ಬ್ರೇಕಿಂಗ್ ನ್ಯೂಸ್
02-01-24 10:17 pm Mangalore Correspondent ಕರಾವಳಿ
ಮಂಗಳೂರು, ಜ.2: ಕೈಕಂಬ ಬಳಿಯ ಪೊಳಲಿ ದ್ವಾರದ ಬಳಿ ಖಾಸಗಿ ಬಸ್ಸೊಂದು ಬ್ರೇಕ್ ಫೇಲ್ ಆಗಿ ಪಲ್ಟಿಯಾದ ಘಟನೆ ಮಂಗಳವಾರ ಸಂಜೆ ನಡೆದಿದ್ದು ಬಸ್ಸಿನಲ್ಲಿದ್ದ ಹಲವರು ಗಾಯಗೊಂಡಿದ್ದಾರೆ.
ಖಾಸಗಿ ಬಸ್ ಕಿನ್ನಿಗೋಳಿಯಿಂದ ಕೈಕಂಬ, ಪೊಳಲಿ ದ್ವಾರದ ಮೂಲಕ ಬಿಸಿ ರೋಡಿಗೆ ತೆರಳುತ್ತಿದ್ದಾಗ ಸಂಜೆ 6.30ರ ಸುಮಾರಿಗೆ ಘಟನೆ ನಡೆದಿದೆ. ದ್ವಾರದ ಬಳಿಯಲ್ಲೇ ಇಳಿಜಾರಿನಲ್ಲಿ ಬ್ರೇಕ್ ಫೇಲ್ ಆಗಿದೆ ಎನ್ನಲಾಗುತ್ತಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಹೊಂಡಕ್ಕೆ ಬೀಳುವುದು ತಪ್ಪಿದೆ. ರಸ್ತೆಯ ಬಲಬದಿಗೆ ಬಸ್ ಒರಗಿ ಬಿದ್ದಿದ್ದು ಬಸ್ಸಿನಲ್ಲಿ 30ರಿಂದ 40 ರಷ್ಟು ಪ್ರಯಾಣಿಕರು ಇದ್ದರು. ಹೀಗಾಗಿ ಕೆಲವರು ಗಾಯಗೊಂಡಿದ್ದು ಮಂಗಳೂರು ಸೇರಿದಂತೆ ಆಸುಪಾಸಿನ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.

ಪೊಳಲಿ ದ್ವಾರದ ಬಳಿಕ ಬಸ್ ಅಡ್ಡೂರಿನತ್ತ ಚಲಿಸುತ್ತಿದ್ದರೆ ಎಡಬದಿಯಲ್ಲಿ ಬೃಹತ್ ಪ್ರಪಾತ ಇದ್ದು ಅಲ್ಲಿ ಬ್ರೇಕ್ ಫೇಲ್ ಆಗುತ್ತಿದ್ದರೆ ದೊಡ್ಡ ದುರಂತ ಆಗಬಹುದಿತ್ತು. ಆದರೆ ದ್ವಾರ ದಾಟಿದ ಕೂಡಲೇ ಬ್ರೇಕ್ ಫೇಲ್ ಆಗಿದ್ದು ಚಾಲಕ ಸಮಯ ಪ್ರಜ್ಞೆಯಿಂದ ಬಲ ಬದಿಗೆ ಒಯ್ದು ಬಸ್ಸನ್ನು ನಿಧಾನಕ್ಕೆ ಪಲ್ಟಿಯಾಗುವಂತೆ ಮಾಡಿದ್ದಾರೆ. ಬಜ್ಪೆ ಪೊಲೀಸರು ಸ್ಥಳದಲ್ಲಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ.
Brake faile city bus topples at Polali in Mangalore, Five injured.
12-11-25 09:03 pm
Bangalore Correspondent
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
12-11-25 06:56 pm
Mangalore Correspondent
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm