ಸ್ಮಾರ್ಟ್ ಸಿಟಿ ಅವ್ಯವಸ್ಥೆ ; ರಸ್ತೆ ಗುಂಡಿಗೆ ಕಲ್ಲು ಹಾಕಿ ಮುಚ್ಚಿದ ಪೊಲೀಸ್ ಸಿಬಂದಿಗೆ ಜಾಲತಾಣದಲ್ಲಿ ಮೆಚ್ಚುಗೆ

22-07-22 10:36 pm       Mangalore Correspondent   ಕರಾವಳಿ

ಮಂಗಳೂರಿನಲ್ಲಿ ಅರೆಬರೆ ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ಕಾಂಕ್ರೀಟ್ ರಸ್ತೆ ಅಗೆದು ಅಲ್ಲಲ್ಲಿ ಹೊಂಡ ಬಿದ್ದಿರುವುದು, ಕಾಂಕ್ರೀಟ್ ಒಡೆದು ಮಣ್ಣು ತುಂಬಿದ್ದರಿಂದ ವಾಹನ ಸಾಗಾಟಕ್ಕೆ ಸಮಸ್ಯೆ ಆಗಿರುವ ನಡುವಲ್ಲೇ ರಾವ್ ಎಂಡ್ ರಾವ್ ಸರ್ಕಲ್ ಬಳಿ ರಸ್ತೆ ಮಧ್ಯೆ ಹೊಂಡ ಬಿದ್ದಿರುವುದಕ್ಕೆ ಪೊಲೀಸ್ ಸಿಬಂದಿಯೊಬ್ಬರು ಕಲ್ಲು ತುಂಬಿ ಗಮನ ಸೆಳೆದಿದ್ದಾರೆ.

ಮಂಗಳೂರು, ಜುಲೈ 22: ಮಂಗಳೂರಿನಲ್ಲಿ ಅರೆಬರೆ ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ಕಾಂಕ್ರೀಟ್ ರಸ್ತೆ ಅಗೆದು ಅಲ್ಲಲ್ಲಿ ಹೊಂಡ ಬಿದ್ದಿರುವುದು, ಕಾಂಕ್ರೀಟ್ ಒಡೆದು ಮಣ್ಣು ತುಂಬಿದ್ದರಿಂದ ವಾಹನ ಸಾಗಾಟಕ್ಕೆ ಸಮಸ್ಯೆ ಆಗಿರುವ ನಡುವಲ್ಲೇ ರಾವ್ ಎಂಡ್ ರಾವ್ ಸರ್ಕಲ್ ಬಳಿ ರಸ್ತೆ ಮಧ್ಯೆ ಹೊಂಡ ಬಿದ್ದಿರುವುದಕ್ಕೆ ಪೊಲೀಸ್ ಸಿಬಂದಿಯೊಬ್ಬರು ಕಲ್ಲು ತುಂಬಿ ಗಮನ ಸೆಳೆದಿದ್ದಾರೆ.

ಸ್ಟೇಟ್ ಬ್ಯಾಂಕ್ ವೃತ್ತದಿಂದ ರಾವ್ ಎಂಡ್ ರಾವ್ ಸರ್ಕಲ್ ಮೂಲಕ ಲೇಡಿಗೋಶನ್ ಕಡೆಗೆ ಸಾಗುವ ರಸ್ತೆಯಲ್ಲಿ ನಡುವೆ ಕಾಂಕ್ರೀಟ್ ರಸ್ತೆಯನ್ನು ಅಗೆದು, ಆನಂತರ ಮಣ್ಣು, ಜಲ್ಲಿ ತುಂಬಲಾಗಿತ್ತು. ಆದರೆ ವಾಹನಗಳು ಸಾಗಿದ ಬಳಿಕ ಮಣ್ಣು ಒಳಗೆ ಜಗ್ಗಿದ್ದರಿಂದ ಆ ಜಾಗ ಹೊಂಡ ಬಿದ್ದಿತ್ತು. ಇದರಿಂದ ಬೈಕ್ ಇನ್ನಿತರ ದ್ವಿಚಕ್ರ ವಾಹನಗಳು ಸಾಗುವುದಕ್ಕೆ ದೊಡ್ಡ ಅಡ್ಡಿಯಾಗಿತ್ತು. ಇದನ್ನು ಗಮನಿಸಿದ ಶುಕ್ರವಾರ ಟ್ರಾಫಿಕ್ ಕರ್ತವ್ಯಕ್ಕೆ ಸ್ಥಳದಲ್ಲಿ ನಿಯೋಜನೆ ಆಗಿದ್ದ ಪಾಂಡೇಶ್ವರ ಸಂಚಾರ ವಿಭಾಗದ ಶರಣಪ್ಪ ಎಂಬ ಪೊಲೀಸ್ ಸಿಬಂದಿ ಸ್ವತಃ ಕಲ್ಲುಗಳನ್ನು ತುಂಬಿ ಹೊಂಡ ಮುಚ್ಚಿದ್ದಾರೆ.

ರಸ್ತೆ ಬದಿ ಹಾಕಲಾಗಿದ್ದ ಇಂಟರ್ ಲಾಕ್ ಕಲ್ಲುಗಳನ್ನು ಹೊಂಡಕ್ಕೆ ಮುಚ್ಚಿ ಇನ್ನಷ್ಟು ದೊಡ್ಡ ಹೊಂಡ ಆಗದಂತೆ ಪ್ರಯತ್ನಿಸಿದ್ದಾರೆ. ಈ ರೀತಿ ಕೈಯಾರೆ ಕೆಲಸ ಮಾಡಿರುವುದನ್ನು ಅಲ್ಲಿನ ಸಾರ್ವಜನಿಕರು ಫೋಟೋ ತೆಗೆದು ಜಾಲತಾಣದಲ್ಲಿ ಹಂಚಿದ್ದು, ಭಾರೀ ವೈರಲ್ ಆಗಿದೆ. ಅಲ್ಲದೆ, ಉತ್ತರ ಕರ್ನಾಟಕ ಮೂಲದ ಪೊಲೀಸ್ ಸಿಬಂದಿಯ ಕಾರ್ಯಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ.

Mangalore Traffic cop fills potholes with interlock near State Bank appreciation pours on social media. Sharanappa, attached to the traffic east police station of Pandeshwar with the help of people around filled the gaping pothole with interlocks for the convenience of the public.