ಬ್ರೇಕಿಂಗ್ ನ್ಯೂಸ್
28-10-20 10:22 pm Udupi Correspondent ಕರಾವಳಿ
ಉಡುಪಿ, ಅಕ್ಟೋಬರ್ 28: ಉಡುಪಿ ಜಿಲ್ಲೆಯಲ್ಲಿ ಮಾದಕ ವಸ್ತು ವಿರೋಧಿ ಅಭಿಯಾನದ ಅಂಗವಾಗಿ ಹಳೆ ಆರೋಪಿಗಳನ್ನು ಕರೆಸಿ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಪರೇಡ್ ನಡೆಸಲಾಯಿತು.
ಇತ್ತೀಚೆಗೆ ಮಣಿಪಾಲದಲ್ಲಿ ಡ್ರಗ್ಸ್ ಮಾರಾಟಕ್ಕೆ ಯತ್ನಿಸುತಿದ್ದ ಇಬ್ಬರನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾದಕ ವಸ್ತುಗಳ ಆರೋಪಿಗಳನ್ನು ಕರೆಸಿ ವಾರ್ನ್ ಮಾಡಲಾಗಿದೆ.
ಬೈಂದೂರು ಠಾಣೆ ವ್ಯಾಪ್ತಿಯ 2, ಕುಂದಾಪುರ ಠಾಣಾ ವ್ಯಾಪ್ತಿಯ 18, ಕುಂದಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯ 4, ಕೋಟಾ ಠಾಣಾ ವ್ಯಾಪ್ತಿಯ 2, ಉಡುಪಿ ನಗರ ಠಾಣೆಯ 12, ಮಲ್ಪೆ ಠಾಣೆ 5, ಮಣಿಪಾಲ ಠಾಣೆ 16, ಸೈಬರ್ ಠಾಣೆಯ ಇಬ್ಬರು, ಕಾರ್ಕಳ ನಗರ ಠಾಣಾ ವ್ಯಾಪ್ತಿ 2, ಪಡುಬಿದ್ರಿ ಠಾಣಾ ವ್ಯಾಪ್ತಿಯ ೫, ಕಾಪು ಠಾಣಾ ವ್ಯಾಪ್ತಿಯ 3, ಹಿರಿಯಡ್ಕ ಠಾಣಾ ವ್ಯಾಪ್ತಿಯ 1 ಸೇರಿ ಒಟ್ಟು 57 ಮಂದಿ ಪರೇಡ್ ನಲ್ಲಿ ಪಾಲ್ಗೊಂಡಿದ್ದರು.

ಆರೋಪಿಗಳನ್ನು ಉದ್ದೇಶಿಸಿ ಮಾತನಾಡಿದ ಎಸ್ಪಿ ವಿಷ್ಣುವರ್ಧನ್, ಸಮಾಜದ್ರೋಹಿ ಚಟುವಟಿಕೆಗಳಲ್ಲಿ ಮುಂದುವರೆದಿದ್ದು ಕಂಡುಬಂದಲ್ಲಿ ಕಠಿಣ ಕ್ರಮದ ಎಚ್ಚರಿಕೆ ನೀಡಿದರು.
ಮಾದಕ ದ್ರವ್ಯ ಸಾಗಾಟ / ಮಾರಾಟಗಾರರ ಮಾಹಿತಿ ನೀಡಿದಲ್ಲಿ ವಿವರವನ್ನು ಗುಪ್ತವಾಗಿ ಇಡಲಾಗುವುದು. ಈ ಪಿಡುಗನ್ನು ನಿವಾರಿಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ತಿಳಿಸಿದರು. ಎಎಸ್ಪಿ ಕುಮಾರಚಂದ್ರ, ಸಹಾಯಕಎಸ್ಪಿ ಟಿ.ಆರ್.ಜೈಶಂಕರ್, ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ರಾಘವೇಂದ್ರ, ಉಡುಪಿ ವೃತ್ತ ನಿರೀಕ್ಷಕರಾದ ಮಂಜುನಾಥ ಹಾಗೂ ಜಿಲ್ಲೆಯ ಇತರ ಠಾಣೆಗಳ ಪೊಲೀಸ್ ಉಪನಿರೀಕ್ಷಕರು ಭಾಗವಹಿಸಿದ್ದರು.
A parade of accused in the ganja selling and transportation cases was held at the Chandu Maidan, Udupi on Wednesday, October 28.
20-12-25 03:05 pm
Bangalore Correspondent
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
20-12-25 10:53 pm
Mangalore Correspondent
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
ಮನೆ ಬಾವಿಗೆ ಬಿದ್ದು ನರಿಂಗಾನ ಶಾಲೆಯ ದೈಹಿಕ ಶಿಕ್ಷಕ...
20-12-25 01:09 pm
ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂ...
19-12-25 09:46 pm
21-12-25 01:18 pm
Mangalore Correspondent
Fraud Abroad Job Scam, Mangalore, Armenia: ಅರ...
18-12-25 04:53 pm
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm