ಬೆಳ್ಮಣ್ ಬಳಿ ಬೈಕ್ ಅಪಘಾತ ; ಸೋದರರಿಬ್ಬರು ಸಾವು  

10-07-22 10:34 pm       Mangalore Correspondent   ಕರಾವಳಿ

ತಾಲೂಕಿನ ಬೆಳ್ಮಣ್ ಸಮೀಪದ ನಂದಳಿಕೆಯ ಮಾವಿನಕಟ್ಟೆ ಎಂಬಲ್ಲಿ ಕಾರು ಮತ್ತು ಬೈಕ್ ಅಪಘಾತಕ್ಕೀಡಾಗಿ ಸಹೋದರರಿಬ್ಬರು ಬಲಿಯಾದ ಘಟನೆ ನಡೆದಿದೆ.

ಕಾರ್ಕಳ, ಜುಲೈ 10: ತಾಲೂಕಿನ ಬೆಳ್ಮಣ್ ಸಮೀಪದ ನಂದಳಿಕೆಯ ಮಾವಿನಕಟ್ಟೆ ಎಂಬಲ್ಲಿ ಕಾರು ಮತ್ತು ಬೈಕ್ ಅಪಘಾತಕ್ಕೀಡಾಗಿ ಸಹೋದರರಿಬ್ಬರು ಬಲಿಯಾದ ಘಟನೆ ನಡೆದಿದೆ.

ನಂದಳಿಕೆಯ ಸತೀಶ್ ಹಾಗೂ ಸಂದೀಪ್ ಮೃತ ಯುವಕರು. ಇವರು ನಿಟ್ಟೆಯಿಂದ ನಂದಳಿಕೆ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಪಡುಬಿದ್ರೆ ಕಡೆಯಿಂದ ವೇಗವಾಗಿ ಬರುತ್ತಿದ್ದ ಇನ್ನೋವಾ ಕಾರು ಮುಖಾಮುಖಿಯಾಗಿ ಬೈಕಿಗೆ ಡಿಕ್ಕಿಯಾಗಿದೆ. ಪರಿಣಾಮ ಒಬ್ಬಾತ ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬ ಯುವಕ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Two brothers were killed on the spot after the scooter they were riding collided head-on with a car in Mavinakatte of Nandalike here on Sunday, July 10. The deceased are Sandeep Kulal (25), and his elder brother Sathish Kulal (28).