೊರೆತಕ್ಕೂ ಕಾರಣವಾಗಿತ್ತು. ಅದರ ಕಾರಣದಿಂದಾಗಿ ಒಂದು ಕಾಲದಲ್ಲಿ ಸುಂದರ ಬೀಚ್ ಆಗಿದ್ದ ಕಾಂಡೋಲಿನ್ ಬೀಚ್ ಈಗ ಜನರು ನೋಡಲಾಗದ ಸ್ಥಿತಿಗೆ ಮುಟ್ಟಿದೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಎಂವಿ ಭಗವತಿ ಪ್ರೇಮ್ ಎನ್ನುವ ಈ ಡ್ರಜ್ಜರ್ ಹಡಗು 60 ಮೀಟರ್ ಉದ್ದವಿದ್ದು ಸುರತ್ಕಲ್ ಭಾಗದಲ್ಲಿ ಬೀಚ್ ಗೆ ಅಡ್ಡಲಾಗಿ ನಿಂತಿದೆ. ಅದನ್ನು ಹೀಗೆ ಬಿಟ್ಟರೆ ನಿಧಾನವಾಗಿ ನೀರಿನ ಆಳಕ್ಕೆ ಕುಸಿಯಲಿದೆ. ಈಗಲೇ ಹಡಗಿನ ಸುತ್ತ ಮರಳು ಆವರಿಸಿದ್ದು, ಮತ್ತಷ್ಟು ಕಾಲ ಇದ್ದರೆ ಅದನ್ನು ತೆರವುಗೊಳಿಸಲು ಆ ಜಾಗದಲ್ಲಿ ಡ್ರೆಜ್ಜಿಂಗ್ ಮಾಡಬೇಕಾಗುತ್ತದೆ.
ಹಡಗಿನಲ್ಲಿ ಡೀಸೆಲ್ ಮತ್ತು ಆಯಿಲ್ ದೊಡ್ಡ ಪ್ರಮಾಣದಲ್ಲಿ ಇದ್ದು, ಅವನ್ನು ಸುರಕ್ಷಿತವಾಗಿ ತೆರವುಗೊಳಿಸಬೇಕು. ಅಲ್ಲದೆ, ಪರಿಸರಕ್ಕೆ ಹಾನಿ ಆಗಬಲ್ಲ ರಾಸಾಯನಿಕಗಳನ್ನು ಹೊರಗೆ ತೆಗೆಯಬೇಕಾಗಿದೆ. ಆಬಳಿಕ ಗುಜರಾತ್ ಅಥವಾ ಮಹಾರಾಷ್ಟ್ರದ ಶಿಪ್ ಯಾರ್ಡ್ ಗೆ ಒಯ್ಯುವ ಕೆಲಸ ಮಾಡಬೇಕು. ಈ ಕೆಲಸ ಇನ್ನೆರಡು ತಿಂಗಳಲ್ಲಿ ಮಾಡಬೇಕು ಎಂದು ಪರಿಸರ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.
ಭಗವತಿ ಪ್ರೇಮ್ ಹಡಗು ಮುಂಬೈ ಮೂಲದ ಮರ್ಕೇಟರ್ ಶಿಪ್ ಕಂಪನಿಗೆ ಸೇರಿದ್ದಾಗಿದ್ದು, ವಿಮಾ ಹಣ ಬಾಚಿಕೊಳ್ಳುವುದಕ್ಕಾಗಿ ಕಂಪನಿ ಅಧಿಕಾರಿಗಳು ಹಡಗು ನೀರಿನಲ್ಲಿ ಮುಳುಗುವುದನ್ನು ನಿರೀಕ್ಷಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಹಡಗು ನಿಂತು ಒಂದು ವರ್ಷ ಕಳೆದರೂ, ಜಿಲ್ಲಾಡಳಿತ ಆಗಲೀ, ಎನ್ಎಂಪಿಟಿ ಆಗಲೀ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಇದೀಗ ಕಳೆದ ವಾರದಲ್ಲಿ ಕಡಲು ನೀಲ ಬಣ್ಣಕ್ಕೆ ತಿರುಗಿದ್ದೂ ಇದೇ ಜಾಗದಲ್ಲಿ ಆಗಿತ್ತು.
ಈ ಹಡಗಿನಿಂದ ರಾಸಾಯನಿಕ ಸೋರಿಕೆ ಆಗಿದೆಯೋ ಎನ್ನುವ ಆತಂಕವೂ ವ್ಯಕ್ತವಾಗಿದೆ. ಹಡಗು ಅಡ್ಡಲಾಗಿ ನಿಂತಿರುವುದರಿಂದ ಮೀನುಗಾರರಿಗೂ ಕಷ್ಟವಾಗಿದ್ದು, ತೆರವು ಮಾಡಬೇಕೆಂದು ಒತ್ತಾಯ ಮಾಡಿದ್ದರೂ ಜಿಲ್ಲಾಡಳಿತ ಸೊಪ್ಪು ಹಾಕಿಲ್ಲ. ಈಗ ಸಾಗರ ವಿಜ್ಞಾನ ವಿಭಾಗದ ತಜ್ಞರೇ ಅಪಾಯದ ಮುನ್ನೆಚ್ಚರಿಕೆ ನೀಡಿದ್ದಾರೆ.
Dredger Bhagawati Prem stuck close to Surathkal Beach Shore may cause great environmental issue states Authorities. A letter has been sent to the central government on this issue said Authorities to Headline Karnataka.
17-03-25 11:54 am
Bangalore Correspondent
Yatnal, Pramod Muthalik: ' ಬಾಂಬ್ ಹಾಕಿ ಹೊಟ್ಟೆ...
16-03-25 10:32 pm
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
17-03-25 10:57 pm
HK News Desk
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
17-03-25 11:02 pm
Udupi Correspondent
Mangalore Accident, Kallapu: ನಿಯಂತ್ರಣ ತಪ್ಪಿ ಆ...
17-03-25 08:01 pm
Mangalore, Chakravarthy Sulibele, FIR: ಅನ್ಯಧರ...
17-03-25 04:27 pm
Mangalore Accident, Harekala, Death: ಹರೇಕಳದಲ್...
17-03-25 11:29 am
UT Khader, Mangalore, Tulu Academy: ತುಳು ಕಲಿತ...
16-03-25 10:55 pm
17-03-25 07:51 pm
Mangalore Correspondent
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm