ಬ್ರೇಕಿಂಗ್ ನ್ಯೂಸ್
02-11-20 05:50 pm Mangalore Correspondent ಕರಾವಳಿ
ಮಂಗಳೂರು, ನವೆಂಬರ್ 02: ಕೊಲ್ಲಿ ರಾಷ್ಟ್ರಗಳನ್ನು ಅವಲಂಬಿಸಿರುವ ಇಂಧನ ಬಳಕೆಯನ್ನು ಕಡಿಮೆಗೊಳಿಸಿ ಬಯೋ ಡೀಸೆಲ್ ಉತ್ಪಾದನೆಗೆ ಒತ್ತು ಕೊಡಬೇಕೆಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಅಮೆರಿಕ, ಇಂಗ್ಲೆಂಡ್, ಜರ್ಮನಿಯಂತಹ ದೇಶಗಳು ಸಾಕಷ್ಟು ಸಂಶೋಧನೆ ನಡೆಸಿದ್ದರೂ, ಭಾರತದಲ್ಲಿ ಈ ಕುರಿತು ಹೆಚ್ಚು ಸಂಶೋಧನೆ ನಡೆದಿಲ್ಲ. ಇಂಥದ್ರಲ್ಲಿ, ಕರಾವಳಿಯ ಹಳ್ಳಿಗಾಡಿನ ಸಾಧಕರೊಬ್ಬರು ಬಯೋ ಡೀಸೆಲ್ ಉತ್ಪಾದಿಸಿ ದೇಶಕ್ಕೆ ಸ್ವಾವಲಂಬನೆಯ ಪಾಠ ಹೇಳಿದ್ದಾರೆ.
ಅದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಅಳಕೆಮಜಲು ಎಂಬಲ್ಲಿರುವ ಬಯೋ ಡೀಸೆಲ್ ಪಂಪ್. ಸುಳ್ಯ ತಾಲೂಕಿನ ಚೊಕ್ಕಾಡಿ ಗ್ರಾಮದ ನಿವಾಸಿ ಕೇಶವಮೂರ್ತಿ ಸ್ಥಾಪಿಸಿರುವ ಈ ಡೀಸೆಲ್ ಪಂಪ್ ವಿಭಿನ್ನವಾದ್ದು. ಅಂದರೆ, ಈ ಪಂಪ್ ನಲ್ಲಿ ಯಾವುದೇ ಇತರೇ ಕಂಪೆನಿಗಳ ಪೆಟ್ರೋಲ್, ಡೀಸೆಲ್ ಅನ್ನು ಮಾರಾಟ ಮಾಡಲ್ಲ. ಕೇಶವಮೂರ್ತಿ ತಮ್ಮದೇ ಫ್ಯಾಕ್ಟರಿಯಲ್ಲಿ ತರಕಾರಿ ತ್ಯಾಜ್ಯಗಳಿಂದ ಉತ್ಪಾದಿಸಿದ ಬಯೋ ಡೀಸೆಲನ್ನು ಮಾರಾಟ ಮಾಡುತ್ತಾರೆ.
ಸೋಯಾಬೀನ್, ಜೋಳ ಹಾಗೂ ಜತ್ರೋಪ ಗಿಡಗಳ ಬೀಜಗಳನ್ನು ಎಣ್ಣೆ ತಯಾರಿಕೆ ಬಳಸಲಾಗುತ್ತದೆ. ಹೀಗೆ ಎಣ್ಣೆಗೆ ಬಳಸಿದ ಬಳಿಕ ಉಳಿಯುವ ತ್ಯಾಜ್ಯಗಳನ್ನು ಬಳಸ್ಕೊಂಡು ಡೀಸೆಲ್ ತಯಾರಿಸುತ್ತೇವೆ. ನೋಡಲು ಜ್ಯೂಸ್ ತರ ಕಾಣುವ ಈ ಡೀಸೆಲ್ ಗೆ ಬೆಂಕಿ ಹತ್ತಿಕೊಳ್ಳಲ್ಲ. ಇದರಲ್ಲಿ ಗಂಧಕದ ಅಂಶ ಇರದ ಕಾರಣ ಬೆಂಕಿ ಹಾಕಿದರೂ ಉರಿಯುವುದಿಲ್ಲ ಎನ್ನುತ್ತಾ ಕೇಶವಮೂರ್ತಿ ಪ್ರಾತ್ಯಕ್ಷಿಕೆ ತೋರಿಸುತ್ತಾರೆ.
ಇಂಗ್ಲೆಂಡ್ ನಲ್ಲಿ ಐಟಿ ಕನ್ಸಲ್ಟೆಂಟ್ ಆಗಿ ಉದ್ಯೋಗದಲ್ಲಿದ್ದ ಕೇಶವ ಮೂರ್ತಿ, ಎರಡು ವರ್ಷಗಳ ಹಿಂದಷ್ಟೇ ತಾಯ್ನಾಡಿಗೆ ಬಂದು ಸ್ವೋದ್ಯೋಗದಲ್ಲಿ ತೊಡಗಿದ್ದಾರೆ. ವಿದೇಶದಲ್ಲಿ ಪ್ರಚಲಿತದಲ್ಲಿರುವ ಬಯೋ ಡೀಸೆಲ್ ಇಲ್ಲಿ ಯಾಕೆ ಮಾಡಬಾರದು ಎಂದು ಪ್ರಯತ್ನಿಸಿ ಯಶಸ್ಸು ಕಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸೋಯಾ, ಜತ್ರೋಪಾ, ಜೋಳ ಪೂರೈಕೆ ಇರುವುದರಿಂದ ಹುಬ್ಬಳ್ಳಿಯಲ್ಲಿ ಫ್ಯಾಕ್ಟರಿ ಸ್ಥಾಪಿಸಿದ್ದಾರೆ. ಸದ್ಯಕ್ಕೆ ವಿಟ್ಲದಲ್ಲಿ ಪಂಪ್ ಆರಂಭಿಸಿದ್ದು, ಮುಂದಕ್ಕೆ ಕುಮಟಾ ಮತ್ತು ತುಮಕೂರಿನಲ್ಲಿ ಆರಂಭಿಸುವ ಚಿಂತನೆ ಇದೆ ಎನ್ನುತ್ತಾರೆ. ಇತರೇ ಡೀಸೆಲಿನಿಂದ ಲೀಟರಿಗೆ ಎರಡು ರೂ. ಕಡಿಮೆ ಬೆಲೆ ಇರುವ ಈ ಬಯೋಡೀಸೆಲ್ ಬಳಕೆಯಿಂದ ವಾಹನದಲ್ಲಿ ಮೈಲೇಜ್ ಕೂಡ ಜಾಸ್ತಿ ಇದೆಯಂತೆ. ಹೀಗಾಗಿ ಕೇರಳ, ಮಂಗಳೂರಿನಿಂದ ದೂರಕ್ಕೆ ತೆರಳುವ ಮಂದಿ ಇಲ್ಲಿಯೇ ಡೀಸೆಲ್ ತುಂಬಿಕೊಂಡು ಹೋಗುತ್ತಾರೆ.
ಬಯೋ ಡೀಸೆಲ್ ಬಳಕೆಯಿಂದ ಇಂಜಿನ್ ತುಂಬ ಮೃದುವಾಗುತ್ತಿದೆ. ಸೌಂಡ್ ಬರುವುದಿಲ್ಲ ಎನ್ನುವ ಗ್ರಾಹಕರು ಕೇಶವಮೂರ್ತಿ ಪ್ರಯತ್ನಕ್ಕೆ ಶಹಭಾಷ್ ಹೇಳುತ್ತಾರೆ. ಅಲ್ಲದೆ, ರೈತರು ಬೆಳೆಯೋ ಉತ್ಪನ್ನಗಳಿಂದಲೇ ಡೀಸೆಲ್ ತಯಾರಿಸುವುದರಿಂದ ಇದಕ್ಕೆ ಸರಕಾರವೂ ಪ್ರೋತ್ಸಾಹ ನೀಡಬೇಕು ಎನ್ನುತ್ತಾರೆ. ಅಂದಹಾಗೆ, ದೇಶದಲ್ಲಿ ಸದ್ಯಕ್ಕೆ ಕೇವಲ ನಾಲ್ಕು ಬಯೋ ಡೀಸೆಲ್ ಬಂಕ್ಗಳು ಮಾತ್ರ ಇವೆ. ನಾಲ್ಕರಲ್ಲಿ ಒಂದು ಗುಜರಾತ್ ನಲ್ಲಿದ್ದರೆ, ಉಳಿದ ಮೂರು ಕರ್ನಾಟಕದಲ್ಲಿವೆ. ಇಂಧನ ಸ್ವಾವಲಂಬನೆ ದೃಷ್ಟಿಯಿಂದ ಬಯೋ ಡೀಸೆಲ್ ಉತ್ಪಾದನೆ ಅತ್ಯಂತ ಅವಶ್ಯವಾಗಿದೆ.
Video:
State’s First Soya & Corn oil manure made Bio-Diesel fuel pump in Vitla, Mangalore by Jaychandra has created a new upliftment in the field of the fuel industry.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm