ಕೊಡಗು ಗಡಿಯಲ್ಲಿ ಬೆಳ್ಳಂಬೆಳಗ್ಗೆ ಎಂಟನೇ ಬಾರಿ ಕಂಪನ, ಈ ಬಾರಿ ಅರಂತೋಡಿನಲ್ಲಿ ಕೇಂದ್ರ ಬಿಂದು 

10-07-22 01:53 pm       Mangalore Correspondent   ಕರಾವಳಿ

ಕೊಡಗು - ದಕ್ಷಿಣ ಕನ್ನಡ ಗಡಿಭಾಗದಲ್ಲಿ ಇಂದು ಬೆಳಗ್ಗೆ ಮತ್ತೆ ಭೂಮಿ ಕಂಪಿಸಿದೆ. ಕೊಡಗು ಭಾಗದ ಚೆಂಬು, ಪೆರಾಜೆ, ಸಂಪಾಜೆಯಿಂದ ತೊಡಗಿ ಸುಳ್ಯ ತಾಲೂಕಿನ ಮರ್ಕಂಜ, ಎಲಿಮಲೆ, ಅರಂತೋಡು ಮುಂತಾದೆಡೆ ಭೂಮಿ ಕಂಪಿಸಿದೆ. 

ಸುಳ್ಯ, ಜುಲೈ 10: ಕೊಡಗು - ದಕ್ಷಿಣ ಕನ್ನಡ ಗಡಿಭಾಗದಲ್ಲಿ ಇಂದು ಬೆಳಗ್ಗೆ ಮತ್ತೆ ಭೂಮಿ ಕಂಪಿಸಿದೆ. ಕೊಡಗು ಭಾಗದ ಚೆಂಬು, ಪೆರಾಜೆ, ಸಂಪಾಜೆಯಿಂದ ತೊಡಗಿ ಸುಳ್ಯ ತಾಲೂಕಿನ ಮರ್ಕಂಜ, ಎಲಿಮಲೆ, ಅರಂತೋಡು ಮುಂತಾದೆಡೆ ಭೂಮಿ ಕಂಪಿಸಿದೆ. 

ಮುಂಜಾನೆ 6.24ರ ವೇಳೆಗೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ್ದು ಮಲಗಿದ್ದ ಜನರು ಭೂಮಿ ಅಲುಗಾಡಿದ ಅನುಭವಕ್ಕೊಳಗಾಗಿ ಬೆಚ್ಚಿ ಬಿದ್ದಿದ್ದಾರೆ. ಈ ಭಾಗದಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಎಂಟು ಬಾರಿ ಭೂಮಿ ಕಂಪಿಸಿದೆ. 

ಕಲ್ಲುಗುಂಡಿ ಮಠದಮೂಲೆ ಬಳಿಯ ನಿವಾಸಿ ತಾಜುದ್ದೀನ್ ಎಂಬವರ ಮನೆ ಹಿಂಬದಿಯ ಗುಡ್ಡ ಭೂಕಂಪದ ಸಂದರ್ಭದಲ್ಲಿ ಬಿರುಕು ಬಿಟ್ಟು ಕುಸಿದು ಬಿದ್ದಿದೆ. ಇದರಿಂದ ಮನೆ ಮೇಲೆ ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಈವರೆಗೂ ಚೆಂಬು ಭಾಗದಲ್ಲಿದ್ದ ಕಂಪನದ ಕೇಂದ್ರ ಬಿಂದು ದಕ್ಷಿಣ ಕನ್ನಡ ಜಿಲ್ಲೆಯ ಭಾಗದ ಅರಂತೋಡಿನಲ್ಲಿ ತೋರಿಸಿದೆ. 

ಒಂದೆಡೆ ಸಂಪಾಜೆ, ಗಾಳಿಬೀಡು, ಚೆಂಬು, ಜೋಡುಪಾಲದ ಭಾಗದಲ್ಲಿ ಭಾರೀ ಮಳೆಯ ಆಗುತ್ತಿದ್ದು ಮತ್ತೆ ಭೂಮಿ ಕುಸಿಯುವ ಆತಂಕ ಎದುರಾಗಿದೆ. ಇದೇ ಸಂದರ್ಭದಲ್ಲಿ ಭೂಕಂಪ ಆಗುತ್ತಿರುವುದು ಜನರನ್ನು ಭೀತಿಗೊಳಿಸಿದೆ.

Earth shock once again in the taluk on the early morning of Sunday, July 10. The residents of Sampaje and nearby areas, Arantodu, Thodikana, Chembu and Kallapally area shared posts about the tremors at 6:23 AM on social media platforms. G K Hamid, president of Sampaje gram panchayat said that he felt the earth shaking with tremendous sounds. Arun Rangathamale, member of taluk panchayat said that the tremors of Sunday were more intense.