ಕಲ್ಲಡ್ಕ ; ಅಪಾರ್ಟ್ಮೆಂಟ್ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಬಾಲಕ ದುರಂತ ಸಾವು ! 

27-05-22 01:40 pm       Mangalore Correspondent   ಕರಾವಳಿ

ಬಾಲಕನೊಬ್ಬ ಮನೆಯಲ್ಲಿ ಆಟವಾಡುತ್ತಿದ್ದಾಗ ಅಪಾರ್ಟ್ಮೆಂಟ್ ಕಟ್ಟಡದ ಮೂರನೇ ಮಹಡಿಯಿಂದ ಕೆಳೆಕ್ಕೆ ಬಿದ್ದು ಮೃತಪಟ್ಟ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.

ಬಂಟ್ವಾಳ, ಮೇ 27 : ಬಾಲಕನೊಬ್ಬ ಮನೆಯಲ್ಲಿ ಆಟವಾಡುತ್ತಿದ್ದಾಗ ಅಪಾರ್ಟ್ಮೆಂಟ್ ಕಟ್ಟಡದ ಮೂರನೇ ಮಹಡಿಯಿಂದ ಕೆಳೆಕ್ಕೆ ಬಿದ್ದು ಮೃತಪಟ್ಟ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.

ಕಲ್ಲಡ್ಕ ನಿವಾಸಿ ಅಹಮ್ಮದ್ ಅವರ ಪುತ್ರ, ಆರನೇ ತರಗತಿ ಓದುತ್ತಿದ್ದ ಮಹಮ್ಮದ್ ಸಾಹಿಲ್ (10) ಮೃತ ಬಾಲಕ. ಕಲ್ಲಡ್ಕ ಸಮೀಪದ ಗೊಳ್ತಮಜಲು ಎಂಬಲ್ಲಿನ ಸಿಟಿಪ್ಲಾಜಾ ರೆಸಿಡೆನ್ಸಿಯಲ್ಲಿ ಘಟನೆ ನಡೆದಿದೆ. ಇವರ ಮನೆ ಇರುವ ಮೂರನೇ ಮಹಡಿಯಲ್ಲಿ ಸಾಹಿಲ್ ಇತರ ಹುಡುಗರ ಜೊತೆ ಆಟ ಆಡುತ್ತಿದ್ದ. ಈ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾನೆ ಎನ್ನಲಾಗುತ್ತಿದ್ದು ಗಂಭೀರ ಗಾಯಗೊಂಡಿದ್ದ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಂಜಾನೆ ವೇಳೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

In a tragic incident that occurred on Wednesday May 26, a sixth grade student fell from third floor of a residential building while playing with his friends and died at the hospital later on Thursday May 27 morning. Mohammed Sahil (10), son of Ahmed, resident of Kalladka is the unfortunate victim of this tragedy. He was playing on the seat house of City Plaza residency at Goltamajalu near Kalladka when he lost balance and fell from the third floor.