ನಡುರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದ ಸಾರ್ವಜನಿಕರು ಬೇಸ್ತು !  

09-06-22 11:45 am       Mangalore Correspondent   ಕರಾವಳಿ

ಕುಡಿದು ರಸ್ತೆಯಲ್ಲಿ ಬಿದ್ದ ವ್ಯಕ್ತಿಯೊಬ್ಬ ಹೊಟ್ಟೆಗೆ ಬಟ್ಟೆ ಸುತ್ತಿಕೊಂಡು ಹೈಡ್ರಾಮಾ ನಡೆಸಿದ ಘಟನೆ ಪುತ್ತೂರಿನಲ್ಲಿ ನಡೆದಿದ್ದು, ಸಾರ್ವಜನಿಕರು ಏನೋ ಅಪಘಾತ ಆಗಿರಬೇಕೆಂದು ಆಸ್ಪತ್ರೆಗೆ ಸೇರಿಸಿ ಬೇಸ್ತು ಬಿದ್ದಿದ್ದಾರೆ.

ಪುತ್ತೂರು, ಜೂನ್ 8: ಕುಡಿದು ರಸ್ತೆಯಲ್ಲಿ ಬಿದ್ದ ವ್ಯಕ್ತಿಯೊಬ್ಬ ಹೊಟ್ಟೆಗೆ ಬಟ್ಟೆ ಸುತ್ತಿಕೊಂಡು ಹೈಡ್ರಾಮಾ ನಡೆಸಿದ ಘಟನೆ ಪುತ್ತೂರಿನಲ್ಲಿ ನಡೆದಿದ್ದು, ಸಾರ್ವಜನಿಕರು ಏನೋ ಅಪಘಾತ ಆಗಿರಬೇಕೆಂದು ಆಸ್ಪತ್ರೆಗೆ ಸೇರಿಸಿ ಬೇಸ್ತು ಬಿದ್ದಿದ್ದಾರೆ.

ಪುತ್ತೂರಿನ ಕೊಂಬೆಟ್ಟಿನಲ್ಲಿ ಯುವಕನೊಬ್ಬ ರಸ್ತೆ ಬದಿ ಬಿದ್ದುಕೊಂಡಿದ್ದ. ಕುಡಿದ ನಶೆಯಲ್ಲಿದ್ದರೂ ಹೊಟ್ಟೆಗೆ ರಕ್ತ ಮೆತ್ತಿಕೊಂಡ ಬಟ್ಟೆ ಸುತ್ತಿಕೊಂಡಿದ್ದರಿಂದ ಏನೋ ಗಾಯ ಆಗಿರಬೇಕೆಂದು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು ಬಂದು ಸಾರ್ವಜನಿಕರ ಸಹಾಯದಿಂದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವೈದ್ಯರು ಬ್ಯಾಂಡೇಜ್ ತೆಗೆದು ನೋಡಿದಾಗ, ಗಾಯ ಏನೂ ಕಾಣಿಸಲಿಲ್ಲ. ಯುವಕ ನಶೆಯಿಂದ ಎಚ್ಚೆತ್ತಾಗ, ತನಗೇನೂ ಆಗಿಲ್ಲ ಎಂದಿದ್ದಾನೆ. ಪೈಂಟ್ ಕೆಲಸ ಮಾಡಿಕೊಂಡಿದ್ದು ಬಿಳಿ ಬಟ್ಟೆಗೆ ಕೆಂಪು ಬಣ್ಣ ಮೆತ್ತಿಕೊಂಡಿತ್ತು. ಅದನ್ನೇ ಹೊಟ್ಟೆಯ ಭಾಗಕ್ಕೆ ಸುತ್ತಿಕೊಂಡಿದ್ದೆ ಎಂದಿದ್ದು ಸಾರ್ವಜನಿಕರು, ಪೊಲೀಸರು ಆತನ ಮಾತು ಕೇಳಿ ಬೇಸ್ತು ಬಿದ್ದಿದ್ದಾರೆ.

An inebriated youth of Gadag origin created high drama on the road at Kombettu near here. The said youth was drunk and fell unconscious on the road. He had wrapped a bandage all over his stomach. The public who saw his condition informed the matter to the police.