ಎಸ್ಸೆಸ್ಸೆಲ್ಸಿ ಮತ್ತು ಪದವಿ ಶಿಕ್ಷಣವನ್ನ ಒಂದೇ ತಕ್ಕಡಿಯಲ್ಲಿ ಅಲೆಯಬೇಡಿ ; ಡಾ.ಎಂ.ಮೋಹನ ಆಳ್ವ 

13-06-22 01:03 pm       Mangalore Correspondent   ಕರಾವಳಿ

ಎಸ್ಸೆಸ್ಸೆಲ್ಸಿಯೇ ಬೇರೆ, ಪದವಿ ಶಿಕ್ಷಣವೇ ಬೇರೆ. ಇವೆರಡನ್ನು ಒಂದೇ ತಕ್ಕಡಿಯಲ್ಲಿ ಅಲೆಯಬೇಡಿ ಎಂದು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಉಳ್ಳಾಲ, ಜೂ.13 : ಎಸ್ಸೆಸ್ಸೆಲ್ಸಿಯೇ ಬೇರೆ, ಪದವಿ ಶಿಕ್ಷಣವೇ ಬೇರೆ. ಇವೆರಡನ್ನು ಒಂದೇ ತಕ್ಕಡಿಯಲ್ಲಿ ಅಲೆಯಬೇಡಿ ಎಂದು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ಶ್ರೀ ಬಾಲಕೃಷ್ಣ ಮಂದಿರ (ರಿ) ಕುಂಪಲ ಇದರ ವತಿಯಿಂದ 2021-2022 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉಳ್ಳಾಲ ತಾಲೂಕು ವ್ಯಾಪ್ತಿಯ 32 ಶಾಲೆಗಳ 90 ಶೇಕಡಾ ಅಧಿಕ ಅಂಕಗಳನ್ನ ಗಳಿಸಿದ 200 ಕ್ಕೂ ಅಧಿಕ ಮಕ್ಕಳಿಗೆ ಜ್ಞಾನ ದೀವಿಗೆ ಪುರಸ್ಕಾರ 2022 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಎಸ್.ಎಸ್.ಎಲ್.ಸಿ ಯಲ್ಲಿ ಕಲಿತದನ್ನ ಸೋಸುವುದೇ ಪದವಿ ಶಿಕ್ಷಣ. ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಬಂದು ವೃತ್ತಿ ಪರ ಶಿಕ್ಷಣವನ್ನ ಆಯ್ಕೆ ಮಾಡುವ ಕಾಲಘಟ್ಟವೇ ಈ ಪದವಿ ಶಿಕ್ಷಣವಾಗಿದೆ. ಆದುದರಿಂದ ವಿದ್ಯಾರ್ಥಿಗಳು ಗಂಭೀರವಾಗಿ ಪದವಿ ಶಿಕ್ಷಣದಲ್ಲಿ ತೊಡಗಿಸಬೇಕು. ಎಸ್.ಎಸ್.ಎಲ್.ಸಿ ಯಲ್ಲಿ ಸಾಧನೆಗೈದ ಮಕ್ಕಳನ್ನ ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ. ಆ ನಿಟ್ಟಿನಲ್ಲಿ ಬಾಲಕೃಷ್ಣ ಮಂದಿರದ ವತಿಯಿಂದ ನಡೆದ ಈ ಕಾರ್ಯ ಶ್ಲಾಘನೀಯ ಎಂದರು.

ವೇದಿಕೆಯಲ್ಲಿ ತುಳು ರಂಗಭೂಮಿ ಮತ್ತು ಚಲನಚಿತ್ರ ನಟ, ನಿರ್ದೇಶಕರಾದ ತೆಲಿಕೆದ ಬೊಳ್ಳಿ ಡಾ.ದೇವದಾಸ್ ಕಾಪಿಕಾಡ್ ಅವರಿಗೆ "ಕೃಷ್ಣ ತಿಲಕ" ಕಲಾ ಪುರಸ್ಕಾರ ಪ್ರದಾನಿಸಲಾಯಿತು.

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಪ್ರತಿಮಾ ಹೆಬ್ಬಾರ್ ಮತ್ತು ನಿವೃತ್ತ ಶಿಕ್ಷಕರಿಗೆ ವೇದಿಕೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಎಸ್.ಎಸ್.ಎಲ್.ಸಿ ಯಲ್ಲಿ 90 ಶೇಕಡಾಕ್ಕಿಂತ ಅಧಿಕ ಅಂಕಗಳನ್ನ ಗಳಿಸಿದ ಸುಮಾರು 200 ವಿದ್ಯಾರ್ಥಿಗಳಿಗೆ ಜ್ಞಾನ ದೀವಿಗೆ ಪುರಸ್ಕಾರ ನೀಡಲಾಯಿತು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಸುಧಾಕರ್, ಉಳ್ಳಾಲ ತಾಲೂಕು ಶಿಕ್ಷಣ ಅಧಿಕಾರಿ ಪ್ರಶಾಂತ್ ಕುಮಾರ್, ವಿದ್ಯಾಸ್ನೇಹಿ ಹರೀಶ್ ಕೊಲೆಕಾಡು, ಆನಂದಾಶ್ರಮ ಪ್ರೌಢಶಾಲೆ‌ಯ ಮುಖ್ಯೋಪಾಧ್ಯಾಯರಾದ ಗುರುಮೂರ್ತಿ, ಹರೇಕಳ ರಾಮಕೃಷ್ಣ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ರವೀಂದ್ರ ರೈ ಹರೇಕಳ, ತಲಪಾಡಿ ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ್ ಆಳ್ವ, ಬಾಲಕೃಷ್ಣ ಮಂದಿರದ ಪ್ರಮುಖರಾದ ಪ್ರದೀಪ್, ಮಹಿಳಾ ಸಮಿತಿ ಅಧ್ಯಕ್ಷರಾದ ಸುಶೀಲ ದೇವಪ್ಪ ಮೊದಲಾದವರು ಉಪಸ್ಥಿತರಿದ್ದರು.

ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿದರು. ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಅಧ್ಯಕ್ಷ ಪ್ರಹ್ಲಾದ್ ಇಂದಾಜೆ ಪ್ರಸ್ತಾವನೆಗೈದರು. ಪ್ರವೀಣ್ ಎಸ್ ಕುಂಪಲ ನಿರೂಪಿಸಿದರು‌.

Felicitation program held at Balakrishna Mandir for rank holders in SSLC at Ullal in Mangalore. Chief guest of honour Chairman of Alvas group of institution speaking to students stated that don't compare SSLC and PUC as same.