ಬ್ರೇಕಿಂಗ್ ನ್ಯೂಸ್
06-04-22 08:20 pm Source: Vijayakarnataka ಡಾಕ್ಟರ್ಸ್ ನೋಟ್
ಮಹಿಳೆಯರಿಗೆ ಮುಟ್ಟಿನ ಪ್ರಕ್ರಿಯೆ ಎನ್ನುವುದು ಒಂದು ನೈಸರ್ಗಿಕ ವಿಧಾನವಾಗಿದೆ. ಆದರೆ ಈ ಸಂದರ್ಭದಲ್ಲಿ ವಿಪರೀತ ನೋವು ಉಂಟಾಗುವುದು ಮತ್ತು ದೇಹದಿಂದ ಅತಿಯಾದ ರಕ್ತ ಹೋಗುವುದು ಸರ್ವೇಸಾಮಾನ್ಯ. ಪ್ರತಿಯೊಬ್ಬ ಮಹಿಳೆ ಕೂಡಾ ಇಂತಹ ಒಂದು ಹಂತವನ್ನು ದಾಟಬೇಕಾಗುತ್ತದೆ. ಕೆಲವು ಮಹಿಳೆಯರು ಮುಟ್ಟಿನ ಸಂದರ್ಭದಲ್ಲಿ ಬರುವ ಹೊಟ್ಟೆನೋವನ್ನು ಸುಲಭವಾಗಿ ನಿಭಾಯಿಸುತ್ತಾರೆ.
ಆದರೆ ಇನ್ನೂ ಕೆಲವರು ಅದನ್ನು ಸಹಿಸಿಕೊಳ್ಳುವುದಿಲ್ಲ. ಅದಕ್ಕೆ ಬಹಳಷ್ಟು ಕಾರಣಗಳಿವೆ. ಕಬ್ಬಿಣಾಂಶದ ಕೊರತೆ, ಅನಿಮಿಯಾ, ಕೆಂಪು ರಕ್ತಕಣಗಳ ಸಂಖ್ಯೆ ಕ್ಷೀಣತೆ ಇತ್ಯಾದಿಗಳು. ಇಲ್ಲಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವ ಹಾಗೆ ಮಹಿಳೆಯರಿಗಾಗಿ ಕೆಲವೊಂದು ಆರೋಗ್ಯಕರ ಜ್ಯೂಸುಗಳನ್ನು ತಿಳಿಸಿಕೊಡಲಾಗಿದೆ.
ಕ್ಯಾರೆಟ್ ಜ್ಯೂಸ್
ಹಸಿ ಕ್ಯಾರೆಟ್ ತಿನ್ನುವುದು ಅಥವಾ ಕ್ಯಾರೆಟ್ ಜ್ಯೂಸ್ ಕುಡಿಯುವುದು, ಮಹಿಳೆಯರಿಗೆ ದೇಹದಲ್ಲಿ ರಕ್ತದ ಹರಿವನ್ನು ನಿಯಂತ್ರಣ ಮಾಡಲು ನೆರವಾಗುತ್ತದೆ. ಇದು ಮುಟ್ಟಿನ ನೋವಿನಿಂದ ಪರಿಹಾರ ಒದಗಿಸುವುದು ಮಾತ್ರವಲ್ಲದೆ, ಶಕ್ತಿ ಮತ್ತು ಚೈತನ್ಯದಿಂದ ಕೂಡಿರಲು ಕೂಡ ನೆರವಾಗುತ್ತದೆ.
ಮುಟ್ಟಿನ ಕಮ್ಮಿ ಆಗಲು ಕ್ಯಾರೆಟ್ ಜ್ಯೂಸ್ ಕುಡಿಯಿರಿ
ಬೀಟ್ರೂಟ್ ಜ್ಯೂಸ್ ಸೇವನೆ ಮಾಡುವುದು
ನಮ್ಮ ಭಾರತದಲ್ಲಿ ಪ್ರೌಢಾವಸ್ಥೆಗೆ ಬಂದ ಸಾಕಷ್ಟು ಹೆಣ್ಣುಮಕ್ಕಳು ಕಬ್ಬಿಣದ ಅಂಶದ ಕೊರತೆಯಿಂದ ಅನಿಮೆಯ ಅಥವಾ ರಕ್ತಹೀನತೆ ಸಮಸ್ಯೆಯನ್ನು ಕಂಡುಕೊಂಡಿರುತ್ತಾರೆ. ಮುಟ್ಟಿನ ಸಮಯದಲ್ಲಿ ಅತಿಯಾಗಿ ರಕ್ತ ಹೋಗುವುದು, ವಿಪರೀತ ಆಯಾಸ ಮತ್ತು ಸುಸ್ತಿಗೆ ಕಾರಣವಾಗುತ್ತದೆ.
ಮತ್ತೊಮ್ಮೆ ಮುಟ್ಟಿನ ನೋವು ಬಂದರೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವಂತಾ ಗುತ್ತದೆ. ಆದರೆ ಬೀಟ್ರೂಟ್ ಜ್ಯೂಸ್ ಸೇವನೆ ಮಾಡುವುದರಿಂದ ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
ಬೀಟ್ರೂಟ್ನಲ್ಲಿರುವ ಪ್ರಯೋಜನಗಳು
ಪೈನಾಪಲ್ ಜ್ಯೂಸ್
ಪೈನಾಪಲ್ ಅಥವಾ ಅನಾನಸ್ ಕೂಡ ಮುಟ್ಟಿನ ನೋವಿನ ಸಮಸ್ಯೆಯನ್ನು ನಿವಾರಣೆ ಮಾಡುವ ಒಂದು ನೈಸರ್ಗಿಕ ಆಹಾರ ಪದಾರ್ಥವಾಗಿದೆ. ಇದರಲ್ಲಿ ಬ್ರೋಮಲೈನ್ ಎಂಬ ಅಂಶವಿದ್ದು, ಮೂತ್ರನಾಳದ ಭಾಗವನ್ನು ಇದು ಆರೋಗ್ಯಕರವಾಗಿ ಕಾಪಾಡುತ್ತದೆ.
ಮುಟ್ಟಿನ ಸಮಯದಲ್ಲಿ ಪೈನಾಪಲ್ ಜ್ಯೂಸ್ ಸಾಕಷ್ಟು ಪ್ರಯೋಜನಕಾರಿ ಎಂದು ಹೇಳಬಹುದು. ದೇಹದಲ್ಲಿ ರಕ್ತದ ಹರಿವನ್ನು ನಿಯಂತ್ರಣ ಮಾಡುವುದರ ಜೊತೆಗೆ ಮುಟ್ಟಿನ ಸಮಸ್ಯೆಯನ್ನು ಇದು ಪರಿಹಾರ ಮಾಡುತ್ತದೆ.
Health Tips These Drinks That Help You To Ease Period Pains Naturally.
20-08-25 12:33 pm
Bangalore Correspondent
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
20-08-25 11:01 am
HK News Desk
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
20-08-25 04:28 pm
Mangalore Correspondent
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
Wild Elephant, Belthangady, Eshwar Khandre: ಬ...
20-08-25 01:36 pm
ಧರ್ಮಸ್ಥಳ ಪ್ರಕರಣ ನೆಪದಲ್ಲಿ ಬಿಎಲ್ ಸಂತೋಷ್ ಅವಹೇಳನ...
19-08-25 11:07 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm