ಬ್ರೇಕಿಂಗ್ ನ್ಯೂಸ್
09-10-20 07:20 pm Mangaluru Correspondent ಕರಾವಳಿ
ಮಂಗಳೂರು, ಅಕ್ಟೋಬರ್ 9: ಡ್ರಗ್ ನಂಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರಿಂದ ವಿಚಾರಣೆಗೆ ಎದುರಿಸಿದ್ದ ನಟಿ, ನಿರೂಪಕಿ ಅನುಶ್ರೀ ಈಗ ತೀವ್ರ ಖಿನ್ನತೆಗೆ ಒಳಗಾಗಿದ್ದಾರೆ. ಮಾಧ್ಯಮಗಳಲ್ಲಿ ಬರುತ್ತಿರುವ ಅಂತೆ ಕಂತೆಗಳ ಸುದ್ದಿಯಿಂದಾಗಿ ಅನುಶ್ರೀ ಮತ್ತು ಆಕೆಯ ತಾಯಿ ತೀವ್ರ ನೊಂದು ಖಿನ್ನತೆಗೊಳಗಾಗಿರುವುದಾಗಿ ಆಕೆಯ ಆಪ್ತರು ತಿಳಿಸಿದ್ದಾರೆ.
ಮಂಗಳೂರು ಸಿಸಿಬಿ ಪೊಲೀಸರ ಮೂಲದ ಪ್ರಕಾರ, ಅನುಶ್ರೀ ಹೆಸರನ್ನು ಕಿಶೋರ್ ಶೆಟ್ಟಿ ಮತ್ತು ತರುಣ್ ಬಿಟ್ಟರೆ ಬೇರೆ ಯಾರೂ ಹೇಳಿಲ್ಲ. ಕಿಶೋರ್ ಜೊತೆಗೆ ಕೊರಿಯೋಗ್ರಾಫರ್ ಆಗಿದ್ದ ತರುಣ್ ರಾಜ್, ಅನುಶ್ರೀ ಬಗ್ಗೆ ಕೇಳಿದ ಪ್ರಶ್ನೆಗೆ ಪರಿಚಯ ಇದೆಯೆಂದು ಹೇಳಿದ್ದ. ಆದರೆ, ತರುಣ್ ನನ್ನು ಪೊಲೀಸರು ಬಂಧಿಸಿರಲಿಲ್ಲ. ಕಿಶೋರ್ ಆಪ್ತ ಎನ್ನುವ ಕಾರಣಕ್ಕೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆದರೆ, ತರುಣ್ ವಿಚಾರಣೆ ವೇಳೆ ಅನುಶ್ರೀ ಹೆಸರನ್ನು ಹೇಳಿದ್ದ. ಹೀಗಾಗಿ, ಅದಾಗಲೇ ಸ್ಯಾಂಡಲ್ ವುಡ್ ಡ್ರಗ್ ಲಿಂಕ್ ಕಂಡುಬಂದಿದ್ದ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಅನುಶ್ರೀಗೆ ಪೊಲೀಸರು ನೋಟೀಸ್ ನೀಡಿದ್ದರು. ಇದೇ ವೇಳೆ, ಕಿಶೋರ್ ಜೊತೆಗೆ ಪಾರ್ಟಿ ನಡೆಸಿದ್ದಾಳೆಂಬ ಕಾರಣಕ್ಕೆ ಮಣಿಪುರ ಮೂಲದ ಆಸ್ಕಾ ಎಂಬ ಯುವತಿಯನ್ನು ಪೊಲೀಸರು ಬಂಧಿಸಿದ್ದರು. ಆಕೆಯೂ ಅನುಶ್ರೀ ಹೆಸರನ್ನು ಹೇಳಿಲ್ಲ ಎನ್ನುವ ಮಾಹಿತಿಯಿದೆ.
ಮಂಗಳೂರಿಗೆ ಬಂದಿದ್ದ ಅನುಶ್ರೀಯನ್ನು ಪಣಂಬೂರು ಎಸಿಪಿ ಕಚೇರಿಯಲ್ಲಿ ವಿಚಾರಣೆಗೆ ಗುರಿಪಡಿಸಲಾಗಿತ್ತು. ಡ್ರಗ್ ಪ್ರಕರಣದ ತನಿಖಾಧಿಕಾರಿ ಮಂಗಳೂರು ಸಿಸಿಬಿ ಇನ್ ಸ್ಪೆಕ್ಟರ್ ಶಿವಪ್ರಕಾಶ್ ನಾಯ್ಕ್, ಡಿಸಿಪಿ ವಿನಯ್ ಗಾಂವ್ಕರ್ ಉಪಸ್ಥಿತಿಯಲ್ಲಿ ವಿಚಾರಣೆ ನಡೆಸಿದ್ದರು. 40ರಿಂದ 50 ಪ್ರಶ್ನೆಗಳನ್ನು ಮುಂದಿಟ್ಟು ಉತ್ತರ ಪಡೆದು, ಹಿಂದಕ್ಕೆ ಕಳಿಸಿದ್ದರು. ಅಗತ್ಯ ಬಿದ್ದರೆ ಮತ್ತೆ ವಿಚಾರಣೆಗೆ ಕರೆಯುವುದಾಗಿ ತನಿಖಾಧಿಕಾರಿ ತಿಳಿಸಿದ್ದರು.
ಇದೇ ವೇಳೆ, ಕಿಶೋರ್ ಡ್ರಗ್ ಲಿಂಕ್ ಸಂಬಂಧಿಸಿ ಸುರತ್ಕಲ್ ಸೂರಿಂಜೆ ನಿವಾಸಿ ಮಹಮ್ಮದ್ ಶಾಕೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆತನ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಸಿಕ್ಕ ಮಾಹಿತಿ ಆಧರಿಸಿ, ಮುಂಬೈನಲ್ಲಿ ಶಾ ನವಾಜ್ ಎಂಬಾತನನ್ನು ಬಂಧಿಸಲಾಗಿತ್ತು. ಮಂಗಳೂರು ಮೂಲದ ಶಾ ನವಾಜ್ ಮುಂಬೈನಲ್ಲಿದ್ದುಕೊಂಡು ಕಿಶೋರ್ ಮತ್ತು ಅಕಿಲ್ ನೌಶೀಲ್ ಗೆ ಡ್ರಗ್ ಪೂರೈಸುತ್ತಿದ್ದ ಎನ್ನಲಾಗಿದೆ. ಆನಂತರ ಬೆಂಗಳೂರಿನಲ್ಲಿ ಕೆಂಗೇರಿ ನಿವಾಸಿ ಸ್ಯಾಮ್ ಫೆರ್ನಾಂಡಿಸ್ ಮತ್ತು ನೈಜೀರಿಯಾ ಮೂಲದ ಫ್ರಾಂಕ್ ಸಂಡೇ ಎಂಬಾತನನ್ನು ಬಂಧಿಸಲಾಗಿತ್ತು. ಸ್ಯಾಮ್, ಕಿಶೋರ್ ಜೊತೆಗೆ ರಿಯಾಲಿಟಿ ಶೋಗಳಲ್ಲಿ ಕೋ ಡ್ಯಾನ್ಸರ್ ಆಗಿದ್ದಾತ. ಆದರೆ, ವಿಚಾರಣೆ ವೇಳೆ ಸ್ಯಾಮ್ ಆಗಲೀ, ನೈಜೀರಿಯಾ ಪ್ರಜೆಯಾಗಲೀ ಅನುಶ್ರೀ ಹೆಸರನ್ನು ಹೇಳಿಲ್ಲ. ಆದರೆ, ಟಿವಿ ಮಾಧ್ಯಮಗಳು ಅನುಶ್ರೀಗೆ ನೈಜೀರಿಯನ್ ಪ್ರಜೆಯ ಲಿಂಕ್ ಎಂದು ಸುದ್ದಿ ಮಾಡಿದ್ದವು. ಅಲ್ಲದೆ, ಅನುಶ್ರೀ ಪ್ರಭಾವಿ ರಾಜಕಾರಣಿಗಳಿಗೆ ಫೋನ್ ಕರೆ ಮಾಡಿದ್ದಳು. ಕರಾವಳಿಯ ಶಾಸಕರೊಬ್ಬರು ಡ್ರಗ್ ಪೆಡ್ಲರ್ ಕಿಶೋರ್ ಶೆಟ್ಟಿಯನ್ನು ಬಚಾವ್ ಮಾಡಲು ಮಂಗಳೂರು ಪೊಲೀಸರಿಗೆ ಒತ್ತಡ ಹಾಕಿದ್ದಾರೆ ಎಂದೂ ಸುದ್ದಿಯಾಗಿತ್ತು. ಆದರೆ, ಮಂಗಳೂರಿನ ಪೊಲೀಸ್ ಕಮಿಷನರ್ ಇವೆಲ್ಲವನ್ನೂ ನಿರಾಕರಿಸಿದ್ದಲ್ಲದೆ ಯಾವುದೇ ಒತ್ತಡ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಟಿವಿ ಮಾಧ್ಯಮಗಳ ದಿನಕ್ಕೊಂದು ಕಲ್ಪಿತ ಸುದ್ದಿಯಿಂದಾಗಿ ಅನುಶ್ರೀ ಈ ನಡುವೆ ನೊಂದು ಫೇಸ್ಬುಕ್ ನಲ್ಲಿ ವಿಡಿಯೋ ಶೇರ್ ಮಾಡಿದ್ದಳು. ತೀವ್ರ ವಿಚಲಿತನಾಗಿದ್ದು, ದಯವಿಟ್ಟು ನನ್ನನ್ನು ಡ್ರಗ್ ಅಪರಾಧಿಯೆಂದು ಬಿಂಬಿಸಬೇಡಿ ಎಂದು ಅಲವತ್ತುಕೊಂಡಿದ್ದಳು. ಆದರೆ, ಮಾಧ್ಯಮಗಳು ಮಾತ್ರ ಪ್ರತಿ ದಿನವೂ ಅಂತೆ ಕಂತೆಗಳ ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದು, ಇದರಿಂದಾಗಿ ಅನುಶ್ರೀ ತೀವ್ರ ಖಿನ್ನತೆಗೆ ಒಳಗಾಗಿದ್ದಾಳೆ ಎಂದು ಆಕೆಯ ಆಪ್ತ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಅನುಶ್ರೀ ತನ್ನ ಬೆಂಗಳೂರಿನ ಮನೆಯಿಂದಲೂ ಹೊರಬರುತ್ತಿಲ್ಲ. ಅಲ್ಲದೆ, ಯಾರೊಂದಿಗೂ ಮಾತನಾಡದೇ ನೊಂದುಕೊಂಡಿದ್ದಾಳೆ. ತಾಯಿ ಕೂಡ ನೊಂದು ಮನೆಯಲ್ಲೇ ಖಿನ್ನತೆಗೆ ಒಳಗಾಗಿದ್ದಾರೆಂದು ಆಪ್ತ ವಲಯಗಳು ಮಾಹಿತಿ ನೀಡಿವೆ.
Kannada TV anchor Anushree who appeared before the CCB in Mangalore has now moved into depression after a series of Media trail in association with drugs said sources to Headline Karnataka News Portal.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm