ಮುಂದುವರಿದ ವರುಣಾರ್ಭಟ, ಕುಂಪಲದಲ್ಲಿ ಮನೆಯಂಗಳದ ಬಾವಿ ಕುಸಿತ, ರಾತ್ರಿ ನಡೆದ ಘಟನೆಯಲ್ಲಿ ತಪ್ಪಿತು ಭಾರೀ ದುರಂತ ! 

06-07-22 12:01 pm       Mangalore Correspondent   ಕರಾವಳಿ

ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಅಂಗಳದಲ್ಲಿದ್ದ ಬಾವಿ ಕುಸಿದಿದ್ದು ಘಟನೆ ರಾತ್ರಿ ವೇಳೆ ನಡೆದ ಪರಿಣಾಮ ಭಾರೀ ದುರಂತ ತಪ್ಪಿರುವ ಘಟನೆ ಉಳ್ಳಾಲದ ಕುಂಪಲ ಮೂರುಕಟ್ಟೆ ಎರಡನೇ ಅಡ್ಡ ರಸ್ತೆಯಲ್ಲಿ ನಡೆದಿದೆ. 

ಉಳ್ಳಾಲ, ಜು.6: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಅಂಗಳದಲ್ಲಿದ್ದ ಬಾವಿ ಕುಸಿದಿದ್ದು ಘಟನೆ ರಾತ್ರಿ ವೇಳೆ ನಡೆದ ಪರಿಣಾಮ ಭಾರೀ ದುರಂತ ತಪ್ಪಿರುವ ಘಟನೆ ಉಳ್ಳಾಲದ ಕುಂಪಲ ಮೂರುಕಟ್ಟೆ ಎರಡನೇ ಅಡ್ಡ ರಸ್ತೆಯಲ್ಲಿ ನಡೆದಿದೆ. 

ನಿನ್ನೆ ರಾತ್ರಿ ಮೂರುಕಟ್ಟೆ ನಿವಾಸಿ ಸಂದೀಪ್ ಪೂಜಾರಿಯವರ ಮನೆಯಂಗಳದ ಬಾವಿ ಆವರಣ ಕಟ್ಟೆ ಸಮೇತ ಕುಸಿತಕ್ಕೊಳಗಾಗಿದೆ. ಸಂದೀಪ್ ಮತ್ತು ಅವರ ಇಬ್ಬರು ಸಹೋದರರು ಪತ್ನಿ ಮಕ್ಕಳೊಂದಿಗೆ ಈ ಮನೆಯಲ್ಲಿ ಜೊತೆಯಾಗಿ ವಾಸಿಸುತ್ತಿದ್ದಾರೆ. ಸಂದೀಪ್ ಅವರ ಸಹೋದರ ಅವಿನಾಶ್ ಅವರ ಪತ್ನಿ ದಿನ‌ನಿತ್ಯವೂ ಬೆಳ್ಳಂಬೆಳಗ್ಗೆ ಕುಡಿಯಲು ಬಾವಿಯ ನೀರನ್ನು ಸೇದುವ ಪರಿಪಾಠ ಬೆಳೆಸಿದ್ದರಂತೆ. ಅಲ್ಲದೇ ಹಗಲಲ್ಲಿ ಮೂವರು ಸಹೋದರರ ಮಕ್ಕಳು ಅಂಗಳದಲ್ಲಿ ಆಟವಾಡುತ್ತಿರುತ್ತಾರೆ. ಅದೃಷ್ಟವಶಾತ್ ಘಟನೆ ರಾತ್ರಿ ನಡೆದುದರಿಂದ ಭಾರೀ ದುರುಂತ ತಪ್ಪಿದಂತಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. 

ಬಾವಿಯ ಹತ್ತಿರವೇ ಕಾರನ್ನೂ ನಿಲ್ಲಿಸಲಾಗಿದ್ದು ಅದಕ್ಕೆ ಹಾನಿ ಸಂಭವಿಸಿಲ್ಲ. ಘಟನೆಯಿಂದ ಸುಮಾರು ಮೂರು ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಭೇಟಿ ಕೊಟ್ಟ ಸೋಮೇಶ್ವರ ಪುರಸಭಾ ನಿಕಟಪೂರ್ವ ಸದಸ್ಯರಾದ ಮನು ಕಟ್ಟೆಮನೆ ಅವರು ನಷ್ಟದ ಪರಿಹಾರ ಒದಗಿಸಿ ಕೊಡುವುದಾಗಿ ಹೇಳಿದ್ದಾರೆ. ನಿರಂತರ ಮಳೆ ಸುರಿಯುವಾಗ ಬಾವಿಯ ನೀರು ಸೇದಬೇಡಿ ಎಂದು ಜನರಿಗೆ ಅವರು ಎಚ್ಚರಿಸಿದ್ದಾರೆ.

Water Well collapsed due to heavy rain at Kumpala in Mangalore.