ಮಂಗಳೂರಿನಲ್ಲಿ ಒಂದೇ ಮಳೆಗೆ ಕೃತಕ ನೆರೆ ; ಹಲವೆಡೆ ಮನೆಗಳಿಗೆ ನೀರು ನುಗ್ಗಿ ಮತ್ತೆ ಜನರ ಪಡಿಪಾಟಲು ! 

30-07-22 11:13 am       Mangalore Correspondent   ಕರಾವಳಿ

ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಮಂಗಳೂರು ನಗರದ ಹಲವೆಡೆ ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಆವರಿಸಿದೆ. ಕೊಟ್ಟಾರ, ಕೊಡಿಯಾಲಗುತ್ತು, ಬಳ್ಳಾಲಬಾಗ್ ಪ್ರದೇಶದಲ್ಲಿ ಮಳೆ ನೀರು ಬಂದಿದ್ದು ಜನರ ಸಂಚಾರಕ್ಕೆ ತೊಡಕಾಗಿದೆ. 

ಮಂಗಳೂರು, ಜುಲೈ 30 : ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಮಂಗಳೂರು ನಗರದ ಹಲವೆಡೆ ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಆವರಿಸಿದೆ. ಕೊಟ್ಟಾರ, ಕೊಡಿಯಾಲಗುತ್ತು, ಬಳ್ಳಾಲಬಾಗ್ ಪ್ರದೇಶದಲ್ಲಿ ಮಳೆ ನೀರು ಬಂದಿದ್ದು ಜನರ ಸಂಚಾರಕ್ಕೆ ತೊಡಕಾಗಿದೆ. 

ರಾತ್ರಿಯಿಡೀ ಭಾರೀ ಗುಡುಗು ಸಹಿತ ಮಳೆಯಾಗಿದೆ. ಮಂಗಳೂರು ನಗರ, ಸುರತ್ಕಲ್, ಮುಲ್ಕಿ ಭಾಗದಲ್ಲಿ ಹೆಚ್ಚು ಮಳೆಯಾದ ಮಾಹಿತಿಯಿದೆ. ಮಂಗಳೂರಿನ ಬಳ್ಳಾಲ್ ಬಾಗ್ ಪ್ರದೇಶ ಸಂಪೂರ್ಣ ಜಲಾವೃತಗೊಂಡಿತ್ರು. ಅಲ್ಲಿನ ಹಲವು ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ಜನಜೀವನಕ್ಕೆ ತೊಂದರೆಯಾಗಿತ್ತು. ಪಾಂಡೇಶ್ವರ ಶಿವನಗರ ಭಾಗದಲ್ಲಿ ಮನೆಗಳು ಜಲಾವೃತಗೊಂಡಿವೆ. ಕರಂಗಲ್ಪಾಡಿ, ಮಂಗಳೂರು ರೈಲ್ವೇ ನಿಲ್ದಾಣ , ಪಂಪ್ವೆಲ್ ಹೆದ್ದಾರಿ, ಅತ್ತಾವರ ಹೀಗೆ ಹಲವು ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟುಗಳಿಗೆ, ಮನೆಗಳಿಗೆ ನೀರು ನುಗ್ಗಿದ್ದು, ಬೆಳ್ಳಂಬೆಳಗ್ಗೆ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರ ಸಾಧ್ಯವಾಗಲಿಲ್ಲ. 

ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಮಂಗಳೂರು, ಮುಲ್ಕಿ -  ಮೂಡುಬಿದಿರೆ, ಬಂಟ್ವಾಳ ತಾಲೂಕಿನಲ್ಲಿ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ಬೆಳಗ್ಗೆ ರಜೆ ಘೋಷಣೆ ಮಾಡಿದ್ದರು. ಅಲ್ಲದೆ, ಪುತ್ತೂರು, ಸುಳ್ಯ, ಬೆಳ್ತಂಗಡಿ ಭಾಗದಲ್ಲಿ ಆಯಾ ಶಿಕ್ಷಣಾಧಿಕಾರಿಗಳು ಪರಿಸ್ಥಿತಿ ನೋಡಿಕೊಂಡು ರಜೆ ನೀಡುವಂತೆ ಸೂಚಿಸಿದ್ದಾರೆ. ನಸುಕಿನಲ್ಲಿ ಭಾರೀ ಎನ್ನುವಂತೆ ಸುರಿದ ಮಳೆ ಬೆಳಗ್ಗೆ ಹೊತ್ತು ಸರಿಯುತ್ತಿದ್ದಂತೆ ಕಡಿಮೆಯಾಗಿದೆ. ಎಂಟು ಗಂಟೆ ನಂತರ ಪೂರ್ತಿ ಬಿಸಿಲು ಆವರಿಸಿದೆ. ಹೀಗಾಗಿ ನೆರೆ ನೀರು ಕೂಡ ಕಡಿಮೆಯಾಗಿದೆ. ಆದರೆ ಒಂದೇ ಮಳೆಗೆ ಈ ಪರಿ ನೀರು ಬಂದಿರುವುದು ಜನರನ್ನು ಆತಂಕಕ್ಕೆ ದೂಡಿದೆ.

Heavy rains have been lashing in the district of Dakshina Kannada for the past 3 hours on Saturday July 30, including the city of Mangaluru. The roads inside the city are submerged. Heavy water-logging is witnessed is many areas. Motorists were seen struggling to move their vehicles through the submerged roads. Water also gushed into the premises of Mangaluru Central railway station.