ಬ್ರೇಕಿಂಗ್ ನ್ಯೂಸ್
15-07-22 10:13 pm Mangalore Correspondent ಕರಾವಳಿ
ಮಂಗಳೂರು, ಜುಲೈ 15: ಮಳಲಿ ಮಸೀದಿ ಜಟಾಪಟಿ ವಿಚಾರದಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದ ವಿಶ್ವ ಹಿಂದು ಪರಿಷತ್ತಿಗೆ ಹಿನ್ನಡೆಯಾಗಿದೆ. ವಿಎಚ್ ಪಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದ್ದು, ಕೆಳಗಿನ ಕೋರ್ಟಿನಲ್ಲಿಯೇ ವಿಚಾರಣೆ ನಡೆಸಿ ತೀರ್ಪು ನೀಡುವಂತೆ ಆದೇಶ ಮಾಡಿದೆ.
ಇತ್ತೀಚೆಗೆ ಮಳಲಿ ಮಸೀದಿ ವಿಚಾರದಲ್ಲಿ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗಲೇ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದ ವಿಎಚ್ ಪಿ ಪರ ವಕೀಲರು, ಪ್ರಕರಣದಲ್ಲಿ ಮಸೀದಿ ಸರ್ವೇ ನಡೆಸಲು ಕೋರ್ಟ್ ಕಮಿಷನ್ ನೇಮಕ ಮಾಡಬೇಕು. ಕೆಳಗಿನ ಕೋರ್ಟ್ ಮಧ್ಯಂತರ ತೀರ್ಪು ನೀಡಲು ಅವಕಾಶ ನೀಡಬಾರದು ಎಂದು ಕೇಳಿಕೊಂಡಿದ್ದರು. ಹಾಗಾಗಿ ಮಂಗಳೂರು ಕೋರ್ಟಿನಲ್ಲಿ ಯಾವುದೇ ರೀತಿಯ ಮಧ್ಯಂತರ ಆದೇಶ ನೀಡದಂತೆ ಹೈಕೋರ್ಟ್ ಇತ್ತೀಚೆಗೆ ನಿರ್ದೇಶನ ನೀಡಿತ್ತು.
ಈ ಬಗ್ಗೆ ಮಸೀದಿ ಕಮಿಟಿ ಪರ ವಕೀಲರು ಹೈಕೋರ್ಟಿನಲ್ಲಿ ಪ್ರತಿ ವಾದ ಸಲ್ಲಿಸಿದ್ದು, ಕೆಳಗಿನ ನ್ಯಾಯಾಲಯಕ್ಕೆ ಆದೇಶ ನೀಡಬಾರದೆಂದು ತಡೆ ವಿಧಿಸಿರುವುದು ಸರಿಯಲ್ಲ ಎಂದು ವಾದ ಮಂಡಿಸಿದ್ದಾರೆ. ಅಲ್ಲದೆ, ಕೆಳಗಿನ ನ್ಯಾಯಾಲಯದಲ್ಲಿ ವಾದ ನಡೆಯುತ್ತಿರುವ ಸಂದರ್ಭದಲ್ಲಿಯೇ ಹೈಕೋರ್ಟಿಗೆ ಅರ್ಜಿ ಸಲ್ಲಿಸಿರುವ ಔಚಿತ್ಯವನ್ನೂ ಪ್ರಶ್ನಿಸಿದ್ದಾರೆ. ವಾದ ಆಲಿಸಿದ ಹೈಕೋರ್ಟ್, ವಿಎಚ್ ಪಿ ಪರ ಅರ್ಜಿಯನ್ನು ವಜಾ ಮಾಡಿದ್ದು ಕೆಳಗಿನ ನ್ಯಾಯಾಲಯದಲ್ಲಿಯೇ ವಿಚಾರಣೆ ನಡೆಸುವಂತೆ ಸೂಚನೆ ನೀಡಿದೆ. ಹೀಗಾಗಿ ಮಳಲಿ ಮಸೀದಿ ವಿವಾದದ ಚೆಂಡು ಮತ್ತೆ ಮಂಗಳೂರು ನ್ಯಾಯಾಲಯಕ್ಕೆ ಬಂದಿದೆ.
ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಈಗಾಗಲೇ ಮಸೀದಿ ಕಮಿಟಿ ಮತ್ತು ವಿಎಚ್ ಪಿ ಪರವಾಗಿ ಎಂಟಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಮಸೀದಿ ನವೀಕರಣಕ್ಕೆ ತಡೆ ಕೇಳಿ ವಿಎಚ್ ಪಿ ಕಡೆಯಿಂದ ಸಲ್ಲಿಸಿದ್ದ ಅರ್ಜಿ ಮೊದಲಿನದಾಗಿದ್ದು, ಅದನ್ನು ತೆರವು ಮಾಡುವಂತೆ ಮಸೀದಿ ಕಮಿಟಿ ಪರ ಹಿರಿಯ ವಕೀಲ ಎಂ.ಪಿ.ಶೆಣೈ ವಾದ ಮಂಡಿಸಿದ್ದರು. ಆನಂತರ, ಗ್ಯಾನವಾಪಿ ಮಸೀದಿ ಮಾದರಿಯಲ್ಲಿ ಕೋರ್ಟ್ ಕಮಿಷನ್ ನೇಮಕ ಮಾಡಬೇಕೆಂದು ವಿಎಚ್ ಪಿ ಕಡೆಯಿಂದ ಮತ್ತೊಂದು ಅರ್ಜಿ ಸಲ್ಲಿಕೆಯಾಗಿತ್ತು. ನವೀಕರಣ ಕಾಮಗಾರಿಗೆ ವಿಧಿಸಿರುವ ತಡೆಯಾಜ್ಞೆ ತೆರವುಗೊಳಿಸುವ ಅರ್ಜಿಯನ್ನು ಮೊದಲು ಇತ್ಯರ್ಥ ಪಡಿಸಬೇಕೆಂದು ಮಸೀದಿ ಕಮಿಟಿ ಆಗ್ರಹ ಮಾಡಿದ್ದರೆ, ವಿಎಚ್ ಪಿ ಪರ ವಕೀಲರು ಕೋರ್ಟ್ ಕಮಿಷನ್ ನೇಮಕ ಮಾಡಲೇಬೇಕು. ಅದನ್ನು ಹೊರತುಪಡಿಸಿ ಕಾಮಗಾರಿಗೆ ತಡೆಯಾಜ್ಞೆ ನೀಡಿರುವುದನ್ನು ತೆರವು ಮಾಡಬಾರದು ಎಂದು ವಾದಿಸಿದ್ದರು.
ಇವೆರಡೂ ವಿಚಾರದಲ್ಲಿ ಮಂಗಳೂರಿನ ಕೋರ್ಟಿನಲ್ಲಿ ಒಂದೂವರೆ ತಿಂಗಳ ಕಾಲ ವಾದ - ಪ್ರತಿವಾದ ನಡೆದಿದ್ದು ಯಾವ ಅರ್ಜಿಯನ್ನು ಮೊದಲು ಪರಿಗಣಿಸಬೇಕು ಎಂಬ ಬಗ್ಗೆ ತೀರ್ಪು ನೀಡುವುದಕ್ಕೆ ಬಾಕಿಯಿತ್ತು. ಈಗ ಒಟ್ಟು ವಿವಾದ ಮತ್ತೆ ಮಂಗಳೂರಿನ ಕೋರ್ಟ್ ಅಂಗಳಕ್ಕೆ ಬಂದಿದ್ದು ಮತ್ತೆ ಕುತೂಹಲ ಗರಿಗೆದರಿದೆ.
The Karnataka High Court on Friday rejected a petition filed questioning the decision of the Additional City Civil court in Mangalore to first decide on the aspect of maintainability of the suit for permanent injunction, seeking to restrain the Malali Jumma Masjid authorities from dismantling the old tiled-structure of masjid said to be resembling a temple, before deciding on the application for appointment of a court commissioner to survey the masjid.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 06:25 pm
HK News Desk
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm