ಬ್ರೇಕಿಂಗ್ ನ್ಯೂಸ್
14-07-22 07:23 pm Mangalore Correspondent ಕರಾವಳಿ
ಮಂಗಳೂರು, ಜುಲೈ 14: ಮಂಗಳೂರು ಪೊಲೀಸರ ಮಾನ ಹರಾಜು ಹಾಕಿದ್ದ ಐಷಾರಾಮಿ ಕಾರು ಮಾರಾಟ ಪ್ರಕರಣದಲ್ಲಿ ಮೂವರು ಪೊಲೀಸರಿಗೆ ಸಿಐಡಿ ತನಿಖಾ ತಂಡ ಕ್ಲೀನ್ ಚಿಟ್ ನೀಡಿದೆ. ಆದರೆ ಪ್ರಕರಣದಲ್ಲಿ ಗಂಭೀರ ಆರೋಪ ಎದುರಿಸಿದ್ದ ನಾಲ್ಕನೇ ವ್ಯಕ್ತಿಯ ಮೇಲಿನ ತನಿಖೆಯನ್ನು ತನಿಖಾ ತಂಡ ಇನ್ನೂ ಬಾಕಿಯಿರಿಸಿದ್ದು ಕುತ್ತಿಗೆ ಹಿಡಿದುಕೊಳ್ಳುವ ಸಾಧ್ಯತೆ ಕಂಡುಬಂದಿದೆ.
ಕಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ 2021ರ ಫೆಬ್ರವರಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ ಇಬ್ಬರು ಪೊಲೀಸ್ ಸಿಬಂದಿಯನ್ನು ಅಮಾನತು ಮಾಡಲಾಗಿತ್ತು. ಆಗಿನ ಸಿಇಎನ್ ಠಾಣೆಯ ಇನ್ಸ್ ಪೆಕ್ಟರ್ ಆಗಿದ್ದ ರಾಮಕೃಷ್ಣ, ಸಿಸಿಬಿಯಲ್ಲಿ ಎಸ್ಐ ಆಗಿದ್ದ ಕಬ್ಬಾಳರಾಜ್, ಸಿಸಿಬಿಯಲ್ಲಿ ಪೊಲೀಸ್ ಸಿಬಂದಿಯಾಗಿದ್ದ ರಾಜಾ ಮತ್ತು ಆಶಿತ್ ಡಿಸೋಜ ಅಮಾನತಾಗಿದ್ದವರು. ಆಗಿನ ಮಂಗಳೂರು ನಗರ ಡಿಸಿಪಿ ವಿನಯ್ ಗಾಂವ್ಕರ್ ನೀಡಿದ ಪ್ರಾಥಮಿಕ ವರದಿ ಆಧರಿಸಿ ನಾಲ್ವರನ್ನು ಡಿಜಿಪಿ ಪ್ರವೀಣ್ ಸೂದ್ ಇಲಾಖಾ ತನಿಖೆ ಬಾಕಿಯಿರಿಸಿ ಅಮಾನತು ಮಾಡಿದ್ದರು. ಅಲ್ಲದೆ, ಪ್ರಕರಣದ ತನಿಖೆಯನ್ನು ಸಿಐಡಿ ತಂಡಕ್ಕೆ ವಹಿಸಿದ್ದರು.
ಒಂದು ವರ್ಷದಿಂದ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಇತ್ತೀಚೆಗೆ ಡಿಜಿಪಿಗೆ ವರದಿ ನೀಡಿದ್ದಾರೆ ಎನ್ನಲಾಗುತ್ತಿದೆ. ತಿಂಗಳ ಹಿಂದೆ ವರದಿ ನೀಡಿದ್ದು, ಪ್ರಕರಣದಲ್ಲಿ ಸಸ್ಪೆಂಡ್ ಆಗಿದ್ದ ಇನ್ಸ್ ಪೆಕ್ಟರ್ ರಾಮಕೃಷ್ಣ, ಪೊಲೀಸ್ ಸಿಬಂದಿ ರಾಜಾ ಮತ್ತು ಆಶಿತ್ ಡಿಸೋಜ ಅವರು ತಪ್ಪೆಸಗಿರುವುದಕ್ಕೆ ಸಾಕ್ಷ್ಯ ಇಲ್ಲವೆಂದು ಕ್ಲೀನ್ ಚಿಟ್ ನೀಡಲಾಗಿದೆ. ಆದರೆ ಪ್ರಕರಣ ಸಂದರ್ಭದಲ್ಲಿ ಸಿಸಿಬಿ ಎಸ್ಐ ಆಗಿದ್ದ ಡಿಕೆ ಕಬ್ಬಾಳರಾಜ್ ಮೇಲಿನ ತನಿಖೆಯಿನ್ನೂ ಮುಗಿದಿಲ್ಲ ಎನ್ನಲಾಗುತ್ತಿದೆ. ಈ ಪೈಕಿ ಇನ್ಸ್ ಪೆಕ್ಟರ್ ರಾಮಕೃಷ್ಣ ತಿಂಗಳ ಹಿಂದೆ ಇಲಾಖಾ ಸೇವೆಯಿಂದ ನಿವೃತ್ತರಾಗಿದ್ದಾರೆ. ರಾಜಾ ಮತ್ತು ಆಶಿತ್ ಬೇರೆ ಬೇರೆ ಠಾಣೆಗಳಲ್ಲಿ ವರ್ಗಾವಣೆಯಾಗಿ ಕರ್ತವ್ಯದಲ್ಲಿದ್ದಾರೆ. ಸಸ್ಪೆಂಡ್ ಆಗಿದ್ದ ನಾಲ್ವರನ್ನೂ 2021ರ ನವೆಂಬರ್ ತಿಂಗಳಲ್ಲಿ ಮತ್ತೆ ಸೇವೆಗೆ ನಿಯೋಜನೆ ಮಾಡಲಾಗಿತ್ತು. ಕಬ್ಬಾಳರಾಜ್, ಬೆಂಗಳೂರು ಇಂಟೆಲಿಜೆನ್ಸ್ ವಿಭಾಗಕ್ಕೆ ವರ್ಗವಾಗಿದ್ದರು.
ಪೊಲೀಸರನ್ನು ಘಟ್ಟ ಹತ್ತಿಸಿತ್ತು ಮನಿ ಡಬ್ಲಿಂಗ್ !
ಕೇರಳ ಮೂಲದ ಆಂಟನಿ, ಮ್ಯಾಥ್ಯೂ ಎಂಬವರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿದ್ದು, ಉಪ್ಪಿನಂಗಡಿ, ನೆಲ್ಯಾಡಿಯಲ್ಲಿ ಮನಿ ಡಬ್ಲಿಂಗ್ ಮಾಡುತ್ತೇವೆಂದು ನೂರಾರು ಮಂದಿಯಿಂದ ಲಕ್ಷಾಂತರ ರೂಪಾಯಿ ಹಣವನ್ನು ಪಡೆದಿದ್ದರು. ಬೇನಾಮಿ ಹಣ ಪಡೆದು ವಂಚಿಸಿದ್ದ ಬಗ್ಗೆ ಮಂಗಳೂರಿನ ಆರ್ಥಿಕ ಅಪರಾಧಗಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಕ್ತಿನಗರದ ಮಹಿಳೆಯೊಬ್ಬರು ತನಗೆ ವಂಚನೆ ಆಗಿರುವ ಬಗ್ಗೆ ಮನಿ ಡಬ್ಲಿಂಗ್ ಕಂಪನಿ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿದ್ದ ಇನ್ಸ್ ಪೆಕ್ಟರ್ ರಾಮಕೃಷ್ಣ, ತನಿಖೆಗೆ ಹೆಚ್ಚಿನ ಸಿಬಂದಿ ಬೇಕೆಂದು ಕೇಳಿದ್ದಕ್ಕೆ ಆಗಿನ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಸಿಸಿಬಿಯ ತಂಡಕ್ಕೆ ಹೊಣೆ ನೀಡಿದ್ದರು.
50 ಲಕ್ಷಕ್ಕೆ ಕಾರು ಮಾರಾಟ ಆರೋಪ
ಸಿಸಿಬಿ ಎಸ್ಐ ಕಬ್ಬಾಳರಾಜ್ ನೇತೃತ್ವದ ತಂಡವು ಆಂಟನಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿ, ಅವರ ಬಳಿಯಿದ್ದ ಬಿಎಂಡಬ್ಲ್ಯು ಮತ್ತು ಪೋರ್ಶೆ ಕಾರುಗಳನ್ನು ವಶಕ್ಕೆ ಪಡೆದಿತ್ತು. ಇದರ ನಡುವೆ, ಆರೋಪಿಗಳನ್ನು ಬಿಟ್ಟು ಕಳುಹಿಸಲು ಡೀಲ್ ಆಗಿತ್ತು ಎನ್ನಲಾಗಿದ್ದು, ಇಷ್ಟು ಹಣ ಕೊಟ್ಟರೆ ಬಿಟ್ಟು ಕಳುಹಿಸುವುದಾಗಿ ಒಪ್ಪಂದ ಆಗಿತ್ತು ಅನ್ನುವ ಆರೋಪ ಕೇಳಿಬಂದಿತ್ತು. ಇದೇ ವೇಳೆ, ವಶಕ್ಕೆ ಪಡೆದಿದ್ದ ಎರಡು ಕಾರುಗಳನ್ನು ಪೊಲೀಸರು 50 ಲಕ್ಷ ರೂಪಾಯಿಗೆ ಹೈದಾರಾಬಾದ್ ಮೂಲದ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡಿದ್ದಾಗಿ ಹೇಳಲಾಗಿತ್ತು. ಈ ವಿಷಯ ಮಾಧ್ಯಮಕ್ಕೆ ಲೀಕ್ ಆಗಿದ್ದಲ್ಲದೆ, ಮಂಗಳೂರು ಸಿಸಿಬಿ ಪೊಲೀಸರ ಡೀಲಿಂಗ್ ಕತೆಗಳು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದ್ದವು. ಇದರ ಬೆನ್ನಲ್ಲೇ ಮಂಗಳೂರು ಕಮಿಷನರ್ ಆಗಿದ್ದ ವಿಕಾಸ್ ಕುಮಾರ್ ಎತ್ತಂಗಡಿ ಆಗಿದ್ದರೆ, ಕಾರು ಮಾರಾಟ ಪ್ರಕರಣದ ತನಿಖೆಗೆ ಆದೇಶ ಆಗಿತ್ತು.
ಆನಂತರ, ಸಿಐಡಿ ಅಧಿಕಾರಿಗಳು ಪ್ರಕರಣದ ತನಿಖೆ ಆರಂಭಿಸುತ್ತಿದ್ದಂತೆ ಮಂಗಳೂರಿನ ಪೊಲೀಸರ ಬಳಿಯಿಂದ ನಾಪತ್ತೆಯಾಗಿದ್ದ ಎರಡೂ ಕಾರುಗಳು ಒಂದೆರಡು ವಾರದ ಬಳಿಕ ಕಮಿಷನರ್ ಕಚೇರಿ ಬಳಿ ಬಂದು ಕೂತಿದ್ದವು. ಪ್ರಕರಣದಲ್ಲಿ ಬಂಧನ ಆಗಿದ್ದ ಆರೋಪಿಗಳು ಜಾಮೀನು ಪಡೆದು ಹೊರಗೆ ಬಂದಿದ್ದರು. ಮಾರಾಟ ಆಗಿದೆ ಎಂದು ಹೇಳಲಾಗಿದ್ದ ಎರಡೂ ಕಾರುಗಳನ್ನು ಆಬಳಿಕ ಆರ್ಥಿಕ ಅಪರಾಧ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾಗಿ ತೋರಿಸಿ ಕೋರ್ಟಿಗೆ ಹಾಜರುಪಡಿಸಿದ್ದರು. ಆರೋಪಿಗಳನ್ನು ಬಂಧಿಸಿದಾಗ, ಅವರಿಂದ ಕಾರು ವಶಕ್ಕೆ ಪಡೆದಿದ್ದನ್ನು ಠಾಣೆಯಲ್ಲಿ ಉಲ್ಲೇಖ ಮಾಡದಿದ್ದುದೇ ತನಿಖಾಧಿಕಾರಿಯಾಗಿದ್ದ ರಾಮಕೃಷ್ಣ ಅವರ ಕೊರಳು ಹಿಡಿಯುವಂತಾಗಿತ್ತು.
ಆಸೆಗೆ ಬಿದ್ದು ಹಣ ಹೂಡಿದವರಿಗೆ ಚೊಂಬು
ಕಾರು ಮಾರಾಟ ಸೇರಿದಂತೆ ಮನಿ ಡಬ್ಲಿಂಗ್ ಪ್ರಕರಣವೂ ಸಿಐಡಿ ಅಧಿಕಾರಿಗಳ ಹೆಗಲೇರಿತ್ತು. ಇದೀಗ ಕಾರು ಮಾರಾಟ ಪ್ರಕರಣ ತಾರ್ಕಿಕ ಅಂತ್ಯ ಕಾಣುತ್ತಿದ್ದರೆ, ಮನಿ ಡಬ್ಲಿಂಗ್ ಪ್ರಕರಣದ ತನಿಖೆ ಪ್ರಗತಿ ಆಗಿರುವುದು ಕಂಡುಬಂದಿಲ್ಲ. ಪೊಲೀಸರ ಡೀಲಿಂಗ್ ನೆಪದಲ್ಲಿ ದುಪ್ಪಟ್ಟು ಹಣದಾಸೆಯಿಂದ ಬೇನಾಮಿ ಕಂಪನಿಗೆ ಹೂಡಿಕೆ ಮಾಡಿ ಮೋಸ ಹೋದ ನೂರಾರು ಮಂದಿಗೆ ಚೊಂಬೇ ಗತಿ ಅನ್ನುವಂತಾಗಿದೆ.
Mangalore CCB Luxury car missing case, three police personnel get clean chit by CID. No evidence of wrong-doing against Ramakrishna, Raja and Ashith Dsouza has been found. Investigation indicated that further inquiry needed to be conducted against Kabbalraj. The suspension of all four was revoked last November. The three officials got a clean chit last month. Two luxury cars valued at about Rs 50 lakh were seized from Delhi-based realtors Tomy Mathew, T Rajan, and others in an alleged real estate scam. The cars had reportedly gone missing and were recovered.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm