ತಾಂಬೂಲ ಪ್ರಶ್ನೆ ಹಿನ್ನೆಲೆ ; ಭವಿಷ್ಯ ಹೇಳುವವರಿಗೆ ವಿಚಾರವಾದಿ ನರೇಂದ್ರ ನಾಯಕ್ ಸವಾಲು ; ಗೆದ್ದವರಿಗೆ ಲಕ್ಷ ರೂ. ಬಹುಮಾನ ಘೋಷಣೆ !

27-05-22 07:47 pm       Mangalore Correspondent   ಕರಾವಳಿ

ಭೂತಕಾಲ ಮತ್ತು ಭವಿಷ್ಯದ ಬಗ್ಗೆ ನಿಖರವಾಗಿ ಹೇಳಬಲ್ಲ, ವಿಶೇಷ ಶಕ್ತಿಯನ್ನು ಹೊಂದಿರುವವರಿಗೆ ರಾಷ್ಟ್ರೀಯ ವಿಚಾರವಾದಿಗಳ ಸಂಘದ ಅಧ್ಯಕ್ಷ ನರೇಂದ್ರ ನಾಯಕ್ ಹೊಸ ಸವಾಲು ಹಾಕಿದ್ದಾರೆ.

ಮಂಗಳೂರು, ಮೇ 27 : ಭೂತಕಾಲ ಮತ್ತು ಭವಿಷ್ಯದ ಬಗ್ಗೆ ನಿಖರವಾಗಿ ಹೇಳಬಲ್ಲ, ವಿಶೇಷ ಶಕ್ತಿಯನ್ನು ಹೊಂದಿರುವವರಿಗೆ ರಾಷ್ಟ್ರೀಯ ವಿಚಾರವಾದಿಗಳ ಸಂಘದ ಅಧ್ಯಕ್ಷ ನರೇಂದ್ರ ನಾಯಕ್ ಹೊಸ ಸವಾಲು ಹಾಕಿದ್ದಾರೆ. ಮಳಲಿ ಮಸೀದಿಗೆ ಸಂಬಂಧಿಸಿ ಜ್ಯೋತಿಷಿಯೊಬ್ಬರು ವೀಳ್ಯದೆಲೆ ಆಧರಿಸಿ ಭವಿಷ್ಯ ನುಡಿದ ಹಿನ್ನೆಲೆಯಲ್ಲಿ ಲಕ್ಷ ರೂ. ಬಹುಮಾನ ಗೆಲ್ಲುವ ಆಫರ್ ನೀಡಿ ಪ್ರಶ್ನೆ ಹಾಕಿದ್ದಾರೆ. 

‘‘ಮಳಲಿಯಲ್ಲಿ ವೀಳ್ಯದೆಲೆಯ ಮೂಲಕದ ಭವಿಷ್ಯವು ಊಹೆ ಅಥವಾ ಸ್ಥಿರ ಫಲಿತಾಂಶವಾಗಿರಬಹುದು. ಇಂತಹ ವ್ಯಕ್ತಿಗಳ ಶಕ್ತಿಯನ್ನು ಪರೀಕ್ಷಿಸಲು ನಾವು ಇಲ್ಲಿ ನಿಖರವಾದ ವಿಧಾನವನ್ನು ಅಳವಡಿಸಲಿದ್ದೇವೆ. ಈ ಪ್ರಕಟನೆ ಪ್ರಕಟಗೊಳ್ಳುವ ವೇಳೆಗೆ ಭವಿಷ್ಯವನ್ನು ತಿಳಿಸಬೇಕಾದ ವಸ್ತುಗಳನ್ನು ಇರಿಸುವ ಮತ್ತು ಅದನ್ನು ಸೀಲ್ ಮಾಡಿರುವ ಸಮಯವು ಭೂತಕಾಲವಾಗಿರುತ್ತದೆ ಮತ್ತು ಅದನ್ನು ತೆರೆಯುವ ಸಮಯ ಭವಿಷ್ಯವಾಗಿರುತ್ತದೆ. ಭವಿಷ್ಯವನ್ನು ಹೇಳುವವರಿಗೆ ಹಾಕಲಾಗಿರುವ ಸವಾಲುಗಳನ್ನು ಒಳಗೊಂಡ ಆರು ಪ್ರತ್ಯೇಕ ಕವರ್‌ಗಳನ್ನು ಲಕೋಟೆಯಲ್ಲಿ 2022ರ ಮೇ 26ರ 11.33ಕ್ಕೆ ಸೀಲ್ ಮಾಡಲಾಗಿದೆ. ಅದನ್ನು ಜೂನ್ 1ರಂದು ನಗರದ ಪ್ರೆಸ್‌ಕ್ಲಬ್‌ನಲ್ಲಿ ಬೆಳಗ್ಗೆ 10.30ಕ್ಕೆ ತೆರೆಯಲಾಗುವುದು. ಅಲ್ಲಿಯೇ ಬಹುಮಾನವನ್ನು ಘೋಷಿಸಲಾಗುವುದು.

Mangalore Today | Latest main news of mangalore, udupi - Page Malali-Mosque -Controversy-Prof-Narendra-Nayak-renews-challenge-to-astrologers

ಭವಿಷ್ಯ ಹೇಳುವವರು ಮುಚ್ಚಿದ ಆರು ಲಕೋಟೆಗಳಲ್ಲಿ ಏನಿದೆ ಎಂಬುದನ್ನು ನಿಖರವಾಗಿ ಹೇಳತಕ್ಕದ್ದು. ಈ ಸವಾಲನ್ನು ಎದುರಿಸಲು ಧಾರ್ಮಿಕ ನಂಬಿಕೆಗಳು, ಜಾತಿ, ಪಂಥ, ರಾಷ್ಟ್ರೀಯತೆಯನ್ನು ಲೆಕ್ಕಿಸದೆ ಎಲ್ಲರಿಗೂ ಮುಕ್ತವಾಗಿದೆ. ಆಸಕ್ತರು ತಮ್ಮ ಉತ್ತರಗಳನ್ನು [email protected]ಗೆ ಇಮೇಲ್ ಅಥವಾ  9448216343 ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮಾಡಬಹುದು.

ಮೇ 31ರ ಮಧ್ಯರಾತ್ರಿ ವರೆಗೆ ಕಳುಹಿಸಲಾಗುವ ಎಲ್ಲಾ ಉತ್ತರಗಳನ್ನು ಫಲಿತಾಂಶಕ್ಕೆ ಪರಿಗಣಿಸಲಾಗುವುದು. ಸಮಯ ಕಡಿಮೆ ಇರುವುದರಿಂದ ಅಂಚೆ ಮೂಲಕ ಪ್ರವೇಶಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. 

ಸೀಲ್ ಮಾಡಲಾದ ಕವರ್‌ ಒಳಗಡೆ ಪ್ರಶ್ನೆಗಳಿಂದ ಕೂಡಿದ ಆರು ಸಣ್ಣ ಕವರ್‌ಗಳಿವೆ. ಪ್ರಶ್ನೆಗಳಿಗೆ  ಮಾಹಿತಿಯನ್ನು ಒಳಗೊಂಡಿರುತ್ತದೆ. ನಿಯಮಗಳ ಪ್ರಕಾರ ಪ್ರವೇಶ ಬಯಸಿದವರ ಎಲ್ಲಾ ಉತ್ತರಗಳು ಸರಿಯಾಗಿದ್ದಲ್ಲಿ ಅವರನ್ನು ವಿಜೇತರೆಂದು ಘೋಷಿಸಲಾಗುವುದು. ಲಕೋಟೆಯೊಳಗೆ ಕರೆನ್ಸಿ ನೋಟು ಅಥವಾ ಕಾಗದ ಎಂಬ ಉತ್ತರಗಳನ್ನು ಪರಿಗಣಿಸಲಾಗದು. ಕರೆನ್ಸಿ ಎಂದು ಹೇಳುವುದಾದರೆ ಅದು ಯಾವ ದೇಶದ್ದು, ಅದರ ಮೌಲ್ಯ, ಅದರ ಡಿನೋಮಿನೇಶನ್, ಸೀರಿಯಲ್ ನಂಬರ್ ಎಲ್ಲವನ್ನೂ ನಿಖರವಾಗಿ ನಮೂದಿಸಬೇಕು. ಕಾಗದ ಎಂದಾದರೆ ಅದರಲ್ಲಿ ಏನು ಬರೆಯಲಾಗಿದೆ. ಏನು ನಮೂದಿಸಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು. ನಿಯಮಗಳಿಗೆ ಬದ್ಧರಾಗಿ ಎಲ್ಲಾ ಆರು ಕವರ್‌ಗಳಿಗೆ ಸರಿಯಾಗಿ ಉತ್ತರಿಸಿದವರಿಗೆ ತೆರಿಗೆಯನ್ನು ಕಡಿತಗೊಳಿಸಿ ಒಂದು ಲಕ್ಷ ರೂ. ಬಹುಮಾನ ನೀಡಲಾಗುವುದು.

ಒಂದಕ್ಕಿಂತ ಹೆಚ್ಚಿನ ಮಂದಿ ಉತ್ತರ ನೀಡಿದರೂ ಪ್ರತಿಯೊಬ್ಬರಿಗೂ ತಲಾ ಒಂದು ಲಕ್ಷ ರೂ. ಬಹುಮಾನ ದೊರೆಯಲಿದೆ. ಹಣಕಾಸಿನ ಲಭ್ಯತೆಯ ಮೇರೆಗೆ ಗರಿಷ್ಠ 50 ಮಂದಿಗೆ ಮಾತ್ರವೇ ಬಹುಮಾನ ದೊರೆಯಲಿದೆ. ಅದಕ್ಕೂ ಮೀರಿ ನಿಖರ ಉತ್ತರಗಳು ಬಂದಲ್ಲಿ ಸವಾಲುಗಾರ ದಿವಾಳಿತನವನ್ನು ಘೋಷಿಸಲಿದ್ದಾರೆ ಎಂದು ನರೇಂದ್ರ ನಾಯಕ್ ಫೇಸ್‌ಬುಕ್‌ನಲ್ಲಿ ಹೇಳಿದ್ದಾರೆ.

Following the claim made by Hindu fringe organizations that their astrological enquiry made through the ‘Thamboola Prashne’ ritual has revealed the presence of Lord Shiva at the site of Malali Mosque near Gurupura, Prof. Narendra Nayak, President of Federation of Indian Rationalist Organizations (FIRA) has renewed his long standing challenge to astrologers to participate in a contest to prove the reliability of their predictions.