ಬ್ರೇಕಿಂಗ್ ನ್ಯೂಸ್
25-09-21 04:53 pm Source: News 18 Kannada ಡಾಕ್ಟರ್ಸ್ ನೋಟ್
ಕೋವಿಡ್-19 ಸಾಂಕ್ರಾಮಿಕ ರೋಗವು ಇಡೀ ವಿಶ್ವವನ್ನೇ ಅಪ್ಪಳಿಸಿದಾಗಿನಿಂದ, ಯಾವುದೇ ರೋಗ ಅಥವಾ ಸೋಂಕಿನ ವಿರುದ್ಧ ಹೋರಾಡಲು ದೇಹಕ್ಕೆ ಅನುವು ಮಾಡಿಕೊಡುವ ಎರಡು ಜೀವಸತ್ವಗಳ ಪಾತ್ರದ ಬಗ್ಗೆ ಇಡೀ ವಿಶ್ವವೇ ಮಾತನಾಡುತ್ತಿದೆ. ಅದರಲ್ಲಿ ಒಂದು ವಿಟಮಿನ್ ಸಿ ಮತ್ತು ವಿಟಮಿನ್ ಡಿ ಆಗಿದೆ. ವಿಟಮಿನ್ ಸಿ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡಿದರೆ, ವಿಟಮಿನ್ ಡಿ ನಮ್ಮ ದೇಹದಲ್ಲಿರುವ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಈ ಮಾರಣಾಂತಿಕ ಕೋವಿಡ್-19 ವೈರಸ್ ವಿರುದ್ಧ ನಮ್ಮ ದೇಹ ಹೋರಾಡಲು ವಿಟಮಿನ್ ಡಿ ಸಹಾಯ ಮಾಡುತ್ತದೆ ಎಂಬ ಮಾತನ್ನು ಅನೇಕ ಅಧ್ಯಯನಗಳು ಬೆಂಬಲಿಸಿವೆ. ವಿಟಮಿನ್ ಡಿ ಕೊರತೆ ಇದ್ದರೆ ಉರಿಯೂತದ ಸೈಟೋಕಿನ್ಗಳ ಹೆಚ್ಚಳವಾಗುವುದು ಮತ್ತು ನಿಮೋನಿಯಾ ಹಾಗೂ ಉಸಿರಾಟದ ನಾಳದ ಮೇಲ್ಭಾಗದಲ್ಲಿ ಸೋಂಕು ತಗುಲುವ ಅಪಾಯ ಹೆಚ್ಚಿರುತ್ತದೆ.
ಯಾವ ವ್ಯಕ್ತಿಯ ದೇಹದಲ್ಲಿ ಅತಿಯಾದ ಬೊಜ್ಜು ಇದ್ದು, ಮಧುಮೇಹದಿಂದ ಬಳಲುತ್ತಿರುವವರಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಂಡುಬರುತ್ತದೆ. ಈ ಅನಾರೋಗ್ಯ ಸಮಸ್ಯೆ ಕೋವಿಡ್-19 ಸಂದರ್ಭದಲ್ಲಿ ಮರಣದ ಪ್ರಮಾಣ ಹೆಚ್ಚಾಗುವುದಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ. ಆದರೆ, ಒಬ್ಬ ವ್ಯಕ್ತಿಯು ರಕ್ತ ಪರೀಕ್ಷೆ ನಡೆಸದೆ ವಿಟಮಿನ್ ಡಿ ಕೊರತೆಯನ್ನು ಹೇಗೆ ತಿಳಿದುಕೊಳ್ಳಬಹುದು ಅಂತ ಪ್ರಶ್ನೆ ಮಾಡಿದರೆ. ಅದಕ್ಕೆ ಉತ್ತರ ಇಲ್ಲಿದೆ.
2017ರಲ್ಲಿ ಅಮೆರಿಕದ ರೋಚೆಸ್ಟರ್ನ ಮೇಯೋ ಕ್ಲಿನಿಕ್ನಲ್ಲಿರುವ ಚರ್ಮ ರೋಗ ವಿಭಾಗ ನಡೆಸಿದ ಅಧ್ಯಯನದ ಪ್ರಕಾರ, ಉರಿಯುವ ಬಾಯಿಯ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಲ್ಲಿ, ರಕ್ತ, ಗ್ಲೂಕೋಸ್, ವಿಟಮಿನ್ ಡಿ, ವಿಟಮಿನ್ ಬಿ6, ಸತು, ವಿಟಮಿನ್ ಬಿ1 ಮತ್ತು ಟಿಎಸ್ಎಚ್ ತಪಾಸಣೆ ಮಾಡುವುದು ಸೂಕ್ತವೆಂದು ತಿಳಿದು ಬಂದಿದೆ. ವಿಟಮಿನ್ ಬಿ12 ಮತ್ತು ಫೋಲಿಕ್ ಆಮ್ಲದ ಕೊರತೆಗಳು ವಿರಳವಾಗಿದ್ದವು.
ಈ ಉರಿಯುವ ನೋವು ಸಾಮಾನ್ಯವಾಗಿ ತುಟಿಗಳು ಅಥವಾ ನಾಲಿಗೆಯ ಮೇಲೆ ಇರುತ್ತದೆ ಅಥವಾ ಬಾಯಿಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಶುಷ್ಕತೆ ಮತ್ತು ಅಹಿತಕರ ರುಚಿ ಸೇರಿದಂತೆ ಇತರ ರೋಗಲಕ್ಷಣಗಳನ್ನು ಜನರು ಹೊಂದಿರಬಹುದು. ಇದರಿಂದ ನಿಮಗೆ ಊಟ ಮಾಡಲು ಕಷ್ಟವಾಗಬಹುದು.
ಆದರೆ, ಉರಿಯುವ ನಾಲಿಗೆ ರೋಗ ವಿಟಮಿನ್ ಡಿ ಕೊರತೆಗೆ ಮಾತ್ರ ಸಂಬಂಧಿಸದೆ, ವಿಟಮಿನ್ ಬಿ, ಕಬ್ಬಿಣಾಂಶ ಮತ್ತು ಸತುವಿನಂತಹ ವಿವಿಧ ವಿಟಮಿನ್ ಕೊರತೆಯಿಂದ ಉಂಟಾಗಬಹುದು.
ನೀವು ಬಾಯಿ ಉರಿಯುವ ಕಾಯಿಲೆಯಿಂದ ಬಳಲುತ್ತಿದ್ದರೆ ವಿಟಮಿನ್ ಡಿ ಪೂರಕವನ್ನು ತೆಗೆದುಕೊಳ್ಳುವುದರ ಮೂಲಕ ಕೇವಲ ಎರಡು ವಾರಗಳ ಅವಧಿಯಲ್ಲಿ ರೋಗಲಕ್ಷಣಗಳನ್ನು ಹೊಡೆದೋಡಿಸಬಹುದಾಗಿದೆ ಎಂದು ಒಂದು ಅಧ್ಯಯನ ಕಂಡುಕೊಂಡಿದೆ.
ಚಳಿಗಾಲದಲ್ಲಿ ಜನರು ಸೂರ್ಯನ ಬೆಳಕಿಗೆ ಮೈಯೊಡ್ಡಲು ಸಾಧ್ಯತೆ ಕಡಿಮೆ ಇರುವುದರಿಂದ ವೈದ್ಯರು ವಿಟಮಿನ್ ಡಿ ಪೂರಕಗಳನ್ನು ಸೂಚಿಸಬಹುದು. ವಾರಕ್ಕೆ ಎರಡರಿಂದ ಮೂರು ಬಾರಿ ಸುಮಾರು 10 ರಿಂದ 15 ನಿಮಿಷಗಳ ಕಾಲ ಮುಂಜಾನೆ ಸೂರ್ಯನ ಬೆಳಕಿಗೆ ಮೈಯೊಡ್ಡಿದಾಗ ಸೂಕ್ತ ಪ್ರಮಾಣದ ವಿಟಮಿನ್ ಡಿ ಪಡೆಯಬಹುದಾಗಿದೆ.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm