ಬ್ರೇಕಿಂಗ್ ನ್ಯೂಸ್
13-12-23 10:42 pm Mangalore Correspondent ಕರಾವಳಿ
ಮಂಗಳೂರು, ಡಿ.13: ಶಬರಿಮಲೆಯಲ್ಲಿ ಈ ಬಾರಿ ಮಂಡಲ ಪೂಜೆಯ ಸಂದರ್ಭದಲ್ಲಿಯೇ ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರಿದ್ದಾರೆ. ಹೀಗಾಗಿ ಶಬರಿಮಲೆಗೆ ತೆರಳುವ ಪಂಪಾ ನದಿಯ ತೀರದಲ್ಲೇ ಭಕ್ತರಿಗೆ ಪ್ರವೇಶಕ್ಕೆ ತೊಡಕಾಗಿದ್ದು, ಮಂಗಳವಾರ ಭಕ್ತರು ದಿಢೀರ್ ಆಗಿ ಪೊಲೀಸರ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದಾರೆ.
ಆಂಧ್ರಪ್ರದೇಶ, ತಮಿಳುನಾಡು ಭಾಗದ ಭಕ್ತರು ಹೆಚ್ಚಿದ್ದರಿಂದ ಭಕ್ತರನ್ನು ಸರಾಗವಾಗಿ ಹೋಗಲು ಬಿಡದೆ ಅಲ್ಲಲ್ಲಿ ಕೂಡಿ ಹಾಕಲಾಗಿತ್ತು. ಎರುಮೇಲಿ ಬೆಟ್ಟದಲ್ಲಿ ತಿರುಪತಿಯಲ್ಲಿ ಹಾಲ್ಗಳಲ್ಲಿ ಕೂಡಿ ಹಾಕುವಂತೆ ಅಲ್ಲಲ್ಲಿ ಭಕ್ತರನ್ನು ಗಂಟೆಗಳ ಕಾಲ ಕೂಡಿ ಹಾಕುತ್ತಿದ್ದರು. ಇದರಿಂದ ಸನ್ನಿಧಾನ ತಲುಪಲು ತುಂಬ ಪ್ರಯಾಸ ಪಡಬೇಕಾಯಿತು ಎಂದು ಸಿದ್ಧಕಟ್ಟೆಯಿಂದ ರೈಲಿನಲ್ಲಿ ಶಬರಿಮಲೆಗೆ ಹೋಗಿ ಬಂದ ಗೋಪಾಲ್ ತಿಳಿಸಿದ್ದಾರೆ.
ನಾವು ಈ ಸಲ 14 ವರ್ಷ ಶಬರಿಮಲೆಗೆ ಹೋಗಿದ್ದೆವು. ಪ್ರತಿ ವರ್ಷ ಮಾಲೆ ಹೋಗಿ ಹೋಗುತ್ತಿದ್ದರೂ, ಈ ಬಾರಿಯಷ್ಟು ಜನರನ್ನು ಮಂಡಲದ ಸಂದರ್ಭದಲ್ಲಿ ನೋಡಿರಲಿಲ್ಲ. ಯಾವಾಗಲೂ ಮಕರ ಬೆಳಕು ಸಂದರ್ಭದಲ್ಲಿ ಹೋಗುತ್ತಿದ್ದೆವು. ಈ ಬಾರಿ ಮಂಡಲ ಪೂಜೆಗೆ ಹೋಗಿದ್ದೆವು. ಸೋಮವಾರ, ಮಂಗಳವಾರ ಭಾರೀ ರಶ್ ಇತ್ತು. ಹೆಚ್ಚಿನ ಭಕ್ತರು ಆಂಧ್ರ ಮತ್ತು ತಮಿಳುನಾಡಿನವರೇ ಇದ್ದರು. ಅಲ್ಲಲ್ಲಿ ಕೂಡಿ ಹಾಕಿ ಹೋಗಲು ಬಿಡುತ್ತಿದ್ದುದೇ ಸಮಸ್ಯೆ ಆಗಿತ್ತು. ಆ ರೀತಿ ಯಾಕೆ ಮಾಡುತ್ತಿದ್ದರು ಗೊತ್ತಾಗಲ್ಲ. ಈ ಹಿಂದೆಯೂ ಮಕರದ ವೇಳೆ ಇಷ್ಟೇ ಜನರು ಸೇರುತ್ತಿದ್ದರು. ತೊಂದರೆ ಏನೂ ಆಗುತ್ತಿರಲಿಲ್ಲ ಎಂದು ಸಿದ್ಧಕಟ್ಟೆಯಿಂದ ಮಲೆಗೆ ತೆರಳಿರುವ ಸಂತೋಷ್ ಹೇಳುತ್ತಾರೆ.
ಮಲಯಾಳಂ ಮನೋರಮಾ ವರದಿ ಪ್ರಕಾರ, ಕೇರಳ, ತಮಿಳುನಾಡು, ಆಂಧ್ರ ಭಾಗದ ಭಕ್ತರು ಹೆಚ್ಚಿದ್ದರು. ಎರುಮೇಲಿ, ಪಂಪಾದಲ್ಲಿಯೇ ಪೊಲೀಸರು ಅಡ್ಡ ಹಾಕಿದ್ದರಿಂದ ರಶ್ ಆಗಿ ಹೆಚ್ಚಿನ ಜನ ಅಲ್ಲಿಂದಲೇ ಹಿಂತಿರುಗಿದ್ದಾರೆ. ನೂರಾರು ಮಂದಿಯನ್ನು ಏಟ್ಟುಮಾನೂರು ದೇವಸ್ಥಾನ ಬಳಿ ನಿಲ್ಲಿಸಲಾಗಿತ್ತು. ಒಂದು ದಿನ ಕಾದರೂ ಪಂಪೆಗೆ ಹೋಗಲು ಬಿಡದೇ ಇದ್ದುದರಿಂದ ಸಿಟ್ಟಾದ ಭಕ್ತರು ನಿರಾಸೆಗೊಂಡು ಅಲ್ಲಿಂದಲೇ ಮಾಲೆ ತೆಗೆದು ನಿರ್ಗಮಿಸಿದ್ದಾರೆ. ಶಬರಿಮಲೆಯಲ್ಲಿ ಅವ್ಯವಸ್ಥೆ, ಸಮಸ್ಯೆ ಆಗಿರುವ ಬಗ್ಗೆ ರಾಜ್ಯಪಾಲ ಮೊಹಮ್ಮದ್ ಆರಿಫ್ ಖಾನ್ ಪ್ರತಿಕ್ರಿಯಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸಬೇಕುಯ ಯಾರಿಂದ ಈ ಸಮಸ್ಯೆ ಆಗಿದೆ ಎನ್ನುವುದನ್ನು ಪತ್ತೆ ಮಾಡಬೇಕು ಎಂದಿದ್ದಾರೆ.
A large number of devotees gathered at Sabarimala during the Mandala Pooja this year. On Tuesday, devotees staged a protest against the police on the banks of the Pampa river, which leads to Sabarimala.
27-06-26 04:21 pm
HK News Staffer
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಕಳ್ಳಾಟ ! 19 ಸಾವಿರ...
24-06-26 05:55 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
27-06-26 04:23 pm
HK News Staffer
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am
Mangalore, Police, criminial escapes: ಪಾಂಡೇಶ್...
27-06-26 10:54 am
Mumbai Train Murder, Mangalore: ಮುಂಬೈ ಲೋಕಲ್ ಟ...
26-06-26 07:35 pm