ರಾಜ್ಯಸಭೆಗೆ ನಾಮಕರಣಗೊಂಡ ವೀರೇಂದ್ರ ಹೆಗ್ಗಡೆಗೆ ಕ್ರೈಸ್ತ ಧರ್ಮಪ್ರಾಂತ್ಯ, ಕೆಥೋಲಿಕ್ ಸಭಾದಿಂದ ಸನ್ಮಾನ

15-07-22 08:21 pm       Mangalore Correspondent   ಕರಾವಳಿ

ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಮಂಗಳೂರಿನ ಕ್ರೈಸ್ತ ಧರ್ಮಪ್ರಾಂತ್ಯ ಮತ್ತು ಕೆಥೋಲಿಕ್ ಸಭಾ ನಾಯಕರು ಭೇಟಿಯಾಗಿ ಗೌರವ ವಂದನೆ ಸಲ್ಲಿಸಿದ್ದಾರೆ. ಪಾದ್ರಿಗಳು, ಸಿಸ್ಟರ್ ಸೇರಿದಂತೆ ಸಮಾಜದ ಮುಖಂಡರು ನಿಯೋಗದಲ್ಲಿದ್ದರು.

ಮಂಗಳೂರು, ಜುಲೈ 15: ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಮಂಗಳೂರಿನ ಕ್ರೈಸ್ತ ಧರ್ಮಪ್ರಾಂತ್ಯ ಮತ್ತು ಕೆಥೋಲಿಕ್ ಸಭಾ ನಾಯಕರು ಭೇಟಿಯಾಗಿ ಗೌರವ ವಂದನೆ ಸಲ್ಲಿಸಿದ್ದಾರೆ. ಪಾದ್ರಿಗಳು, ಸಿಸ್ಟರ್ ಸೇರಿದಂತೆ ಸಮಾಜದ ಮುಖಂಡರು ನಿಯೋಗದಲ್ಲಿದ್ದರು.

ರೆ.ಫಾ.ಮ್ಯಾಕ್ಸಿಮ್ ಎಲ್. ನೊರೊನ್ಹಾ, ವಿಕಾರ್ ಜನರಲ್ ರೆ.ಡಾ.ಜೆ.ಬಿ.ಸಲ್ದಾನ, ಡಯಸಿಸ್ ಪಿಆರ್ ಓ ರಾಯ್ ಕ್ಯಾಸ್ಟಲಿನೋ, ರಾಕ್ಣೋ ವೀಕ್ಲಿ ಸಂಪಾದಕ ರೆ.ಫಾ.ರೂಪೇಶ್ ಮಾಡ್ತ, ಕೆನರಾ ಕಮ್ಯುನಿಕೇಶನ್ ಸೆಂಟರ್ ಡೈರೆಕ್ಟರ್ ರೆ.ಅನಿಲ್ ಫೆರ್ನಾಂಡಿಸ್, ಡಯಸಿಸ್ ಪ್ಯಾಸ್ಟೋರಲ್ ಕೌನ್ಸಿಲ್ ಸೆಕ್ರಟರಿ ಡಾ.ಜಾನ್ ಡಿಸಿಲ್ವ, ರೋಮನ್ ಲೋಬೊ ಸೇರಿದಂತೆ ವಿವಿಧ ಘಟಕಗಳ ನಾಯಕರು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಪರವಾಗಿ ಡಾ.ಹೆಗ್ಗಡೆ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಹೂಗುಚ್ಛ ಮತ್ತು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.

ಇದೇ ವೇಳೆ, ಸನ್ಮಾನಕ್ಕೆ ಪ್ರತಿಕ್ರಿಯೆ ನೀಡಿದ ಡಾ.ಹೆಗ್ಗಡೆ, ಇತ್ತೀಚೆಗೆ ಮಂಗಳೂರಿನ ಬಿಷಪ್ಪರು ಫೋನ್ ಮಾಡಿ ಶುಭ ಹಾರೈಕೆ ಹೇಳಿದ್ದರು. ಅವರ ಜೊತೆಗೆ ಮಾತನಾಡಿ ಮೆಚ್ಚುಗೆ ಹೊಂದಿದ್ದೇನೆ. ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳು, ಸ್ವಸಹಾಯ ಗುಂಪುಗಳು ಮತ್ತು ಮಹಿಳಾ ಸಬಲೀಕರಣದ ಯೋಜನೆಗಳ ಕಾರಣಕ್ಕೆ ಕೇಂದ್ರ ಸರಕಾರದ ಗಮನ ಸೆಳೆದಿದೆ. ಈ ಮಾದರಿಯ ಯೋಜನೆಗಳನ್ನು ದೇಶ ವ್ಯಾಪಿಗೆ ಪಸರಿಸಲು ಅವಕಾಶ ನೀಡಿದ್ದಾರೆ. ರಾಜ್ಯಸಭೆ ಪ್ರತಿನಿಧಿಯಾಗಿ ನಿಮ್ಮೆಲ್ಲರನ್ನು ಪ್ರತಿನಿಧಿಸಿ ನನ್ನ ಸೇವಾ ಕಾರ್ಯವನ್ನು ಇಡೀ ದೇಶಕ್ಕೆ ವಿಸ್ತರಿಸುತ್ತೇನೆ ಎಂದು ಹೇಳಿದರು.

ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ ಅಧ್ಯಕ್ಷ ಸ್ಟ್ಯಾನಿ ಲೋಬೊ, ಸದಸ್ಯರಾದ ಮನೋಹರ್ ಕುಟಿನ್ಹೋ, ವಿನೋದ್ ಪಿಂಟೋ, ಅಲ್ಫೋನ್ಸ್ ಫೆರ್ನಾಂಡಿಸ್, ಫ್ರಾನ್ಸಿಸ್ ಸೆರಾವೋ, ಪೌಲ್ ರೋಲ್ಫಿ ಡಿಕೋಸ್ಟ ಅವರು ಕೂಡ ನಿಯೋಗದಲ್ಲಿದ್ದು ಡಾ.ಹೆಗ್ಗಡೆ ಅವರನ್ನು ಹೂಗುಚ್ಚ ನೀಡಿ ಅಭಿನಂದಿಸಿದರು.

In a formal meeting held on Friday, July 15, 2022, the officials of the Diocese of Mangalore, Catholic Sabha and Youth leaders with a few representatives of priests, nuns and lay faithful met the recently nominated member of Rajya Sabha Dr D. Veerendra Heggade, Dharmadhikari of Sri Kshetra Dharmasthala at his residence in Dharmasthala.