ಕೋಟೆಕಾರು ಕೌನ್ಸಿಲರ್ ಪಿತೃ ನೇಣು ಬಿಗಿದು ಆತ್ಮಹತ್ಯೆ 

01-08-22 02:51 pm       Mangalore Correspondent   ಕರಾವಳಿ

ಕೋಟೆಕಾರು ಪಟ್ಟಣ ಪಂಚಾಯತಿನ ಸದಸ್ಯರೋರ್ವರ ತಂದೆ ನೇಣು ಬಿಗಿದು ಆತ್ಮ ಹತ್ಯೆಗೈದ ಘಟನೆ ನಡೆದಿದೆ.

ಉಳ್ಳಾಲ,  ಆಗಸ್ಟ್ 1  : ಕೋಟೆಕಾರು ಪಟ್ಟಣ ಪಂಚಾಯತಿನ ಸದಸ್ಯರೋರ್ವರ ತಂದೆ ನೇಣು ಬಿಗಿದು ಆತ್ಮ ಹತ್ಯೆಗೈದ ಘಟನೆ ನಡೆದಿದೆ. 

ಮಾಡೂರು ಕೊರಗಜ್ಜನ ಕಟ್ಟೆ ಬಳಿಯ ನಿವಾಸಿ ಕೋಟೆಕಾರು ಪಟ್ಟಣ ಪಂಚಾಯತ್ ನಾಲ್ಕನೇ ವಾರ್ಡ್ ನ ಸದಸ್ಯ ಕಿರಣ್ ಎಂಬವರ ತಂದೆ ಕೃಷ್ಣ ನಾಯ್ಕ್(59) ಆತ್ಮಹತ್ಯೆಗೈದ ದುರ್ದೈವಿ. ಇಂದು ಸಂಜೆ ಮನೆ ಮಂದಿ ಇಲ್ಲದ ವೇಳೆ ಮನೆಗೆ ತಾಗಿಕೊಂಡಿರುವ ಶೆಡ್ ಒಳಗಿನ‌ ಮರದ ಪಕ್ಕಾಸಿಗೆ ಅವರು ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ.


ಕೃಷ್ಣ ನಾಯ್ಕ್ ಅವರು ದೀರ್ಘ ಕಾಲದಿಂದ ಕಾಲು ನೋವಿನಿಂದ ಬಳಲುತ್ತಿದ್ದರೆನ್ನಲಾಗಿದೆ. ಸಹಿಸದ ಕಾಲು ನೋವಿನಿಂದಲೇ ಖಿನ್ನರಾಗಿದ್ದ ಅವರು ಆತ್ಮಹತ್ಯೆಗೈದಿರುವುದಾಗಿ ಹೇಳಲಾಗುತ್ತಿದೆ. ಕೃಷ್ಣ ನಾಯ್ಕ್ ಅವರ ಪತ್ನಿ ಜಯಂತಿ ಅವರೂ ಕೋಟೆಕಾರು ಪಂಚಾಯತಿನ ಮಾಜಿ ಸದಸ್ಯೆಯಾಗಿದ್ದು ಮೃತರು ಪತ್ನಿ , ಮೂವರು ಪುತ್ರರನ್ನ ಅಗಲಿದ್ದಾರೆ.

Kotekaru counsellors father commits suicide at his residence in Mangalore.