ಉಪ್ಪಿನಂಗಡಿ ಕಾಲೇಜಿಗೆ ವರದಿಗೆ ತೆರಳಿದ್ದ ಪತ್ರಕರ್ತನಿಗೆ ಹಲ್ಲೆ, ಕೊಲೆ ಬೆದರಿಕೆ, ವಿದ್ಯಾರ್ಥಿಗಳ ಗೂಂಡಾಗಿರಿ !

02-06-22 04:20 pm       Mangalore Correspondent   ಕರಾವಳಿ

ಉಪ್ಪಿನಂಗಡಿ ಸರಕಾರಿ ಕಾಲೇಜಿನಲ್ಲಿ ಆರು ವಿದ್ಯಾರ್ಥಿನಿಯರನ್ನು ಅಮಾನತು ಮಾಡಿರುವ ಬಗ್ಗೆ ವರದಿ ಮಾಡಲು ತೆರಳಿದ್ದ ಇಬ್ಬರು ಪತ್ರಕರ್ತರಿಗೆ ವಿದ್ಯಾರ್ಥಿಗಳ ಗುಂಪೊಂದು ಹಲ್ಲೆಗೈದು ಗೂಂಡಾಗಿರಿ ತೋರಿದ ಘಟನೆ ನಡೆದಿದೆ.

ಪುತ್ತೂರು, ಜೂನ್ 2: ಉಪ್ಪಿನಂಗಡಿ ಸರಕಾರಿ ಕಾಲೇಜಿನಲ್ಲಿ ಆರು ವಿದ್ಯಾರ್ಥಿನಿಯರನ್ನು ಅಮಾನತು ಮಾಡಿರುವ ಬಗ್ಗೆ ವರದಿ ಮಾಡಲು ತೆರಳಿದ್ದ ಇಬ್ಬರು ಪತ್ರಕರ್ತರಿಗೆ ವಿದ್ಯಾರ್ಥಿಗಳ ಗುಂಪೊಂದು ಹಲ್ಲೆಗೈದು ಗೂಂಡಾಗಿರಿ ತೋರಿದ ಘಟನೆ ನಡೆದಿದೆ.

ನ್ಯೂಸ್ 18 ಕನ್ನಡದ ಪುತ್ತೂರು ವರದಿಗಾರ ಅಜಿತ್ ಪುತ್ತೂರು ಮತ್ತು ಸ್ಥಳೀಯ ವಾಹಿನಿ ವರದಿಗಾರ ಪ್ರವೀಣ್ ಬೊಳುವಾರು ಜೊತೆಯಾಗಿ ಉಪ್ಪಿನಂಗಡಿ ಸರಕಾರಿ ಕಾಲೇಜಿಗೆ ತೆರಳಿದ್ದರು. ವಿದ್ಯಾರ್ಥಿನಿಯರನ್ನು ಡಿಬಾರ್ ಮಾಡಿದ ಬಗ್ಗೆ ಕಾಲೇಜಿನ ಪ್ರಾಂಶುಪಾಲರ ಹೇಳಿಕೆ ಪಡೆದು ಹಿಂತಿರುಗುತ್ತಿದ್ದಾಗ, ಎರಡು ಗುಂಪುಗಳು ಎದುರಾಗಿದ್ದವು. ಒಂದು ಕಡೆಯಿಂದ ಕೇಸರಿ ಶಾಲು ಹಾಕಿದ್ದ ಗುಂಪು ಮತ್ತು ಇನ್ನೊಂದು ಕಡೆ ಹಿಜಾಬ್ ಪರವಾಗಿದ್ದ ಗುಂಪು ಇತ್ತು.

ಕಾಲೇಜಿನ ಆವರಣದಲ್ಲಿ ಗುಂಪು ಸೇರಿದ್ದನ್ನು ವಿಡಿಯೋ ರೆಕಾರ್ಡ್ ಮಾಡಲು ಮುಂದಾಗಿದ್ದ ಅಜಿತ್ ಮೇಲೆ ವಿದ್ಯಾರ್ಥಿಗಳ ಒಂದು ಗುಂಪು ದೂಡಿಕೊಂಡು ಬಂದಿದ್ದು, ಬಳಿಕ ಕೋಣೆಯೊಂದಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ಕಾಲೇಜಿನಿಂದ ಹೊರಗೆ ಹೋಗಲು ಬಿಡದೆ ದಿಗ್ಬಂಧನ ಹಾಕಿದ್ದಾರೆ. ಬಳಿಕ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿದ್ದ ವಿಡಿಯೋವನ್ನು ಬಲವಂತದಿಂದ ಡಿಲೀಟ್ ಮಾಡಿಸಿದ್ದಾರೆ. ಈ ಬಗ್ಗೆ ಹೊರಗೆ ಎಲ್ಲಿಯಾದರೂ ಹೇಳಿದಲ್ಲಿ ಕೊಲ್ಲುವ ಬೆದರಿಕೆಯನ್ನೂ ಒಡ್ಡಿದ್ದಾರೆ.

ಈ ಬಗ್ಗೆ ವರದಿಗಾರ ಅಜಿತ್, ಉಪ್ಪಿನಂಗಡಿ ಠಾಣೆಯಲ್ಲಿ ಪೊಲೀಸ್ ದೂರು ನೀಡಿದ್ದಾರೆ. ಕಾಲೇಜಿನ ಸಿಸಿಟಿವಿಯಲ್ಲಿ ವಿದ್ಯಾರ್ಥಿಗಳ ಗುಂಪಿನ ಗೂಂಡಾಗಿರಿ ದಾಖಲಾಗಿದ್ದು, ಅದನ್ನು ಆಧರಿಸಿ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ಅಲ್ಲದೆ, ವಿದ್ಯಾರ್ಥಿಗಳೊಂದಿಗೆ ಮಧ್ಯವಯಸ್ಕ ವ್ಯಕ್ತಿಯೊಬ್ಬ ಇದ್ದು, ಕಾಲೇಜಿನ ಹೊರಗಿನ ವ್ಯಕ್ತಿಯಾಗಿದ್ದು ಆತನೇ ಗೂಂಡಾಗಿರಿಗೆ ಕುಮ್ಮಕ್ಕು ನೀಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಉಪ್ಪಿನಂಗಡಿ ; ಹಿಜಾಬ್ ತೆಗೆಯಲ್ಲ ಎಂದು ಪಟ್ಟು ಹಿಡಿದ ಆರು ವಿದ್ಯಾರ್ಥಿನಿಯರು ಅಮಾನತು

Uppinangady six Muslim students suspended over Hijab, News 18 Puttur Stringer Ajith journalist  assaulted by PFI youths for recording visuals. He was locked inside a classroom and made him delete the video footage. The students also issued life threat. A case has been registered at Uppinangdy Police Station.