ಬ್ರೇಕಿಂಗ್ ನ್ಯೂಸ್
29-10-20 01:53 pm Mangaluru Correspondant ಕರಾವಳಿ
ಪುತ್ತೂರು, ಅಕ್ಟೋಬರ್ 29: ಖಾಸಗಿ ಆಸ್ಪತ್ರೆಯಲ್ಲಿ ರೆಸೆಪ್ಷನಿಸ್ಟ್ ಆಗಿದ್ದ ಯುವತಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನ ಸಂಪ್ಯದಲ್ಲಿ ನಡೆದಿದೆ. ಸಂಪಾಜೆ ಗ್ರಾಮದ ಬಂಗ್ಲೆಗುಡ್ಡೆ ಬಾಲಕೃಷ್ಣ ಗೌಡ ಎಂಬವರ ಪುತ್ರಿ ಮಧುಶ್ರೀ(26) ಕೆರೆಗೆ ಹಾರಿ ಸಾವಿಗೆ ಶರಣಾದ ಯುವತಿ.
ಸಾವಿಗೂ ಮುನ್ನ ಡೆತ್ ನೋಟ್ ಬರೆದಿದ್ದು , ವಿವಾಹಿತನಾಗಿರುವ ಮಾಜಿ ಪ್ರಿಯಕರ ನೀಡುತ್ತಿದ್ದ ಮಾನಸಿಕ ಕಿರುಕುಳ ಹಾಗೂ ಜೀವ ಬೆದರಿಕೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಡೈರಿಯಲ್ಲಿ ಬರೆದುಕೊಂಡಿದ್ದಾಳೆ. ಈ ಬಗ್ಗೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ನಾಲ್ಕು ವರ್ಷದಿಂದ ಪುತ್ತೂರಿನ ಖಾಸಗಿ ಅಸ್ಪತ್ರೆ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮಧುಶ್ರೀ ರಾತ್ರಿ ಆಸ್ಪತ್ರೆಯ ಹಾಸ್ಟೆಲ್ ನಲ್ಲಿ ತಂಗುತ್ತಿದ್ದರು. ರಜಾ ದಿನಗಳಲ್ಲಿ ಹೆಚ್ಚಾಗಿ ಅಜ್ಜಿ ಮನೆಗೆ ಬರುತ್ತಿದ್ದರು. ನಿನ್ನೆ ಮಧ್ಯಾಹ್ನ ಸಂಪ್ಯದ ಕೊಲ್ಯದಲ್ಲಿರುವ ತನ್ನ ಅಜ್ಜಿ ಮನೆಗೆ ಬಂದಿದ್ದ ಆಕೆ ಊಟದ ಬಳಿಕ ತೋಟಕ್ಕೆ ಹೋಗಿ, ಕೆರೆಗೆ ಹಾರಿದ್ದಾರೆ ಎಂದು ತಿಳಿದುಬಂದಿದೆ.
ಮಾಜಿ ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ
ತನ್ನ ಸಾವಿಗೆ ದೇವಿಕಿರಣ್ ಎಂಬಾತ ನೀಡುತ್ತಿದ್ದ ಕಿರುಕುಳ ಕಾರಣ ಎಂದು ಮಧುಶ್ರೀ ತನ್ನ ಡೈರಿಯಲ್ಲಿ ಬರೆದಿದ್ದಾರೆ. ಸಂಪಾಜೆಯ ದೇವಿಕಿರಣ್ ಮತ್ತು ನಾನು ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಆದರೆ ಕಳೆದ ಜೂನ್ ನಲ್ಲಿ ಆತನಿಗೆ ಬೇರೆ ಯುವತಿಯೊಂದಿಗೆ ವಿವಾಹವಾಗಿತ್ತು. ಹೀಗಿದ್ದರೂ ಆತ ನನ್ನ ಜೊತೆ ಸಂಪರ್ಕದಲ್ಲಿದ್ದ. ನನಗೆ ಬೇರೆಯವರನ್ನು ಮದುವೆಯಾಗದ್ದಂತೆ ಒತ್ತಾಯ ಮಾಡುತ್ತಿದ್ದ. ಮದುವೆಗೆ ಪ್ರಯತ್ನಿಸಿದರೆ ಸಂಬಂಧ ಇದೆ ಎಂದು ಯುವಕನಿಗೆ ತಿಳಿಸಿ ಮದುವೆ ತಪ್ಪಿಸುವುದಾಗಿ ಬೆದರಿಸಿದ್ದಾನೆ. ಅಲ್ಲದೇ ಬೇರೆ ಮದುವೆಯಾದರೆ ಕೊಲೆ ಮಾಡುವ ಬೆದರಿಕೆ ಹಾಕುತ್ತಿದ್ದ ಎಂದು ಆಕೆ ಡೈರಿಯಲ್ಲಿ ಬರೆದುಕೊಂಡಿದ್ದಾರೆ.
ಮಧುಶ್ರೀ ಆತ್ಮಹತ್ಯೆಗೆ ದೇವಿಚರಣ್ ಕಿರುಕುಳವೇ ಕಾರಣ ಎಂದು ಮಧುಶ್ರೀಯವರ ಮಾವ ವಿಠಲ್ ಗೌಡ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
In a shocking incident a woman has committed suicide by jumping to lake in puttur after continuous threats and harrsment by Ex- Boyfriend. Sampya police have registered the case.
16-06-26 12:26 pm
HK News Staffer
ಧರ್ಮಸ್ಥಳದ ಬುರುಡೆ ಕೇಸಿಗೆ ಬಿಗ್ ಟ್ವಿಸ್ಟ್ ; ಎಸ್ಐಟ...
12-06-26 12:02 pm
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
16-06-26 11:35 am
HK News Staffer
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
16-06-26 08:32 pm
HK News Staffer
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm
ಉಳ್ಳಾಲ ; ಸ್ನಾನಕ್ಕೆಂದು ಕೋಣೆಗೆ ತೆರಳಿದ್ದ ಪಿಯುಸಿ...
16-06-26 10:33 am
ಮಕ್ಕಳ ಕಣ್ಣೆದುರೇ ತಾಯಿಯ ಬರ್ಬರ ಹತ್ಯೆ! ಬೆಟ್ಟಿಂಗ್...
15-06-26 09:21 pm