ಬೆಳ್ಳಾರೆಯಲ್ಲಿ ಪ್ರವೀಣ್ ಕೋಳಿ ಅಂಗಡಿ ಆರಂಭಿಸಿ ಸಡ್ಡು ಹೊಡೆದಿದ್ದರು ; ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು ! 

30-07-22 09:13 pm       Mangalore Correspondent   ಕರಾವಳಿ

ಕೊಲೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ.

ಸುಳ್ಯ, ಜುಲೈ 30 : ಕೊಲೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಬೆಳ್ಳಾರೆಯಲ್ಲಿ ವರ್ಷದ ಹಿಂದೆ ಮುಸ್ಲಿಮರಿಗೆ ಸಡ್ಡು ಹೊಡೆದು ಕೋಳಿ ಅಂಗಡಿ ಆರಂಭಿಸಿದ್ದೂ ಪ್ರವೀಣ್ ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗುವಂತಾಗಿತ್ತು ಅನ್ನೋದನ್ನು ಆತನ ಸ್ನೇಹಿತರು ಹೇಳುತ್ತಾರೆ. 

ಪ್ರವೀಣ್‌ ನೆಟ್ಟಾರು ಅವರು ಒಂಬತ್ತು ತಿಂಗಳ ಹಿಂದೆ ಬೆಳ್ಳಾರೆಯಲ್ಲಿ 'ಅಕ್ಷಯ ಫಾರ್ಮ್‌ ಫ್ರೆಶ್‌ ಚಿಕನ್' ಎಂಬ ಕೋಳಿ ಅಂಗಡಿ ಆರಂಭಿಸಿದ್ದರು. ಉದ್ಯಮದಲ್ಲಿ ಅವರು ಯಶಸ್ವಿಯಾಗಿದ್ದು ಅಲ್ಲಿನ ಕೆಲವರ ಕೆಂಗಣ್ಣಿಗೆ ಗುರಿಯಾಗಿತ್ತು ಎಂದು ಪ್ರವೀಣ್‌ ಅವರ ಮಾವನ ಮಗ ರಂಜಿತ್‌ ಹೇಳಿದ್ದಾರೆ. 

Another theory emerges in the Praveen Nettaru murder: Did Jihadis kill him  because he asked people to buy meat from Hindus? Read details

ಅಲ್ಲದೆ, ಪ್ರವೀಣ್ ರಾಷ್ಟ್ರೀಯವಾದಿ ಚಿಂತನೆಗೆ ಸಂಬಂಧಿಸಿದ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಇಂತಹ ಸಂದೇಶಗಳನ್ನು ಹಂಚಿಕೊಳ್ತಿದ್ದುದಕ್ಕೂ ಅವರಿಗೆ ಬೆದರಿಕೆ ಕರೆಗಳು ಬರುತ್ತಿದ್ದವು. ಕೆಲ ದಿನಗಳ ಹಿಂದೆಯೂ ಅವರಿಗೆ ಕೊಲೆ ಬೆದರಿಕೆ ಕರೆಗಳು ಬಂದಿದ್ದು, ಈ ಕುರಿತು ಪೊಲೀಸರಿಗೂ ಮಾಹಿತಿ ನೀಡಿದ್ದರು ಎಂದಿದ್ದಾರೆ.

ಇತ್ತೀಚೆಗೆ ಹಿಂದುಗಳು ಅನ್ಯಧರ್ಮೀಯರಿಂದ ಮಾಂಸ ಖರೀದಿಸಬಾರದು ಎಂಬ ಕುರಿತು ದೊಡ್ಡ ಮಟ್ಟದ ಅಭಿಯಾನ ನಡೆದಿತ್ತು. ಈ ಕುರಿತು ಸ್ಥಳೀಯರಲ್ಲಿ ಪ್ರವೀಣ್‌ ಜಾಗೃತಿ ಮೂಡಿಸುತ್ತಿದ್ದರು. ಹಿಂದೂಗಳು ಮೀನು ಮಾರಾಟ ನಡೆಸಲು, ಕೋಳಿ ಮಾಂಸದ ಮಳಿಗೆಗಳನ್ನು ಆರಂಭಿಸಲು ಹುರಿದುಂಬಿಸಿದ್ದರು. ಇದರಿಂದ ಪ್ರವೀಣ್ ಸ್ಥಳೀಯ ಕೆಲವರ ವಿರೋಧಕ್ಕೆ ಕಾರಣವಾಗಿದ್ದರು ಎಂದವರು ಹೇಳಿದರು.

ಬೆಳ್ಳಾರೆಯಲ್ಲಿ ಕೋಳಿ ಮಾಂಸದ ವ್ಯಾಪಾರ ಮೊದಲಿನಿಂದಲೂ ಅನ್ಯಧರ್ಮೀಯರ ಹತೋಟಿಯಲ್ಲಿತ್ತು. ಆದರೆ ಪ್ರವೀಣ್‌ ಅವರು ಸ್ವತಃ ಕೋಳಿ ವ್ಯಾಪಾರ ಆರಂಭಿಸಿ ಅವರಿಗೆ ಸೆಡ್ಡು ಹೊಡೆದಿದ್ದರು. ಯಾರು ಎಷ್ಟೇ ಅಡ್ಡಿಪಡಿಸಿದರೂ ಉದ್ಯಮದಲ್ಲಿ ಯಶಸ್ವಿಯೂ ಆಗಿದ್ದರು. ಇವರಿಂದ ಪ್ರೇರಣೆ ಪಡೆದು ಆಸುಪಾಸಿನಲ್ಲಿ ಅನೇಕ ಕಡೆ ಹಿಂದೂ ಯುವಕರು ಕೋಳಿ ವ್ಯಾಪಾರ ಆರಂಭಿಸಿದ್ದರು ಎಂದವರು ತಿಳಿಸಿದರು.

'ಈ ಕಾರಣಕ್ಕಾಗಿಯೇ ಪ್ರವೀಣ್ ಹತ್ಯೆ ನಡೆದಿರುವ ಸಾಧ್ಯತೆ ಅಧಿಕ. ಪೊಲೀಸರು ಈಗ ಬಂಧಿಸಿರುವ ಝಾಕೀರ್ ಮತ್ತು ಶಫೀಕ್ ಪ್ರಮುಖ ಆರೋಪಿಗಳಲ್ಲ. ಇವರ ಹಿಂದೆ ದೊಡ್ಡ ಜಾಲವಿದೆ ಎಂದು ರಂಜಿತ್ ಅನುಮಾನ ವ್ಯಕ್ತಪಡಿಸುತ್ತಾರೆ.

Praveen Bellare Murder was it due to his chicken shop set up, friends allege business was the reason.