ಬ್ರೇಕಿಂಗ್ ನ್ಯೂಸ್
13-07-22 04:13 pm Mangalore Correspondent ಕರಾವಳಿ
ಸುಳ್ಯ, ಜುಲೈ 13: ಇನ್ನೇನು ಒಂದು ವಾರ ಕಳೆಯುತ್ತಿದ್ದರೆ ಆ ಮನೆಯಲ್ಲಿ ಒಕ್ಕಲು ಆಗುತ್ತಿತ್ತು. ಕುಟುಂಬಸ್ಥರು, ಮನೆಮಂದಿಯೆಲ್ಲ ವಾಸ ಇರುತ್ತಿದ್ದರು. ಆದರೆ, ಮಳೆರಾಯನ ಕೋಪವೋ, ಅಲ್ಲಿನ ಜಾಗದ ವೈರುಧ್ಯವೋ ಗೊತ್ತಿಲ್ಲ. ಕೊಡಗಿನ ವಾಸ್ತು ಶೈಲಿಯಲ್ಲಿ ಭಾರೀ ಆಕರ್ಷಕವಾಗಿ ಕಟ್ಟಿದ್ದ ಮನೆಯ ಮೇಲೆಯೇ ಗುಡ್ಡ ಕುಸಿದು ಬಿದ್ದಿದೆ.
ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಹರಿಹರ- ಪಳ್ಳತ್ತಡ್ಕದ ಕಜ್ಜೋಡು ಎಂಬಲ್ಲಿ ತೇಜ ಕುಮಾರ್ ಎಂಬವರಿಗೆ ಸೇರಿದ ಹೊಸ ಮನೆ ಗುಡ್ಡದ ಮಣ್ಣು ಕುಸಿದು ನೆಲಸಮ ಆಗಿದೆ. ಹತ್ತು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಎತ್ತರದ ಗುಡ್ಡ ಕುಸಿದು ಬಂದಿದ್ದು ತಳದಲ್ಲಿದ್ದ ಮನೆಯನ್ನು ಆಪೋಶನ ತೆಗೆದುಕೊಂಡಿದೆ. ಜುಲೈ 10ರ ಬೆಳಗ್ಗೆ 6.25ರ ವೇಳೆಗೆ ಕೊಡಗಿನ ಗಡಿಭಾಗದಲ್ಲಿ ಭೂಕಂಪನ ಸದ್ದು ಮಾಡಿತ್ತು. ಹೊಸ ಮನೆಯಲ್ಲಿ ಕೊನೆಯ ಹಂತದ ಕೆಲಸಕ್ಕಾಗಿ ಟೈಲ್ಸ್ ಮತ್ತಿತರ ಅಲಂಕಾರಿಕ ವಸ್ತುಗಳನ್ನು ತಂದಿಡಲಾಗಿತ್ತು. ಮುನ್ನಾ ದಿನ ರಾತ್ರಿ ವಸ್ತುಗಳು ಬಂದಿದ್ದರಿಂದ ತೇಜ ಕುಮಾರ್ ಅವರ ಇಬ್ಬರು ಪುತ್ರರು ಮನೆಯಲ್ಲಿ ಮಲಗಿದ್ದರು.
ಬೆಳ್ಳಂಬೆಳಗ್ಗೆ ಭೂಮಿ ಅದುರಿದ ಅನುಭವ ಆಗಿದ್ದರಿಂದ ಉಜ್ವಲ್ ಮತ್ತು ಪ್ರಜ್ವಲ್ ಎಂಬ ಇಬ್ಬರು ಸೋದರರು ಭಯದಿಂದ ಮನೆಯಿಂದ ಹೊರಕ್ಕೆ ಓಡಿ ಬಂದಿದ್ದರು. ಇಬ್ಬರು ಯುವಕರು ಮನೆಯಿಂದ ಹೊರಗೆ ಬಂದು ಹತ್ತಿರದಲ್ಲೇ ಇರುವ ತಾತ್ಕಾಲಿಕ ಶೆಡ್ ಮನೆಗೆ ಬಂದಿದ್ದರು. ಕೆಲ ಹೊತ್ತಿನಲ್ಲಿಯೇ ಮೇಲಿನ ಭಾಗದಿಂದ ಗುಡ್ಡ ಕುಸಿದು ಬಂದಿದ್ದು ನೋಡ ನೋಡುತ್ತಲೇ ಇಡೀ ಮನೆಯನ್ನು ಮಣ್ಣು ಆವರಿಸಿಕೊಂಡಿದೆ. ಮನೆ ಎದುರಲ್ಲಿ ನಿಲ್ಲಿಸಿದ್ದ ಮೂರು ಬೈಕ್ ಗಳು ಕೂಡ ಮಣ್ಣಿನಡಿಯಲ್ಲಿ ಹೂತು ಹೋಗಿವೆ. ಅಲ್ಲದೆ, ಹೊಸ ಮನೆಯನ್ನು ಅಲಂಕರಿಸಿದ್ದ ಮರದ ಕೆತ್ತನೆಗಳು, ಕಂಬಗಳು, ಗೋಡೆಗಳು, ಟೈಲ್ಸ್ ಗಳು ಬಿರುಕು ಬಿಟ್ಟು ಹಾಳಾಗಿ ಬಿದ್ದಿವೆ.
ಸುಮಾರು 25 ಲಕ್ಷ ರೂಪಾಯಿ ಖರ್ಚು ಮಾಡಿ, ಅತ್ಯಂತ ಸುಂದರವಾಗಿ ಮನೆಯನ್ನು ಕಟ್ಟಿದ್ದೆವು. ಆದರೆ ಯಾವ ದೇವರಿಗೆ ಇಷ್ಟ ಆಗಿಲ್ಲವೋ ಏನೋ.. ಎಲ್ಲವೂ ಕುಸಿದು ಹೋಗಿದೆ. ಪೂರ್ತಿ ನಷ್ಟವಾಗಿದೆ. ತಹಸೀಲ್ದಾರ್ ಮತ್ತು ಸ್ಥಳೀಯ ಪಂಚಾಯತ್ ಅಧಿಕಾರಿಗಳು ಬಂದು ನೋಡಿದ್ದಾರೆ. ಕ್ಷೇತ್ರದ ಶಾಸಕ ಅಂಗಾರರು ಸಚಿವರಾಗಿದ್ದರೂ, ಇತ್ತ ಕಣ್ಣೆತ್ತಿ ನೋಡಿಲ್ಲ. ಬೇರೆ ಯಾವುದೇ ಮೇಲಿನ ಸ್ತರದ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಸ್ಥಳಕ್ಕೆ ಬಂದಿಲ್ಲ ಎಂದು ಮನೆಮಗ ಉಜ್ವಲ್ ಅಲವತ್ತುಕೊಂಡಿದ್ದಾರೆ.
ಸರಿಯಾಗಿ ಒಂದು ವರ್ಷದ ಹಿಂದೆಯೂ ನಮ್ಮ ಹಳೆ ಮನೆ ಇದ್ದಾಗ, ದೊಡ್ಡ ಮರವೊಂದು ಮನೆಯ ಮೇಲೆ ಬಿದ್ದಿತ್ತು. ಹಾಗಾಗಿ ಹಳೆ ಮನೆಯನ್ನು ಕೆಡವಿ ಹೊಸತಾಗಿ ಕಟ್ಟಲು ಯೋಜನೆ ಹಾಕಿದ್ದೆವು. ಮನೆಗೆ ಮರ ಬಿದ್ದ ಕಾರಣ ಸ್ಥಳದ ದೈವದ ಶಾಪವೋ ಎನ್ನುವಂತೆ ಎಲ್ಲ ಪೂಜೆ, ಪುನಸ್ಕಾರ ಮಾಡಿದ್ದೆವು. ಒಂದೂವರೆ ಲಕ್ಷ ಖರ್ಚು ಮಾಡಿ, ದೈವ, ದೇವರಿಗೆ ಪೂಜೆ ಮಾಡಿದ್ದೆವು. ಆನಂತರ, ಹೊಸ ಮನೆಯ ಕೆಲಸ ಶುರು ಮಾಡಿದ್ದೆವು. ಈಗ ಎಲ್ಲವೂ ಸರಿಯಾಯ್ತು ಜುಲೈ 18ಕ್ಕೆ ಮನೆ ಒಕ್ಕಲು ಮಾಡಲು ದಿನ ನಿಗದಿ ಮಾಡಿದ್ದೆವು. ಆದರೆ, ಗುಡ್ಡ ಕುಸಿದು ಇಡೀ ಮನೆಯನ್ನೇ ಆಹುತಿ ತೆಗೆದುಕೊಂಡಿದೆ. ನಾವು ನೂರು ವರ್ಷಗಳಿಂದಲೂ ಇದೇ ಜಾಗದಲ್ಲಿದ್ದೇವೆ. ಇಂತಹ ಸ್ಥಿತಿ ಎದುರಾಗಿರಲಿಲ್ಲ.
ಸುತ್ತ ರಬ್ಬರ್ ಕಾಡು ಇತ್ತು. ಅದನ್ನು ತೆಗೆದು ಅಡಿಕೆ ಗಿಡ ಹಾಕಲು ಪ್ಲಾನ್ ಮಾಡಿದ್ದೆವು. ಅದಕ್ಕಾಗಿ ಸುತ್ತಲಿನ ಗುಡ್ಡವನ್ನು ಅಗೆದಿದ್ದೆವು. ಆದರೆ ಮನೆಗೂ ಗುಡ್ಡಕ್ಕೂ 30 ಮೀಟರ್ ಅಂತರ ಇತ್ತು. ಗುಡ್ಡ ಕುಸಿದು ಬಾರದಿರಲಿ ಎಂದು ಸ್ಲೋಪ್ ಆಗಿಯೇ ಮಾಡಿದ್ದೆವು. ಈ ಬಾರಿ ಮಳೆರಾಯ ಬಿಡದೆ ಕಾಡಿದ್ದು ಶಾಪವಾಯ್ತು. ನೀರಿನೊಂದಿಗೆ ಗುಡ್ಡದ ಮಣ್ಣು ಕುಸಿದು ಇಡೀ ಮನೆಯನ್ನು ಆವರಿಸಿದೆ. ಹೊರಗಿನಿಂದ ಮನೆ ನೋಡಲು ನೇರವಾಗಿದ್ದರೂ, ಒಳಗೆಲ್ಲ ಕುಸಿದು ಹೋಗಿದೆ. ಮೂರು ಕೋಣೆಗಳಲ್ಲಿ ಮಣ್ಣು ತುಂಬಿದೆ. ಅದನ್ನು ಮತ್ತೆ ಸರಿಪಡಿಸಲು ಸಾಧ್ಯವಿಲ್ಲ. ಎಲ್ಲ ತೆಗೆದು ಹೊಸತಾಗಿಯೇ ಕಟ್ಟಬೇಕು. ಜೀವ ಉಳಿದಿದೆ, ಹಣ ಏನಾದ್ರೂ ಮಾಡ್ಕೋಬಹುದು ಎಂದು ನಿಟ್ಟುಸಿರು ಬಿಟ್ಟರು ಉಜ್ವಲ್ ಕುಮಾರ್.
ಇವರಿಗೆ ಸುತ್ತ ಎರಡೂವರೆ ಎಕರೆ ಭೂಮಿ ಇದೆ. ಪಕ್ಕದಲ್ಲಿ ಇನ್ನೊಂದು ನಾಲ್ಕು ಎಕರೆ ಭೂಮಿ ಇದೆ. ತಂದೆ ಮೊದಲಿನಿಂದಲೂ ಕೃಷಿ ಮಾಡಿಕೊಂಡು ಬಂದಿದ್ದರು. ರಬ್ಬರ್, ಅಡಿಕೆ ತೋಟ ಇದೆ. ತಾಯಿ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಉಜ್ವಲ್ ಕುಮಾರ್ ಅಣ್ಣ ಪ್ರಜ್ವಲ್ ನಿಂತಿಕಲ್ಲಿನಲ್ಲಿ ಫ್ಯಾಬ್ರಿಕೇಶನ್ ವರ್ಕ್ ಮಾಡುತ್ತಿದ್ದಾರೆ. ಉಜ್ವಲ್ ಈ ಹಿಂದೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೆಲಸ ಮಾಡುತ್ತಿದ್ದು, ಈಗ ಕೆಲಸ ಬಿಟ್ಟು ಕೃಷಿಯಲ್ಲಿ ಕೈಜೋಡಿಸಿದ್ದಾರೆ. ಹಾಗಾಗಿ ಒಮ್ಮೆಗೆ ಮನೆ ಬಿದ್ದು ಎದೆ ಧಸಕ್ಕೆಂದರೂ, ಎದೆಗುಂದದ ಜಾಯಮಾನ ಇವರದು.
Mangalore Newly constructed House collapsed due to heavy rains even before inauguration at Sullia. The house has collapsed due to a landslide because of heavy rain. Even after the incident no MLA or authorities have come to visit the spot.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm