ಬ್ರೇಕಿಂಗ್ ನ್ಯೂಸ್
02-11-20 04:14 pm Mangalore Correspondent ಕರಾವಳಿ
ಮಂಗಳೂರು, ನವೆಂಬರ್ 02: ಮಂಗಳೂರಿನ ಲೇಡಿಗೋಷನ್ ಹೆರಿಗೆ ಆಸ್ಪತ್ರೆ ಬ್ರಿಟಿಷರ ಕಾಲದಿಂದಲೂ ಬಡವರ ಪಾಲಿನ ಕಾಮಧೇನು. ಬಡ ಹೆಣ್ಣು ಮಕ್ಕಳ ಹೆರಿಗೆ ಹೆಚ್ಚಾಗಿ ಇಲ್ಲೇ ಆಗುತ್ತಿರುವುದರಿಂದ ಆಸುಪಾಸಿನ ಐದಾರು ಜಿಲ್ಲೆಗಳಲ್ಲಿ ಲೇಡಿಗೋಷನ್ ಹೆಸರು ಫೇಮಸ್. ಈ ಬಾರಿಯ ಅಕ್ಟೋಬರ್ ನಲ್ಲಿ ಮಾತ್ರ ಅತಿ ಹೆಚ್ಚು ಹೆರಿಗೆಯಾಗುವ ಮೂಲಕ ಲೇಡಿಗೋಷನ್ ಆಸ್ಪತ್ರೆ 167 ವರ್ಷಗಳ ಸುದೀರ್ಘ ಇತಿಹಾಸದಲ್ಲೇ ಹೊಸ ದಾಖಲೆಗೆ ಸಾಕ್ಷಿಯಾಗಿದೆ. ಅಕ್ಟೋಬರ್ ತಿಂಗಳಲ್ಲಿ 800 ಕ್ಕೂ ಹೆಚ್ಚು ಹೆರಿಗೆ ಆಗಿದ್ದು ಲೇಡಿಗೋಷನ್ ದಾಖಲೆ ಪುಟ ಸೇರಿದೆ.
ದಿನದಲ್ಲಿ ನಾಲ್ಕೈದು ಮಂದಿ ಕೋವಿಡ್ ಪಾಸಿಟಿವ್ ಗರ್ಭಿಣಿಯರು ಆಸ್ಪತ್ರೆಗೆ ದಾಖಲಾದರೂ ಯಾವುದೇ ತೊಂದರೆ ಇಲ್ಲದೆ ಸರಕಾರಿ ಆಸ್ಪತ್ರೆ ಒಂದರಲ್ಲಿ ಅತಿ ಹೆಚ್ಚು ಹೆರಿಗೆ ಆಗಿರುವುದು ವಿಶೇಷ. ವೈದ್ಯರ ಪ್ರಕಾರ, ಈ ಬಾರಿ ಕೊರೊನಾ ಕಾರಣದಿಂದ ಇತರೇ ಖಾಸಗಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರನ್ನು ಅಡ್ಮಿಶನ್ ಮಾಡಿಕೊಳ್ಳುತ್ತಿರಲಿಲ್ಲ. ಹೀಗಾಗಿ ಲೇಡಿಗೋಷನ್ನಲ್ಲಿ ಹೊಸತಾಗಿ ತೆರೆದಿದ್ದ ಕೋವಿಡ್ ಹೆರಿಗೆ ಬ್ಲಾಕ್ ಗೆ ಹೆಚ್ಚು ಮಂದಿ ಬರುತ್ತಿದ್ದರು. ಕೋವಿಡ್ ಸೋಂಕಿತ ಗರ್ಭಿಣಿಯರನ್ನು ಅಲ್ಲಿ ಪ್ರತ್ಯೇಕವಾಗಿ ನೋಡಿಕೊಳ್ಳುವ ವ್ಯವಸ್ಥೆ ಇದ್ದುದರಿಂದ ಹೆರಿಗೆ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ದುರ್ಗಾಪ್ರಸಾದ್ ಎಂ.ಆರ್., ಆಸ್ಪತ್ರೆಯ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು. ನಮ್ಮ ಆಸ್ಪತ್ರೆ ಕೆಎಂಸಿ ಆಸ್ಪತ್ರೆಯ ಸಹಭಾಗಿತ್ವದಲ್ಲಿ ನಡೆಯುತ್ತಿದ್ದು, ಸದ್ಯ 32 ಗೈನಕಾಲಜಿಸ್ಟ್ ಗಳಿದ್ದು ಆಸ್ಪತ್ರೆಯಲ್ಲಿ ನಾಲ್ಕು ಶಿಫ್ಟ್ ಗಳಲ್ಲಿ ಕೆಲಸ ಮಾಡುತ್ತಾರೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ, ಕೊಡಗು ಮತ್ತು ಕೇರಳದ ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಯಿಂದ ಜನರು ಲೇಡಿಗೋಷನ್ ಗೆ ಬರುತ್ತಾರೆ. ಎಲ್ಲ ರೀತಿಯ ಆಧುನಿಕ ತಂತ್ರಜ್ಞಾನಗಳು ಆಸ್ಪತ್ರೆಯಲ್ಲಿದ್ದು, ಯಾವುದೇ ಕ್ರಿಟಿಕಲ್ ಕಂಡಿಶನ್ ಇದ್ದರೂ ಬೇರೆ ಕಡೆಗೆ ರೆಫರ್ ಮಾಡುವುದಿಲ್ಲ. ನಮ್ಮಲ್ಲೇ ಸೌಲಭ್ಯಗಳು ಇರುವುದರಿಂದ ನಾವೇ ಬೇಕಾದ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಲೇಡಿಗೋಷನ್ನಲ್ಲೂ ಆರಂಭದಲ್ಲಿ ವೆನ್ಲಾಕ್ ಅಡಿ ಕೋವಿಡ್ ಬ್ಲಾಕ್ ಮಾಡಲಾಗಿತ್ತು. ಆನಂತ್ರ ನಮ್ಮಲ್ಲಿ ವಿಶೇಷ ರೀತಿಯ ಸೌಲಭ್ಯಗಳ ಜೊತೆ ಸೆ.13ರಂದು ಕೋವಿಡ್ ಮೆಟರ್ನಿಟಿ ಬ್ಲಾಕ್ ಆರಂಭಿಸಲಾಗಿತ್ತು. ಇದರಲ್ಲಿ 23 ಬೆಡ್ ಗಳನ್ನು ಕೋವಿಡ್ ಪಾಸಿಟಿವ್ ಆದವರಿಗೆಂದೇ ಪ್ರತ್ಯೇಕ ಇಡಲಾಗಿದೆ. ಆರಂಭದಲ್ಲಿ ದಿನವೂ 4-5 ಪಾಸಿಟಿವ್ ಕೇಸುಗಳು ಬರುತ್ತಿದ್ದವು. ಈಗ ಅದರ ಸಂಖ್ಯೆ ಕಡಿಮೆಯಾಗಿದ್ದು ಒಂದೆರಡು ಮಾತ್ರ ಪಾಸಿಟಿವ್ ಕೇಸು ಬರುತ್ತಿದೆ.
ಕೋವಿಡ್ ಸೋಂಕಿತ ಗರ್ಭಿಣಿಯರನ್ನು ಮತ್ತು ಕೋವಿಡ್ ರಹಿತರನ್ನು ಒಂದೇ ಕಡೆ ಇರಿಸುವುದಿಲ್ಲ. ಅವರಿಗೆ ಪ್ರತ್ಯೇಕವಾಗಿ ಹೆರಿಗೆ ಕೇಂದ್ರ ಮತ್ತು ಆಪರೇಶನ್ ಥಿಯೇಟರ್ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ನಾಲ್ಕೈದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತರಿಗೆ ನಮ್ಮ ಆಸ್ಪತ್ರೆಯನ್ನೇ ರೆಫರ್ ಮಾಡಲಾಗುತ್ತಿದೆ. ಇದರಿಂದಾಗಿ ಹೆರಿಗೆ ಸಂಖ್ಯೆ ಒಮ್ಮೆಲೇ ಜಾಸ್ತಿ ಆಗಿದೆ ಎಂದು ದುರ್ಗಾಪ್ರಸಾದ್ ಹೇಳಿದ್ದಾರೆ.
ಎಂಆರ್ ಪಿಎಲ್ ಮತ್ತು ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಲೇಡಿಗೋಷನ್ ಆಸ್ಪತ್ರೆಗೆ ಹೊಸ ಕಟ್ಟಡ ಮಾಡಲಾಗಿದ್ದು ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳನ್ನು ಒದಗಿಸಲಾಗಿದೆ. ಒಂದು ವರ್ಷದ ಹಿಂದಷ್ಟೇ ಹೊಸ ಕಟ್ಟಡವನ್ನು ಆಸ್ಪತ್ರೆಗೆ ಒದಗಿಸಲಾಗಿತ್ತು.
Video:
The Mangalore Government Lady Goschen Hospital, which was observing an average of 400-450 deliveries a month, created a record of its own in October. While the 167-year-old government hospital crossed 800 deliveries in October.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
05-07-25 11:04 pm
HK News Desk
Puttur News, Girl Pregnant, Father Arrest: ಸಹ...
05-07-25 09:06 pm
Puttur, Pregnant, Arrest, Jagannivasa Rao: ಸಹ...
05-07-25 01:20 pm
Bangalore Murder, Crime, Wife: ಲಕ್ಷ ಲಕ್ಷ ಸಂಬಳ...
04-07-25 08:56 pm
Praveen Nettaru, NIA Arrest, Abdul Rahiman; ಪ...
04-07-25 06:21 pm