ಬ್ರೇಕಿಂಗ್ ನ್ಯೂಸ್
26-11-20 05:24 pm Mangalore Correspondent ಕರಾವಳಿ
ಮಂಗಳೂರು, ನವೆಂಬರ್ 26: ದೇಶಾದ್ಯಂತ ಲವ್ ಜಿಹಾದ್ ವಿರುದ್ಧ ಆಕ್ರೋಶ ಕೇಳಿಬರುತ್ತಿರುವ ಮಧ್ಯೆಯೇ ಲವ್ ಜಿಹಾದ್ ಕೃತ್ಯಕ್ಕೆ ಬಲಿಯಾದ ಯುವತಿಯೊಬ್ಬಳು ಮಾಧ್ಯಮದ ಮುಂದೆ ಬಂದಿದ್ದಾಳೆ. ಮುಸ್ಲಿಂ ಆಗಿ ಮತಾಂತರಗೊಂಡು ಮದುವೆಯಾದ ಎರಡೇ ವರ್ಷದಲ್ಲಿ ಗಂಡನಿಂದ ಬೇರ್ಪಟ್ಟು ಬೀದಿಪಾಲಾಗಿರುವ ಸ್ಥಿತಿಯನ್ನು ಹೇಳಿಕೊಂಡಿದ್ದಾಳೆ.
ಆಕೆ, ಮೂಲತಃ ಕೇರಳದ ಕಣ್ಣೂರು ಜಿಲ್ಲೆಯ ಪ್ರತಿಷ್ಠಿತ ಹಿಂದು ಮನೆತನಕ್ಕೆ ಸೇರಿದ ಯುವತಿ. ಹೆಸರು ಶಾಂತಿ ಜೂಬಿ. ಉನ್ನತ ಶಿಕ್ಷಣ ಪಡೆದು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಆಕೆಗೆ ಹಿಂದೆ ಒಬ್ಬನ ಮದುವೆಯಾಗಿತ್ತು. ಆದರೆ, ಇದೇ ವೇಳೆ ಫೇಸ್ಬುಕ್ ನಲ್ಲಿ ಇಬ್ರಾಹಿಂ ಎಂಬಾತನ ಪರಿಚಯ ಆಗಿದೆ. ಪದೇ ಪದೇ ಫೋನ್ ಮಾಡುವುದು, ವಿಡಿಯೋ ಕಾಲ್ ಮಾಡುತ್ತಾ ಕೀಟಲೆ ಕೊಡಲಾರಂಭಿಸಿದ್ದ. ಈ ವಿಚಾರ ಗಂಡನಿಗೆ ಗೊತ್ತಾಗಿ, ಶಾಂತಿ ಜೂಬಿಯನ್ನು ತ್ಯಜಿಸಿದ್ದ. ಇಬ್ಬರ ಮಧ್ಯೆ ಮ್ಯೂಚ್ವಲ್ ಆಗಿಯೇ ಡೈವರ್ಸ್ ಮಾಡಿಕೊಂಡಿದ್ದರು.
ಈ ವೇಳೆ, ಪರಿಚಯ ಆಗಿದ್ದ ಇಬ್ರಾಹಿಂ ಮತ್ತಷ್ಟು ಪೀಡಿಸಲಾರಂಭಿಸಿದ್ದಾನೆ. ನೊಂದ ಮನಸ್ಸಿಗೆ ಹತ್ತಿರವಾಗುವಂತೆ ನಟಿಸುತ್ತಾ ನಾನೇ ಬಾಳು ಕೊಡುವುದಾಗಿ ಹೇಳಿದ್ದಾನೆ. ಆದರೆ, ಯುವತಿ ಅದಕ್ಕೆ ನಿರಾಕರಿಸಿದ್ದಳು. ನನಗೆ ಮೊದಲೇ ಮದುವೆಯಾಗಿದ್ದು ಇನ್ನೊಮ್ಮೆ ಮದುವೆಯಾಗುವುದು ಸರಿಯಾಗಲ್ಲ ಎಂದಿದ್ದಾಳೆ. ಇಸ್ಲಾಮ್ ನಲ್ಲಿ ವಿಧವೆ ಮಹಿಳೆಗೆ ಬಾಳು ಕೊಡುವುದು ಪವಿತ್ರ ಕಾರ್ಯ. ಆದರೆ, ನೀನು ಇಸ್ಲಾಂಗೆ ಮತಾಂತರ ಆಗಬೇಕು ಎಂದಿದ್ದಾನೆ.
ಕೊನೆಗೆ, ಇಸ್ಲಾಂ ಬಗ್ಗೆ ನಾಲ್ಕು ತಿಂಗಳು ತರಬೇತಿ ಕೊಟ್ಟು ಪೂರ್ತಿ ಮತಾಂತರಗೊಂಡ ಬಳಿಕ ಮದುವೆಯಾಗಿದ್ದಾನೆ. ತನ್ನ ಮನೆಯವರ ವಿರೋಧ ಎದುರಾದರೂ, ಅದನ್ನು ಲೆಕ್ಕಿಸದೆ ಇಬ್ರಾಹಿಂ ಜೊತೆ ನಿಖಾ ಮಾಡಿಕೊಂಡಿದ್ದಾಳೆ. ಆಕೆಯ ಹೆತ್ತವರು ಶ್ರೀಮಂತರಾಗಿದ್ದು, ಒಬ್ಬಳೇ ಪುತ್ರಿಯಾಗಿದ್ದಳು. ತಂದೆ ತೀರಿಕೊಂಡ ಸಂದರ್ಭದಲ್ಲಿ ಮನೆಯವರು ಅರ್ಧ ಆಸ್ತಿಯನ್ನು ಇವಳ ಹೆಸರಿಗೆ ಬರೆದು ಕೊಟ್ಟಿದ್ದರು. ಆದರೆ, ಹುಡುಗಿ ಯಾವಾಗ ಇಸ್ಲಾಂಗೆ ಮತಾಂತರಗೊಂಡಳೋ ಆವತ್ತೇ ಮನೆಯವರು ತಿರುಗಿ ಬಿದ್ದಿದ್ದರು. ನೀನು ಮುಸ್ಲಿಂ ಆಗೋದಾದ್ರೆ ಆಸ್ತಿಯನ್ನು ಹಿಂತಿರುಗಿಸು ಎಂದಿದ್ದಾರೆ. ಅದಕ್ಕೆ, ನಂಗೆ ಗಂಡ ಇದ್ದಾನೆ, ನಿಮ್ಮ ಆಸ್ತಿಯೇ ಬೇಡ ಎಂದು ಮತ್ತೆ ಅವರಿಗೇ ಬರೆದು ಕೊಟ್ಟಿದ್ದಾಳೆ.
ಗಂಡನನ್ನು ನಿಸ್ವಾರ್ಥ ಪ್ರೀತಿಯ ಪ್ರತೀಕ ಎಂದೇ ಪರಿಗಣಿಸಿದ್ದ ಶಾಂತಿ ಜೂಬಿ ಆಬಳಿಕ ಆಸಿಯಾ ಆಗಿ ಬುರ್ಖಾ ಧರಿಸಿಕೊಂಡಿದ್ದಳು. ನಿತ್ಯ ನಿಮಾಜ್ ಮಾಡುವುದನ್ನೂ ರೂಢಿಸಿಕೊಂಡಿದ್ದಳು. ಬೆಂಗಳೂರಿನಲ್ಲಿ ಜೊತೆಗೇ ಸಂಸಾರ ನಡೆಸಿದ್ದ ಈ ಕುಟುಂಬಕ್ಕೆ ಯಾವುದೇ ಅಡ್ಡಿಯೂ ಬಂದಿರಲಿಲ್ಲ. ಈ ವಿಚಾರ ಇಬ್ರಾಹಿಂ ಅಣ್ಣ ಮತ್ತು ಮನೆಯವರಿಗೂ ಗೊತ್ತಿತ್ತು. ಆದರೆ, ವರ್ಷದ ಹಿಂದೆ ಇಬ್ರಾಹಿಂ ಸುಳ್ಯದ ಮನೆಗೆ ಬಂದಿದ್ದಾಗ, ಮನೆಯವರು ಏನು ಹೇಳಿದರೋ ಗೊತ್ತಿಲ್ಲ. ಇಬ್ರಾಹಿಂ ಮನಸ್ಸು ಬದಲಾಯಿಸಿದ್ದಾನೆ. ಬೇರೆ ಮದುವೆ ಮಾಡಲು ಮನೆಯವರು ತಯಾರಿ ಮಾಡಿದ್ದಾರೆ. ಈ ವಿಚಾರ ಅರಿತ ಯುವತಿ ಇಬ್ರಾಹಿಂ ಮನೆಗೆ ಬಂದು ರಂಪ ಮಾಡಿದ್ದಾಳೆ. ಆದರೆ, ಯುವತಿಯನ್ನು ಮನೆಯ ಒಳಗೆ ಬರಲು ಬಿಟ್ಟಿರಲಿಲ್ಲ. ನೀನು ಮದುವೆಯಾಗಿದನ್ನು ನಾವು ಒಪ್ಪುವುದಿಲ್ಲ. ನೀನು ನಿಖಾ ಮಾಡಿಕೊಂಡಿದ್ದಕ್ಕೆ ಸಾಕ್ಷಿನೇ ಇಲ್ಲ ಎಂದು ವರಾತ ತೆಗೆದಿದ್ದಾರೆ. 2020ರ ಜನವರಿ ತಿಂಗಳಲ್ಲಿ ಹೀಗೆ ರಂಪಾಟ ನಡೆದ ಬಳಿಕ ಇಬ್ರಾಹಿಂ ದಿಢೀರ್ ಆಗಿ ನಾಪತ್ತೆಯಾಗಿದ್ದಾನೆ. ಶಾಂತಿ ಜೂಬಿ ಅಲಿಯಾಸ್ ಆಸಿಯಾ ಈಗ ಅಕ್ಷರಶಃ ಬೀದಿಗೆ ಬಂದಿದ್ದಾಳೆ.
ಇಬ್ರಾಹಿಂ ಫೋನ್ ಸ್ವಿಚ್ ಆಫ್ ಮಾಡಿ, ಇವಳಿಂದ ತಪ್ಪಿಸಿಕೊಂಡಿದ್ದು ಮೈಸೂರೋ, ಬೆಂಗಳೂರಿನಲ್ಲೋ ಇದ್ದಾನೆ. ಈ ನಡುವೆ, ಶಾಂತಿ ಜೂಬಿ ಇಬ್ರಾಹಿಂ ಮನೆಯ ಹೊರಗಡೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳಿ, ಒಂದು ದಿನ ನಿರಶನವನ್ನೂ ಮಾಡಿದ್ದಾಳೆ. ಆದರೆ, ಇಬ್ರಾಹಿಂ ಮನೆಯವರು ಕ್ಯಾರ್ ಮಾಡಿರಲಿಲ್ಲ. ಇಬ್ರಾಹಿಂ ಮನೆಯವರು ಕೇರಳದ ಮುಸ್ಲಿಂ ಆಗಿದ್ದು, ಕಟ್ಟೆಕಾರ್ ಎನ್ನುವ ಕುಟುಂಬದವರು. ಸದ್ಯಕ್ಕೆ ಸುಳ್ಯದಲ್ಲಿ ಈ ಕುಟುಂಬ ನೆಲೆಸಿದ್ದು, ಮುಸ್ಲಿಂ ಆಗಿ ಮತಾಂತರಗೊಂಡು ಬಂದಿರುವ ಹಿಂದು ಯುವತಿಯನ್ನು ಬೀದಿಗೆ ತಳ್ಳಿದ್ದಾರೆ.
ಮುಸ್ಲಿಂ ಸಂಘಟನೆಗಳು ಅರ್ಧಕ್ಕೆ ಕೈಬಿಟ್ಟವು !
ಈ ನಡುವೆ, ಯುವತಿ ಹಲವು ಮುಸ್ಲಿಂ ಸಂಘಟನೆಗಳನ್ನು ಸಹಾಯ ಕೇಳಿಕೊಂಡು ಹೋಗಿದ್ದಾರೆ. ಮಸೀದಿ ಕಮಿಟಿಯವರು ಹುಡುಗಿಯ ಪರವಾಗಿ ನಿಂತು ಕಟ್ಟೆಕಾರ್ ಮನೆಯವರನ್ನು ಒಪ್ಪಿಸಲು ಟ್ರೈ ಮಾಡಿದ್ದಾರೆ. ಆದರೆ, ಇಬ್ರಾಹಿಂ ಸೋದರ ಶಿಹಾಬ್ ಯಾವುದಕ್ಕೂ ಒಪ್ಪಿಲ್ಲ. ಎಸ್ ಡಿಪಿಐ ಸಂಘಟನೆಯ ನಾಯಕರು ಒಮ್ಮೆ ನ್ಯಾಯ ಕೊಡಿಸುವ ಭರವಸೆ ನೀಡಿದರೂ, ಇಬ್ರಾಹಿಂ ಪತ್ತೆಗೆ ಮುಂದಾಗಿಲ್ಲ. ಇದೇ ವೇಳೆ, ಇಬ್ರಾಹಿಂ ಸೋದರ ಶಿಹಾಬ್ ಶಾಂತಿ ಜೂಬಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಫೋನ್ ಮಾಡಿ, ತನ್ನ ಜೊತೆಗೆ ಲೈಂಗಿಕವಾಗಿ ಸಹಕರಿಸಿದರೆ ನಿನ್ನನ್ನು ಇಬ್ರಾಹಿಂ ಜೊತೆಗಿರಲು ಅವಕಾಶ ನೀಡುತ್ತೇನೆ ಎಂದಿದ್ದಾನೆ. ಇದರಿಂದ ಶಾಕ್ ಆಗಿದ್ದ ಯುವತಿ, ಸುಳ್ಯ ಪೊಲೀಸರ ಮೊರೆ ಹೋಗಿದ್ದಾಳೆ. ಆದರೆ, ಠಾಣೆಯಲ್ಲಿ ದೂರು ನೀಡಲು ಮುಂದಾಗಿಲಿಲ್ಲ. ನನಗೆ ಗಂಡ ಬೇಕು, ಆತನ ಜೊತೆ ಸೇರಿಸುವಂತೆ ಪೊಲೀಸರಲ್ಲಿ ಕೇಳಿಕೊಂಡಿದ್ದಾಳೆ.
ನಾನು ಸತ್ತರೆ ಎಸ್ಐ ಮತ್ತು ಶಿಹಾಬ್ ಕಾರಣ !
ಕಳೆದ ಎಂಟು ತಿಂಗಳಿಂದಲೂ ಇಬ್ರಾಹಿಂ ಖಲೀಲ್ ನಾಪತ್ತೆಯಾಗಿದ್ದು, ಬೀದಿಪಾಲಾದ ಯುವತಿ ಹೊಟೇಲ್ ಲಾಡ್ಜ್ ನಲ್ಲಿ ಇದ್ದುಕೊಂಡು ಕಾಲ ಕಳೆಯುತ್ತಿದ್ದಾಳೆ. ಈ ನಡುವೆ, ಶಿಹಾಬ್ ಮತ್ತು ಇಬ್ರಾಹಿಂ ಮನೆಯವರು ನನ್ನನ್ನು ಸಾಯಿಸುವ ಬೆದರಿಕೆ ಹಾಕಿದ್ದಾರೆ. ನಾನೇನಾದ್ರೂ ಸತ್ತರೆ ಸುಳ್ಯ ಪಿಎಸ್ಐ ಹರೀಶ್ ಮತ್ತು ಶಿಹಾಬ್ ಕಾರಣ ಎಂದು ಯುವತಿ ಹೇಳಿದ್ದಾಳೆ. ಎಸ್ಐ ಹರೀಶ್, ನನಗೆ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಹಳೆ ಗಂಡನಿಗೆ ಫೋನ್ ಮಾಡಿ, ನಿನ್ನ ಹೆಂಡತಿ ಇಲ್ಲಿ ಬಂದಿದ್ದಾಳೆ, ಹಾಗೆ ಹೀಗೆ ಅಂತ ಹೇಳುತ್ತಿದ್ದಾರೆ. ನಾನು ಅವರನ್ನು ಬಿಟ್ಟು ಡೈವರ್ಸ್ ಆಗಿ ಬಂದಿದ್ದೇನೆ. ಅದು ಮುಗಿದು ಹೋದ ವಿಚಾರ. ಪೊಲೀಸರು ಇಬ್ರಾಹಿಂ ಮನೆಯವರಿಗೆ ಸಪೋರ್ಟ್ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನೆ ಮಾಡಿರುವ ಶಾಂತಿ ಜೂಬಿ, ಇವರು ಮತಾಂತರಿಸಿ ಮದುವೆ ಮಾಡಿಕೊಂಡಿದ್ದಾರೆ. ಷರೀಯತ್ ಪ್ರಕಾರ ನಿಖಾ ಮಾಡಿದ್ದಾರೆ. ಇವರಿಗೆ ಗಂಡಸ್ತನ ಇದ್ದರೆ ಜೊತೆಗೇ ಬಾಳಲಿ.. ಎಂದು ಸವಾಲು ಹಾಕಿದ್ದಾಳೆ.
ದೂರು ನೀಡಿದ್ರೆ ಕ್ರಮ ಜರುಗಿಸುತ್ತೇವೆ
ಆರೋಪದ ಬಗ್ಗೆ ಸುಳ್ಯ ಪೊಲೀಸರಲ್ಲಿ ಕೇಳಿದರೆ, ಆಕೆ ದೂರು ನೀಡಲು ರೆಡಿ ಇಲ್ಲ. ದೂರು ನೀಡಿದರೆ ಮಾತ್ರ ಕ್ರಿಮಿನಲ್ ಕೇಸು ಆಗುತ್ತದೆ, ನಮಗೆ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಈ ನಡುವೆ ಇಬ್ರಾಹಿಂ ಕಡೆಯವರು ಹೈಕೋರ್ಟಿಗೆ ದೂರು ನೀಡಿದ್ದಾರೆ. ಇವಳು ಅಕ್ರಮವಾಗಿ ಮನೆಗೆ ಬಂದು ಕಿರುಕುಳ ನೀಡುತ್ತಿರುವುದಾಗಿ ದೂರು ಕೊಟ್ಟಿದ್ದಾರೆ.
ಹೀಗಿರಬೇಕಾದರೆ ಪೊಲೀಸರು ಈ ಪ್ರಕರಣದಲ್ಲಿ ಇಂಟರ್ ಫಿಯರ್ ಆಗಲು ಬರುವುದಿಲ್ಲ ಎಂದು ಸುಳ್ಯ ಪಿಎಸ್ಐ ಹರೀಶ್ ಪ್ರತಿಕ್ರಿಯಿಸಿದ್ದಾರೆ. ಆಕೆ, ಆರು ತಿಂಗಳ ಮೊದಲೇ ಎಸ್ಪಿಗೆ ದೂರು ನೀಡಿದ್ದಳು. ಅದರಂತೆ, ಡಿವೈಎಸ್ಪಿ ತನಿಖೆ ನಡೆಸಿದ್ದಾರೆ. ಆಕೆಯ ಕಂಪ್ಲೇಂಟ್ ಕೊಡಲು ಹೇಳಿದರೆ, ಅದು ಮಾಡುವುದಿಲ್ಲ ಎಂದಿದ್ದಾರೆ.
ಇದೀಗ ಆಧುನಿಕ ಹ್ಯೂಮನ್ ರೈಟ್ಸ್ ಎನ್ನುವ ಸಂಘಟನೆಯವರು ಯುವತಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದು, ಮಂಗಳೂರಿನಲ್ಲಿ ಸುದ್ದಿಗೋಷ್ಠಿ ಮಾಡಿಸಿ, ಇಬ್ರಾಹಿಂ ಖಲೀಲ್ ಮನೆಯವರು ಯುವತಿಯನ್ನು ಬೀದಿಪಾಲು ಮಾಡಿಸಿರುವ ಕತೆಯನ್ನು ಹೊರಗೆಡವಿದ್ದಾರೆ.
Video:
Shanthi Joobi now Asiyasha Khaleel who hails from Kannur, Kerala had got converted to Islam and settled at Sullia, Mangalore has been facing threat to life and harassment. Her Husband Ibrahim Khaleel Kattekar is said to be absconding after marriage. She has shared the Ugly truth of Love Jihad her to Headline Karnataka.
17-03-25 11:54 am
Bangalore Correspondent
Yatnal, Pramod Muthalik: ' ಬಾಂಬ್ ಹಾಕಿ ಹೊಟ್ಟೆ...
16-03-25 10:32 pm
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
17-03-25 10:57 pm
HK News Desk
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
17-03-25 11:02 pm
Udupi Correspondent
Mangalore Accident, Kallapu: ನಿಯಂತ್ರಣ ತಪ್ಪಿ ಆ...
17-03-25 08:01 pm
Mangalore, Chakravarthy Sulibele, FIR: ಅನ್ಯಧರ...
17-03-25 04:27 pm
Mangalore Accident, Harekala, Death: ಹರೇಕಳದಲ್...
17-03-25 11:29 am
UT Khader, Mangalore, Tulu Academy: ತುಳು ಕಲಿತ...
16-03-25 10:55 pm
17-03-25 07:51 pm
Mangalore Correspondent
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm