ಬ್ರೇಕಿಂಗ್ ನ್ಯೂಸ್
14-07-22 10:41 pm udupi Correspondent ಕರಾವಳಿ
ಉಡುಪಿ, ಜುಲೈ 14: ಇದು ಯಾರೂ ಊಹಿಸಲಾರದ ಮತ್ತು ಊಹಿಸುವುದಕ್ಕೂ ಆಗದ ಪ್ರಕರಣ. ಕಾರು ಸುಟ್ಟು ಶವ ಪತ್ತೆಯಾದ ಪ್ರಕರಣದ ಬೆನ್ನತ್ತಿ ಹೋದ ಪೊಲೀಸರೇ ನಿಜಾಂಶ ತಿಳಿದು ಒಂದು ಕ್ಷಣ ಶಾಕ್ ಆಗಿದ್ದಾರೆ. ಒಂದೇ ದಿನದಲ್ಲಿ ಕಾರಿನ ಹಿಂದಿನ ನಿಗೂಢ ಕೊಲೆ ಪ್ರಕರಣವನ್ನು ಭೇದಿಸಿದ್ದೇ ಅದೊಂದು ರೋಚಕ ಮಿಸ್ಟರಿ. ಪೊಲೀಸರ ಕಣ್ತಪ್ಪಿಸುವುದಕ್ಕಾಗಿ ಮಧ್ಯವಯಸ್ಕ ವ್ಯಕ್ತಿಯೊಬ್ಬ ತನ್ನದೇ ವಯಸ್ಸಿನ ಅಮಾಯಕ ವ್ಯಕ್ತಿಯನ್ನು ಮದ್ಯ ಕುಡಿಸಿ, ಹೆಣ್ಣಿನ ಆಸೆ ಹುಟ್ಟಿಸಿ ಪೆಟ್ರೋಲ್ ಸುರಿದು ಜೀವಂತ ಸುಟ್ಟು ಹಾಕಿರುವ ಅಮಾನುಷ ಕೃತ್ಯವನ್ನು ಉಡುಪಿ ಪೊಲೀಸರು ಬಯಲು ಮಾಡಿದ್ದಾರೆ.
ಪ್ರಕರಣ ಸಂಬಂಧಿಸಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಕಾರ್ಕಳ ಮೂಲದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಮಾಳ ನಿವಾಸಿ ಸದಾನಂದ ಶೇರಿಗಾರ್(54) ಮತ್ತು ಆತನ ಪ್ರೇಯಸಿ ಆಗಿದ್ದ ಶಿಲ್ಪಾ(40) ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಕಾರಿನಲ್ಲಿ ಸುಟ್ಟು ಹೋಗಿ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾದ ಶವವನ್ನು ಕಾರ್ಕಳ ನಿವಾಸಿ ಆನಂದ ದೇವಾಡಿಗ (55) ಎಂದು ಗುರುತಿಸಲಾಗಿದೆ.

ಇಷ್ಟಕ್ಕೂ ಕೊಲೆಯಾದ ವ್ಯಕ್ತಿಗೂ, ಕೊಲೆ ಕೃತ್ಯಕ್ಕೂ ಸಂಬಂಧವೇ ಇಲ್ಲ. ಸದಾನಂದ ಶೇರಿಗಾರ್ ಎಂಬ ನರಹಂತಕ ತನ್ನನ್ನು ಪೊಲೀಸರು ಪ್ರಕರಣ ಒಂದರಲ್ಲಿ ಹುಡುಕುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರ ಕಣ್ತಪ್ಪಿಸಲು ಮಾಡಿದ್ದ ನಾಟಕಕ್ಕೆ ಆನಂದ ದೇವಾಡಿಗ ಎಂಬ ವ್ಯಕ್ತಿ ಬಲಿಯಾಗಿದ್ದಾನೆ ಅನ್ನೋದು ಪೊಲೀಸರ ಮಾಹಿತಿ. ಇಷ್ಟಕ್ಕೂ ಈ ಕೊಲೆ ಪ್ರಕರಣದ ಹಿನ್ನೆಲೆಯೇ ಅಚ್ಚರಿ ಹುಟ್ಟಿಸುವಂಥದ್ದು.
ತಾನೇ ತೋಡಿದ ಖೆಡ್ಡಾಕ್ಕೆ ಬಿದ್ದ ಸರ್ವೇಯರ್
ಸದಾನಂದ ಶೇರಿಗಾರ್ ಕಾರ್ಕಳದಲ್ಲಿ ಭೂ ಸರ್ವೇಯರ್ ಆಗಿದ್ದುಕೊಂಡು ಜಾಗದ ದಲ್ಲಾಳಿ ನಡೆಸುತ್ತಿದ್ದ ವ್ಯಕ್ತಿ. ವ್ಯಕ್ತಿಯೊಬ್ಬರ ಜಮೀನಿಗೆ ಸಂಬಂಧಿಸಿ ನಕಲಿ ದಾಖಲೆ ಪತ್ರಗಳನ್ನು ರೆಡಿ ಮಾಡಿದ್ದ ಸದಾನಂದನ ವಿರುದ್ಧ ಕಾರ್ಕಳ ಠಾಣೆಯಲ್ಲಿ ದೂರು ದಾಖಲಾಗಿತ್ತು. ದಾಖಲೆ ಪೋರ್ಜರಿ ಮಾಡಿದ್ದಕ್ಕಾಗಿ ಪೊಲೀಸರು ಸದಾನಂದನ ಹುಡುಕಾಟದಲ್ಲಿ ತೊಡಗಿದ್ದರು. ಈ ನಡುವೆ ಆರೋಪಿ ತಲೆಮರೆಸಿಕೊಂಡಿದ್ದ ಕಾರಣ ಕೋರ್ಟ್ ಬಂಧನ ವಾರೆಂಟ್ ಹೊರಡಿಸಿತ್ತು. ಇದಕ್ಕಾಗಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಬಿಂಬಿಸಲು ಸದಾನಂದ ಶೇರಿಗಾರ್, ಟಿವಿಯಲ್ಲಿ ಬರುವ ಕ್ರೈಂ ಸ್ಟೋರಿಯನ್ನೇ ನೋಡಿ ತನ್ನನ್ನು ತಾನು ಕೊಲ್ಲುವ ಶೈಲಿಯಲ್ಲಿ ವಿಭಿನ್ನ ಪ್ಲಾನ್ ಮಾಡಿದ್ದ. ಯೋಜನೆ ಕಾರ್ಯಗತ ಮಾಡಲು ಸಹಾಯ ಮಾಡಿದ್ದು ಸದಾನಂದನ ಪ್ರೇಯಸಿ ಶಿಲ್ಪಾ ಅನ್ನೋದು ತನಿಖೆಯಲ್ಲಿ ತಿಳಿದುಬಂದಿದೆ.

ಇಷ್ಟೆಲ್ಲವನ್ನೂ ಪೊಲೀಸರು ಒಂದೇ ದಿನದಲ್ಲಿ ತಿಳ್ಕೊಂಡು ಇಬ್ಬರನ್ನೂ ರಾಜ್ಯ ಬಿಟ್ಟು ತೆರಳುವ ಹಾದಿಯಲ್ಲೇ ಉಪಾಯದಲ್ಲಿ ಸೆರೆ ಹಿಡಿದಿದ್ದೇ ರೋಚಕ. ಪೊಲೀಸರ ಮಿಂಚಿನ ಕಾರ್ಯಾಚರಣೆಗೆ ನಿಜಕ್ಕೂ ಶಹಭಾಷ್ ಹೇಳಲೇಬೇಕು. ಯಾಕಂದ್ರೆ, ಪೆಟ್ರೋಲ್ ಸುರಿದು ಆತ್ಮಹತ್ಯೆ ಎಂದು ಮುಗಿದು ಹೋಗುತ್ತಿದ್ದ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಯಾರೂ ಊಹಿಸಲಾಗದ ಕೊಲೆ ಕೃತ್ಯವನ್ನು ಒಂದೇ ದಿನದಲ್ಲಿ ಬಯಲು ಮಾಡಿದ್ದಾರೆ. ಶಿಲ್ಪಾ ಸರಕಾರಿ ಕಚೇರಿಯೊಂದರಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ. ಸದಾನಂದನ ಜಾಗದ ವ್ಯವಹಾರಗಳಿಗೆ ಸಹಾಯ ಮಾಡುತ್ತಿದ್ಲೋ ಏನೋ, ಆ ಮಹಿಳೆ ಈತನ ಕುಕೃತ್ಯಕ್ಕೆ ಸಹಾಯ ಮಾಡಿ ತಗ್ಲಾಕ್ಕೊಂಡಿದ್ದಾಳೆ. ಇಬ್ಬರೂ ಸೇರಿಕೊಂಡು ಯಾರೂ ಊಹಿಸದ ಯೋಜನೆಯನ್ನೇ ಹೆಣೆದಿದ್ದರು. ಆದರೆ ಇವರ ಅಮಾನುಷ ಯೋಜನೆಗೆ ಬಲಿಯಾಗಿದ್ದು ಮಾತ್ರ ಅಮಾಯಕ ವ್ಯಕ್ತಿ.
ಪೊಲೀಸರಿಗೆ ಕ್ಲೂ ಕೊಟ್ಟಿದ್ದೇ ಕಾರು !

ಇಷ್ಟಕ್ಕೂ ಕಾರು ಸುಟ್ಟ ಕೃತ್ಯದಲ್ಲಿ ಯಾವುದೇ ಕ್ಲೂ ಕೂಡ ಇರಲಿಲ್ಲ. ಕಾರು ಪೂರ್ತಿಯಾಗಿ ಸುಟ್ಟು ಹೋಗಿತ್ತು. ನಂಬರ್ ಪ್ಲೇಟ್ ಕೂಡ ಕಾಣುತ್ತಿರಲಿಲ್ಲ. ಹಿಂಬದಿ ಕುಳಿತಿದ್ದ ವ್ಯಕ್ತಿ ಕುಳಿತಲ್ಲೇ ಪೂರ್ತಿ ಸುಟ್ಟು ಹೋಗಿದ್ದ. ಅಷ್ಟೇ ಅಲ್ಲ, ಶವ ಹೆಣ್ಣೋ, ಗಂಡೋ ಅನ್ನುವಷ್ಟೂ ಗುರುತು ಸಿಗದಂತಾಗಿತ್ತು. ಕೊಲೆ ಕೃತ್ಯ ಎಸಗಿದವರು ಯಾವುದೇ ಕ್ಲೂವನ್ನೂ ಬಿಟ್ಟುಕೊಡಬಾರದು ಅಂತಲೇ ಕೃತ್ಯ ಎಸಗಿದ್ದರು. ಆದರೆ, ಪೊಲೀಸರ ಬುದ್ಧಿಮತ್ತೆಯ ಮುಂದೆ ಹಂತಕರ ಪ್ಲಾನ್ ಸಿಡಿದು ಹೋಗಿದೆ. ಪೊಲೀಸರಿಗೆ ಫೋರ್ಡ್ ಇಕಾನ್ ಕಾರು ಅನ್ನೋ ಸಂಶಯ ಬಂದಿದ್ದೇ ತಡ, ಯಾರಾದ್ರೂ ಕೇಸ್ ಇದ್ದೋರು, ಫೋರ್ಡ್ ಇಕಾನ್ ಕಾರು ಓಡಿಸುತ್ತಿದ್ದರೇ ಅನ್ನುವ ಬಗ್ಗೆ ತಡಕಾಡಿದ್ದಾರೆ.
ಹೆಣ್ಣಿನಾಸೆ ಹುಟ್ಟಿಸಿ ನಿದ್ದೆ ಮಾತ್ರೆ ಕೊಟ್ಟಿದ್ದರು!

ಕಾರ್ಕಳ ಪೊಲೀಸರು ಹುಡುಕಾಡುತ್ತಿದ್ದ ಸದಾನಂದ ಶೇರಿಗಾರ್ ಬಗ್ಗೆ ಸಂಶಯ ಬಂದಿತ್ತು. ಆತನ ಮನೆ, ಸಂಬಂಧಿಕರಲ್ಲಿ ಚೆಕ್ ಮಾಡಿದಾಗ, ನಾಪತ್ತೆಯಾಗಿರುವುದು ಕಂಡುಬಂತು. ಕೂಡಲೇ ಸುಳಿವು ಬೆನ್ನತ್ತಿ ಹೋದ ಪೊಲೀಸರಿಗೆ ಸದಾನಂದ ಶೇರಿಗಾರನೇ ತಗ್ಲಾಕ್ಕೊಂಡಿದ್ದ. ಅಷ್ಟೇ ಅಲ್ಲ, ಆತನಿಗೆ ಸಹಾಯ ಮಾಡಿದ್ದ ಮಹಿಳೆಯೂ ಸಿಕ್ಕಿಬಿದ್ದಿದ್ದಾಳೆ. ಪೊಲೀಸ್ ಮಾಹಿತಿ ಪ್ರಕಾರ, ಆನಂದ ದೇವಾಡಿಗನಿಗೆ ನಾಲ್ವರು ಸೇರಿ ಕಂಠಪೂರ್ತಿ ಕುಡಿಸಿ, ಹೆಣ್ಣಿನ ಆಸೆ ಹುಟ್ಟಿಸಿ ಕಾರಿನಲ್ಲಿ ಕರೆದೊಯ್ದಿದ್ದಾರೆ. ವಯಾಗ್ರ ಮಾತ್ರೆ ಎಂದು ಹೇಳಿ ನಿದ್ದೆ ಮಾತ್ರೆಯನ್ನು ಕುಡಿಸಿದ್ದಾರೆ. ಹಿಂಬದಿ ಸೀಟಿನಲ್ಲಿ ಒರಗಿದ್ದ ದೇವಾಡಿಗನಿಗೆ ಪೆಟ್ರೋಲ್ ಎರಚಿ ಬೆಂಕಿ ಗೀರಿದರೂ ಎಚ್ಚರ ಆಗಿರಲಿಲ್ಲ. ಜೀವಂತ ಸುಟ್ಟು ಹೋಗಿದ್ದಾನೆ.
ಉಪ್ಪುಂದ ಬಳಿಯ ಹೇನ್ ಬೇರು ಪ್ರದೇಶದ ನಿರ್ಜನ ರಸ್ತೆಯ ಬದಿ ಕಾರನ್ನು ನಿಲ್ಲಿಸಿ, ಐದು ಲೀಟರ್ ಕ್ಯಾನಲ್ಲಿ ತರಿಸಿದ್ದ ಪೆಟ್ರೋಲ್ ಸುರಿದು ಇಡೀ ಕಾರನ್ನು ಸುಟ್ಟು ಹಾಕಿದ್ದಾರೆ. ತನ್ನದೇ ಕಾರಿನಲ್ಲಿ ಸದಾನಂದ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಬಿಂಬಿಸಲು ಅದ್ಭುತ ನಾಟಕ ಆಡಿದ್ದರು. ಆದರೆ, ಬಿಟ್ಟುಕೊಂಡಿದ್ದ ಕೆಲವೊಂದು ಸುಳಿವು, ಅದೇ ರಾತ್ರಿಯಲ್ಲಿ ಕಾರ್ಕಳದಲ್ಲಿ ನೋಡಿದ್ದ ಕೆಲವರು, ಅಪರಾತ್ರಿಯಲ್ಲಿ ಕೃತ್ಯ ಎಸಗಿದ್ದ ನರಹಂತಕರ ಬಗ್ಗೆ ಪೊಲೀಸರಿಗೆ ಕೊಲೆಕೃತ್ಯದ ವಾಸನೆ ಹರಡಿಸಿತ್ತು. ಸರ್ಕಲ್ ಇನ್ಸ್ ಪೆಕ್ಟರ್ ಸಂತೋಷ್ ಕಾಯ್ಕಿಣಿ ನೇತೃತ್ವದ ಪೊಲೀಸರ ತಂಡ, ಎಸ್ಪಿ ವಿಷ್ಣುವರ್ಧನ್ ಅವರ ಚಾಕಚಕ್ಯತೆ ಕೆಲಸ ಮಾಡಿತ್ತು.
ತಾನೇ ತೋಡಿದ ಖೆಡ್ಡಾಗೆ ಸದಾನಂದ ಶೇರಿಗಾರ್ ಬಿದ್ದಿದ್ದಾನೆ. ಪ್ರೇಮಲೋಕದ ನಾಟಕವಾಡಿ ಅಮಾಯಕನಿಗೆ ಆಸೆ ಹುಟ್ಟಿಸಿದ್ದ ಮಹಿಳೆಯೂ ತಗ್ಲಾಕ್ಕೊಂಡಿದ್ದಾಳೆ. ಹೆಣ್ಣಿನಾಸೆಯಿಂದ ಕಂಠಪೂರ್ತಿ ಕುಡಿದು ಕಾರಿನಲ್ಲಿ ತೆರಳಿದ್ದ ವ್ಯಕ್ತಿ ಮಸಣ ಸೇರಿದ್ದಾನೆ. ಒಟ್ಟು ಕೃತ್ಯಕ್ಕೆ ಸದಾನಂದನಿಗೆ ಸಹಕಾರ ನೀಡಿದ್ದ ಇನ್ನಿಬ್ಬರು ವ್ಯಕ್ತಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Byndoor station police who investigated the case where a man cahhred to death was found inside a burnt car at Henuberu, arrested four accused including a woman and produced them in the court. They have been subjected to police custody till July 18. Sadananda Sherigar, a surveyor had planned to kill somebody else by setting fire to the car and a person in it in order to appear to look like that he himself died in order to cover his financial frauds.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 09:10 pm
HK News Desk
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
14-11-25 11:01 pm
Mangalore Correspondent
Kumpala, Dog, Crime, Mangalore: ಬೀದಿ ನಾಯಿಗಳ ದ...
14-11-25 10:10 pm
ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ; ಮಕ್ಕ...
14-11-25 09:03 pm
ಡಿಸಿಸಿ ಬ್ಯಾಂಕ್ ಸಾಲಕ್ಕೆ ಜಾಮೀನು ನಿಂತು ಚೆಕ್ ನೀಡಿ...
14-11-25 03:34 pm
ಸದಸ್ಯತ್ವ ಕಳಕೊಂಡವರಿಂದಲೇ ದರ್ಗಾ ಕಮಿಟಿ ವಿರುದ್ಧ ಅಪ...
13-11-25 07:41 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm