ಬ್ರೇಕಿಂಗ್ ನ್ಯೂಸ್
03-03-22 09:48 pm Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ಸಕ್ಕರೆಕಾಯಿಲೆ ಇರುವವರು ತಮ್ಮ ಆಹಾರ ಪದ್ಧತಿಯಲ್ಲಿ ಎಷ್ಟು ಜಾಗರೂಕತೆ ವಹಿಸುತ್ತಾರೋ ಅಷ್ಟು ಒಳ್ಳೆಯದು. ಈ ಕಾಯಿಲೆಯ ವಿಷ್ಯದಲ್ಲಿ ಒಂದು ಮಾತೇ ಇದೆ, ಮಧುಮೇಹ ಇರುವವರು ಸ್ವಲ್ಪ ತಿಂದರೆ ಕಮ್ಮಿ ಆಗುತ್ತದೆ, ಜಾಸ್ತಿ ತಿಂದರೆ ಹೆಚ್ಚಾಗುತ್ತದೆ!
ಪಾಪ ಇವರ ಪರಿಸ್ಥಿತಿ ಹೇಗಿರುತ್ತದೆ ಎಂದರೆ, ಕೆಲವೊಂದು ಆಹಾರಗಳನ್ನು, ಹಣ್ಣು-ತರಕಾರಿಗಳನ್ನು ತಮಗೆ ಇಷ್ಟವಿಲ್ಲದೇ ಇದ್ದರೂ ಕೂಡ ಸೇವನೆ ಮಾಡಬೇಕಾಗುತ್ತದೆ! ಇನ್ನು ಕೆಲವೊಂದು ಆಹಾರಗಳನ್ನು ಮನಸ್ಸು ಬೇಕೆಂದರೂ ಕೂಡ ತಿನ್ನುವ ಹಾಗಿಲ್ಲ! ಏಕೆಂದರೆ ಇದರಿಂದಾಗಿ ಇವರ ರಕ್ತದಲ್ಲಿ ಸಕ್ಕರೆ ಅಂಶದ ಏರುಪೇರಾಗುವ ಸಂಭವ ಜಾಸ್ತಿ ಇರುತ್ತದೆಯಂತೆ...
ಹೀಗಾಗಿ ಮಧುಮೇಹ ಸಮಸ್ಯೆ ಇರುವವರು ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿಸುವ ಮೂಲಕ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು. ವಿಶೇಷವಾಗಿ ಬೆಳಗಿನ ಬ್ರೇಕ್ ಫಾಸ್ಟ್ ಸಮಯದಲ್ಲಿ ಒಳ್ಳೆಯ ಉಪಹಾರವನ್ನು ಸೇವನೆ ಮಾಡುವುದರೊಂದಿಗೆ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳ ಬಹುದು.
ನಾರಿನಾಂಶ ಹೆಚ್ಚಿರುವ ಆಹಾರಗಳು
ಒಳ್ಳೆಯ ಗುಣಮಟ್ಟದ ಬ್ರೆಡ್
ಬೆಳಗ್ಗಿನ ಬ್ರೇಕ್ಫಾಸ್ಟ್ನ್ನು ಹಲವರು ತಪ್ಪಿಸುವ ಅಭ್ಯಾಸ ಹೊಂದಿರುತ್ತಾರೆ. ಇದಕ್ಕೆ ಕಾರಣ ಕೆಲಸಕ್ಕೆ ಹೊರಡುವ ಧಾವಂತದಲ್ಲಿ ಹೊಟ್ಟೆ ತುಂಬಾ ತಿನ್ನುವಷ್ಟು ಕೂಡ ಸಮಯ ಇರುವುದಿಲ್ಲ. ಆದರೆ ಕೆಲವರು ಫಟಾಫಟ್ ಎಂದು ಬ್ರೆಡ್ ಜಾಮ್ ಇಲ್ಲಾಂದರೆ ಬ್ರೆಡ್ ಬಟರ್ ರೆಡಿ ಮಾಡಿ ತಿಂದು ಹೋಗುತ್ತಾರೆ! ಇದರಿಂದ ಅವರ ಸಮಯ ಕೂಡ ಉಳಿಯುತ್ತೆ, ಹೊಟ್ಟೆ ಕೂಡ ತುಂಬುತ್ತದೆ!
ಮಧುಮೇಹ ರೋಗಿಗಳು ಕೂಡ ಇಂತಹ ಅಭ್ಯಾಸವನ್ನು ಅನುಸರಿಸುವುದು ಒಳ್ಳೆಯದು. ಆದರೆ ನೆನಪಿರಲಿ ಬ್ರೆಡ್ ಜೊತೆಗೆ ಬಟರ್ ಅಥವಾ ಜಾಮ್ ಬಳಸುವ ಬದಲು, ಸಕ್ಕರೆ ಹಾಕದ ಹಾಲಿ ನೊಂದಿಗೆ ಸೇವಿಸಿ. ಯಾಕೆಂದರೆ ಇದರಲ್ಲಿ ಕಡಿಮೆ ಪ್ರಮಾಣದ ಕಾರ್ಬೋಹೈಡ್ರೆಟ್ ಅಂಶ ಹೊಂದಿರುವ ಕಾರಣ ಅತ್ಯಂತ ಆರೋಗ್ಯಕರವಾದ ಆಹಾರ ಎಂದು ಈಗಲೂ ನಂಬಲಾಗಿದೆ.
ಬೆಣ್ಣೆ ಹಣ್ಣುಗಳು
ಅವಕ್ಯಾಡೊ ಅಥವಾ ಬೆಣ್ಣೆ ಹಣ್ಣುಗಳು ತನ್ನ ಹೆಸರಿಗೆ ತಕ್ಕಂತೆ ಇದು ಬೆಣ್ಣೆಯಂತೆಯೇ ಇದೆ! ಈ ಹಣ್ಣನ್ನು ಹಾಗೆ ಕೂಡ ತಿನ್ನಬಹುದು, ಇಲ್ಲಾಂದರೆ ಜ್ಯೂಸ್ ಮಾಡಿಕೊಂಡು ಆದರೂ ಕುಡಿಯ ಬಹುದು. ಬೇರೆಲ್ಲಾ ಹಣ್ಣುಗಳಿಗೆ ಹೋಲಿಸಿದರೆ ಈ ವಿದೇಶಿ ಹಣ್ಣು ಮಾರುಕಟ್ಟೆಯಲ್ಲಿ ಸ್ವಲ್ಪ ದುಬಾರಿ, ಆದರೆ ಆರೋಗ್ಯದ ವಿಷ್ಯದಲ್ಲಿ ಮಾತ್ರ ಎತ್ತಿದಕೈ!
ಇನ್ನು ಈ ಹಣ್ಣುಗಳಲ್ಲಿ ಸಾಕಷ್ಟು ಪ್ರಮಾಣದ ನಾರನಾಂಶ ಜೊತೆಗೆ ಆರೋಗ್ಯಕರವಾದ ಕೊಬ್ಬಿನ ಅಂಶಗಳು ಹೇರಳವಾಗಿ ಸಿಗುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹೀಗಾಗಿ ಬೆಳಗಿನ ಉಪಹಾರದ ಸಮಯದಲ್ಲಿ ಈ ಹಣ್ಣನ್ನು ಯಾವುದೇ ಅನುಮಾನವಿಲ್ಲದೆ ಸೇವನೆ ಮಾಡಬಹುದು.
ಯಾವ ಆಹಾರಗಳನ್ನು ಸೇವಿಸಬಾರದು?
ಕಾರ್ಬೋಹೈಡ್ರೇಟ್ ಹಾಗೂ ಅಧಿಕ ಸಕ್ಕರೆ ಅಂಶ ಹೆಚ್ಚಿರುವ ಆಹಾರಗಳಿಂದ ಮಧುಮೇಹ ಇರುವ ರೋಗಿಗಳು ದೂರ ಇದ್ದರೆ ಒಳ್ಳೆಯದು. ಇನ್ನು ದಿನನಿತ್ಯ ಕುಡಿಯುವ ಟೀ ಕಾಫಿಗೆ ಸಕ್ಕರೆ ಬೆರೆಸಬಾರದು. ಇನ್ನು ಸಂಸ್ಕರಿಸಿದ ಪ್ಯಾಕೆಟ್ ಜ್ಯೂಸ್, ಫ್ರೂಟ್ ಜಾಮ್, ಪೇಸ್ಟ್ರಿ, ಕೇಕ್ ಇತ್ಯಾದಿ ಬೇಕರಿ ತಿಂಡಿಗಳಿಂದ ಆದಷ್ಟು ದೂರವಿರಬೇಕು.
What Type Of Foods To Eat For Breakfast When You Suffering From Diabetes
20-08-25 12:33 pm
Bangalore Correspondent
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
20-08-25 11:01 am
HK News Desk
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
19-08-25 11:07 pm
Mangalore Correspondent
Mangalore Thokottu Sports Winner: ಕಂಪನಿ ಬ್ರಾಂ...
19-08-25 08:54 pm
Ullal Municipal Commissioner: ಉಳ್ಳಾಲ ನಗರಸಭೆಯಲ...
19-08-25 08:28 pm
Puttur, Baby, Sreekrishna J. Rao: ಬಿಜೆಪಿ ಮುಖಂ...
19-08-25 07:04 pm
Activists Mahesh Shetty Thimarodi, Harish Poo...
18-08-25 06:14 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm