ಬ್ರೇಕಿಂಗ್ ನ್ಯೂಸ್
24-11-20 08:04 pm Mng Reporter | Photo Credit : Yashraj. Kulal ಕರಾವಳಿ
ಮಂಗಳೂರು, ನವೆಂಬರ್ 24: ಅರಬ್ಬೀ ಸಮುದ್ರ ಕಿನಾರೆಯಲ್ಲಿ ಕಾಣಿಸಿಕೊಂಡಿರುವ ನೀಲ ಬಣ್ಣದ ವಿದ್ಯಮಾನ ಶುಭಸೂಚಕ ಅಲ್ಲ. ಅಪಾಯದ ಮುನ್ಸೂಚನೆ. ಇದರಿಂದಾಗಿ ಆಹಾರಕ್ಕೆ ಬಳಸುವ ಮೀನುಗಳು ಭವಿಷ್ಯದಲ್ಲಿ ಸಿಗದೇ ಇರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಸುರತ್ಕಲ್, ಸಸಿಹಿತ್ಲು ಕಡಲ ತೀರದಲ್ಲಿ ಕಳೆದ ಎರಡು- ಮೂರು ದಿನಗಳಿಂದ ರಾತ್ರಿ ವೇಳೆ ಹೆದ್ದೆರೆಗಳು ನೀಲ ಬಣ್ಣದಿಂದ ಕೋರೈಸುತ್ತಿರುವುದು ಜನರ ಕುತೂಹಲಕ್ಕೆ ಕಾರಣವಾಗಿತ್ತು. ಕಳೆದ ಎರಡು ತಿಂಗಳಲ್ಲಿ ಗೋವಾದಿಂದ ಮಂಗಳೂರು ತನಕ ವಿವಿಧ ಕಡೆಗಳಲ್ಲಿ ಇದೇ ರೀತಿಯ ವಿದ್ಯಮಾನ ಗೋಚರಿಸಿತ್ತು. ಕಾರವಾರ, ಗೋಕರ್ಣ, ಹೊನ್ನಾವರ, ಮಲ್ಪೆ ಹೀಗೆ ಕೆಲವು ಭಾಗದಲ್ಲಿ ಮಾತ್ರ ಮೂರ್ನಾಲ್ಕು ದಿನ ಮಾತ್ರ ರಾತ್ರಿ ವೇಳೆಗೆ ಇಂಥ ನೀಲ ಬಣ್ಣ ಕಂಡುಬಂದಿತ್ತು.
ಈ ಬಗ್ಗೆ ಕರಾವಳಿಯಲ್ಲಿ ನಾನಾ ರೀತಿಯ ಅಭಿಪ್ರಾಯಗಳು ಕೇಳಿಬಂದಿದ್ದವು. ಮೀನುಗಾರರು ಕೂಡ, ಇಂಥ ವೈಚಿತ್ರ್ಯವನ್ನು ಇದೇ ಮೊದಲ ಬಾರಿಗೆ ನೋಡುತ್ತಿರುವುದು ಎಂದಿದ್ದರು. ಜನರು ಕುತೂಹಲದಿಂದ ಕಡಲ ದಡಕ್ಕೆ ತೆರಳಿ ನೋಡುತ್ತಿದ್ದಂತೆ, ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ತಜ್ಞರು ಹಲವೆಡೆ ತೆರಳಿ ನೀರಿನ ಸ್ಯಾಂಪಲ್ ಸಂಗ್ರಹಿಸಿ ಅಧ್ಯಯನ ನಡೆಸಿದ್ದಾರೆ. ಇದರ ಬಗ್ಗೆ ಪ್ರಾಥಮಿಕ ವರದಿಯನ್ನು ಸರಕಾರಕ್ಕೂ ನೀಡಿದ್ದಾರೆ.
ತಾಪಮಾನ ಹೆಚ್ಚಳದಿಂದ ವೈಪರೀತ್ಯ
ತಜ್ಞರ ತಂಡ, ಮೈಕ್ರೋಸ್ಕೋಪ್ ಮೂಲಕ ನೀರಿನ ಅಧ್ಯಯನ ನಡೆಸಿದ್ದು, ಅದರಲ್ಲಿ ಸೂಕ್ಷ್ಮಾಣು ಜೀವಿ ಕಂಡುಬಂದಿದ್ದು, ನೋಕ್ಟಿಲೂಕಾ ಸಿಂಟಿಲನ್ಸ್ (Noctiluca Scintillans) ಎನ್ನುವ ಬ್ಯಾಕ್ಟೀರಿಯಾ ಇರುವುದು ಕಂಡುಬಂದಿದೆ. ಇದೇ ಜೀವಿ ಕಡಲ ನೀರು ರೇಡಿಯಂ ರೀತಿ ರಾತ್ರಿ ವೇಳೆ ನೀಲ ವರ್ಣದಲ್ಲಿ ಹೊಳೆಯಲು ಕಾರಣ ಎನ್ನುವ ಮಾಹಿತಿ ನೀಡುತ್ತಿದ್ದಾರೆ. ವಾತಾವರಣದಲ್ಲಿ ತಾಪಮಾನ ಏರಿಕೆಯಾಗಿರುವ ಕಾರಣ ಸಾಗರದಾಳದಲ್ಲಿರುವ ಈ ಸೂಕ್ಷ್ಮಾಣು ಜೀವಿಗಳು ಮೇಲ್ಮೈಗೆ ಬಂದಿದೆ. ಈ ಸಂದರ್ಭದಲ್ಲಿ ಸಾಧಾರಣ ಉಷ್ಣತೆ 30 ಡಿಗ್ರಿ ಇದ್ದರೆ, ನೀರಿನ ಉಷ್ಣತೆ 32 ಇತ್ತು. ಇದು ವೈಪರೀತ್ಯದ ಲಕ್ಷಣ. ಚಳಿಗಾಲದಲ್ಲಿ ಸಮುದ್ರ ನೀರಿನ ಉಷ್ಣತೆ ವಾತಾವರಣಕ್ಕಿಂತ ಹೆಚ್ಚು ಇರಬಾರದು ಎಂದು ಮೀನುಗಾರಿಕಾ ಕಾಲೇಜಿನ ಡೀನ್ ಡಾ.ಸೆಂಥಿಲ್ ಮಾಹಿತಿ ನೀಡಿದ್ದಾರೆ.
ಬೂತಾಯಿ ಮೀನು ಕ್ಷಾಮ ತಕ್ಷಣದ ಎಫೆಕ್ಟ್
ಈ ಸೂಕ್ಷ್ಮಾಣು ಜೀವಿಗಳು ದೊಡ್ಡ ಪ್ರಮಾಣದಲ್ಲಿ ಸೇರುವಾಗ ದೇಹದಲ್ಲಿ ಜೈವಿಕ ಪ್ರಕ್ರಿಯೆ ಲ್ಯುಸಿಫೆರಿನ್ ಮತ್ತು ಲೂಸಿಫೆರೇನ್ ನಡೆದು ನೀಲಿನ ಬಣ್ಣದ ಬೆಳಕು ಹೊರಸೂಸುತ್ತದೆ. ಈ ಸಂದರ್ಭದಲ್ಲಿ ಸಾಮಾನ್ಯ ಮೀನುಗಳು ಆಹಾರ ಸಿಗದೆ ಬೇರೆಡೆ ವಲಸೆ ಹೋಗುತ್ತವೆ. ಈಗಾಗ್ಲೇ ಬೂತಾಯಿ, ಬಂಗುಡೆ ರೀತಿಯ ಮೀನುಗಳು ತೀವ್ರ ಕ್ಷಾಮ ಎದುರಾಗಿದೆ. ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಅತಿಹೆಚ್ಚು ಸಿಗುತ್ತಿದ್ದ ಬೂತಾಯಿ ಮೀನುಗಳು ಈ ಬಾರಿ ಸಿಗುತ್ತಿಲ್ಲ. ನೀಲ ಬಣ್ಣದ ತಕ್ಷಣದ ಪರಿಣಾಮ ಈಗಲೇ ಗೋಚರಿಸುತ್ತಿದೆ ಎಂದು ಡಾ.ಸೆಂಥಿಲ್ ವೇಲ್ ಹೇಳಿದ್ದಾರೆ.
ಕೊಳಚೆ, ಫ್ಯಾಕ್ಟರಿ ವಿಷವೂ ಕಾರಣ
ಸಮುದ್ರ ಮಾಲಿನ್ಯ, ಸಮುದ್ರಕ್ಕೆ ಬಿಡುವ ಕೊಳಚೆ ನೀರು, ಫ್ಯಾಕ್ಟರಿಗಳಿಂದ ಹೊರಬಿಡುತ್ತಿರುವ ವಿಷಕಾರಿ ವಸ್ತುಗಳು ಕೂಡ ಇಂಥ ವೈಪರೀತ್ಯಕ್ಕೆ ಕಾರಣ ಎನ್ನಬಹುದು. ಒಂದೆಡೆ ಗ್ಲೋಬಲ್ ವಾರ್ಮಿಂಗ್, ಮತ್ತೊಂದೆಡೆ ಮಾಲಿನ್ಯ ಸಮುದ್ರದಲ್ಲಿ ನೀರಿನ ಉಷ್ಣತೆ ಏರುಪೇರಾಗಿಸುತ್ತದೆ. ತಾಪಮಾನದಿಂದಾಗಿ ಸಾಗರ ತಳದಲ್ಲಿರುವ ಪಾಚಿಗಳ ರೀತಿಯ ಸೂಕ್ಷ್ಮಾಣು ಜೀವಿಗಳು ಮೇಲೆ ಬರುತ್ತಿರುವುದು ಅಪಾಯದ ಮುನ್ಸೂಚನೆ. ತೀರ ಪ್ರದೇಶದಲ್ಲಿ ಮೀನುಗಾರಿಕೆಗೆ ಸಿಗುತ್ತಿದ್ದ ಆಹಾರಕ್ಕೆ ಬಳಸುವ ಮೀನುಗಳು ಶಾಶ್ವತವಾಗಿ ಬೇರೆಡೆಗೆ ವಲಸೆ ಹೋಗುವ ಅಪಾಯವಿದೆ. ಇದೇ ಕಾರಣದಿಂದ ಕಳೆದ ಬಾರಿ ಕಾರ್ಗಿಲ್ ಫಿಶ್, ಈ ಬಾರಿ ಜೆಲ್ಲಿ ಫಿಶ್ ಕಂಡುಬಂದಿದೆ. ಗೋವಾದಲ್ಲಿ ಜೆಲ್ಲಿ ಫಿಶ್ ಮೇಲ್ಭಾಗಕ್ಕೆ ಬರುತ್ತಿದ್ದು, ಜನರು ನೀರಿಗಿಳಿಯದಂತೆ ನಿಷೇಧ ಹಾಕಲಾಗಿದೆ. ಜೆಲ್ಲಿ ಫಿಶ್ ಗಳನ್ನು ಕಾಲಿನಲ್ಲಿ ತುಳಿದರೆ ತುರಿಕೆ, ಅಲರ್ಜಿಯಾಗುತ್ತದೆ ಎಂದು ಅಕ್ವಾ ಎನ್ವಾರ್ನ್ಮೆಂಟ್ ವಿಭಾಗದ ಮುಖ್ಯಸ್ಥ ಡಾ.ಎಂ.ಟಿ. ಲಕ್ಷ್ಮೀಪತಿ ಮಾಹಿತಿ ನೀಡಿದರು.
The Bioluminescence Blue water-light which is making Beaches turn radiant blue is not a good sign states Senthil Vel A to Headline Karnataka. This is a sign of Global Warming conditions.
03-07-25 05:24 pm
Bangalore Correspondent
Rain kadaba, Sullia, Mangalore: ಕಡಬ, ಸುಳ್ಯದಲ್...
03-07-25 10:54 am
Tumakuru, Fathers Jail, Traffic, Bike: ತುಮಕೂರ...
03-07-25 10:52 am
Dk Shivakumar, CM Siddaramaiah: ನನ್ನ ಹೆಸ್ರು ಹ...
02-07-25 11:02 pm
Vikas Kumar IPS, CAT: ವಿಕಾಸ್ ಕುಮಾರ್ ಅಮಾನತು ರದ...
02-07-25 10:47 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
03-07-25 10:50 pm
Mangalore Correspondent
ರಹಿಮಾನ್ ಕೊಲೆ ಪ್ರಕರಣ ; ಅನುಮತಿ ನಿರಾಕರಿಸಿದ್ದರೂ ಬ...
03-07-25 10:39 pm
Mangalore Police, New Rules, Festival; ಮೊಸರು...
03-07-25 03:43 pm
Mangalore, Heart Attack Spike: ದಕ್ಷಿಣ ಕನ್ನಡ ಜ...
03-07-25 02:33 pm
Mangalore Police, Task Force: ಕೋಮು ಗಲಭೆ ನಿಗ್ರ...
03-07-25 10:50 am
03-07-25 11:03 pm
Mangalore Correspondent
ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ; ಸಿಸಿಬಿ ಪೊಲೀಸರ...
03-07-25 08:38 pm
ಮಹಾದೇವ್ ಬೆಟ್ಟಿಂಗ್ ಹಗರಣ ; ಮೋಸ್ಟ್ ವಾಂಟೆಡ್ ಆರೋಪಿ...
03-07-25 07:09 pm
Infosys Employee, Video Recording, Crime: ಇನ್...
02-07-25 10:15 pm
Massive Scam, Mangalore City Corporation, Fak...
02-07-25 12:24 pm